IPL 2024 Playoff: ಆರ್​ಸಿಬಿಗೆ ಸುಲಭವಿಲ್ಲ ಪ್ಲೇ ಆಫ್ ಹಾದಿ: ಉಳಿದ ಪಂದ್ಯಗಳು ಹೀಗೆ ಸಾಗಿದರೆ ಮಾತ್ರ ಸಾಧ್ಯ

IPL 2024 Playoff Qualification Scenario: ಶುಕ್ರವಾರದ ಪಂದ್ಯದಲ್ಲಿ ಗುಜರಾತ್ ತಂಡ ಚೆನ್ನೈಯನ್ನು ಸೋಲಿಸಿದ ನಂತರ ಪಾಯಿಂಟ್ಸ್ ಟೇಬಲ್​ ಮತ್ತಷ್ಟು ಕುತೂಹಲ ಮೂಡಿಸಿದೆ. ಇವೆಲ್ಲದರ ನಡುವೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇ ಆಫ್ ಪ್ರವೇಶಿಸುತ್ತಾ? ಎಂಬುದು ಅಭಿಮಾನಿಗಳ ಪ್ರಶ್ನೆ.

IPL 2024 Playoff: ಆರ್​ಸಿಬಿಗೆ ಸುಲಭವಿಲ್ಲ ಪ್ಲೇ ಆಫ್ ಹಾದಿ: ಉಳಿದ ಪಂದ್ಯಗಳು ಹೀಗೆ ಸಾಗಿದರೆ ಮಾತ್ರ ಸಾಧ್ಯ
RCB Playoff
Follow us
Vinay Bhat
|

Updated on: May 11, 2024 | 12:44 PM

ಇಂಡಿಯನ್ ಪ್ರೀಮಿಯರ್ ಲೀಗ್ 17ನೇ ಆವೃತ್ತಿ (IPL 2024) ರೋಚಕ ಘಟ್ಟದತ್ತ ತಲುಪುತ್ತಿದೆ. ಪ್ಲೇ ಆಫ್ ಸುತ್ತು ಹತ್ತಿರವಾಗುತ್ತಿದ್ದರು ಇನ್ನೂ ಯಾವುದೇ ತಂಡ ಅಧಿಕೃತವಾಗಿ ಮುಂದಿನ ಸುತ್ತಿಗೆ ತೇರ್ಗಡೆಯಾಗಿಲ್ಲ. ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡ ಬಹುತೇಕ ಪ್ಲೇ ಆಫ್​ಗೆ ಪ್ರವೇಶಿಸಿದೆ. ಆದರೆ, ಇನ್ನುಳಿದ ಎರಡು ಸ್ಥಾನಕ್ಕೆ ಆರು ತಂಡಗಳ ನಡುವೆ ಕಠಿಣ ಪೈಪೋಟಿ ಏರ್ಪಟ್ಟಿದೆ. ಅದರಲ್ಲೂ ಶುಕ್ರವಾರದ ಪಂದ್ಯದಲ್ಲಿ ಗುಜರಾತ್ ತಂಡ ಚೆನ್ನೈಯನ್ನು ಸೋಲಿಸಿದ ನಂತರ ಪಾಯಿಂಟ್ಸ್ ಟೇಬಲ್​ ಮತ್ತಷ್ಟು ಕುತೂಹಲ ಮೂಡಿಸಿದೆ. ಇವೆಲ್ಲದರ ನಡುವೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇ ಆಫ್ ಪ್ರವೇಶಿಸುತ್ತಾ? ಎಂಬುದು ಅಭಿಮಾನಿಗಳ ಪ್ರಶ್ನೆ. ಹಾಗಾದರೆ, ಆರ್​ಸಿಬಿ ಮುಂದಿನ ಹಂತಕ್ಕೆ ತೇರ್ಗಡೆಯಾಗಲು ಏನು ಮಾಡಬೇಕು?.

ರಾಯಲ್ ಚಾಲೆಂಜರ್ಸ್ ಬೆಂಗಳೂರು

ಉಳಿದಿರುವ ಪಂದ್ಯಗಳು:

  • RCB vs DC
  • RCB vs CSK

ಧರ್ಮಶಾಲಾದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧದ ಗೆಲುವಿನೊಂದಿಗೆ ಆರ್​ಸಿಬಿ ತಮ್ಮ ಪ್ಲೇಆಫ್ ಅವಕಾಶಗಳನ್ನು ಜೀವಂತವಾಗಿರಿಸಿಕೊಂಡಿತು. ಜೊತೆಗೆ ಪಂಜಾಬ್ ತಂಡವನ್ನು ಟೂರ್ನಿಯಿಂದ ಹೊರಗಟ್ಟಿತು. ಬೆಂಗಳೂರು ತಂಡಕ್ಕೆ ಇದೀಗ ಎರಡು ಪಂದ್ಯಗಳು ಬಾಕಿ ಉಳಿದಿದ್ದು, ಡೆಲ್ಲಿ ಮತ್ತು ಚೆನ್ನೈ ಅನ್ನು ಎದುರಿಸಲಿದೆ. ಈ ಎರಡೂ ಪಂದ್ಯಗಳನ್ನು ಆರ್​ಸಿಬಿ ಗೆಲ್ಲಬೇಕು. ಆಗ 14 ಅಂಕಗಳನ್ನು ತಲುಪುತ್ತದೆ. ಇಷ್ಟು ಸಾಲದು ಇದರ ಜೊತೆಗೆ ಆರ್​ಸಿಬಿ ಪ್ಲೇ ಆಫ್ ಭವಿಷ್ಯ ನಿವ್ವಳ ರನ್ ದರದ ಮೇಲಿದೆ. ಇತರೆ ತಂಡಗಳಿಗಳಿಂತ ಉತ್ತಮ ರನ್​ರೇಟ್ ಹೊಂದುವುದರ ಜೊತೆಗೆ ಇತರೆ ತಂಡಗಳು ಸೋಲು ಆರ್​ಸಿಬಿಗೆ ವರಾದಾನವಾಗಬೇಕು. ಸದ್ಯ ಆರ್​ಸಿಬಿ 12 ಪಂದ್ಯಗಳಲ್ಲಿ 10 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ. ಡೆಲ್ಲಿ ಅಥವಾ ಚೆನ್ನೈ ಈ ಎರಡು ಪಂದ್ಯಗಳ ಪೈಕಿ ಒಂದರಲ್ಲಿ ಸೋತರೈ ಫಾಫ್ ಡುಪ್ಲೆಸಿಸ್ ನೇತೃತ್ವದ ತಂಡವು ಟೂರ್ನಿಯಿಂದ ಹೊರಬೀಳಲಿದೆ.

ಕೋಲ್ಕತ್ತಾ ನೈಟ್ ರೈಡರ್ಸ್

ಕೆಕೆಆರ್ ಐಪಿಎಲ್ 2024 ಪಾಯಿಂಟ್ಸ್ ಪಟ್ಟಿಯಲ್ಲಿ 16 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿದೆ.

ಉಳಿದಿರುವ ಪಂದ್ಯಗಳು

  • KKR vs MI
  • GT vs KKR
  • RR vs KKR

ಕೆಕೆಆರ್ ಇಂದು ಮುಂಬೈ ತಂಡವನ್ನು ಎದುರಿಸಲಿದ್ದು, ಇದರಲ್ಲಿ ಗೆಲುವು ಕಂಡರೆ ಪ್ಲೇಆಫ್‌ಗೆ ಅರ್ಹತೆ ಪಡೆಯಲಿದೆ. ಅಂತಿಮ ಲೀಗ್ ಪಂದ್ಯದಲ್ಲಿ ಕೆಕೆಆರ್ ತಂಡ ರಾಜಸ್ಥಾನ್ ವಿರುದ್ಧ ಗೆದ್ದರೆ ಅಗ್ರ ಸ್ಥಾನ ಪಡೆಯುವ ಸಂಭವ ಕೂಡ ಇದೆ.

ಇಂದು ಮುಂಬೈ-ಕೆಕೆಆರ್ ನಡುವೆ ಹೈವೋಲ್ಟೇಜ್ ಪಂದ್ಯ: ಯಾರು ಗೆದ್ದರೆ ಆರ್​ಸಿಬಿಗೆ ಲಾಭ?

ರಾಜಸ್ಥಾನ್ ರಾಯಲ್ಸ್

ರಾಜಸ್ಥಾನ್ ಪ್ರಸ್ತುತ 16 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.

ಉಳಿದಿರುವ ಪಂದ್ಯಗಳು

  • CSK vs RR
  • RR vs PBKS
  • RR vs KKR

ಆರ್​ಆರ್​ ಕೂಡ ಇನ್ನೊಂದು ಪಂದ್ಯ ಗೆದ್ದರೆ ಪ್ಲೇಆಫ್‌ಗನಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಲಿದೆ. ಕೆಕೆಆರ್ ನಂತೆ ರಾಜಸ್ಥಾನ್ ಕೂಡ ಅಗ್ರ-ಎರಡು ಸ್ಥಾನಗಳ ಹುಡುಕಾಟದಲ್ಲಿದೆ.

ಸನ್‌ರೈಸರ್ಸ್ ಹೈದರಾಬಾದ್

ಎಸ್‌ಆರ್‌ಹೆಚ್ ಪ್ರಸ್ತುತ ಐಪಿಎಲ್ 2024 ಪಾಯಿಂಟ್‌ಗಳ ಪಟ್ಟಿಯಲ್ಲಿ 14 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.

ಉಳಿದಿರುವ ಪಂದ್ಯಗಳು

  • SRH vs GT
  • SRH vs PBKS

LSG ವಿರುದ್ಧದ ಬೃಹತ್ ಗೆಲುವಿನೊಂದಿಗೆ, ಹೈದರಾಬಾದ್ ತಮ್ಮ ಪ್ಲೇಆಫ್ ಅವಕಾಶಗಳನ್ನು ಹೆಚ್ಚಿಸಿದೆ. ಗುಜರಾತ್ (8 ನೇ) ಮತ್ತು ಪಂಜಾಬ್ (10 ನೇ) ವಿರುದ್ಧ ಎರಡು ಪಂದ್ಯಗಳು ಉಳಿದಿದೆ. ಈ ಎರಡು ಪಂದ್ಯಗಳಿಂದ ನಾಲ್ಕು ಅಂಕಗಳನ್ನು ಪಡೆದುಕೊಳ್ಳುವ ಅವಕಾಶವಿದೆ. ಆಗ ಪ್ಲೇ ಆಫ್​ಗೆ ತೇರ್ಗಡೆಯಾಗುತ್ತದೆ. ಎರಡು ಪಂದ್ಯಗಳಲ್ಲಿ ಒಂದರಲ್ಲಿ ಸೋತರೆ ಇತರ ಪಂದ್ಯದ ಫಲಿತಾಂಶಗಳ ಮೇಲೆ ನಿರ್ಧಾರವಾಗುತ್ತಿದೆ.

ಚೆನ್ನೈ ಸೂಪರ್ ಕಿಂಗ್ಸ್

ಚೆನ್ನೈ ಪ್ರಸ್ತುತ ಐಪಿಎಲ್ 2024 ಅಂಕಗಳ ಪಟ್ಟಿಯಲ್ಲಿ 12 ಅಂಕಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ.

ಉಳಿದಿರುವ ಪಂದ್ಯಗಳು

  • CSK vs RR
  • RCB vs CSK

ಕಳೆದ ರಾತ್ರಿ ಗುಜರಾತ್ ವಿರುದ್ಧ 35 ರನ್‌ಗಳ ಸೋಲಿನ ನಂತರ ಸಿಎಸ್​ಕೆಯ ಪ್ಲೇಆಫ್ ಅವಕಾಶಗಳಿಗೆ ಹೊಡೆತ ಬಿದ್ದವು. ಅವರಿಗೆ ಈಗ ಎರಡು ಪಂದ್ಯಗಳು ಉಳಿದಿವೆ. ಆದಾಗ್ಯೂ, ಸಿಎಸ್​ಕೆ ನೆಟ್​ ರನ್​ರೇಟ್ ಉತ್ತಮವಾಗಿದ್ದು, 4 ನೇ ಸ್ಥಾನದಲ್ಲಿದೆ. ರಾಜಸ್ಥಾನ್ ರಾಯಲ್ಸ್ ಮತ್ತು ಆರ್​ಸಿಬಿ ವಿರುದ್ಧ ಎರಡೂ ಪಂದ್ಯಗಳನ್ನು ಗೆದ್ದರೆ ಅವರು ಗರಿಷ್ಠ 16 ಅಂಕಗಳನ್ನು ತಲುಪಬಹುದು. 16 ಅಂಕ ತಲುಪುವ ಅವಕಾಶ DC ಮತ್ತು LSG ತಂಡಕ್ಕೆ ಕೂಡ ಇದೆ. ಹೀಗಾಗಿ ಸಿಎಸ್​ಕೆಗೆ ಮುಂದಿನ ಪಂದ್ಯಗಳು ಮಹತ್ವದ್ದಾಗಿದೆ.

ಟಿ20 ವಿಶ್ವಕಪ್ ತಂಡದಲ್ಲಿಲ್ಲ ಸ್ಥಾನ: ಸ್ಫೋಟಕ ಶತಕದ ನಂತರ ಶುಭ್​ಮನ್ ಗಿಲ್ ಸಂಭ್ರಮಿಸಿದ್ದು ಹೇಗೆ ನೋಡಿ

ಡೆಲ್ಲಿ ಕ್ಯಾಪಿಟಲ್ಸ್

ಡೆಲ್ಲಿ ಪ್ರಸ್ತುತ ಐಪಿಎಲ್ 2024 ಅಂಕಗಳ ಪಟ್ಟಿಯಲ್ಲಿ 12 ಅಂಕಗಳೊಂದಿಗೆ ಐದನೇ ಸ್ಥಾನದಲ್ಲಿದೆ.

ಉಳಿದಿರುವ ಪಂದ್ಯಗಳು

  • RCB vs DC
  • DC vs LSG

CSK ಮತ್ತು LSG ಜೊತೆಗೆ ಡೆಲ್ಲಿ ಮಧ್ಯದಲ್ಲಿದೆ. ಇವರಿಗೆ ಕೇವಲ ಎರಡು ಪಂದ್ಯಗಳು ಮಾತ್ರ ಉಳಿದಿವೆ. ಈ ಎರಡರಲ್ಲೂ ಗೆದ್ದರೆ 16 ಪಾಯಿಂಟ್‌ಗಳವರೆಗೆ ತಲುಪಬಹುದು. ಇತರ ತಂಡಗಳ ಫಲಿತಾಂಶಗಳು ಕೂಡ ಇವರ ಪರವಾಗಿ ಆದರೆ ಅಗ್ರ 4 ರೊಳಗೆ ಹೋಗಬಹುದು. ಡೆಲ್ಲಿ ಕೊನೆಯ ಮೂರು ಪಂದ್ಯಗಳಲ್ಲಿ ಎರಡು ಗೆಲುವುಗಳನ್ನು ದಾಖಲಿಸಿದೆ.

ಲಕ್ನೋ ಸೂಪರ್ ಜೈಂಟ್ಸ್

LSG ಪ್ರಸ್ತುತ ಐಪಿಎಲ್ 2024 ಅಂಕಗಳ ಪಟ್ಟಿಯಲ್ಲಿ 12 ಅಂಕಗಳೊಂದಿಗೆ ಆರನೇ ಸ್ಥಾನದಲ್ಲಿದೆ.

ಉಳಿದಿರುವ ಪಂದ್ಯಗಳು

  • DC vs LSG
  • MI vs LSG

ಹೈದರಾಬಾದ್ ವಿರುದ್ಧ ಹೀನಾಯ ಸೋಲುಕಂಡ ಪರಿಣಾಮ LSG ಯ ನಿವ್ವಳ ರನ್ ರೇಟ್ ಕುಸಿದಿದೆ. DC ಯಂತೆಯೇ ರಾಹುಲ್ ಪಡೆಗೆ ಎರಡು ಪಂದ್ಯಗಳು ಉಳಿದಿದ್ದು, ಈ ಎರಡನ್ನೂ ಗೆಲ್ಲಲೇ ಬೇಕಿದೆ. ಆಗ 16 ಅಂಕಗಳು ಸಿಗುತ್ತವೆ. ಕೊನೆಯ ಎರಡು ಪಂದ್ಯಗಳ ಪೈಕಿ ಒಂದು ಸೋಲು ಅವರ ಅಭಿಯಾನಕ್ಕೆ ಅಂತ್ಯ ಹಾಡಲಿದೆ.

ಗುಜರಾತ್ ಟೈಟಾನ್ಸ್

ಜಿಟಿ ಪ್ರಸ್ತುತ 10 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ 8 ನೇ ಸ್ಥಾನದಲ್ಲಿದೆ.

ಉಳಿದಿರುವ ಪಂದ್ಯಗಳು

  • GT vs KKR
  • SRH vs GT

CSK ವಿರುದ್ಧ 35 ರನ್‌ಗಳ ಜಯದೊಂದಿಗೆ, GT ಪ್ಲೇಆಫ್ ರೇಸ್‌ನಿಂದ ಹೊರಗುಳಿಯುವುದನ್ನು ತಪ್ಪಿಸಿತು. ಇದೀಗ, ಅವರ ಖಾತೆಯಲ್ಲಿ 10 ಅಂಕಗಳು ಮತ್ತು ಎರಡು ಪಂದ್ಯಗಳು ಉಳಿದಿವೆ. ಇವರು ತಮ್ಮ ಉಳಿದ ಎರಡು ಪಂದ್ಯಗಳನ್ನು ಗೆದ್ದು 14 ಅಂಕಗಳನ್ನು ತಲುಪಬಹುದು. ಆದರೆ, ಇವರ ಪ್ಲೇ ಆಫ್ ಭವಿಷ್ಯ ಇತರ ಪಂದ್ಯಗಳ ಫಲಿತಾಂಶಗಳ ಮೇಲೆ ಅವಲಂಬಿತವಾಗಿರುತ್ತದೆ. ನೆಟ್ ರನ್​ರೇಟ್ ಕೂಡ ಮಹತ್ವದ ಪಾತ್ರವಹಿಸುತ್ತದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
ದಾಸರಹಳ್ಳಿ ವಲಯ ಕಚೇರಿ ಇಂಜನೀಯರ್ ಯದುಕೃಷ್ಣ ಸಿಕ್ಕಿಬಿದ್ದ ಅಧಿಕಾರಿ
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ