ಸೌತ್ ಆಫ್ರಿಕಾ ತಂಡ ಪ್ರಕಟ: ಸೀನಿಯರ್ ಆಟಗಾರರ ಕಂಬ್ಯಾಕ್!
ಸೌತ್ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವಣ ಏಕದಿನ ಸರಣಿಯು ಸೆಪ್ಟೆಂಬರ್ 24 ರಿಂದ ಶುರುವಾಗಲಿದೆ. ಮೂರು ಪಂದ್ಯಗಳ ಈ ಸರಣಿಯ ಮುಕ್ತಾಯದ ಬಳಿಕ ಉಭಯ ತಂಡಗಳು ಟೆಸ್ಟ್ ಸರಣಿಯನ್ನು ಆಡಲಿವೆ. ಈ ಸರಣಿಯು ಅಕ್ಟೋಬರ್ 9 ರಿಂದ ಆರಂಭವಾಗಲಿದ್ದು, ತಂಡಗಳು ಒಟ್ಟು ಮೂರು ಟೆಸ್ಟ್ ಪಂದ್ಯಗಳಲ್ಲಿ ಮುಖಾಮುಖಿಯಾಗಲಿವೆ.

ಮುಂಬರುವ ಆಸ್ಟ್ರೇಲಿಯಾ ವಿರುದ್ಧದ ಮಹತ್ವದ ಏಕದಿನ ಕ್ರಿಕೆಟ್ ಸರಣಿಗಾಗಿ ಸೌತ್ ಆಫ್ರಿಕಾ ತಂಡವನ್ನು ಪ್ರಕಟಿಸಲಾಗಿದೆ. 16 ಸದಸ್ಯರ ಈ ತಂಡವನ್ನು ತೆಂಬಾ ಬವುಮಾ ಮುನ್ನಡೆಸಲಿದ್ದು, ಐಡೆನ್ ಮಾರ್ಕ್ರಾಮ್ ಕಾಣಿಸಿಕೊಳ್ಳಲಿದ್ದಾರೆ. ಇನ್ನು ವಿಶ್ವಕಪ್ ಸಿದ್ಧತೆಗಳ ದೃಷ್ಟಿಯಿಂದ ಈ ಸರಣಿಯು ಉಭಯ ತಂಡಗಳಿಗೂ ಅತ್ಯಂತ ನಿರ್ಣಾಯಕ ಎನಿಸಿಕೊಂಡಿದೆ. ಏಕೆಂದರೆ 2027ರ ಏಕದಿನ ವಿಶ್ವಕಪ್ ಸೌತ್ ಆಫ್ರಿಕಾ, ನಮೀಬಿಯಾ ಮತ್ತು ಝಿಂಬಾಬ್ವೆಯಲ್ಲಿ ನಡೆಯಲಿದೆ. ಅದಕ್ಕೂ ಮುನ್ನ ಎರಡು ಬಲಿಷ್ಠ ತಂಡಗಳು ಮುಖಾಮುಖಿಯಾಗುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಹಿರಿಯ ಆಟಗಾರರ ಕಂಬ್ಯಾಕ್:
ಸೌತ್ ಆಫ್ರಿಕಾದ ಅನುಭವಿ ಮತ್ತು ಸ್ಫೋಟಕ ಬ್ಯಾಟರ್‌ಗಳಾದ ಡೇವಿಡ್ ಮಿಲ್ಲರ್ ಮತ್ತು ಕ್ವಿಂಟನ್ ಡಿ ಕಾಕ್ ತಂಡಕ್ಕೆ ಮರಳಿದ್ದಾರೆ. ಇವರೊಂದಿಗೆ ಟ್ರಿಸ್ಟನ್ ಸ್ಟಬ್ಸ್ ಮತ್ತು ಟೋನಿ ಡಿ ಝೋರ್ಝಿ ಅವರಂತಹ ಯುವ ರನ್ ಮಷೀನ್‌ಗಳು ಮಧ್ಯಮ ಕ್ರಮಾಂಕಕ್ಕೆ ಶಕ್ತಿ ತುಂಬಲಿದ್ದಾರೆ.
ಕಗಿಸೊ ರಬಾಡಾಗೆ ಗಾಯಾಳು:
ಸೌತ್ ಆಫ್ರಿಕಾ ತಂಡಕ್ಕೆ ದೊಡ್ಡ ಹಿನ್ನಡೆಯೆಂದರೆ, ಅವರ ಪ್ರಮುಖ ವೇಗಿ ಕಗಿಸೊ ರಬಾಡ ಗಾಯದ ಸಮಸ್ಯೆಯಿಂದಾಗಿ ಈ ಸರಣಿಯಿಂದ ಸಂಪೂರ್ಣವಾಗಿ ಹೊರಗುಳಿದಿರುವುದು. ಮತ್ತೊಂದೆಡೆ ಆಲ್ರೌಂಡರ್ ಐಡೆನ್ ಮಾರ್ಕ್ರಾಮ್ ಮೊದಲ ಏಕದಿನ ಪಂದ್ಯಕ್ಕೆ ಲಭ್ಯವಿರುವುದಿಲ್ಲ.
ಮಫಾಕಾಗೆ ಮಣೆ:
ಕಗಿಸೊ ರಬಾಡ ಅವರ ಗೈರುಹಾಜರಿಯಲ್ಲಿ, 20 ವರ್ಷದ ಸೌತ್ ಆಫ್ರಿಕಾದ ಉದಯೋನ್ಮುಖ ಎಡಗೈ ವೇಗಿ ಕ್ವೆನಾ ಮಫಾಕಾ ಅವರಿಗೆ ತಂಡದಲ್ಲಿ ಸ್ಥಾನ ಕಲ್ಪಿಸಲಾಗಿದೆ. ಅವರೊಂದಿಗೆ, 2023ರ ವಿಶ್ವಕಪ್ ಬಳಿಕ ಮೊದಲ ಬಾರಿಗೆ ಏಕದಿನ ಕ್ರಿಕೆಟ್‌ಗೆ ಮರಳುತ್ತಿರುವ ಜೆರಾಲ್ಡ್ ಕೋಟ್ಝಿ ಮತ್ತು ಲುಂಗಿ ಎನ್ಗಿಡಿ ವೇಗದ ಬೌಲಿಂಗ್ ಜವಾಬ್ದಾರಿ ಹೊರಲಿದ್ದಾರೆ. ಅದರಂತೆ ಸೌತ್ ಆಫ್ರಿಕಾ ಏಕದಿನ ತಂಡ ಈ ಕೆಳಗಿನಂತಿದೆ…
ಸೌತ್ ಆಫ್ರಿಕಾ ಏಕದಿನ ತಂಡ: ತೆಂಬಾ ಬವುಮಾ, ಕ್ವಿಂಟನ್ ಡಿ ಕಾಕ್, ಡೇವಿಡ್ ಮಿಲ್ಲರ್, ಐಡೆನ್ ಮಾರ್ಕ್ರಾಮ್, ಟ್ರಿಸ್ಟನ್ ಸ್ಟಬ್ಸ್, ರಯಾನ್ ರಿಕೆಲ್ಟನ್, ಟೋನಿ ಡಿ ಝೋರ್ಝಿ, ಮ್ಯಾಥ್ಯೂ ಬ್ರೀಟ್ಝ್ಕೆ, ಮಾರ್ಕೊ ಯಾನ್ಸೆನ್, ಕಾರ್ಬಿನ್ ಬಾಷ್, ಜೆರಾಲ್ಡ್ ಕೋಟ್ಝಿ, ಒಟ್ನೀಲ್ ಬಾರ್ಟ್‌ಮನ್, ಕ್ವೆನಾ ಮಫಾಕಾ, ಲುಂಗಿ ಎನ್ಗಿಡಿ, ಕೇಶವ್ ಮಹಾರಾಜ್ ಮತ್ತು ಬ್ಯಾರ್ನ್ ಫಾರ್ಟುಯಿನ್.
ಇದನ್ನೂ ಓದಿ: ಬಡ ವಿದ್ಯಾರ್ಥಿಗಳ ನೆರವಿಗೆ ನಿಂತ ಸಂಜು ಸ್ಯಾಮ್ಸನ್
ಆಸ್ಟ್ರೇಲಿಯಾ ಏಕದಿನ ತಂಡ: ಮಿಚೆಲ್ ಮಾರ್ಷ್ (ನಾಯಕ), ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ಟ್ರಾವಿಸ್ ಹೆಡ್, ಕ್ಯಾಮರೋನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಜೋಶ್ ಇಂಗ್ಲಿಸ್ (ವಿಕೆಟ್ ಕೀಪರ್), ಆ್ಯಡಂ ಝಂಪಾ, ಜೋಶ್ ಹೇಝಲ್‌ವುಡ್, ನಾಥನ್ ಎಲ್ಲಿಸ್, ಮ್ಯಾಥ್ಯೂ ರೆನ್‌ಶಾ, ಕ್ಸೇವಿಯರ್ ಬಾರ್ಟ್ಲೆಟ್, ಕೂಪರ್ ಕೊನೊಲಿ, ಜೋಯಲ್ ಡೇವಿಸ್, ಸ್ಪೆನ್ಸರ್ ಜಾನ್ಸನ್, ಒಲಿವರ್ ಪೀಕ್ ಮತ್ತು ಬಿಲ್ಲಿ ಸ್ಟಾನ್ಲೇಕ್.




