ಸೌತ್ ಆಫ್ರಿಕಾ (South Africa) ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಐತಿಹಾಸಿಕ ಗೆಲುವು ಸಾಧಿಸಿ ವಿಶ್ವಾಸದಲ್ಲಿರುವ ಭಾರತ ಕ್ರಿಕೆಟ್ ತಂಡ (Indian Cricket Team) ಸದ್ಯ ಎರಡನೇ ಟೆಸ್ಟ್ ಪಂದ್ಯವನ್ನು ಆಡುತ್ತಿದೆ. ಜೋಹನ್ಸ್ಬರ್ಗ್ನ ವಂಡರರ್ಸ್ ಸ್ಟೇಡಿಯಂನಲ್ಲಿ (Johannesburg, Wanderers) ದ್ವಿತೀಯ ಟೆಸ್ಟ್ ಪಂದ್ಯ ಶುರುವಾಗಿದ್ದು, ಟೀಮ್ ಇಂಡಿಯಾ ನಿರೀಕ್ಷೆಗೆ ತಕ್ಕಂತೆ ಬ್ಯಾಟ್ ಮಾಡಲಿಲ್ಲ. ಇಂಜುರಿಯಿಂದಾಗಿ ವಿರಾಟ್ ಕೊಹ್ಲಿ ಹೊರಗುಳಿದರೆ ಕೆಎಲ್ ರಾಹುಲ್ ನಾಯಕನಾಗಿದ್ದಾರೆ. ಭಾರತ 202 ರನ್ಗೆ ಸರ್ವಪತನ ಕಂಡಿತು. ಮೊದಲ ದಿನದಾಟದ ಅಂತ್ಯಕ್ಕೆ ದಕ್ಷಿಣ ಆಫ್ರಿಕಾ 1 ವಿಕೆಟ್ ನಷ್ಟಕ್ಕೆ 35 ರನ್ ಬಾರಿಸಿದೆ. 167 ರನ್ಗಳ ಹಿನ್ನಡೆಯಲ್ಲಿದೆ. ವಂಡರರ್ಸ್ ಸ್ಟೇಡಿಯಂ ವೇಗಿಗಳಿಗೆ ಸ್ವರ್ಗವಾಗಿದ್ದು ಇಂದುಕೂಡ ವಿಕೆಟ್ಗಳ ಮಳೆ ಸುರಿಯುವುದು ಖಚಿತ. ಇದರ ಜೊತೆಗೆ ವರುಣನ ಕಾಟ ಕೂಡ ಇದೆಯೇ ಎಂಬ ಭಯ ಶುರುವಾಗಿದೆ. ಹಾಗಾದ್ರೆ ಜೋಹನ್ಸ್ಬರ್ಗ್ ವಾತಾವರಣ (Johannesburg Weather) ಇಂದು ಹೇಗಿದೆ? ಎಂಬುದನ್ನು ನೋಡೋಣ..
ಮಳೆ ಸಾಧ್ಯತೆ:
ಸೆಂಚೂರಿಯನ್‌ನಂತೆಯೇ ಜೋಹನ್ಸ್‌ಬರ್ಗ್‌ನಲ್ಲಿಯೂ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ಇದೆ. ಮೊದಲನೇ ದಿನ ಮೋಡ ಕವಿದ ವಾತಾವರಣವಿತ್ತು. ಇಂದು ಎರಡನೇ ದಿನ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಸೋಮವಾರ ಅಪರಾಹ್ನದ ಬಳಿಕ ಸಾಧರಾಣ ಮಳೆಯಾಗಲಿದೆ ಎಂದು ಹೇಳಲಾಗಿತ್ತು. ಆದರೆ, ಮಳೆ ಬಂದಿರಲಿಲ್ಲ. ಇಂದು ಮಂಗಳವಾರ ದಿನವಿಡೀ ಗುಡುಗು ಸಹಿತ ಭಾರೀ ಮಳೆ ಆಗಲಿದೆ ಎನ್ನಲಾಗಿದೆ.
ಪಿಚ್ ರಿಪೋರ್ಟ್:
ವಾಂಡರರ್ಸ್ ಪಿಚ್ ಸಾಮಾನ್ಯವಾಗಿ ಬ್ಯಾಟರ್ಗಳಿಗೆ ಹಾಗೂ ಬೌಲರ್‌ಗಳು ಇಬ್ಬರಿಗೂ ಸಹಾಯವನ್ನು ನೀಡುತ್ತದೆ. ಬ್ಯಾಟರ್ಗಳು ಸಾಕಷ್ಟು ಏಕಾಗ್ರತೆಯ ಪ್ರದರ್ಶನ ನೀಡಿದರೆ ಇಲ್ಲಿ ರನ್‌ಗಳನ್ನು ಗಳಿಸಬಹುದು. ಅಲ್ಲದೆ ಪಿಚ್ ಉತ್ತಮ ಬೌನ್ಸ್ ಹೊಂದಿರುವ ಕಾರಣದಿಂದಾಗಿ ಯಶಸ್ಸು ಪಡೆಯುವ ಸಾಧ್ಯವಿದೆ. ವಾಂಡರರ್ಸ್ ಪಿಚ್ ಇಂದಿನ ಎರಡನೇ ದಿನ ವೇಗಿಗಳಿಗೆ ಮತ್ತಷ್ಟು ಸಹಕಾರ ನೀಡಲಿದೆ. ಹೀಗಾಗಿ ಇಂದುಕೂಡ ರೋಚಕ ಫೈಟ್ ನಿರೀಕ್ಷಿಸಲಾಗಿದೆ.
ಜೊಹಾನ್ಸ್‌ಬರ್ಗ್‌ನ ವಾಂಡರರ್ಸ್ ಸ್ಟೇಡಿಯಂ ಆರಂಭವಾಗಿರುವ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಎರಡನೇ ಟೆಸ್ಟ್ ಪಂದ್ಯ ಮೊದಲ ದಿನವೇ ಸಾಕಷ್ಟು ವಿಚಾರಗಳಿಗೆ ಕುತೂಹಲ ಕೆರಳಿಸಿತು. ಖಾಯಂ ನಾಯಕ ವಿರಾಟ್ ಕೊಹ್ಲಿ ಇಂಜುರಿಯಿಂದ ಹೊರಗುಳಿದ ಪರಿಣಾಮ ಕೆಎಲ್ ರಾಹುಲ್ ಕ್ಯಾಪ್ಟನ್ ಜವಾಬ್ದಾರಿ ಹೊರಬೇಕಾಯಿತು. ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ ಪರ ನಾಯಯಕನ ಹೊರತಾಗಿ ಉಳಿದ ಬ್ಯಾಟರ್ಗಳು ನಿರೀಕ್ಷೆಗೆ ತಕ್ಕಂತೆ ಬ್ಯಾಟ ಮಾಡಲಿಲ್ಲ. ಆರ್. ಅಶ್ವಿನ್ ಕೊಂಚ ಬ್ಯಾಟ್ ಬೀಸಿದ ಪರಿಣಾಮ ತಂಡದ ಮೊತ್ತ 200ರ ಗಡಿ ದಾಟಿತು ಎನ್ನಬಹುದು.
ಟೀಮ್ ಇಂಡಿಯಾ 202 ರನ್ಗೆ ಸರ್ವಪತನ ಕಂಡಿತು. ಮೊದಲ ದಿನದಾಟದ ಅಂತ್ಯಕ್ಕೆ ದಕ್ಷಿಣ ಆಫ್ರಿಕಾ 1 ವಿಕೆಟ್ ನಷ್ಟಕ್ಕೆ 35 ರನ್ ಬಾರಿಸಿದೆ. 167 ರನ್ಗಳ ಹಿನ್ನಡೆಯಲ್ಲಿದೆ. ವಾಂಡರರ್ಸ್ ಪಿಚ್ ಇಂದಿನ ಎರಡನೇ ದಿನ ವೇಗಿಗಳಿಗೆ ಮತ್ತಷ್ಟು ಸಹಕಾರ ನೀಡಲಿದೆ. ಹೀಗಾಗಿ ಇಂದಿನ ಎರಡನೇ ದಿನದಾಟದ ಮೇಲೆ ಎಲ್ಲರ ಕಣ್ಣಿದೆ.
Mohammed Siraj Injury: ಭಾರತಕ್ಕೆ ಶಾಕ್ ಮೇಲೆ ಶಾಕ್: ಇಂದು ಈ ಆಟಗಾರ ಕಣಕ್ಕಿಳಿಯುವುದು ಅನುಮಾನ
(South Africa vs India Johannesburg weather report IND vs SA 2nd Test Day 2)