
ಐಪಿಎಲ್ 2023ರಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಸೋಲಿಸುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ಸತತ ಎರಡನೇ ಜಯ ದಾಖಲಿಸಿದೆ. 144 ರನ್ಗಳ ಅಲ್ಪ ಮೊತ್ತವನ್ನು ಬೆನ್ನಟ್ಟಲಾಗದೆ ಹೈದರಾಬಾದ್ ತಂಡ ಡೆಲ್ಲಿ ವಿರುದ್ಧ 7 ರನ್ಗಳಿಂದ ಸೋಲೊಪ್ಪಿಕೊಂಡಿದೆ. ಈ ಪಂದ್ಯದಲ್ಲಿ ಮೊದಲು ಬೌಲ್ ಮಾಡಿದ ಹೈದರಾಬಾದ್ ಬೌಲರ್‌ಗಳು ಅದ್ಭುತ ಪ್ರದರ್ಶನ ನೀಡುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಕೇವಲ 144 ರನ್‌ಗಳಿಗೆ ಸೀಮಿತಗೊಳಿಸಿದರು. ಆ ಬಳಿಕ ಬ್ಯಾಟಿಂಗ್ ಆರಂಭಿಸಿದ ಹೈದರಾಬಾದ್ ಅಂತಿಮವಾಗಿ 6 ವಿಕೆಟ್ ಕಳೆದುಕೊಂಡು ಕೇವಲ 137 ರನ್ ಗಳಿಸಲಷ್ಟೇ ಶಕ್ತವಾಯಿತು.
144 ರನ್ಗಳ ಅಲ್ಪ ಮೊತ್ತವನ್ನು ಬೆನ್ನಟ್ಟಲಾಗದೆ ಹೈದರಾಬಾದ್ ತಂಡ ಡೆಲ್ಲಿ ವಿರುದ್ಧ 7 ರನ್ಗಳಿಂ ಸೋಲೊಪ್ಪಿಕೊಂಡಿದೆ. ಈ ಗೆಲುವಿನ ಮೂಲಕ ಡೆಲ್ಲಿ ಟೂರ್ನಿಯಲ್ಲಿ 2ನೇ ಗೆಲುವು ಸಾಧಿಸಿತು. ಈ ಪಂದ್ಯದಲ್ಲಿ ಮೊದಲು ಬೌಲ್ ಮಾಡಿದ ಹೈದರಾಬಾದ್ ಬೌಲರ್‌ಗಳು ಅದ್ಭುತ ಪ್ರದರ್ಶನ ನೀಡುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಕೇವಲ 144 ರನ್‌ಗಳಿಗೆ ಸೀಮಿತಗೊಳಿಸಿದರು. ಆ ಬಳಿಕ ಬ್ಯಾಟಿಂಗ್ ಆರಂಭಿಸಿದ ಹೈದರಾಬಾದ್ ಅಂತಿಮವಾಗಿ 6 ವಿಕೆಟ್ ಕಳೆದುಕೊಂಡು ಕೇವಲ 137 ರನ್ ಗಳಿಸಲಷ್ಟೇ ಶಕ್ತವಾಯಿತು.
19ನೇ ಓವರ್ನ 4ನೇ ಎಸೆತದಲ್ಲಿ ಕ್ಲಾಸೆನ್ ಬಿಗ್ ಶಾಟ್ ಆಡುವ ಯತ್ನದಲ್ಲಿ ಕ್ಯಾಚಿತ್ತು ಔಟಾದರು.
ಮುಖೇಶ್ ಬೌಲ್ ಮಾಡಿದ 18ನೇ ಓವರ್ನಲ್ಲಿ ಕ್ಲಾಸೆನ್ 2 ಬೌಂಡರಿ ಬಾರಿಸಿದರು.
17ನೇ ಓವರ್ನ ಮೂರನೇ ಎಸೆತದಲ್ಲಿ ಬೌಂಡರಿ ಬಾರಿಸಿದ ಸುಂದರ್ ತಂಡದ ಮೊತ್ತವನ್ನು ಶತಕದ ಗಡಿ ದಾಟಿಸಿದರು. ಇದೇ ಓವರ್ನಲ್ಲಿ ಕ್ಲಾಸೆನ್ ಭರ್ಜರಿ ಸಿಕ್ಸರ್ ಕೂಡ ಹೊಡೆದರು.
ಹೈದರಾಬಾದ್ಗೆ ಬಿಗ್ ಶಾಕ್ ಎದುರಾಗಿದೆ. ತಂಡದ ನಾಯಕ ಮಾರ್ಕ್ರಾಮ್ ಅಕ್ಷರ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿಕೊಂಡಿದ್ದಾರೆ.
ಅಭಿಷೇಕ್ ವಿಕೆಟ್ ಬಳಿಕ ಬಂದಿರುವ ಕ್ಲಾಸೆನ್ ಡೀಪ್ ಮಿಡ್ ವಿಕೆಟ್ನಲ್ಲಿ ಬೌಂಡರಿ ಹೊಡೆದರು.
14ನೇ ಓವರ್ನಲ್ಲಿ ಕುಲ್ದೀಪ್, ಡೆಲ್ಲಿಗೆ 4ನೇ ಯಶಸ್ಸು ತಂದುಕೊಟ್ಟಿದ್ದಾರೆ. ತ್ರಿಪಾಠಿ ಬಳಿಕ ಬಂದಿದ್ದ ಅಭಿಷೇಕ್ ನೇರವಾಗಿ ಬೌಲರ್ಗೆ ಕ್ಯಾಚಿತ್ತು ಔಟಾದರು.
ಇಶಾಂತ್ ಬೌಲಿಂಗ್ನಲ್ಲಿ ಕೀಪರ್ ಕೈಗೆ ಕ್ಯಾಚಿತ್ತು ತ್ರಿಪಾಠಿ ಔಟಾಗಿದ್ದಾರೆ.
12ನೇ ಓವರ್ ಬೌಲ್ ಮಾಡಿದ ಅಕ್ಷರ್ ಪಟೇಲ್ ಸೆಟಲ್ ಆಗಿದ್ದ ಮಯಾಂಕ್ ವಿಕೆಟ್ ಉರುಳಿಸಿದರು. 49 ರನ್ ಬಾರಿಸಿದ್ದ ಮಯಾಂಕ್ ಕ್ಯಾಚಿತ್ತು ನಿರ್ಗಮಿಸಿದರು.
ಕೊನೆಗೂ 11ನೇ ಓವರ್ನಲ್ಲಿ ಮೊದಲನೇ ಎಸೆತದಲ್ಲಿ ಮಯಾಂಕ್ ಆಫ್ ಸೈಡ್ನಲ್ಲಿ ಬೌಂಡರಿ ಹೊಡೆದರು.
ಬ್ರೂಕ್ ವಿಕೆಟ್ ಬಳಿಕ ಕಳೆದ 4 ಓವರ್ಗಳಲ್ಲಿ ಹೈದರಾಬಾದ್ ಯಾವುದೇ ಬೌಂಡರಿ ಬಾರಿಸಿಲ್ಲ. 10 ಓವರ್ಗಳ ಅಂತ್ಯಕ್ಕೆ ಹೈದರಾಬಾದ್ 58/1
6ನೇ ಓವರ್ನ ಮೊದಲ ಎಸೆತದಲ್ಲಿಯೇ ನೋಕಿಯಾ ಆರಂಭಿಕ ಬ್ರೂಕ್ರನ್ನು ಕ್ಲೀನ್ ಬೌಲ್ಡ್ ಮಾಡಿದರು. ಹೈದರಾಬಾದ್ ಮೊದಲ ವಿಕೆಟ್ ಪತನ
5ನೇ ಓವರ್ನ ಕೊನೆಯ ಎಸೆತದಲ್ಲೂ ಮಯಾಂಕ್ ಬೌಂಡರಿ ಹೊಡೆದರು.
ಮುಖೇಶ್ ಬೌಲ್ ಮಾಡಿದ 4ನೇ ಓವರ್ನಲ್ಲಿ ಕೊನೆಯ ಎಸೆತವನ್ನು ಮಯಾಂಕ್ ಪಾಯಿಂಟ್ ಕಡೆ ಆಡಿ ಬೌಂಡರಿ ಹೊಡೆದರು.
ಇಶಾಂತ್ ಬೌಲ್ ಮಾಡಿದ 3ನೇ ಓವರ್ನ 2ನೇ ಎಸೆತದಲ್ಲಿ ಮಯಾಂಕ್ ಕವರ್ ದಿಕ್ಕಿನಲ್ಲಿ ಬೌಂಡರಿ ಬಾರಿಸಿದರು.
ನೋಕಿಯಾ ಬೌಲ್ ಮಾಡಿದ 2ನೇ ಓವರ್ನ 5ನೇ ಎಸೆತದಲ್ಲಿ ಮಯಾಂಕ್ ಸೀದಾ ಬೌಲರ್ ತಲೆಯ ಮೇಲೆ ಬೌಂಡರಿ ಹೊಡೆದರು.
ಸನ್ ರೈಸರ್ಸ್ ಹೈದರಾಬಾದ್ ತಂಡದ ಬ್ಯಾಟಿಂಗ್ ಶುರುವಾಗಿದೆ. ಆರಂಭಿಕರಾಗಿ ಹ್ಯಾರಿ ಬ್ರೂಕ್ ಮತ್ತು ಮಯಾಂಕ್ ಅಗರ್ವಾಲ್ ಬಂದಿದ್ದಾರೆ. ಓವರ್ನ ನಾಲ್ಕನೇ ಎಸೆತದಲ್ಲಿ ಮಯಾಂಕ್ ಕ್ಯಾಚ್ ಕೈಬಿಟ್ಟರು. ಮಯಾಂಕ್ ಓವರ್ನ ಐದನೇ ಎಸೆತದಲ್ಲಿ ಬೌಂಡರಿ ಬಾರಿಸಿದರು.
ಭುವಿ ಬೌಲ್ ಮಾಡಿದ 20ನೇ ಓವರ್ನಲ್ಲೂ ಡೆಲ್ಲಿ 2 ವಿಕೆಟ್ ಕಳೆದುಕೊಂಡಿತು. ಅಂತಿಮವಾಗಿ ಡೆಲ್ಲಿ ಅಕ್ಷರ್ ಹಾಗೂ ಮನಿಶ್ ಅವರ ಅರ್ಧಶತಕ ಜೊತೆಯಾಟದಿಂದಾಗಿ 144 ರನ್ ಗಳಿಸಿತು. ಎಸ್ಆರ್ಹೆಚ್ಗೆ 145 ರನ್ ಟಾರ್ಗೆಟ್ ಸಿಕ್ಕಿದೆ.
ನಟರಾಜನ್ ಬೌಲ್ ಮಾಡಿದ 19ನೇ ಓವರ್ನ ಎರಡನೇ ಎಸೆತದಲ್ಲಿ ಮನೀಶ್ ಪಾಂಡೆ ರನೌಟ್ ಆಗುವ ಮೂಲಕ ತಮ್ಮ ವಿಕೆಟ್ ಒಪ್ಪಿಸಿದರು. ಪಾಂಡೆ 27 ಎಸೆತಗಳಲ್ಲಿ 34 ರನ್ ಬಾರಿಸಿದರು.
18ನೇ ಓವರ್ನ 5ನೇ ಎಸೆತದಲ್ಲಿ ಅಕ್ಷರ್ ಪಟೇಲ್ ಬೌಲ್ಡ್ ಆಗುವುದರೊಂದಿಗೆ ತಮ್ಮ ಇನ್ನಿಂಗ್ಸ್ ಮುಗಿಸಿದರು. ಭುವಿಗೆ ಈ ವಿಕೆಟ್ ಬಿತ್ತು.
ಮಾರ್ಕಂಡೆ ಬೌಲ್ ಮಾಡಿದ 17ನೇ ಓವರ್ನ 3,4 ಮತ್ತು 5ನೇ ಎಸೆತವನ್ನು ಅಕ್ಷರ್ ಪಟೇಲ್ ಬೌಂಡರಿಗಟ್ಟಿದರು.
ಟಿ ನಟರಾಜನ್ ಎಸೆದ 15ನೇ ಓವರ್ನ ಕೊನೆಯ ಎಸೆತದಲ್ಲಿ ಅಕ್ಷರ್ ಪಟೇಲ್ ಕವರ್ಸ್ ಕಡೆಗೆ ಬೌಂಡರಿ ಬಾರಿಸಿದರು.
ಡೆಲ್ಲಿ ಕ್ಯಾಪಿಟಲ್ಸ್‌ನ 100 ರನ್‌ಗಳು ಪೂರ್ಣಗೊಂಡಿವೆ. ಮನೀಶ್ ಪಾಂಡೆ 15ನೇ ಓವರ್ನ ಮೂರನೇ ಎಸೆತದಲ್ಲಿ ಒಂದು ರನ್ ಪಡೆಯುವ ಮೂಲಕ ತಂಡದ ಶತಕ ಪೂರೈಸಿದರು.
ಮಲಿಕ್ ಬೌಲ್ ಮಾಡಿದ 14ನೇ ಓವರ್ನ 2ನೇ ಎಸೆತದಲ್ಲಿ ಅಕ್ಷರ್ ಪಟೇಲ್ ವೈಡ್ ಮಿಡ್ ಆಫ್ನಲ್ಲಿ ಬೌಂಡರಿ ಹೊಡೆದರು.
ಕೊನೆಗೂ 12ನೇ ಓವರ್ನ ಮೊದಲ ಎಸೆತದಲ್ಲಿ ಮನೀಶ್ ಫೈನ್ ಲೆಗ್ ಕಡೆ ಬೌಂಡರಿ ಬಾರಿಸಿದರು.
8ನೇ ಓವರ್ನಲ್ಲಿ ಸತತ 3 ವಿಕೆಟ್ ಕಳೆದುಕೊಂಡ ಬಳಿಕ ಡೆಲ್ಲಿಯ ಬ್ಯಾಟಿಂಗ್ ನಿಧಾನವಾಗಿದೆ. ತಂಡದ ಪರ ಮನೀಶ್ ಹಾಗೂ ಅಕ್ಷರ್ ಪಟೇಲ್ ಆಡುತ್ತಿದ್ದಾರೆ. 10 ಓವರ್ಗಳ ಇನ್ನಿಂಗ್ಸ್ ಮುಗಿದಿದ್ದು, ಡೆಲ್ಲಿ 72/5
ಸುಂದರ್ ಒಂದೇ ಓವರ್ನಲ್ಲಿ 3 ವಿಕೆಟ್ ಉರುಳಿಸಿದರು. ಇದೀಗ ಸರ್ಫರಾಜ್ ಬಳಿಕ ಬಂದ ಅಮನ್ ಖಾನ್ ಕೂಡ ಕ್ಯಾಚಿತ್ತು ಔಟಾದರು.
ಡೆಲ್ಲಿಗೆ ಒಂದೇ ಓವರ್ನಲ್ಲಿ ಎರಡೆರಡು ಆಘಾತ ಎದುರಾಗಿದೆ. ಸುಂದರ್ ಓವರ್ನಲ್ಲಿ ಕ್ಯಾಚಿತ್ತು ವಾರ್ನರ್ ಔಟಾದರೆ, ಅದಾದ ಎರಡನೇ ಎಸೆತದಲ್ಲಿ ಸರ್ಫರಾಜ್ ಕ್ಯಾಚಿತ್ತು ವಿಕೆಟ್ ಒಪ್ಪಿಸಿದರು.
ಡೆಲ್ಲಿಗೆ ಆಘಾತ.. ತಂಡದ ಆಧಾರಸ್ತಂಭ ನಾಯಕ ಡೇವಿಡ್ ವಾರ್ನರ್, ಸುಂದರ್ ಓವರ್ನಲ್ಲಿ ಕ್ಯಾಚಿತ್ತು ಔಟಾದರು.
ಯಾನ್ಸೆನ್ ಎಸೆದ ಪವರ್ ಪ್ಲೇನ ಕೊನೆಯ ಓವರ್ನಲ್ಲಿ ಸರ್ಫರಾಜ್ ಎಕ್ಸ್ಟ್ರಾ ಕವರ್ ಮೇಲೆ ಸಿಕ್ಸರ್ ಬಾರಿಸಿದರು.
5ನೇ ಓವರ್ ಬೌಲ್ ಮಾಡಿದ ನಟರಾಜನ್ 2ನೇ ಎಸೆತದಲ್ಲಿ ಬೌಂಡರಿ ತಿಂದರೆ, ಆ ಬಳಿಕ ನಾಲ್ಕನೇ ಎಸೆತದಲ್ಲಿ ಮಾರ್ಷ್ ಅವರನ್ನು ಎಲ್ಬಿ ಬಲೆಗೆ ಬೀಳಿಸಿದರು.
ಸುಂದರ್ ಬೌಲ್ ಮಾಡಿದ ನಾಲ್ಕನೇ ಓವರ್ನಲ್ಲಿ ವಾರ್ನರ್ 1 ಬೌಂಡರಿ ಹಾಗೂ 1 ಸಿಕ್ಸರ್ ಹೊಡೆದರು.
ಯಾನ್ಸೆನ್ ಎಸೆದ 2ನೇ ಓವರ್ನಲ್ಲಿ ಮಾರ್ಷ್ ಭರ್ಜರಿ 4 ಬೌಂಡರಿ ಹೊಡೆದರು. ವಾಸ್ತವವಾಗಿ ಮಾರ್ಷ್ ಇಡೀ ಟೂರ್ನಿಯಲ್ಲಿ ಒಂದೂ ಪಂದ್ಯದಲ್ಲೂ ಈ ರೀತಿಯ ಬ್ಯಾಟಿಂಗ್ ಮಾಡಿರಲಿಲ್ಲ.
ಭುವಿ ಎಸೆದ ಮೊದಲ ಓವರ್ನ ಮೂರನೇ ಎಸೆತದಲ್ಲಿ ಆರಂಭಿಕ ಸಾಲ್ಟ್ ಕೀಪರ್ ಕೈಗೆ ಕ್ಯಾಚಿತ್ತು ಔಟಾದರು.
ಡೇವಿಡ್ ವಾರ್ನರ್ (ನಾಯಕ), ಫಿಲ್ ಸಾಲ್ಟ್ (ವಿಕೆಟ್ ಕೀಪರ್), ಮಿಚೆಲ್ ಮಾರ್ಷ್, ಮನೀಶ್ ಪಾಂಡೆ, ಸರ್ಫರಾಜ್ ಖಾನ್, ಅಕ್ಷರ್ ಪಟೇಲ್, ಅಮನ್ ಹಕೀಮ್ ಖಾನ್, ರಿಪ್ಪಲ್ ಪಟೇಲ್, ಎನ್ರಿಚ್ ನೋಕಿಯಾ, ಕುಲ್ದೀಪ್ ಯಾದವ್, ಇಶಾಂತ್ ಶರ್ಮಾ.
ಏಡೆನ್ ಮಾರ್ಕ್ರಾಮ್ (ನಾಯಕ), ಅಭಿಷೇಕ್ ಶರ್ಮಾ, ಹ್ಯಾರಿ ಬ್ರೂಕ್, ಮಯಾಂಕ್ ಅಗರ್ವಾಲ್, ಹೆನ್ರಿಚ್ ಕ್ಲಾಸೆನ್, ಮಾರ್ಕೊ ಯಾನ್ಸೆನ್, ವಾಷಿಂಗ್ಟನ್ ಸುಂದರ್, ಮಯಾಂಕ್ ಮಾರ್ಕಂಡೇ, ಭುವನೇಶ್ವರ್ ಕುಮಾರ್, ಟಿ.ನಟರಾಜನ್, ಉಮ್ರಾನ್ ಮಲಿಕ್
ಟಾಸ್ ಗೆದ್ದ ಡೆಲ್ಲಿ ನಾಯಕ ಡೇವಿಡ್ ವಾರ್ನರ್ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ.
Published On - 7:00 pm, Mon, 24 April 23