ಐಪಿಎಲ್ ಆರಂಭಕ್ಕೂ ಮುನ್ನವೇ ‘ಕಪ್ ಗೆಲ್ಲುತ್ತೇವೆ’ ಎಂದು ಮೆಸೇಜ್ ಮಾಡಿದ್ದ ಕೊಹ್ಲಿ!
IPL 2026: ಮಾರ್ಚ್ 28 ರಿಂದ ಶುರುವಾಗಲಿರುವ ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್ 2026) ಮೊದಲ ಸುತ್ತಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 4 ಪಂದ್ಯಗಳನ್ನಾಡಲಿದೆ. ಈ ಪಂದ್ಯಗಳಲ್ಲಿ ಆರ್ಸಿಬಿ, ಸನ್ರೈಸರ್ಸ್ ಹೈದರಾಬಾದ್, ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳನ್ನು ಎದುರಿಸಲಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-18ರ ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡಕ್ಕೆ ಸೋಲುಣಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ 18 ವರ್ಷಗಳ ಕಾಯುವಿಕೆ ಅಂತ್ಯಗೊಳಿಸಿದ್ದರು. ಆದರೆ ಈ ಕಾಯುವಿಕೆ ಈ ವರ್ಷವೇ ಅಂತ್ಯವಾಗಲಿದೆ ಎಂಬುದು ವಿರಾಟ್ ಕೊಹ್ಲಿಗೆ ಮೊದಲೇ ಗೊತ್ತಿತ್ತು. ಏಕೆಂದರೆ ಐಪಿಎಲ್ನ ಹರಾಜಿನ ಬಳಿಕ ಆರ್ಸಿಬಿ ತಂಡದ ಸಮತೋಲನವನ್ನು ನೋಡಿದ್ದ ಕೊಹ್ಲಿ ಅಂತಹದೊಂದು ವಿಶ್ವಾಸ ಹೊಂದಿದ್ದರು. ಇದೇ ವಿಶ್ವಾಸದೊಂದಿಗೆ ತನ್ನ ಗೆಳೆಯ ಆರ್ಸಿಬಿ ತಂಡದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್‌ಗೆ ವಿಶೇಷ ಸಂದೇಶವನ್ನೂ ಸಹ ರವಾನಿಸಿದ್ದರು.
2025ರ ಮೆಗಾ ಹರಾಜಿನ ನಂತರ, ಆರ್ಸಿಬಿ ತಂಡದ ಸಮತೋಲನವನ್ನು ನೋಡಿ ವಿರಾಟ್ ಕೊಹ್ಲಿ ನನಗೆ ಮೆಸೇಜ್ ಕಳಿಸಿದ್ದರು. “ಬಿಸ್ಕೆಟ್, ನಾವು ಈ ವರ್ಷ ಕಪ್ ಗೆಲ್ಲಲಿದ್ದೇವೆ. ನಾವು ಫೈನಲ್ ತಲುಪಿದಾಗ ನೀನು ಅಲ್ಲಿರಬೇಕೆಂದು ನಾನು ಬಯಸುತ್ತೇನೆ.” ಎಂದು ಸಂದೇಶ ರವಾನಿಸಿದ್ದರು.
ಅವರ ಈ ನಂಬಿಕೆ ನಿಜವಾಗಿದೆ. 17 ವರ್ಷಗಳಲ್ಲಿ ಸಾಧ್ಯವಾಗದೇ ಇರುವುದನ್ನು ಆರ್ಸಿಬಿ 18ನೇ ಸೀಸನ್ನಲ್ಲಿ ಸಾಧಿಸಿ ತೋರಿಸಿದೆ. ಅತ್ತ ಫೈನಲ್ ಪಂದ್ಯದ ವೇಳೆ ನಾನು ಸಹ ಅಲ್ಲಿದದ್ದು ಖುಷಿಯ ವಿಚಾರ. ಅಲ್ಲದೆ ವಿರಾಟ್ ಕೊಹ್ಲಿಯ ಅಭೂತಪೂರ್ವ ಕ್ಷಣಗಳಿಗೆ ಸಾಕ್ಷಿಯಾದೆ.
ಈ ವೇಳೆ ವಿರಾಟ್ ಕೊಹ್ಲಿ, “ಇದು ನಮಗೆ ಎಷ್ಟು ಸೇರುತ್ತದೆಯೋ ಅಷ್ಟೇ ನಿಮಗೂ (ಡಿವಿಲಿಯರ್ಸ್‌ಗೆ) ಸೇರುತ್ತದೆ” ಎಂದಿದ್ದರು. ನಿಜಕ್ಕೂ ಅವೆಲ್ಲವೂ ಅತ್ಯಮೂಲ್ಯ ಕ್ಷಣಗಳಾಗಿದ್ದವು ಎಂದು ಎಬಿ ಡಿವಿಲಿಯರ್ಸ್ ಆರ್ಸಿಬಿ ಫೈನಲ್ ಗೆಲುವನ್ನು ಸ್ಮರಿಸಿದ್ದಾರೆ.
ಫೈನಲ್ ಪಂದ್ಯದ ಮುಖ್ಯಾಂಶಗಳು:
ಜೂನ್ 3, 2025 ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ನಲ್ಲಿ ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 20 ಓವರ್ಗಳಲ್ಲಿ 190 ರನ್ ಕಲೆಹಾಕಿದ್ದರು.
ಈ ಗುರಿಯನ್ನು ಬೆನ್ನತ್ತಿದ ಪಂಜಾಬ್ ಕಿಂಗ್ಸ್ ತಂಡವು 20 ಓವರ್ಗಳಲ್ಲಿ 184 ರನ್ಗಳಿಸಲಷ್ಟೇ ಶಕ್ತರಾಗಿದ್ದರು. ಈ ಮೂಲಕ ಆರ್ಸಿಬಿ ತಂಡ 6 ರನ್ಗಳ ರೋಚಕ ಜಯ ಸಾಧಿಸಿ ಚೊಚ್ಚಲ ಬಾರಿ ಐಪಿಎಲ್ ಕಿರೀಟ ಮುಡಿಗೇರಿಸಿಕೊಂಡಿದ್ದರು.
ಇದೀಗ ಹಾಲಿ ಚಾಂಪಿಯನ್ ಪಟ್ಟದೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಐಪಿಎಲ್ನಲ್ಲಿ ಕಣಕ್ಕಿಳಿಯಲು ಸಜ್ಜಾಗುತ್ತಿದೆ. ಈ ಬಾರಿ ಕೂಡ ಈ ಹಿಂದಿನ ತಂಡವನ್ನೇ ಉಳಿಸಿಕೊಂಡಿರುವ ಆರ್ಸಿಬಿ ಮತ್ತೊಮ್ಮೆ ಟ್ರೋಫಿ ಎತ್ತಿ ಹಿಡಿಯುವ ವಿಶ್ವಾಸದಲ್ಲಿದ್ದಾರೆ.
ಇದನ್ನೂ ಓದಿ: ಮೂರು ತಂಡಗಳಿಗೆ ಆಸ್ಟ್ರೇಲಿಯನ್ ‘ಕ್ಯಾಪ್ಟನ್ಸ್’
