AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಿಳಾ ಏಷ್ಯಾಕಪ್ ವೇಳಾಪಟ್ಟಿ ಪ್ರಕಟ; ಈ ದಿನದಂದು ಭಾರತ- ಪಾಕ್ ಫೈಟ್

ACC Announces 2026 Women's T20 Asia Cup Fixtures: ಏಷ್ಯನ್ ಕ್ರಿಕೆಟ್ ಕೌನ್ಸಿಲ್ 2026ರ ಮಹಿಳಾ ಟಿ20 ಏಷ್ಯಾಕಪ್ ವೇಳಾಪಟ್ಟಿ ಪ್ರಕಟಿಸಿದೆ. ಆಗಸ್ಟ್ 28ರಂದು ಆರಂಭವಾಗುವ ಈ ಪಂದ್ಯಾವಳಿ ದುಬೈನಲ್ಲಿ ಸೆಪ್ಟೆಂಬರ್ 13ರಂದು ಮುಕ್ತಾಯಗೊಳ್ಳಲಿದೆ. ಭಾರತ ಮತ್ತು ಪಾಕಿಸ್ತಾನ ತಂಡಗಳು ಸೆಪ್ಟೆಂಬರ್ 5ರಂದು ಮುಖಾಮುಖಿಯಾಗಲಿವೆ. 8 ತಂಡಗಳು ಭಾಗವಹಿಸಲಿವೆ: ಎ ಗುಂಪು (ಭಾರತ, ಪಾಕಿಸ್ತಾನ, ಥೈಲ್ಯಾಂಡ್, ಹಾಂಗ್ ಕಾಂಗ್) ಮತ್ತು ಬಿ ಗುಂಪು (ಶ್ರೀಲಂಕಾ, ಬಾಂಗ್ಲಾದೇಶ, ಯುಎಇ, ಇಂಡೋನೇಷ್ಯಾ).

ಮಹಿಳಾ ಏಷ್ಯಾಕಪ್ ವೇಳಾಪಟ್ಟಿ ಪ್ರಕಟ; ಈ ದಿನದಂದು ಭಾರತ- ಪಾಕ್ ಫೈಟ್
Women's T20 Asia Cup
ಪೃಥ್ವಿಶಂಕರ
|

Updated on: Aug 06, 2026 | 8:01 PM

Share

2026 ರ ಮಹಿಳಾ ಟಿ20 ಏಷ್ಯಾಕಪ್ (2026 Women’s T20 Asia Cup) ವೇಳಾಪಟ್ಟಿಯನ್ನು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಇಂದು ಪ್ರಕಟಿಸಿದೆ. ಅದರಂತೆ 10ನೇ ಆವೃತ್ತಿಯ ಈ ಪಂದ್ಯಾವಳಿ 2026 ರ ಆಗಸ್ಟ್ 28 ರಿಂದ ಪ್ರಾರಂಭವಾಗಲಿದೆ. ಟೂರ್ನಮೆಂಟ್‌ನ ಎಲ್ಲಾ ಪಂದ್ಯಗಳು ಯುಎಇಯ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿವೆ. ಒಟ್ಟು 8 ತಂಡಗಳು ಟೂರ್ನಮೆಂಟ್‌ನಲ್ಲಿ ಭಾಗವಹಿಸಲಿದ್ದು, ಈ 8 ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಎಂದಿನಂತೆ ಎ ಗುಂಪಿನಲ್ಲಿ ಸಾಂಪ್ರದಾಯಿಕ ಪ್ರತಿಸ್ಪರ್ಧಿಗಳಾದ ಭಾರತ ಮತ್ತು ಪಾಕಿಸ್ತಾನದ ಜೊತೆಗೆ ಥೈಲ್ಯಾಂಡ್ ಮತ್ತು ಹಾಂಗ್ ಕಾಂಗ್ ತಂಡಗಳು ಸೇರಿವೆ. ಬಿ ಗುಂಪಿನಲ್ಲಿ ಹಾಲಿ ಚಾಂಪಿಯನ್ ಶ್ರೀಲಂಕಾ, ಬಾಂಗ್ಲಾದೇಶ, ಯುಎಇ ಮತ್ತು ಇಂಡೋನೇಷ್ಯಾ ತಂಡಗಳು ಸೇರಿವೆ.

ಈ ದಿನದಂದು ಭಾರತ- ಪಾಕ್ ಫೈಟ್

ಪ್ರತಿ ಗುಂಪಿನಲ್ಲಿರುವ ತಂಡಗಳು ಪರಸ್ಪರ ಒಂದೊಂದು ಪಂದ್ಯವನ್ನು ಆಡಲಿವೆ. ಇದರರ್ಥ ಭಾರತ ಮತ್ತು ಪಾಕಿಸ್ತಾನ ಮಹಿಳಾ ತಂಡಗಳು ಗುಂಪು ಹಂತದಲ್ಲೇ ಮುಖಾಮುಖಿಯಾಗಲಿವೆ. ಈ ಎರಡೂ ತಂಡಗಳ ನಡುವಿನ ಹೈವೋಲ್ಟೇಜ್ ಪಂದ್ಯ ಸೆಪ್ಟೆಂಬರ್ 5, 2026 ರಂದು ನಡೆಯಲಿದೆ. ಈ ಪಂದ್ಯ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯವು ಭಾರತೀಯ ಕಾಲಮಾನ ರಾತ್ರಿ 8 ಗಂಟೆಗೆ ಆರಂಭವಾಗಲಿದ್ದು, ಟಾಸ್ ಸಂಜೆ 7.30 ಕ್ಕೆ ನಡೆಯಲಿದೆ.

ಮಹಿಳಾ ಟಿ20 ಏಷ್ಯಾಕಪ್ ವೇಳಾಪಟ್ಟಿ

  • 28 ಆಗಸ್ಟ್ 2026: ಥೈಲ್ಯಾಂಡ್ vs ಹಾಂಗ್ ಕಾಂಗ್
  • 29 ಆಗಸ್ಟ್ 2026: ಶ್ರೀಲಂಕಾ vs ಯುಎಇ
  • 30 ಆಗಸ್ಟ್ 2026: ಭಾರತ vs ಥೈಲ್ಯಾಂಡ್,
  • 31 ಆಗಸ್ಟ್ 2026: ಬಾಂಗ್ಲಾದೇಶ vs ಇಂಡೋನೇಷ್ಯಾ
  • 1 ಸೆಪ್ಟೆಂಬರ್ 2026: ಪಾಕಿಸ್ತಾನ vs ಥೈಲ್ಯಾಂಡ್
  • 2 ಸೆಪ್ಟೆಂಬರ್ 2026: ಶ್ರೀಲಂಕಾ vs ಇಂಡೋನೇಷ್ಯಾ
  • 3 ಸೆಪ್ಟೆಂಬರ್ 2026: ಭಾರತ vs ಹಾಂಗ್ ಕಾಂಗ್
  • 4 ಸೆಪ್ಟೆಂಬರ್ 2026: ಯುಎಇ vs ಇಂಡೋನೇಷ್ಯಾ
  • 5 ಸೆಪ್ಟೆಂಬರ್ 2026: ಪಾಕಿಸ್ತಾನ vs ಭಾರತ
  • 6 ಸೆಪ್ಟೆಂಬರ್ 2026: ಶ್ರೀಲಂಕಾ vs ಬಾಂಗ್ಲಾದೇಶ
  • 7 ಸೆಪ್ಟೆಂಬರ್ 2026: ಪಾಕಿಸ್ತಾನ vs ಹಾಂಗ್ ಕಾಂಗ್
  • 8 ಸೆಪ್ಟೆಂಬರ್ 2026: ಬಾಂಗ್ಲಾದೇಶ vs ಯುಎಇ

ಸೆಮಿಫೈನಲ್‌ನ ಮೊದಲ ಪಂದ್ಯ ಸೆಪ್ಟೆಂಬರ್ 10 ರಂದು ನಡೆಯಲಿದ್ದು, ಎರಡನೇ ಸೆಮಿಫೈನಲ್ ಪಂದ್ಯ ಸೆಪ್ಟೆಂಬರ್ 11 ರಂದು ನಡೆಯಲಿದೆ. ಅಂತಿಮವಾಗಿ ಫೈನಲ್ ಪಂದ್ಯ ಸೆಪ್ಟೆಂಬರ್ 13 ರಂದು ನಡೆಯಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us