AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಮ್ಮ ಇತಿಹಾಸ ಇಡೀ ಜಗತ್ತಿಗೆ ಗೊತ್ತು’; ಭಾರತದಲ್ಲಿ ನಿಂತು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ ಎಂಐ ಆಟಗಾರ

IPL 2026: ಐಪಿಎಲ್ 2026 ಕ್ಕೆ ಮುನ್ನ ಮುಂಬೈ ಇಂಡಿಯನ್ಸ್ ಸೇರಿರುವ ಅಫ್ಘಾನ್ ಆಟಗಾರ ಅಲ್ಲಾಹ್ ಗಜನ್‌ಫರ್, ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನ ನಡೆಸಿದ ರಾಕೆಟ್ ದಾಳಿ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನದ ಈ ಹೇಡಿತನದ ಕ್ರಮದ ವಿರುದ್ಧ ರಶೀದ್ ಖಾನ್‌ರಂತಹ ಇತರ ಅಫ್ಘಾನ್ ಆಟಗಾರರು ಸಹ ಧ್ವನಿ ಎತ್ತಿದ್ದಾರೆ. ಗಜನ್‌ಫರ್ ಪಾಕಿಸ್ತಾನದ ಇತಿಹಾಸವನ್ನು ನೆನಪಿಸಿ, ಇತಿಹಾಸ ಪುನರಾವರ್ತನೆಯಾದರೆ ಕಠಿಣ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

‘ನಮ್ಮ ಇತಿಹಾಸ ಇಡೀ ಜಗತ್ತಿಗೆ ಗೊತ್ತು’; ಭಾರತದಲ್ಲಿ ನಿಂತು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ ಎಂಐ ಆಟಗಾರ
Allah Ghazanfar
ಪೃಥ್ವಿಶಂಕರ
|

Updated on: Mar 18, 2026 | 3:58 PM

Share

2026 ರ ಐಪಿಎಲ್ (IPL 2026) ಆರಂಭಕ್ಕೆ ಕೆಲವೇ ದಿನಗಳು ಬಾಕಿ ಉಳಿದಿವೆ. ಹಾಗಾಗಿ ಎಲ್ಲಾ ಫ್ರಾಂಚೈಸಿಗಳು ತಮ್ಮ ಸಿದ್ಧತೆಗಳನ್ನು ಅಂತಿಮಗೊಳಿಸುತ್ತಿವೆ. ಇತ್ತ ದೇಶೀಯ ಹಾಗೂ ವಿದೇಶಿಯ ಆಟಗಾರರು ಕೂಡ ಭಾರತಕ್ಕೆ ಬಂದಿಳಿದು ತಮ್ಮ ತಮ್ಮ ತಂಡಗಳನ್ನು ಸೇರಿಕೊಳ್ಳುತ್ತಿದ್ದಾರೆ. ಅದರಂತೆ ಅಫ್ಘಾನಿಸ್ತಾನದಿಂದ ಭಾರತಕ್ಕೆ ಬಂದಿರುವ ಮುಂಬೈ ಇಂಡಿಯನ್ಸ್ ಪರ ಆಡಲಿರುವ ಅಲ್ಲಾಹ್ ಗಜನ್‌ಫರ್, ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಎಲ್ಲರಿಗೂ ತಿಳಿದಿರುವಂತೆ ಪಾಕಿಸ್ತಾನ ವಾಯುಪಡೆಯು ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿನ ಆಸ್ಪತ್ರೆಯ ಮೇಲೆ ರಾಕೆಟ್ ದಾಳಿ ನಡೆಸಿ 400 ಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿದೆ. ಪಾಕಿಸ್ತಾನದ ಈ ಹೇಡಿತನದ ದಾಳಿಯು ಅಫ್ಘಾನ್ ಸರ್ಕಾರ ಮತ್ತು ಅಫ್ಘಾನ್ ಕ್ರಿಕೆಟಿಗರನ್ನು ಕೆರಳಿಸಿದೆ. ರಶೀದ್ ಖಾನ್ ಮತ್ತು ರಹಮಾನುಲ್ಲಾ ಗುರ್ಬಾಜ್‌ರಂತಹ ಆಟಗಾರರು ಪಾಕಿಸ್ತಾನವನ್ನು ಬಹಿರಂಗವಾಗಿ ಟೀಕಿಸಿದ್ದಾರೆ.

ಪಾಕಿಸ್ತಾನಕ್ಕೆ ಗಜನ್‌ಫರ್ ಎಚ್ಚರಿಕೆ

ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಲಿರುವ ಅಫ್ಘಾನಿಸ್ತಾನದ ಯುವ ಸ್ಪಿನ್ನರ್ ಅಲ್ಲಾಹ್ ಗಜನ್‌ಫರ್, ‘ಅಫ್ಘಾನಿಸ್ತಾನದ ಇತಿಹಾಸ ಜಗತ್ತಿಗೆ ತಿಳಿದಿದೆ’ ಎಂದು ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದಾರೆ. ‘ಅಫ್ಘಾನಿಸ್ತಾನದಲ್ಲಿರುವ ಆ ಬಡವರ ಬಳಿ ವೈದ್ಯಕೀಯ ಚಿಕಿತ್ಸೆಗೂ ಹಣವಿರಲಿಲ್ಲ. ಪಾಕಿಸ್ತಾನಿಗಳು ಅಂತಹ ಸ್ಥಳಗಳ ಮೇಲೆ ದಾಳಿ ಮಾಡುತ್ತಿದ್ದಾರೆ. ಅಫ್ಘಾನಿಸ್ತಾನದ ಜನರು ಇದನ್ನು ಎಂದಿಗೂ ಸಹಿಸುವುದಿಲ್ಲ. ಪಾಕಿಸ್ತಾನ ಏನನ್ನು ಸಾಬೀತುಪಡಿಸಲು ಪ್ರಯತ್ನಿಸುತ್ತಿದೆ ಎಂದು ನನಗೆ ತಿಳಿದಿಲ್ಲ. ಅವರು ನಾಗರಿಕರ ಮೇಲೆ ದಾಳಿ ಮಾಡುತ್ತಿದ್ದಾರೆ. ಅಫ್ಘಾನಿಸ್ತಾನದ ಇತಿಹಾಸ ಎಲ್ಲರಿಗೂ ತಿಳಿದಿದೆ. ಇತಿಹಾಸ ಪುನರಾವರ್ತನೆಯಾದರೆ, ಅದು ಪಾಕಿಸ್ತಾನಕ್ಕೆ ತುಂಬಾ ಕೆಟ್ಟದಾಗಿರುತ್ತದೆ’ ಎಂದು ನ್ಯೂಸ್ 18 ಗೆ ನೀಡಿದ ಸಂದರ್ಶನದಲ್ಲಿ ಗಜನ್‌ಫರ್ ಹೇಳಿದ್ದಾರೆ.

ಐಪಿಎಲ್‌ಗೆ ಗಜನ್‌ಫರ್ ಪಾದಾರ್ಪಣೆ

ಅಲ್ಲಾಹ್ ಗಜನ್‌ಫರ್ 2026 ರ ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಲು ಸಜ್ಜಾಗಿದ್ದಾರೆ. ಕೇವಲ 19 ವರ್ಷ ವಯಸ್ಸಿನಲ್ಲಿಯೇ 14 ಏಕದಿನ ಪಂದ್ಯಗಳನ್ನಾಡಿರುವ ಗಜನ್‌ಫರ್, 23 ವಿಕೆಟ್‌ಗಳನ್ನು ಪಡೆದಿದ್ದಾರೆ. ಹಾಗೆಯೇ 5 ಅಂತರರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಎರಡು ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅಲ್ಲಾಹ್ ಗಜನ್‌ಫರ್ ಒಟ್ಟು 63 ಟಿ20ಪಂದ್ಯಗಳನ್ನು ಆಡಿದ್ದು, 77 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದೀಗ ಅವರು ಮುಂಬೈ ಇಂಡಿಯನ್ಸ್ ಪರ ಐಪಿಎಲ್‌ಗೆ ಪಾದಾರ್ಪಣೆ ಮಾಡುತ್ತಿದ್ದಾರೆ.

ಮುಂಬೈ ಇಂಡಿಯನ್ಸ್ ತಂಡ: ಹಾರ್ದಿಕ್ ಪಾಂಡ್ಯ, ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ರಿಯಾನ್ ರಿಕಲ್ಟನ್, ರಾಬಿನ್ ಮಿಂಜ್, ರಾಜ್ ಬಾವಾ, ರಘು ಶರ್ಮಾ, ಮಿಚೆಲ್ ಸ್ಯಾಂಟ್ನರ್, ಕಾರ್ಬಿನ್ ಬಾಷ್, ನಮನ್ ಧೀರ್, ಜಸ್ಪ್ರೀತ್ ಬುಮ್ರಾ, ಟ್ರೆಂಟ್ ಬೌಲ್ಟ್, ಅಲ್ಲಾ ಘಜನ್‌ಫರ್, ಅಶ್ವನಿ ಕುಮಾರ್, ದೀಪಕ್ ಚಾಹರ್, ವಿಲ್ ಜಾಕ್ಸ್, ಶೆರ್ಫೇನ್ ರುದರ್‌ಫೋರ್ಡ್, ಮಯಾಂಕ್ ಮಾರ್ಕಂಡೆ, ಶಾರ್ದೂಲ್ ಠಾಕೂರ್, ಕ್ವಿಂಟನ್ ಡಿ ಕಾಕ್, ಡ್ಯಾನಿಶ್ ಮಾಲೆವಾರ್, ಮೊಹಮ್ಮದ್ ಇಝಾರ್, ಅಥರ್ವ ಅಂಕೋಲೇಕರ್, ಮಯಾಂಕ್ ರಾವತ್.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us