ಐಪಿಎಲ್ 2024ರ 66ನೇ ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಹೈದರಾಬಾದ್‌ನಲ್ಲಿ ಸನ್‌ರೈಸರ್ಸ್ ತಂಡ ಗುಜರಾತ್ ತಂಡವನ್ನು ಎದುರಿಸಬೇಕಿತ್ತು. ಆದರೆ, ಟಾಸ್‌ಗೂ ಮುನ್ನವೇ ಮಳೆ ಸುರಿಯಲಾರಂಭಿಸಿದ್ದರಿಂದ ಟಾಸ್ ನಡೆಸಲು ಸಾಧ್ಯವಾಗಲಿಲ್ಲ. 7.30ರ ಸುಮಾರಿಗೆ ಸ್ವಲ್ಪ ಹೊತ್ತು ಮಳೆ ನಿಂತಿದ್ದು, ಅರ್ಧ ಗಂಟೆ ತಡವಾಗಿ ಪಂದ್ಯ ಆರಂಭವಾಗಲಿದೆ ಎಂದು ವರದಿಯಾಗಿತ್ತು. ಅಲ್ಲದೆ 8 ಗಂಟೆಗೆ ಟಾಸ್‌ಗೆ ಸಮಯ ನಿಗದಿಯಾಗಿದ್ದು, ಪಂದ್ಯ 8.15ಕ್ಕೆ ಆರಂಭವಾಗಲಿತ್ತು. ಆದರೆ 8 ಗಂಟೆಗೆ ಐದು ನಿಮಿಷಗಳ ಮೊದಲು ಮತ್ತೆ ಧಾರಾಕಾರವಾಗಿ ಸುರಿಯಲಾರಂಭಿಸಿದ ಮಳೆ ನಿಲ್ಲಲಿಲ್ಲ. ಐದು ಓವರ್‌ಗಳ ಪಂದ್ಯಕ್ಕೆ 10.30 ರ ಕಡಿತದ ಸಮಯವಿತ್ತು. ಆದರೆ, ಹೊರ ಮೈದಾನ ಸಾಕಷ್ಟು ಒದ್ದೆಯಾಗಿದ್ದು, ಮೈದಾನದ ಹಲವೆಡೆ ನೀರು ನಿಂತಿತ್ತು. ಹೀಗಿರುವಾಗ ಮೈದಾನದ ಸಿಬ್ಬಂದಿಯೊಂದಿಗೆ ಮಾತನಾಡಿದ ಅಂಪೈರ್‌ಗಳು ಪಂದ್ಯ ರದ್ದುಗೊಳಿಸಲು ನಿರ್ಧರಿಸಿದರು.
ಇನ್ನು ಮಳೆಯಿಂದಾಗಿ ಪಂದ್ಯ ರದ್ದಾದರೂ ಸನ್‌ರೈಸರ್ಸ್ ಹೈದರಾಬಾದ್ ತಂಡ ಪ್ಲೇ ಆಫ್ಗೇರುವಲ್ಲಿ ಯಶಸ್ವಿಯಾಗಿದೆ. ಈ ಪಂದ್ಯ ರದ್ದಾದ ಕಾರಣ ಹೈದರಾಬಾದ್ ಮತ್ತು ಗುಜರಾತ್ ತಂಡಗಳಿಗೆ ತಲಾ ಒಂದು ಅಂಕ ನೀಡಲಾಯಿತು. ಹೈದರಾಬಾದ್ ಈಗ 13 ಪಂದ್ಯಗಳಿಂದ 15 ಅಂಕಗಳನ್ನು ಹೊಂದಿದ್ದು, ತಂಡವು ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ತಲುಪಿದೆ. ಚೆನ್ನೈ ಸೂಪರ್ ಕಿಂಗ್ಸ್ ಹೊರತುಪಡಿಸಿ, ಯಾವುದೇ ತಂಡವು 15 ಅಥವಾ ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸಲು ಸಾಧ್ಯವಿಲ್ಲ. ಈ ಪರಿಸ್ಥಿತಿಯಲ್ಲಿ ಸನ್‌ರೈಸರ್ಸ್ ಪ್ಲೇ ಆಫ್‌ಗೆ ಅರ್ಹತೆ ಪಡೆಯಿತು. ಚೆನ್ನೈ 13 ಪಂದ್ಯಗಳ ನಂತರ 14 ಅಂಕಗಳನ್ನು ಹೊಂದಿದೆ. ಈ ತಂಡ ಮೇ 18ರಂದು ಆರ್ಸಿಯನ್ನು ಎದುರಿಸಬೇಕಿದೆ.
ಐಪಿಎಲ್ 2024ರ 66ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಬೇಕಿತ್ತು. ಈ ಪಂದ್ಯ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಬೇಕಿತ್ತು. ಆದರೆ, ಮಳೆಯಿಂದಾಗಿ ಟಾಸ್ ಕೂಡ ನಡೆಯದೆ ಪಂದ್ಯ ರದ್ದಾಯಿತು. ಈ ಮೂಲಕ ಹೈದರಾಬಾದ್ ತಂಡ ಪ್ಲೇ ಆಫ್ ತಲುಪಿತು.
ಹೈದರಾಬಾದ್‌ನಲ್ಲಿ ನಡೆಯುತ್ತಿರುವ ಪಂದ್ಯದ ವೇಳೆ ಮಳೆಯ ಭೀತಿ ಎದುರಾಗಿದೆ. ಎರಡು ಗಂಟೆಗಳ ಹಿಂದೆ ಧಾರಾಕಾರ ಮಳೆಯಾಗಿತ್ತು. ಬಿರುಗಾಳಿಯೂ ಬೀಸಿತು. ಪಂದ್ಯದ ವೇಳೆ ಮಳೆಯಾಗುವ ಸಾಧ್ಯತೆಯೂ ಇದೆ. ಪಂದ್ಯದ ಮೇಲೆ ಪರಿಣಾಮ ಬೀರಿದರೆ ಸನ್ರೈಸರ್ಸ್ಗೆ ಹಿನ್ನಡೆಯುಂಟಾಗಲಿದೆ.
Published On - 7:06 pm, Thu, 16 May 24