
ಉಪ್ಪಲ್ ಕ್ರೀಡಾಂಗಣದಲ್ಲಿ ನಡೆದ ಪಂಜಾಜ್ ಕಿಂಗ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ನಡುವಿನ ಮುಖಾಮುಖಿಯಲ್ಲಿ ಹೈದರಾಬಾದ್ ತಂಡ ಕೊನೆಗೂ ಟೂರ್ನಿಯ ಮೊದಲ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ಟಾಸ್ ಸೋತ ಪಂಜಾಬ್ ಕಿಂಗ್ಸ್ ತಂಡ ಮೊದಲು ಬ್ಯಾಟಿಂಗ್ ಮಾಡಿ ಕೇವಲ 143 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರಲ್ಲಿ ಪಂಜಾಬ್ ತಂಡದ ಪರ ಏಕಾಂಗಿ ಹೋರಾಟ ನಡೆಸಿದ ಶಿಖರ್ ಧವನ್ ಅಜೇಯ 99 ರನ್ ಬಾರಿಸಿದರು. ಈ ಗುರಿ ಬೆನ್ನತ್ತಿದ ಸನ್‌ರೈಸರ್ಸ್ ಹೈದರಾಬಾದ್ 17.1 ಓವರ್‌ಗಳಲ್ಲಿ 2 ವಿಕೆಟ್ ಕಳೆದುಕೊಂಡು ಐಪಿಎಲ್ 2023 ರಲ್ಲಿ ಮೊದಲ ಗೆಲುವು ಸಾಧಿಸಿತು.
ಸತತ ಎರಡು ಸೋಲುಗಳಿಂದ ಕಂಗೆಟ್ಟಿದ್ದ ಹೈದರಾಬಾದ್ ತಂಡಕ್ಕೆ ಕೊನೆಗೂ ಜಯ ದೊರೆತಿದೆ. 18ನೇ ಓವರ್‌ನ ಮೊದಲ ಎಸೆತದಲ್ಲಿ ಬೌಂಡರಿ ಬಾರಿಸಿದ ತ್ರಿಪಾಠಿ ತಂಡಕ್ಕೆ ಗೆಲುವು ತಂದುಕೊಟ್ಟರು.
17ನೇ ಓವರ್‌ನಲ್ಲಿ ಹೈದರಾಬಾದ್ ನಾಯಕ ಅಡೆನ್ ಮಾರ್ಕ್ರಾಮ್ ಬರೋಬ್ಬರಿ 4 ಬೌಂಡರಿ ಬಾರಿಸಿದರು.
ಹೈದರಾಬಾದ್ ಪರ ಏಡನ್ ಮಾರ್ಕ್ರಾಮ್ 21 ರನ್ ಮತ್ತು ರಾಹುಲ್ ತ್ರಿಪಾಠಿ 69 ರನ್ ಗಳಿಸಿ ಆಡುತ್ತಿದ್ದಾರೆ. ಗೆಲುವಿಗೆ 24 ಎಸೆತಗಳಲ್ಲಿ 20 ರನ್‌ಗಳ ಅಗತ್ಯವಿದೆ.
15ನೇ ಓವರ್‌ನಲ್ಲಿ ರಾಹುಲ್ ತ್ರಿಪಾಠಿ 1 ಸಿಕ್ಸರ್ ಮತ್ತು 3 ಬೌಂಡರಿ ಬಾರಿಸಿದರು. ಹೈದರಾಬಾದ್ ಪರ ಏಡನ್ ಮಾರ್ಕ್ರಾಮ್ 19 ರನ್ ಮತ್ತು ರಾಹುಲ್ ತ್ರಿಪಾಠಿ 65 ರನ್ ಗಳಿಸಿ ಆಡುತ್ತಿದ್ದಾರೆ. ಹೈದರಾಬಾದ್ ಗೆಲುವಿಗೆ 30 ಎಸೆತಗಳಲ್ಲಿ 26 ರನ್‌ಗಳ ಅಗತ್ಯವಿದೆ.
13ನೇ ಓವರ್‌ನಲ್ಲಿ ರಾಹುಲ್ ತ್ರಿಪಾಠಿ ಸಿಕ್ಸರ್ ಬಾರಿಸುವ ಮೂಲಕ ಅರ್ಧಶತಕ ಪೂರೈಸಿದರು. ಹೈದರಾಬಾದ್ ಪರ ಏಡನ್ ಮಾರ್ಕ್ರಾಮ್ 10 ರನ್ ಮತ್ತು ರಾಹುಲ್ ತ್ರಿಪಾಠಿ 50 ರನ್ ಗಳಿಸಿ ಆಡುತ್ತಿದ್ದಾರೆ.
12ನೇ ಓವರ್‌ನಲ್ಲಿ ಹೈದರಾಬಾದ್ ನಾಯಕ ಏಡನ್ ಮಾರ್ಕ್ರಾಮ್ ಬೌಂಡರಿ ಬಾರಿಸಿದರು. 12 ಓವರ್‌ಗಳ ನಂತರ ಹೈದರಾಬಾದ್ ಸ್ಕೋರ್ 86/2
ರಾಹುಲ್ ಚಹಾರ್ ಎಸೆದ 11ನೇ ಓವರ್‌ನಲ್ಲಿ ತ್ರಿಪಾಠಿ 2 ಬೌಂಡರಿ ಬಾರಿಸಿದರು. ಹೈದರಾಬಾದ್ ಪರ ಏಡನ್ ಮಾರ್ಕ್ರಾಮ್ 3 ರನ್ ಮತ್ತು ರಾಹುಲ್ ತ್ರಿಪಾಠಿ 41 ರನ್ ಗಳಿಸಿ ಆಡುತ್ತಿದ್ದಾರೆ. 11 ಓವರ್‌ಗಳ ನಂತರ ಹೈದರಾಬಾದ್ ಸ್ಕೋರ್ 78/2
ಹೈದರಾಬಾದ್ ಪರ ಏಡನ್ ಮಾರ್ಕ್ರಾಮ್ 2 ರನ್ ಮತ್ತು ರಾಹುಲ್ ತ್ರಿಪಾಠಿ 31 ರನ್ ಗಳಿಸಿ ಆಡುತ್ತಿದ್ದಾರೆ. ಈ ಓವರ್‌ನಲ್ಲಿ ತ್ರಿಪಾಠಿ 3 ಬೌಂಡರಿ ಬಾರಿಸಿದರು.
ಹೈದರಾಬಾದ್‌ನ ಎರಡನೇ ವಿಕೆಟ್ ಪತನವಾಗಿದ್ದು, ಮಯಾಂಕ್ ಅಗರ್ವಾಲ್ 21 ರನ್ ಗಳಿಸಿ ಔಟಾದರು. ಹೈದರಾಬಾದ್ ಸ್ಕೋರ್ 8.3 ಓವರ್‌ಗಳಲ್ಲಿ 45/2
7ನೇ ಓವರ್‌ನಲ್ಲಿ ರಾಹುಲ್ ತ್ರಿಪಾಠಿ ಸಿಕ್ಸರ್ ಬಾರಿಸಿದರು. ಹೈದರಾಬಾದ್ ಪರ ಮಯಾಂಕ್ ಅಗರ್ವಾಲ್ 18 ರನ್ ಹಾಗೂ ರಾಹುಲ್ ತ್ರಿಪಾಠಿ 9 ರನ್‌ಗಳೊಂದಿಗೆ ಆಡುತ್ತಿದ್ದಾರೆ. 7 ಓವರ್‌ಗಳ ನಂತರ ಹೈದರಾಬಾದ್ ಸ್ಕೋರ್ 40/1
ಹೈದರಾಬಾದ್ ಪರ ಮಯಾಂಕ್ ಅಗರ್ವಾಲ್ 18 ರನ್ ಮತ್ತು ರಾಹುಲ್ ತ್ರಿಪಾಠಿ 3 ರನ್‌ಗಳೊಂದಿಗೆ ಆಡುತ್ತಿದ್ದಾರೆ. 6 ಓವರ್‌ಗಳ ನಂತರ ಹೈದರಾಬಾದ್ ಸ್ಕೋರ್ 34/1
ಹೈದರಾಬಾದ್ ಪರ ಮಯಾಂಕ್ ಅಗರ್ವಾಲ್ 16 ರನ್ ಹಾಗೂ ರಾಹುಲ್ ತ್ರಿಪಾಠಿ 1 ರನ್ ಗಳಿಸಿ ಆಡುತ್ತಿದ್ದಾರೆ. 5 ಓವರ್‌ಗಳ ನಂತರ ಹೈದರಾಬಾದ್ ಸ್ಕೋರ್ 30/1
ಹೈದರಾಬಾದ್‌ನ ಮೊದಲ ವಿಕೆಟ್ ಪತನಗೊಂಡಿತು, ಅರ್ಷದೀಪ್ ಅವರ ಓವರ್‌ನಲ್ಲಿ ಹ್ಯಾರಿ ಬ್ರೂಕ್ 13 ರನ್ ಗಳಿಸಿ ಔಟಾದರು. ಹೈದರಾಬಾದ್ ಸ್ಕೋರ್ 3.5 ಓವರ್‌ಗಳಲ್ಲಿ 27/1
2 ಓವರ್‌ಗಳ ನಂತರ ಹೈದರಾಬಾದ್ ಸ್ಕೋರ್ 13/0. ಈ ಓವರ್‌ನಲ್ಲಿ 2 ಬೌಂಡರಿ ಬಂದವು. ಮಯಾಂಕ್ ಅಗರ್ವಾಲ್ 9 ರನ್ ಮತ್ತು ಹ್ಯಾರಿ ಬ್ರೂಕ್ 4 ರನ್ ಗಳಿಸಿ ಆಡುತ್ತಿದ್ದಾರೆ.
ಮಯಾಂಕ್ ಅಗರ್ವಾಲ್ ಮತ್ತು ಹ್ಯಾರಿ ಬ್ರೂಕ್ ಹೈದರಾಬಾದ್ ಪರ ಬ್ಯಾಟಿಂಗ್‌ಗೆ ಬಂದಿದ್ದಾರೆ. ಪಂಜಾಬ್ ಕಿಂಗ್ಸ್ 144 ರನ್ ಟಾರ್ಗೆಟ್ ನೀಡಿದೆ. 1 ಓವರ್ ನಂತರ ಹೈದರಾಬಾದ್ ಸ್ಕೋರ್ 4/0. ಬೌಂಡರಿಯೊಂದಿಗೆ ಇನ್ನಿಂಗ್ಸ್ ಆರಂಭವಾಯಿತು.
ನಟರಾಜನ್ ಎಸೆದ 20ನೇ ಓವರ್‌ನಲ್ಲಿ ಧವನ್ ಶತಕ ಬಾರಿಸುವ ಅವಕಾಶ ಹೊಂದಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ಈ ಓವರ್‌ನಲ್ಲಿ 1 ಸಿಕ್ಸರ್ ಸೇರಿದಂತೆ 8 ರನ್ ಕಲೆಹಾಕಿದ ಧವನ್ 1 ರನ್ಗಳಿಂದ ಶತಕ ವಂಚಿತರಾದರು. ಅಂತಿಮವಾಗಿ ಪಂಜಾಬ್ ತಂಡ 9 ವಿಕೆಟ್ ಕಳೆದುಕೊಂಡು 143 ರನ್ ಕಲೆಹಾಕಿತು.
19ನೇ ಓವರ್‌ನಲ್ಲಿ 2 ಬೌಂಡರಿ ಬಾರಿಸಿದ ಶಿಖರ್ ಧವನ್ 91 ರನ್ ಗಳಿಸಿ ಶತಕದಂಚಿನಲ್ಲಿ ಆಡುತ್ತಿದ್ದಾರೆ. ಅವರೊಂದಿಗೆ ಮೋಹಿತ್ ರಾಠಿ 2 ರನ್ ಗಳಿಸಿ ಆಡುತ್ತಿದ್ದಾರೆ. 19 ಓವರ್‌ಗಳಲ್ಲಿ ಪಂಜಾಬ್ ಸ್ಕೋರ್ 135/9
18ನೇ ಓವರ್‌ನಲ್ಲಿ ಧವನ್ 2 ಸಿಕ್ಸರ್ ಮತ್ತು 1 ಬೌಂಡರಿ ಬಾರಿಸಿದರು. ಶಿಖರ್ ಧವನ್ 82 ರನ್ ಹಾಗೂ ಮೋಹಿತ್ ರಾಠಿ 1 ರನ್ ಗಳಿಸಿ ಆಡುತ್ತಿದ್ದಾರೆ. 18 ಓವರ್‌ಗಳಲ್ಲಿ ಪಂಜಾಬ್ ಸ್ಕೋರ್ 126/9
ಏಕಾಂಗಿಯಾಗಿ ಪಂಜಾಬ್ ಇನ್ನಿಂಗ್ಸ್ ಕಟ್ಟುತ್ತಿರುವ ಶಿಖರ್ ಧವನ್ 65 ರನ್ ಗಳಿಸಿ ಆಡುತ್ತಿದ್ದಾರೆ. ಶಿಖರ್ ಧವನ್ ಇಂದು ತಮ್ಮ ತಂಡದ ಎಲ್ಲಾ ಆಟಗಾರರೊಂದಿಗೆ ಬ್ಯಾಟಿಂಗ್ ಮಾಡಿರುವುದು ವಿಶೇಷ. 17 ಓವರ್‌ಗಳಲ್ಲಿ ಪಂಜಾಬ್ ಸ್ಕೋರ್ 109/9.
16ನೇ ಓವರ್‌ನಲ್ಲಿ 2 ಸಿಕ್ಸರ್ ಬಾರಿಸಿದ ಶಿಖರ್ ಧವನ್ ಐಪಿಎಲ್ ಇತಿಹಾಸದಲ್ಲಿ 49ನೇ ಅರ್ಧಶತಕ ಬಾರಿಸಿದರು. ಪಂಜಾಬ್ ಸ್ಕೋರ್ 16 ಓವರ್‌ಗಳ ನಂತರ 101/9.
ಪಂಜಾಬ್ ಕಿಂಗ್ಸ್ ಇನ್ನಿಂಗ್ಸ್‌ನ 5 ಓವರ್‌ಗಳು ಮಾತ್ರ ಉಳಿದಿವೆ. 15 ಓವರ್‌ಗಳ ಅಂತ್ಯಕ್ಕೆ ಪಂಜಾಬ್ 9 ವಿಕೆಟ್ ಕಳೆದುಕೊಂಡು 88 ರನ್ ಗಳಿಸಿದೆ.
ಮಾರ್ಕಂಡೆ ತಮ್ಮ ಕೋಟಾದ ಕೊನೆಯ ಓವರ್‌ನ ಕೊನೆಯ ಎಸೆತದಲ್ಲೂ ವಿಕೆಟ್ ಪಡೆದರು. ಈ ಮೂಲಕ 4 ಓವರ್ ಮುಕ್ತಾಯಕ್ಕೆ ಮಾರ್ಕಂಡೆ 4 ವಿಕೆಟ್ ಉರುಳಿಸಿದರು.
ಪಂಜಾಬ್‌ನ ಎಂಟನೇ ವಿಕೆಟ್ ಪತನ, ಮಾರ್ಕಂಡೆ ಅವರ ಓವರ್‌ನಲ್ಲಿ ರಾಹುಲ್ ಚಹಾಲ್ 0 ರನ್‌ಗೆ ಔಟಾದರು. 13 ಓವರ್‌ಗಳ ನಂತರ ಪಂಜಾಬ್ ಸ್ಕೋರ್ 78/8
ಪಂಜಾಬ್‌ನ ಏಳನೇ ವಿಕೆಟ್ ಪತನವಾಗಿದ್ದು, ಮಲಿಕ್ ಅವರ ಬೆಂಕಿ ಎಸೆತಕ್ಕೆ ಹರ್ಪೀತ್ ಬ್ರಾರ್ ಕ್ಲೀನ್ ಬೌಲ್ಡ್ ಆದರು.
ಪಂಜಾಬ್‌ನ ಆರನೇ ವಿಕೆಟ್ ಪತನವಾಗಿದ್ದು, ಮಯಾಂಕ್ ಮಾರ್ಕಂಡೆ ಶಾರುಖ್ ಖಾನ್ ಅವರನ್ನು ಎಲ್ಬಿ ಬಲೆಗೆ ಬೀಳಿಸಿದರು. 11 ಓವರ್‌ಗಳ ನಂತರ ಪಂಜಾಬ್ ಸ್ಕೋರ್ 76/6
ಪಂಜಾಬ್‌ನ ಐದನೇ ವಿಕೆಟ್ ಪತನವಾಗಿದೆ. ಉಮ್ರಾನ್ ಮಲಿಕ್ ಅವರ ಓವರ್‌ನಲ್ಲಿ ಇಂಪ್ಯಾಕ್ಟ್ ಪ್ಲೇಯರ್ ರಜಾ 5 ರನ್ ಗಳಿಸಿ ಔಟಾದರು. 10 ಓವರ್‌ಗಳ ನಂತರ ಪಂಜಾಬ್ ಸ್ಕೋರ್ 73/5.
ಮಾರ್ಕಾಂಡೆ ಎಸೆದ 9ನೇ ಓವರ್‌ನಲ್ಲಿ ಸ್ಯಾಮ್ ಕರನ್ 22 ರನ್ ಗಳಿಸಿ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದರು. ಪಂಜಾಬ್ ಸ್ಕೋರ್ 8.5 ಓವರ್‌ಗಳಲ್ಲಿ 63/4
ಪಂಜಾಬ್ ಪರ ಸ್ಯಾಮ್ ಕರನ್ 18 ರನ್ ಹಾಗೂ ಶಿಖರ್ ಧವನ್ 32 ರನ್ ಗಳಿಸಿ ಆಡುತ್ತಿದ್ದಾರೆ. ಈ ಓವರ್‌ನಲ್ಲಿ 2 ಬೌಂಡರಿ ಬಂದವು. 8 ಓವರ್‌ಗಳ ನಂತರ ಪಂಜಾಬ್ ಸ್ಕೋರ್ 53/3
ಸುಂದರ್ ಓವರ್‌ನಲ್ಲಿ ಧವನ್ ಬೌಂಡರಿ ಬಾರಿಸಿದರು. ಪಂಜಾಬ್ ಪರ ಸ್ಯಾಮ್ ಕರನ್ 17 ರನ್ ಹಾಗೂ ಶಿಖರ್ ಧವನ್ 22 ರನ್ ಗಳಿಸಿ ಆಡುತ್ತಿದ್ದಾರೆ. 7 ಓವರ್‌ಗಳ ನಂತರ ಪಂಜಾಬ್ ಸ್ಕೋರ್ 47/3
ಪಂಜಾಬ್ ಪರ ಸ್ಯಾಮ್ ಕರನ್ 12 ರನ್ ಹಾಗೂ ಶಿಖರ್ ಧವನ್ 21 ರನ್ ಗಳಿಸಿ ಆಡುತ್ತಿದ್ದಾರೆ. ಈ ಓವರ್‌ನಲ್ಲಿ ಕರನ್ 1 ಸಿಕ್ಸರ್ ಮತ್ತು ಬೌಂಡರಿ ಬಾರಿಸಿದರು.
ಮಾರ್ಕೊ ಯಾನ್ಸೆನ್ ಜಿತೇಶ್ ಶರ್ಮಾ ಅವರ ವಿಕೆಟ್ ಪಡೆದಿದ್ದಾರೆ. ಪವರ್ ಪ್ಲೇಗೂ ಮುನ್ನ ಪಂಜಾಬ್ ಮೂರನೇ ವಿಕೆಟ್ ಕಳೆದುಕೊಂಡಿದೆ. 5 ಓವರ್‌ಗಳ ನಂತರ ಪಂಜಾಬ್ ಸ್ಕೋರ್ 30/3
ಪಂಜಾಬ್ ಕಿಂಗ್ಸ್‌ನ ಎರಡನೇ ವಿಕೆಟ್ ಪತನ, 2ನೇ ಓವರ್‌ನಲ್ಲಿ ಮಾರ್ಕೊ ಯಾನ್ಸೆನ್ ಎರಡನೇ ವಿಕೆಟ್ ಪತನ. 2 ಓವರ್‌ಗಳ ನಂತರ ಪಂಜಾಬ್ ಸ್ಕೋರ್ 14/2
ಪಂಜಾಬ್ ಕಿಂಗ್ಸ್‌ನ ಮೊದಲ ವಿಕೆಟ್ ಪತನವಾಯಿತು, ಭುವನೇಶ್ವರ್ ಅವರ ಓವರ್‌ನ ಮೊದಲ ಎಸೆತದಲ್ಲಿ ಪ್ರಭಾಸಿಮ್ರಾನ್ 0 ರನ್‌ಗೆ ಔಟಾದರು. 1 ಓವರ್ ನಂತರ ಗುಜರಾತ್ ಸ್ಕೋರ್ 9/1
ಮಯಾಂಕ್ ಅಗರ್ವಾಲ್ (ನಾಯಕ), ಹ್ಯಾರಿ ಬ್ರೂಕ್, ರಾಹುಲ್ ತ್ರಿಪಾಠಿ, ಏಡೆನ್ ಮಾರ್ಕ್ರಾಮ್, ಹೆನ್ರಿಚ್ ಕ್ಲಾಸೆನ್, ವಾಷಿಂಗ್ಟನ್ ಸುಂದರ್, ಮಾರ್ಕೊ ಯಾನ್ಸೆನ್, ಭುವನೇಶ್ವರ್ ಕುಮಾರ್, ಮಯಾಂಕ್ ಮಾರ್ಕಂಡೇ, ಉಮ್ರಾನ್ ಮಲಿಕ್ ಮತ್ತು ಟಿ ನಟರಾಜನ್
ಶಿಖರ್ ಧವನ್ (ನಾಯಕ), ಪ್ರಭ್‌ಸಿಮ್ರಾನ್ ಸಿಂಗ್, ಮ್ಯಾಥ್ಯೂ ಶಾರ್ಟ್, ಜಿತೇಶ್ ಶರ್ಮಾ, ಶಾರುಖ್ ಖಾನ್, ಸ್ಯಾಮ್ ಕರನ್, ನಾಥನ್ ಎಲ್ಲಿಸ್, ಮೋಹಿತ್, ಹರ್‌ಪ್ರೀತ್ ಬ್ರಾರ್, ರಾಹುಲ್ ಚಾಹರ್ ಮತ್ತು ಅರ್ಶ್‌ದೀಪ್ ಸಿಂಗ್.
ಈ ಪಂದ್ಯದಲ್ಲಿ ಟಾಸ್ ಗೆದ್ದ ಹೈದರಾಬಾದ್ ನಾಯಕ ಏಡೆನ್ ಮಾರ್ಕ್ರಾಮ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದಾರೆ.
17ನೇ ಓವರ್ ಎಸೆದ ರಶೀದ್ ಖಾನ್ 3 ವಿಕೆಟ್ ಉರುಳಿಸಿದರು. ಇದರೊಂದಿಗೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ 7 ಮಂದಿ ಪೆವಿಲಿಯನ್ ಸೇರಿದ್ದು, ಇಲ್ಲಿಂದ ತಂಡಕ್ಕೆ ಗೆಲುವು ಕಷ್ಟವಾಗುತ್ತಿದೆ.
Published On - 7:04 pm, Sun, 9 April 23