ENG vs AUS 2nd Test: ಸ್ಮಿತ್-ಹೆಡ್ ಭರ್ಜರಿ ಬ್ಯಾಟಿಂಗ್: ಮೊದಲ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ 339-5

|

Updated on: Jun 29, 2023 | 7:24 AM

The Ashes 2023: ಸದ್ಯ ಅಲೆಕ್ಸ್ ಕ್ಯಾರಿ (ಅಜೇಯ 11) ಜೊತೆಯಾಗಿರುವ ಸ್ಮಿತ್ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಸ್ಮಿತ್ 149 ಎಸೆತಗಳಲ್ಲಿ ಅಜೇಯ 85 ರನ್ ಗಳಿಸಿದ್ದಾರೆ. ಆಸೀಸ್ 339 ರನ್​ಗೆ 5 ವಿಕೆಟ್ ಕಳೆದುಕೊಂಡಿದೆ.

ENG vs AUS 2nd Test: ಸ್ಮಿತ್-ಹೆಡ್ ಭರ್ಜರಿ ಬ್ಯಾಟಿಂಗ್: ಮೊದಲ ದಿನದಾಟದ ಅಂತ್ಯಕ್ಕೆ ಆಸ್ಟ್ರೇಲಿಯಾ 339-5
ENG vs AUS 2nd Test
Follow us on

ಲಂಡನ್​ನ ಪ್ರತಿಷ್ಠಿತ ಲಾರ್ಡ್ಸ್ ಮೈದಾನದಲ್ಲಿ ಶುರುವಾಗಿರುವ ಆ್ಯಶಸ್ ಸರಣಿಯ (Ashes Test) ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಮೊದಲ ದಿನದ ಗೌರವ ಸಂಪಾದಿಸಿದೆ. ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಕಾಂಗರೂ ಪಡೆ ಡೇವಿಡ್ ವಾರ್ನರ್ (David Warner), ಸ್ಟೀವ್ ಸ್ಮಿತ್ ಹಾಗೂ ಟ್ರಾವಿಸ್ ಹೆಡ್ ಅವರ ಅರ್ಧಶತಕದ ನೆರಿವಿನಿಂದ ಪ್ರಥಮ ದಿನದಾಟದ ಅಂತ್ಯಕ್ಕೆ 83 ಓವರ್​ಗಳಲ್ಲಿ 5 ವಿಕೆಟ್ ನಷ್ಟಕ್ಕೆ 339 ರನ್ ಗಳಿಸಿದೆ. ಸ್ಮಿತ್ (Steven Smith) ಶತಕದತ್ತ ದಾಪುಗಾಲಿಟ್ಟು ದ್ವಿತೀಯ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ಮೊದಲು ಬ್ಯಾಟಿಂಗ್ ಮಾಡಲು ಕ್ರೀಸ್​ಗಿಳಿದ ಆಸ್ಟ್ರೇಲಿಯಾ ಪರ ಡೇವಿಡ್ ವಾರ್ನರ್ ಹಾಗೂ ಉಸ್ಮಾನ್ ಖವಾಜಾ ಪ್ರಥಮ ವಿಕೆಟ್​ಗೆ 73 ರನ್​ಗಳ ಕಾಣಿಕೆ ನೀಡಿದರು. ಉಸ್ಮಾನ್ 70 ಎಸೆತಗಳಲ್ಲಿ 17 ರನ್ ಗಳಿಸಿದರೆ, ವಾರ್ನರ್ 88 ಎಸೆತಗಳಲ್ಲಿ 66 ರನ್ ಸಿಡಿಸಿ ಔಟಾದರು. ಬಳಿಕ ಮೂರನೇ ವಿಕೆಟ್​ಗೆ ಜೊತೆಯಾದ ಮಾರ್ನಸ್ ಲಾಬುಶೇನ್ ಹಾಗೂ ಸ್ಟೀವ್ ಸ್ಮಿತ್ ಎಚ್ಚರಿಕೆಯ ಆಟ ಪ್ರದರ್ಶಿಸಿದರು. ಈ ಜೋಡಿ 102 ರನ್ ಕಲೆಹಾಕಿತು. 93 ಎಸೆತಗಳಲ್ಲಿ 47 ರನ್ ಗಳಿಸಿ ಮಾರ್ನಸ್ ರಾಬಿನ್​ಸನ್​ಗೆ ವಿಕೆಟ್ ಒಪ್ಪಿಸಿದರು.

Ashes 2023: ಸತತ 100 ಪಂದ್ಯ: ವಿಶ್ವ ದಾಖಲೆ ನಿರ್ಮಿಸಿದ ನಾಥನ್ ಲಿಯಾನ್

ಇದನ್ನೂ ಓದಿ
IND vs AUS: ಏಕದಿನ ವಿಶ್ವಕಪ್​ಗೂ ಮುನ್ನ ಟೀಮ್ ಇಂಡಿಯಾದ ಮಾಸ್ಟರ್​ ಪ್ಲ್ಯಾನ್..!
ODI World Cup 2023: ಚೆಪಾಕ್ ಮತ್ತು ಆಸ್ಟ್ರೇಲಿಯಾ: ಟೀಮ್ ಇಂಡಿಯಾಗೆ ಚಿಂತೆ ಶುರು..!
ODI World Cup: ಏಕದಿನ ವಿಶ್ವಕಪ್ ಗೆದ್ದ ಅತ್ಯಂತ ಕಿರಿಯ ನಾಯಕ ಯಾರು ಗೊತ್ತಾ?
ODI World Cup 2023: ಏಕದಿನ ವಿಶ್ವಕಪ್​ಗಾಗಿ ಟೀಮ್ ಇಂಡಿಯಾದ 35 ಆಟಗಾರರ ಪಟ್ಟಿ ರೆಡಿ..!

ನಂತರ ಸ್ಮಿತ್ ಜೊತೆಯಾದ ಟ್ರಾವಿಡ್ ಹೆಡ್ ಬೊಂಬಾಟ್ ಆಟ ಪ್ರದರ್ಶಿಸಿದರು. ಬಿರುಸಿನ ಬ್ಯಾಟಿಂಗ್ ನಡೆಸಿದ ಹೆಡ್ ಕೇವಲ 73 ಎಸೆತಗಳಲ್ಲಿ 14 ಫೋರ್ ಸಹಿತ 77 ರನ್ ಚಚ್ಚಿದರು. ಈ ಮೂಲಕ ಸ್ಮಿತ್ ಜೊತೆ 118 ರನ್​ಗಳನ್ನು ಪೇರಿಸಿದರು. ಆದರೆ, ಪ್ರಮುಖ ಬ್ಯಾಟರ್ ಕ್ಯಾಮ್ರೋನ್ ಗ್ರೀನ್ ಸೊನ್ನೆ ಸುತ್ತಿದ್ದು ತಂಡಕ್ಕೆ ಹೊಡೆತ ಬಿದ್ದಿತು. ಸದ್ಯ ಅಲೆಕ್ಸ್ ಕ್ಯಾರಿ (ಅಜೇಯ 11) ಜೊತೆಯಾಗಿರುವ ಸ್ಮಿತ್ ಎರಡನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಸ್ಮಿತ್ 149 ಎಸೆತಗಳಲ್ಲಿ ಅಜೇಯ 85 ರನ್ ಗಳಿಸಿದ್ದಾರೆ. ಆಸೀಸ್ 339 ರನ್​ಗೆ 5 ವಿಕೆಟ್ ಕಳೆದುಕೊಂಡಿದೆ. ಇಂಗ್ಲೆಂಡ್ ಪರ ಜೋಶ್ ಟಾಂಗ್ ಮತ್ತು ಜೋ ರೂಟ್ 2 ವಿಕೆಟ್ ಪಡೆದಿದ್ದಾರೆ.

ಮೈದಾನಕ್ಕೆ ನುಗ್ಗಿದ ಪ್ರತಿಭಟನಾಕಾರರು:

ಲಾರ್ಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಇಂಗ್ಲೆಂಡ್​ ಹಾಗೂ ಆಸ್ಟ್ರೇಲಿಯಾ ನಡುವಣ ಆ್ಯಶಸ್ ಸರಣಿಯ 2ನೇ ಟೆಸ್ಟ್ ಪಂದ್ಯದ ವೇಳೆ ಪ್ರತಿಭಟನಾಕಾರರು ಮೈದಾನಕ್ಕೆ ನುಗ್ಗಿದ ಘಟನೆ ನಡೆದಿದೆ. ಜಸ್ಟ್ ಸ್ಟಾಪ್ ಆಯಿಲ್ ಸಂಘಟನೆಯ ಇಬ್ಬರು ಪ್ರತಿಭಟನಾಕಾರರು ಪಂದ್ಯ ಆರಂಭವಾಗುತ್ತಿದ್ದಂತೆ ಮೈದಾನಕ್ಕೆ ನುಗ್ಗಿದ್ದರು. ಅಲ್ಲದೆ ಮೈದಾನದಲ್ಲಿ ಆರೆಂಜ್ ಬಣ್ಣವನ್ನು ಎರಚುವ ಮೂಲಕ ಪಂದ್ಯಕ್ಕೆ ಅಡ್ಡಿಪಡಿಸಿದ್ದರು. ಈ ವೇಳೆ ಇಂಗ್ಲೆಂಡ್ ತಂಡದ ವಿಕೆಟ್ ಕೀಪರ್ ಜಾನಿ ಬೈರ್​ಸ್ಟೋವ್ ಪ್ರತಿಭಟನಾಕಾರೊಬ್ಬರನ್ನು ಎತ್ತಿಕೊಂಡು ಮೈದಾನದ ಹೊರಗೆ ಕರೆದುಕೊಂಡು ಹೋದರು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ