AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಗ್ ಬ್ಯಾಷ್ ಲೀಗ್​ನತ್ತ ‘ಸೂಪರ್ ಜೈಂಟ್ಸ್’

ಜಾಗತಿಕ ಕ್ರಿಕೆಟ್ ಅಂಗಳದಲ್ಲಿ ಭಾರತೀಯ ಫ್ರಾಂಚೈಸಿಗಳ ದರ್ಬಾರ್ ಮುಂದುವರೆದಿದೆ. ಐಪಿಎಲ್, ಎಸ್‌ಎ20 ಮತ್ತು ದಿ ಹಂಡ್ರೆಡ್ ಲೀಗ್‌ಗಳಲ್ಲಿ ಈಗಾಗಲೇ ತನ್ನ ಭದ್ರಕೋಟೆ ನಿರ್ಮಿಸಿರುವ ಸಂಜೀವ್ ಗೋಯೆಂಕಾ ಒಡೆತನದ 'ಸೂಪರ್ ಜೈಂಟ್ಸ್'  ಸಮೂಹ, ಈಗ ಆಸ್ಟ್ರೇಲಿಯಾದ ಪ್ರತಿಷ್ಠಿತ ಬಿಗ್ ಬ್ಯಾಷ್ ಲೀಗ್ ಮೇಲೂ ಕಣ್ಣಿಟ್ಟಿದೆ.

ಬಿಗ್ ಬ್ಯಾಷ್ ಲೀಗ್​ನತ್ತ 'ಸೂಪರ್ ಜೈಂಟ್ಸ್'
ಸೂಪರ್ ಜೈಂಟ್ಸ್Image Credit source: MSG
ಝಾಹಿರ್ ಯೂಸುಫ್
|

Updated on: Sep 09, 2026 | 8:37 AM

Share

ಸಂಜೀವ್ ಗೋಯೆಂಕಾ ಒಡೆತನದ ‘ಸೂಪರ್ ಜೈಂಟ್ಸ್​’ ಫ್ರಾಂಚೈಸಿಯು ಇದೀಗ ಆಸ್ಟ್ರೇಲಿಯಾದ ಬಿಗ್ ಬ್ಯಾಷ್​ ಲೀಗ್​ನತ್ತ ಮುಖ ಮಾಡಿದೆ. ಕ್ರಿಕೆಟ್ ಆಸ್ಟ್ರೇಲಿಯಾ ಮಂಡಳಿಯು ಬಿಬಿಎಲ್ ತಂಡಗಳನ್ನು ಖಾಸಗೀಕರಣಗೊಳಿಸುವ ಮಹತ್ವದ ನಿರ್ಧಾರವನ್ನು ಪ್ರಕಟಿಸಿದ ಬೆನ್ನಲ್ಲೇ, ಗೋಯೆಂಕಾ ಅವರ ಆರ್‌ಪಿಎಸ್‌ಜಿ ಗ್ರೂಪ್ ಬಿಗ್ ಬ್ಯಾಷ್ ಲೀಗ್ ತಂಡವೊಂದನ್ನು ಖರೀದಿಸಲು ಆಸಕ್ತಿ ತೋರಿದೆ.

ಬಿಬಿಎಲ್​ ಖಾಸಗೀಕರಣ:

ಇಷ್ಟು ವರ್ಷಗಳ ಕಾಲ ಬಿಗ್ ಬ್ಯಾಷ್ ಲೀಗ್ ಸಂಪೂರ್ಣವಾಗಿ ಆಸ್ಟ್ರೇಲಿಯಾದ ಆಯಾ ರಾಜ್ಯಗಳ ಕ್ರಿಕೆಟ್ ಸಂಸ್ಥೆಗಳ ನಿಯಂತ್ರಣದಲ್ಲಿತ್ತು. ಆದರೆ ಇದೀಗ ಈ ಟೂರ್ನಿಯು ಜಾಗತಿಕ ಬಂಡವಾಳ ಹೂಡಿಕೆಗೆ ಮುಕ್ತ ಬಾಗಿಲು ತೆರೆದಿದೆ. ಈ ಮಹತ್ವದ ಬದಲಾವಣೆಯ ಮೊದಲ ಹೆಜ್ಜೆಯಾಗಿ, ಮೆಲ್ಬೋರ್ನ್ ರೆನೆಗೇಡ್ಸ್ ತಂಡದ ಶೇಕಡಾ 100 ರಷ್ಟು ಪಾಲನ್ನು ಮಾರಾಟ ಮಾಡಲು ಕ್ರಿಕೆಟ್ ಆಸ್ಟ್ರೇಲಿಯಾ ಅಧಿಕೃತ ಒಪ್ಪಿಗೆ ಸೂಚಿಸಿದೆ. ಈ ಸುವರ್ಣ ಅವಕಾಶವನ್ನು ಬಳಸಿಕೊಳ್ಳಲು ಜಾಗತಿಕ ಮಟ್ಟದ ಹಲವು ಪ್ರಮುಖ ಉದ್ಯಮಿಗಳು ಪೈಪೋಟಿ ನಡೆಸುತ್ತಿದ್ದು, ಸೂಪರ್ ಜೈಂಟ್ಸ್ ಫ್ರಾಂಚೈಸಿಯು ಈ ರೇಸ್‌ನಲ್ಲಿ ಮುಂಚೂಣಿಯಲ್ಲಿದೆ.

ನಾಲ್ಕನೇ ‘ಸೂಪರ್ ಜೈಂಟ್ಸ್​’:

ಒಂದು ವೇಳೆ ಮೆಲ್ಬೋರ್ನ್ ರೆನೆಗೇಡ್ಸ್ ತಂಡದ ಮಾಲೀಕತ್ವವನ್ನು ಆರ್‌ಪಿಎಸ್‌ಜಿ ಗ್ರೂಪ್ ಪಡೆದುಕೊಂಡರೆ, ಇದು ಸೂಪರ್ ಜೈಂಟ್ಸ್ ಫ್ಯಾಮಿಲಿಯ 4ನೇ ತಂಡವಾಗಲಿದೆ. ಸದ್ಯ ಈ ಫ್ರಾಂಚೈಸಿ ಜಗತ್ತಿನಾದ್ಯಂತ ಹೊಂದಿರುವ ತಂಡಗಳ ವಿವರ ಇಲ್ಲಿದೆ..

  • ಭಾರತ (IPL): ಲಕ್ನೋ ಸೂಪರ್ ಜೈಂಟ್ಸ್​
  • ಸೌತ್ ಆಫ್ರಿಕಾ (SA20): ಡರ್ಬನ್ಸ್ ಸೂಪರ್ ಜೈಂಟ್ಸ್
  • ಇಂಗ್ಲೆಂಡ್ (The Hundred): ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್
  • ಆಸ್ಟ್ರೇಲಿಯಾ (BBL): ಮೆಲ್ಬೋರ್ನ್ ರೆನೆಗೇಡ್ಸ್ (ಖರೀದಿಗೆ ಮಾತುಕತೆ ಪ್ರಗತಿಯಲ್ಲಿದೆ)

ಹೆಸರು ಬದಲಾವಣೆಗೆ ಗ್ರೀನ್ ಸಿಗ್ನಲ್:

ಕ್ರಿಕೆಟ್ ಆಸ್ಟ್ರೇಲಿಯಾದ ನಿಯಮಾವಳಿಗಳ ಪ್ರಕಾರ, ಹೊಸ ಖಾಸಗಿ ಮಾಲೀಕರು ತಂಡವನ್ನು ಸ್ವಾಧೀನಪಡಿಸಿಕೊಂಡ ನಂತರ ತಮ್ಮ ಇಷ್ಟದಂತೆ ಮರುನಾಮಕರಣ ಮಾಡಲು ಮುಕ್ತ ಅವಕಾಶವಿರುತ್ತದೆ. ಇಂಗ್ಲೆಂಡ್‌ನ ‘ದಿ ಹಂಡ್ರೆಡ್’ ಲೀಗ್‌ನಲ್ಲಿ ಮ್ಯಾಂಚೆಸ್ಟರ್ ಒರಿಜಿನಲ್ಸ್ ತಂಡವನ್ನು ಖರೀದಿಸಿದ ನಂತರ ಅದನ್ನು ‘ಮ್ಯಾಂಚೆಸ್ಟರ್ ಸೂಪರ್ ಜೈಂಟ್ಸ್’ ಎಂದು ಬದಲಾಯಿಸಲಾಗಿತ್ತು.

ಅದೇ ಮಾದರಿಯಲ್ಲಿ ಮೆಲ್ಬೋರ್ನ್ ರೆನೆಗೇಡ್ಸ್ ತಂಡವನ್ನು ಖರೀದಿಸಿದರೆ, ಮುಂಬರುವ 2027–28ರ ಬಿಬಿಎಲ್ ಸೀಸನ್‌ನಿಂದ ಈ ತಂಡವು ‘ಮೆಲ್ಬೋರ್ನ್ ಸೂಪರ್ ಜೈಂಟ್ಸ್’ ಆಗಿ ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ.

ಇದನ್ನೂ ಓದಿ: 37 ಎಸೆತಗಳಲ್ಲಿ ಶತಕ, ಬರೋಬ್ಬರಿ 173 ರನ್: ಭರ್ಜರಿ ದಾಖಲೆ ಬರೆದ ನಮನ್​ ಧೀರ್ 

ಒಟ್ಟಾರೆಯಾಗಿ ಹೇಳುವುದಾದರೆ, ಬಿಗ್ ಬ್ಯಾಷ್ ಲೀಗ್‌ನ ಖಾಸಗೀಕರಣದ ನಿರ್ಧಾರವು ಜಾಗತಿಕ ಕ್ರಿಕೆಟ್‌ನಲ್ಲಿ ಹೊಸ ಮೈಲಿಗಲ್ಲಿಗೆ ನಾಂದಿ ಹಾಡಿದೆ. ಐಪಿಎಲ್ ಮತ್ತು ಸೌತ್ ಆಫ್ರಿಕಾ ಲೀಗ್‌ಗಳಲ್ಲಿ ಈಗಾಗಲೇ ತನ್ನ ಛಾಪು ಮೂಡಿಸಿರುವ ‘ಸೂಪರ್ ಜೈಂಟ್ಸ್’ ಫ್ರಾಂಚೈಸಿ, ಈಗ ಆಸ್ಟ್ರೇಲಿಯಾ ನೆಲದಲ್ಲೂ ತನ್ನ ಸಾಮ್ರಾಜ್ಯ ವಿಸ್ತರಿಸಲು ಹೆಜ್ಜೆಯನ್ನಿಟ್ಟಿದೆ.

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
ಕಣ್ಣು ಆಪರೇಷನ್​​ಗೆ ಕರೆದು ಕೇವಲ ಅನಸ್ತೇಷಿಯಾ ಕೊಟ್ಟು ಕಳುಹಿಸಿದ್ರು!
ಕಣ್ಣು ಆಪರೇಷನ್​​ಗೆ ಕರೆದು ಕೇವಲ ಅನಸ್ತೇಷಿಯಾ ಕೊಟ್ಟು ಕಳುಹಿಸಿದ್ರು!
ತಾಂಡವ್ ಕ್ಯಾಪ್ಟನ್ ಆದ್ರೆ ಪ್ರಶಾಂತ್​​ಗೆ ಸಂಕಷ್ಟ: ವಿಡಿಯೋ ನೋಡಿ
ತಾಂಡವ್ ಕ್ಯಾಪ್ಟನ್ ಆದ್ರೆ ಪ್ರಶಾಂತ್​​ಗೆ ಸಂಕಷ್ಟ: ವಿಡಿಯೋ ನೋಡಿ
ದಸರಾದಲ್ಲಿ ಸಚಿವರನ್ನ ತಡೆದ ಮಹತ್ವದ ಬೆಳವಣಿಗೆ: ಸಿಎಂ ಭೇಟಿಯಾದ ಐಪಿಎಸ್
ದಸರಾದಲ್ಲಿ ಸಚಿವರನ್ನ ತಡೆದ ಮಹತ್ವದ ಬೆಳವಣಿಗೆ: ಸಿಎಂ ಭೇಟಿಯಾದ ಐಪಿಎಸ್
ಮತದಾನ ಕೇಂದ್ರದ ಬಳಿಯೇ ಸಚಿವರ ಕಾಲಿಗೆ ನಮಸ್ಕರಿಸಿದ ಬಿಜೆಪಿ ಆಭ್ಯರ್ಥಿ
ಮತದಾನ ಕೇಂದ್ರದ ಬಳಿಯೇ ಸಚಿವರ ಕಾಲಿಗೆ ನಮಸ್ಕರಿಸಿದ ಬಿಜೆಪಿ ಆಭ್ಯರ್ಥಿ
ದೊಡ್ಡಬಳ್ಳಾಪುರದ ತೂಬಗೆರೆಯಲ್ಲಿ ಕಂಪಿಸಿದ ಭೂಮಿ
ದೊಡ್ಡಬಳ್ಳಾಪುರದ ತೂಬಗೆರೆಯಲ್ಲಿ ಕಂಪಿಸಿದ ಭೂಮಿ
ಬಹಳ ದಿನಗಳ ಬಳಿಕ ಸುತ್ತೂರು ಶಕ್ತಿಪೀಠಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ
ಬಹಳ ದಿನಗಳ ಬಳಿಕ ಸುತ್ತೂರು ಶಕ್ತಿಪೀಠಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ
ಮೆಕ್ಕಾದಲ್ಲಿ ಸಿಲುಕಿದ 4,000 ಕನ್ನಡಿಗರು: ನೆರವಿಗೆ ಧಾವಿಸುವಂತೆ CMಗೆ ಮನವಿ
ಮೆಕ್ಕಾದಲ್ಲಿ ಸಿಲುಕಿದ 4,000 ಕನ್ನಡಿಗರು: ನೆರವಿಗೆ ಧಾವಿಸುವಂತೆ CMಗೆ ಮನವಿ
ತಾಂಡವ್ ರಾಮ್, ಗಗನ್ ಚಿನ್ನಪ್ಪ ಸ್ನೇಹದ ನಡುವೆ ಬಂದ ಸೌಂದರ್ಯಾ ಶೆಟ್ಟಿ
ತಾಂಡವ್ ರಾಮ್, ಗಗನ್ ಚಿನ್ನಪ್ಪ ಸ್ನೇಹದ ನಡುವೆ ಬಂದ ಸೌಂದರ್ಯಾ ಶೆಟ್ಟಿ
ನಿರುದ್ಯೋಗಿ ತರ ವರ್ತಿಸಬೇಡಿ: ಪ್ರಿಯಾಂಕ್ ಖರ್ಗೆಗೆ ಜೋಶಿ ಟಾಂಗ್
ನಿರುದ್ಯೋಗಿ ತರ ವರ್ತಿಸಬೇಡಿ: ಪ್ರಿಯಾಂಕ್ ಖರ್ಗೆಗೆ ಜೋಶಿ ಟಾಂಗ್
ಶಿಕ್ಷಕರ ಕ್ಷೇತ್ರದ ಚುನಾವಣೆ ವೇಳೆ ಗಲಾಟೆ :ಮುನಿರತ್ನ ಮೇಲೆ ಹಲ್ಲೆಗೆ ಯತ್ನ!
ಶಿಕ್ಷಕರ ಕ್ಷೇತ್ರದ ಚುನಾವಣೆ ವೇಳೆ ಗಲಾಟೆ :ಮುನಿರತ್ನ ಮೇಲೆ ಹಲ್ಲೆಗೆ ಯತ್ನ!