SMAT T20: ಎರಡಂಕಿ ಮೊತ್ತಕ್ಕೆ ಆಲೌಟ್ ಮಾಡಿ, 6.5 ಓವರ್​ನಲ್ಲಿ ಪಂದ್ಯ ಮುಗಿಸಿದ ಕರ್ನಾಟಕ

| Updated By: ಝಾಹಿರ್ ಯೂಸುಫ್

Updated on: Oct 18, 2022 | 5:09 PM

Syed Mushtaq Ali Trophy 2022: ಅಲ್ಪ ಮೊತ್ತದ ಗುರಿ ಪಡೆದ ಕರ್ನಾಟಕ ತಂಡಕ್ಕೆ ಆರಂಭಿಕ ಆಟಗಾರರಾದ ದೇವದತ್ ಪಡಿಕ್ಕಲ್ (28) ಹಾಗೂ ಮಾಯಾಂಕ್ ಅಗರ್ವಾಲ್ ಬಿರುಸಿನ ಆರಂಭ ಒದಗಿಸಿದರು.

SMAT T20: ಎರಡಂಕಿ ಮೊತ್ತಕ್ಕೆ ಆಲೌಟ್ ಮಾಡಿ, 6.5 ಓವರ್​ನಲ್ಲಿ ಪಂದ್ಯ ಮುಗಿಸಿದ ಕರ್ನಾಟಕ
karnataka team
Follow us on

Syed Mushtaq Ali Trophy 2022: ಸೈಯದ್ ಮುಷ್ತಾಕ್ ಅಲಿ ಟೂರ್ನಿಯ ಗ್ರೂಪ್-ಸಿ ಪಂದ್ಯದಲ್ಲಿ ಅರುಣಾಚಲ ಪ್ರದೇಶ ವಿರುದ್ಧ ಕರ್ನಾಟಕ (Arunachal Pradesh vs Karnataka) ತಂಡವು ಭರ್ಜರಿ ಜಯ ಸಾಧಿಸಿದೆ. ಮೊಹಾಲಿಯಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಜಯಿಸಿದ ಕರ್ನಾಟಕ ತಂಡದ ನಾಯಕ ಮಯಾಂಕ್ ಅಗರ್ವಾಲ್ (Mayank Agarwal)  ಬೌಲಿಂಗ್ ಮಾಡುವ ನಿರ್ಧಾರ ತೆಗೆದುಕೊಂಡರು. ಈ ನಿರ್ಧಾರವನ್ನು ಸಮರ್ಥಿಸುವಂತೆ ಕರ್ನಾಟಕ ಬೌಲರ್​ಗಳು ಅತ್ಯುತ್ತಮ ಪ್ರದರ್ಶನವನ್ನೇ ನೀಡಿದರು.

ಮೊದಲು ಬ್ಯಾಟ್ ಮಾಡಿದ ಅರುಣಾಚಲ ಪ್ರದೇಶ ತಂಡ 14 ರನ್​ಗಳಿಸುವಷ್ಟರಲ್ಲಿ ಆರಂಭಿಕರನ್ನು ಔಟ್ ಮಾಡುವ ಮೂಲಕ ವಿಧ್ವತ್ ಕಾವೇರಪ್ಪ ಹಾಗೂ ವಿ ಕೌಶಿಕ್ ಕರ್ನಾಟಕ ತಂಡಕ್ಕೆ ಆರಂಭಿಕ ಯಶಸ್ಸು ತಂದುಕೊಟ್ಟರು. ಆ ಬಳಿಕ ಬಂದ ರೋಹನ್ ಶರ್ಮಾ 18 ರನ್​ಗಳಿಸಿದರೂ ವಿಜಯ್​ಕುಮಾರ್ ವೈಶಾಖ್ ಎಸೆತಕ್ಕೆ ವಿಕೆಟ್ ಒಪ್ಪಿಸಲೇಬೇಕಾಯಿತು.

ಮತ್ತೊಂದೆಡೆ ಕೃಷ್ಣಪ್ಪ ಗೌತಮ್ ಅರುಣಾಚಲ ತಂಡದ ನಾಯಕ ಸೂರಜ್ (11) ವಿಕೆಟ್ ಪಡೆಯುವ ಮೂಲಕ ಮತ್ತೊಂದು ಯಶಸ್ಸು ತಂದುಕೊಟ್ಟರು. ಇದರ ಬೆನ್ನಲ್ಲೇ ತೆಚಿ ನೇರಿಯನ್ನು ಜಗದೀಶ್ ಸುಚಿತ್ ಕ್ಲೀನ್ ಬೌಲ್ಡ್ ಮಾಡಿದರು. ಈ ಹಂತದಲ್ಲಿ ಮತ್ತೆ ದಾಳಿಗಿಳಿದ ವಿದ್ವತ್ ಕಾವೇರಪ್ಪ ಬ್ಯಾಕ್ ಟು ಬ್ಯಾಕ್ ಎರಡು ವಿಕೆಟ್ ಉರುಳಿಸಿದರು. ಅಂತಿಮವಾಗಿ ಅರುಣಾಚಲ ಪ್ರದೇಶ ತಂಡವು 19.2 ಓವರ್​ಗಳಲ್ಲಿ 75 ರನ್​ಗಳಿಗೆ ಆಲೌಟ್ ಆಯಿತು.

ಇದನ್ನೂ ಓದಿ
T20 World Cup 2022: ಟಿ20 ವಿಶ್ವಕಪ್​ನಲ್ಲಿ ವಿದೇಶಿ ತಂಡದ ಪರ ಆಡುತ್ತಿರುವ ಭಾರತೀಯ ಮೂಲದವರು ಯಾರೆಲ್ಲಾ ಗೊತ್ತಾ?
T20 World Cup 2022 All Squad: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳ ಆಟಗಾರರ ಸಂಪೂರ್ಣ ಪಟ್ಟಿ ಇಲ್ಲಿದೆ
T20 World Cup 2022: ಭಾರತ-ಪಾಕ್ ಅಲ್ಲ, ಈ ಬಾರಿ ಸೂರ್ಯ vs ರಿಜ್ವಾನ್..!
Team India: ಟೀಮ್ ಇಂಡಿಯಾದ ಮೊದಲ ಟಿ20 ತಂಡದಲ್ಲಿ ಯಾರೆಲ್ಲಾ ಇದ್ದರು ಗೊತ್ತಾ?

ಕರ್ನಾಟಕ ಪರ ಮಿಂಚಿನ ದಾಳಿ ಸಂಘಟಿಸಿದ ವಿಧ್ವತ್ ಕಾವೇರಪ್ಪ 4 ಓವರ್​ಗಳಲ್ಲಿ 22 ರನ್ ನೀಡಿ 3 ವಿಕೆಟ್ ಪಡೆದರೆ, ವಿ ಕೌಶಿಕ್ 3.5 ಓವರ್​ಗಳಲ್ಲಿ ಕೇವಲ 5 ರನ್​ ನೀಡಿ 3 ವಿಕೆಟ್ ಕಬಳಿಸಿ ಮಿಂಚಿದರು.

ಇನ್ನು ಅಲ್ಪ ಮೊತ್ತದ ಗುರಿ ಪಡೆದ ಕರ್ನಾಟಕ ತಂಡಕ್ಕೆ ಆರಂಭಿಕ ಆಟಗಾರರಾದ ದೇವದತ್ ಪಡಿಕ್ಕಲ್ (28) ಹಾಗೂ ಮಾಯಾಂಕ್ ಅಗರ್ವಾಲ್ ಬಿರುಸಿನ ಆರಂಭ ಒದಗಿಸಿದರು. ಅದರಲ್ಲೂ ಅಗರ್ವಾಲ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ಕೇವಲ 21 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 5 ಫೋರ್​ನೊಂದಿಗೆ ಅಜೇಯ 47 ರನ್​ ಚಚ್ಚಿದರು. ಪರಿಣಾಮ ಕರ್ನಾಟಕ ತಂಡವು ಕೇವಲ 6.5 ಓವರ್​ಗಳಲ್ಲಿ 76 ರನ್​ ಬಾರಿಸುವ ಮೂಲಕ 10 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿತು.

ಅರುಣಾಚಲ ಪ್ರದೇಶ ಪ್ಲೇಯಿಂಗ್ 11: ಸೂರಜ್ ತಯಾಮ್ (ನಾಯಕ) , ಟೆಚಿ ಡೋರಿಯಾ , ನೀಲಂ ಓಬಿ , ಕಮ್ಶಾ ಯಾಂಗ್‌ಫೊ , ರೋಹನ್ ಶರ್ಮಾ , ಟೆಚಿ ನೇರಿ , ಮೋಹಿತ್ ಪನ್ವರ್ , ಮೈನ್ಡುಂಗ್ ಸಿಂಗ್ಪೋ , ತನ್ಮಯ್ ಗುಪ್ತಾ , ಅಖಿಲೇಶ್ ಸಹಾನಿ , ನಬಮ್ ಟೆಂಪೋಲ್

ಕರ್ನಾಟಕ ಪ್ಲೇಯಿಂಗ್ 11: ಮಯಾಂಕ್ ಅಗರ್ವಾಲ್ (ನಾಯಕ) , ದೇವದತ್ತ್ ಪಡಿಕ್ಕಲ್ , ಮನೀಶ್ ಪಾಂಡೆ , ಅಭಿನವ್ ಮನೋಹರ್ , ಮನೋಜ್ ಭಾಂಡಗೆ , ಕೃಷ್ಣಪ್ಪ ಗೌತಮ್ , ಲುವ್ನಿತ್ ಸಿಸೋಡಿಯಾ , ಜಗದೀಶ ಸುಚಿತ್ , ವಿಜಯ್ ಕುಮಾರ್ ವೈಶಾಕ್ , ವಿಧ್ವತ್ ಕಾವೇರಪ್ಪ , ವಾಸುಕಿ ಕೌಶಿಕ್