T20 World Cup 2022: ಸ್ಲೋ ಓವರ್ ರೇಟ್ ಶಿಕ್ಷೆ ತಪ್ಪಿಸಲು ಆಸ್ಟ್ರೇಲಿಯಾ ತಂಡದ ಮಾಸ್ಟರ್ ಪ್ಲ್ಯಾನ್

| Updated By: ಝಾಹಿರ್ ಯೂಸುಫ್

Updated on: Oct 19, 2022 | 9:54 PM

T20 World Cup 2022: ಮುಕ್ತಾಯಗೊಂಡ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ (Australia vs England)  ನಡುವಣ ಪಂದ್ಯದಲ್ಲಿ ಆಸೀಸ್ ತಂಡ ಸ್ಲೋ ಓವರ್ ರೇಟ್ ಶಿಕ್ಷೆ ಅನುಭವಿಸಿರಲಿಲ್ಲ.

T20 World Cup 2022: ಸ್ಲೋ ಓವರ್ ರೇಟ್ ಶಿಕ್ಷೆ ತಪ್ಪಿಸಲು ಆಸ್ಟ್ರೇಲಿಯಾ ತಂಡದ ಮಾಸ್ಟರ್ ಪ್ಲ್ಯಾನ್
Australia Team
Follow us on

T20 World Cup 2022: ಐಸಿಸಿ ನೂತನವಾಗಿ ಪರಿಚಯಿಸಿರುವ ನಿಯಮಗಳಲ್ಲಿ ಸ್ಲೋ ಓವರ್ ರೇಟ್ ಪೆನಾಲ್ಟಿ ಕೂಡ ಒಂದು. ಈ ನಿಯಮದ ಪ್ರಕಾರ ಒಂದು ತಂಡವು 20 ಓವರ್​ಗಳನ್ನು ನಿಗದಿತ ಸಮಯದೊಳಗೆ ಪೂರ್ಣಗೊಳಿಸಬೇಕು. ಒಂದು ವೇಳೆ ಅದಕ್ಕಿಂತ ಹೆಚ್ಚಿನ ಸಮಯ ತಗೆದುಕೊಂಡರೆ ಫೀಲ್ಡಿಂಗ್​ನಲ್ಲಿ ಬದಲಾವಣೆ ಮಾಡಿಕೊಳ್ಳಬೇಕಾಗುತ್ತದೆ. ಅಂದರೆ ನಿಗದಿತ ಸಮಯದೊಳಗೆ 20 ಓವರ್​ ಪೂರ್ಣಗೊಳಿಸದಿದ್ದರೆ, ಬಾಕಿ ಇರುವ ಓವರ್​ಗಳ ವೇಳೆ ಓರ್ವ ಫೀಲ್ಡರ್​ನನ್ನು ಬೌಂಡರಿ ಲೈನ್​ನಿಂದ ಕಡಿತಗೊಳಿಸಬೇಕಾಗುತ್ತದೆ. ಅಲ್ಲದೆ ಆತನನ್ನು 30 ಯಾರ್ಡ್ ಸರ್ಕಲ್​ನಲ್ಲಿ ಫೀಲ್ಡಿಂಗ್ ನಿಲ್ಲಿಸಬೇಕು. ಅಷ್ಟೇ ಅಲ್ಲದೆ ಸ್ಲೋ ಓವರ್ ರೇಟ್​ಗಾಗಿ ದಂಡವನ್ನೂ ಕೂಡ ವಿಧಿಸಲಾಗುತ್ತದೆ. ಆದರೆ ಇದೀಗ ಸ್ಲೋ ಓವರ್ ರೇಟ್​ ಅನ್ನು ತಪ್ಪಿಸಲು  ಆಸ್ಟ್ರೇಲಿಯಾ (Australia Team) ತಂಡ ಮಾಸ್ಟರ್ ಪ್ಲ್ಯಾನ್​ವೊಂದನ್ನು ರೂಪಿಸಿದೆ.

ಇತ್ತೀಚೆಗೆ ಮುಕ್ತಾಯಗೊಂಡ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ (Australia vs England)  ನಡುವಣ ಪಂದ್ಯದಲ್ಲಿ ಆಸೀಸ್ ತಂಡ ಸ್ಲೋ ಓವರ್ ರೇಟ್ ಶಿಕ್ಷೆ ಅನುಭವಿಸಿರಲಿಲ್ಲ. ಇದಕ್ಕೆ ಮುಖ್ಯ ಕಾರಣ ಹೆಚ್ಚುವರಿ ಆಟಗಾರರನ್ನು ಬೌಂಡರಿ ಲೈನ್​ ಹೊರಗೆ ನಿಲ್ಲಿಸಿರುವುದು. ಅಂದರೆ ಪವರ್​ಪ್ಲೇನಂತಹ ಸಮಯದಲ್ಲಿ ಚೆಂಡು ಬೌಂಡರಿಗೆ ಹೋದರೆ ಅದನ್ನು ತೆಗೆದುಕೊಳ್ಳಲು ಆಟಗಾರರು ಬೌಂಡರಿ ಬಳಿ ಹೋಗಬೇಕಾಗುತ್ತದೆ. ಆದರೆ ಬೌಂಡರಿ ಬಳಿ ಹೆಚ್ಚುವರಿ ಆಟಗಾರರನ್ನು ನಿಲ್ಲಿಸುವುದರಿಂದ ಅವರು ತಕ್ಷಣವೇ ಚೆಂಡನ್ನು ಬೌಲರ್​ಗೆ ಅಥವಾ ಫೀಲ್ಡರ್​ಗೆ ಎಸೆಯಬಹುದು.

ಇದನ್ನೂ ಓದಿ
T20 World Cup 2022: ಟಿ20 ವಿಶ್ವಕಪ್​ನಲ್ಲಿ ವಿದೇಶಿ ತಂಡದ ಪರ ಆಡುತ್ತಿರುವ ಭಾರತೀಯ ಮೂಲದವರು ಯಾರೆಲ್ಲಾ ಗೊತ್ತಾ?
T20 World Cup 2022 All Squad: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳ ಆಟಗಾರರ ಸಂಪೂರ್ಣ ಪಟ್ಟಿ ಇಲ್ಲಿದೆ
T20 World Cup 2022: ಭಾರತ-ಪಾಕ್ ಅಲ್ಲ, ಈ ಬಾರಿ ಸೂರ್ಯ vs ರಿಜ್ವಾನ್..!
Team India: ಟೀಮ್ ಇಂಡಿಯಾದ ಮೊದಲ ಟಿ20 ತಂಡದಲ್ಲಿ ಯಾರೆಲ್ಲಾ ಇದ್ದರು ಗೊತ್ತಾ?

ಇದೇ ತಂತ್ರವನ್ನೇ ಆಸ್ಟ್ರೇಲಿಯಾ ತಂಡವು ಇಂಗ್ಲೆಂಡ್ ವಿರುದ್ಧ ಸರಣಿಯಲ್ಲಿ ಪ್ರಯೋಗಿಸಿತ್ತು. ಈ ಪ್ರಯೋಗವು ಬಹುತೇಕ ಯಶಸ್ವಿಯಾಗಿದೆ ಎಂದೇ ಹೇಳಬಹುದು. ಅದರಲ್ಲೂ ಪವರ್​ಪ್ಲೇನಲ್ಲಿ ಈ ತಂತ್ರವು ವರ್ಕ್​ ಔಟ್ ಆಗಲಿದೆ. ಏಕೆಂದರೆ ಮೊದಲ 6 ಓವರ್​ಗಳ ವೇಳೆ ಬೌಂಡರಿ ಲೈನ್​ನಲ್ಲಿ ಕೇವಲ ಇಬ್ಬರು ಫೀಲ್ಡರ್​ಗಳು ಮಾತ್ರ ಇರಲಿದ್ದಾರೆ. ಇದೇ ವೇಳೆ ಚೆಂಡು ಬೌಂಡರಿ ಗೆರೆ ದಾಟಿದರೆ ಕೆಲವೊಮ್ಮೆ ಫೀಲ್ಡರ್ ಅದರ ಹಿಂದೆ ಓಡಿ ಬರಬೇಕಾಗುತ್ತದೆ. ಇಂತಹ ಸಮಯ ವ್ಯರ್ಥವನ್ನು ತಡೆಯಲು ಹೆಚ್ಚುವರಿ ಆಟಗಾರರನ್ನು ಬೌಂಡರಿ ಬದಿಯಲ್ಲಿ ಕೂರಿಸಿದರೆ ಸಾಕು. ಈ ಮೂಲಕ ಕನಿಷ್ಠ 10 ಸೆಕೆಂಡ್​ಗಳನ್ನು ಉಳಿಸಿಕೊಳ್ಳಬಹುದು.

ಈ ತಂತ್ರವನ್ನೇ ಆಸ್ಟ್ರೇಲಿಯಾ ತಂಡವು ಪ್ರಯೋಗ ಮಾಡಿದ್ದು, ಅದರಲ್ಲಿ ಬಹುತೇಕ ಯಶಸ್ಸು ಕಂಡಿದೆ. ಹೀಗಾಗಿ ಟಿ20 ವಿಶ್ವಕಪ್​ನಲ್ಲಿ ಆಸ್ಟ್ರೇಲಿಯಾ ಕಣಕ್ಕಿಳಿದಾಗ ಆಸೀಸ್ ಆಟಗಾರರು ಮತ್ತು ಸಿಬ್ಬಂದಿಗಳು ಬೌಂಡರಿ ಲೈನ್ ಹೊರಗೆ ಕಾಣಿಸಿಕೊಂಡರೆ ಅಚ್ಚರಿಪಡಬೇಕಿಲ್ಲ.

ಇನ್ನು ಇದೇ ತಂತ್ರವನ್ನು ಇತರೆ ತಂಡಗಳು ಕೂಡ ಅನುಸರಿಸುವ ಸಾಧ್ಯತೆಯಿದೆ. ಏಕೆಂದರೆ ಟಿ20 ವಿಶ್ವಕಪ್​ನಲ್ಲಿ ಪ್ರತಿ ಪಂದ್ಯಗಳು ಮಹತ್ವದ್ದಾಗಿದೆ. ಅಷ್ಟೇ ಅಲ್ಲದೆ ಸ್ಲೋ ಓವರ್​ ಶಿಕ್ಷೆಯಿಂದ ಫೀಲ್ಡರ್ ಬದಲಾವಣೆ ಮಾಡಿದರೆ ಅಂತಿಮ ಹಂತದಲ್ಲಿ ಫಲಿತಾಂಶ ಕೂಡ ಬದಲಾಗಬಹುದು. ಹೀಗಾಗಿ ಸ್ಲೋ ಓವರ್ ರೇಟ್ ಶಿಕ್ಷೆಯನ್ನು ತಪ್ಪಿಸುವ ಸಲುವಾಗಿ ಎಲ್ಲಾ ತಂಡಗಳು ಬೌಂಡರಿ ಲೈನ್ ಹೊರಗೆ ಹೆಚ್ಚುವರಿ ಆಟಗಾರರನ್ನು ನಿಲ್ಲಿಸುವ ತಂತ್ರಕ್ಕೆ ಮುಂದಾಗಬಹುದು.

ಏನಿದು ಸ್ಲೋ ಓವರ್ ರೇಟ್ ನಿಯಮ:

ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಪ್ರತಿ ಫೀಲ್ಡಿಂಗ್ ತಂಡವು 85 ನೇ ನಿಮಿಷದಲ್ಲಿ 20ನೇ ಓವರ್ ಅನ್ನು ಪ್ರಾರಂಭಿಸಬೇಕು. ಪ್ರತಿ ತಂಡವು ತಮ್ಮ 20 ಓವರ್‌ಗಳನ್ನು ಪೂರ್ಣಗೊಳಿಸಲು 85 ನಿಮಿಷಗಳ ಅನುಮತಿಯನ್ನು ನೀಡಲಾಗುತ್ತದೆ. ಇದರೊಳಗೆ ಒಂದು ತಂಡವು ನಿಗದಿತ ಸಮಯದಲ್ಲಿ ಓವರ್ ಮುಗಿಸಬೇಕು.

ಒಂದು ವೇಳೆ ತಡವಾದರೆ ಉಳಿದ ಓವರ್​ಗಳ ವೇಳೆ ಫೀಲ್ಡಿಂಗ್ ತಂಡವು ಬೌಂಡರಿ ಲೈನ್​ನಿಂದ ಒಬ್ಬ ​ಆಟಗಾರನನ್ನು 30 ಯಾರ್ಡ್​ ಸರ್ಕಲ್​ನಲ್ಲಿ ನಿಲ್ಲಿಸಬೇಕಾಗುತ್ತದೆ. ನಿಗದಿತ ಸಮಯದೊಳಗೆ ಓವರ್​ ಮುಗಿಯದಿದ್ದರೆ, ಕೊನೆಯ ಓವರ್​ಗಳ ವೇಳೆ ಒಬ್ಬ ಬೌಂಡರಿ ಲೈನ್​ನಿಂದ ಒಬ್ಬ ಫೀಲ್ಡರ್​ನ ಕಡಿತಗೊಳಿಸಿ ಮುಂದೆ ನಿಲ್ಲಿಸಬೇಕಾಗುತ್ತದೆ.