IND vs PAK: ವಿಶ್ವಕಪ್​ನಲ್ಲಿ ಮತ್ತೊಮ್ಮೆ ಭಾರತ- ಪಾಕ್ ಮುಖಾಮುಖಿ; ಫೈನಲ್​ನಲ್ಲಿ ಬದ್ಧವೈರಿಗಳ ಕಾಳಗ?

IND vs PAK: ಅಂಕ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳಿಸಿರುವ ಭಾರತ ಮತ್ತು ಪಾಕಿಸ್ತಾನ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ತಂಡಗಳನ್ನು ಎದುರಿಸಲಿವೆ.

IND vs PAK: ವಿಶ್ವಕಪ್​ನಲ್ಲಿ ಮತ್ತೊಮ್ಮೆ ಭಾರತ- ಪಾಕ್ ಮುಖಾಮುಖಿ; ಫೈನಲ್​ನಲ್ಲಿ ಬದ್ಧವೈರಿಗಳ ಕಾಳಗ?
India-Pakistan
Edited By:

Updated on: Nov 06, 2022 | 2:12 PM

ಈ ಬಾರಿಯ ವಿಶ್ವಕಪ್ (T20 World Cup 2022) ಹಲವು ಅಚ್ಚರಿಯ ಕ್ಷಣಗಳಿಗೆ ಸಾಕ್ಷಿಯಾಗಿದೆ. ಸೂಪರ್ 12 ಸುತ್ತಿನ ಕೊನೆಯವರೆಗೂ ಸೆಮಿಫೈನಲ್​ಗೆ ಯಾವ ತಂಡ ಎಂಟ್ರಿಕೊಡುತ್ತಿದೆ ಎಂದು ಎಲ್ಲರೂ ಅಂದುಕೊಂಡಿದ್ದರೋ ಆ ತಂಡ ಟಿ20 ವಿಶ್ವಕಪ್​ನಿಂದ ಹೊರಬಿದ್ದಿದೆ. ಹಾಗೆಯೇ ಯಾವ ತಂಡ ಟಿ20 ವಿಶ್ವಕಪ್​ನಿಂದ ಭಾಗಶಃ ಹೊರಬಿದ್ದಿದೆ ಎಂದು ಪರಿಣಿತರೂ ಹೇಳಿದ್ದರೋ, ಆ ತಂಡ ಭಾರತದ ಜೊತೆ ಸೇಮಿಸ್​ಗೆ ಎಂಟ್ರಿಕೊಟ್ಟಿದೆ. ಕೊನೆಯ ಹಂತದವರೆಗೂ ಸೇಮಿಸ್​ ಸ್ಪರ್ಧಿಯಾಗಿದ್ದ ಸೌತ್ ಆಫ್ರಿಕಾ ನೆದರ್ಲೆಂಡ್ಸ್ ಎದುರು ಸೋತು ಟೂರ್ನಿಯಿಂದ ಹೊರಬಿದ್ದರೆ, ಮೊದಲೆರಡು ಪಂದ್ಯಗಳಲ್ಲಿ ಸೋತು ಟೂರ್ನಿಯಿಂದ ಹೊರನಡೆಯುವ ಆತಂಕದಲ್ಲಿದ್ದ ಪಾಕಿಸ್ತಾನ ಈಗ ಸೆಮಿಫೈನಲ್​ಗೆ ಎಂಟ್ರಿಕೊಟ್ಟಿದೆ. ಈ ಮೂಲಕ ಭಾರತ ಹಾಗೂ ಪಾಕಿಸ್ತಾನ (India and Pakistan) ತಂಡಗಳು ಈ ಬಾರಿಯ ವಿಶ್ವಕಪ್​ನಲ್ಲಿ ಮತ್ತೊಮ್ಮೆ ಎದುರುಬದುರಾಗುವ ಎಲ್ಲಾ ಸಾಧ್ಯತೆಗಳು ಗೋಚರಿಸುತ್ತಿವೆ.

ಟಿ20 ವಿಶ್ವಕಪ್ 2022 ರ ಅಂತಿಮ ಪಂದ್ಯವು ಮೆಲ್ಬೋರ್ನ್‌ನಲ್ಲಿ ನವೆಂಬರ್ 13 ರಂದು ನಡೆಯಲಿದೆ. ಟೂರ್ನಿಯಲ್ಲಿ ಭಾರತ-ಪಾಕಿಸ್ತಾನ ಪಯಣ ಆರಂಭಿಸಿದ್ದು ಇದೇ ಮೈದಾನದಿಂದ. ಈಗ ಈ ಎರಡು ತಂಡಗಳು ಫೈನಲ್‌ನಲ್ಲಿ ಹೇಗೆ ಮುಖಾಮುಖಿಯಾಗಬಹುದು ಎಂಬುದರ ಪೂರ್ಣ ವಿವರ ಹೀಗಿದೆ.

ಪಾಕಿಸ್ತಾನ ಸೆಮಿಫೈನಲ್‌ನಲ್ಲಿ

ವಾಸ್ತವವಾಗಿ, ಬಾಂಗ್ಲಾದೇಶದ ವಿರುದ್ಧದ ಗೆಲುವಿನೊಂದಿಗೆ, ಪಾಕಿಸ್ತಾನ ತಂಡವು ಸೆಮಿಫೈನಲ್‌ಗೆ ಪ್ರವೇಶಿಸಿದೆ. ಭಾರತದೊಂದಿಗೆ, ಪಾಕಿಸ್ತಾನವು ಗ್ರೂಪ್ 2 ರಿಂದ ಸೆಮಿಫೈನಲ್‌ಗೆ ಹೋದ ಎರಡನೇ ತಂಡವಾಗಿದೆ. ಇದೀಗ ಗ್ರೂಪ್ 2ರ ಅಂಕ ಪಟ್ಟಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವೆ ಯಾವ ತಂಡ ಅಗ್ರಸ್ಥಾಕ್ಕೇರಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಭಾರತ ಜಿಂಬಾಬ್ವೆಯನ್ನು ಸೋಲಿಸಿ ಅಗ್ರಸ್ಥಾನಕ್ಕೇರಬೇಕಿದೆ

ಜಿಂಬಾಬ್ವೆ ವಿರುದ್ಧದ ಕೊನೆಯ ಪಂದ್ಯದಲ್ಲಿ ಭಾರತ ಗೆದ್ದರೆ, ಗ್ರೂಪ್ 2 ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲಿದೆ. ಆದರೆ ಸೋತರೆ, ಭಾರತ ಮತ್ತು ಪಾಕಿಸ್ತಾನ ಎರಡೂ ತಲಾ 6 ಪಾಯಿಂಟ್‌ಗಳನ್ನು ಹೊಂದುತ್ತವೆ ಮತ್ತು ಆ ಸಂದರ್ಭದಲ್ಲಿ, ಉತ್ತಮ ರನ್ ರೇಟ್ ಆಧಾರದ ಮೇಲೆ, ಪಾಕಿಸ್ತಾನ ತಂಡವು ಪಾಯಿಂಟ್‌ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವುದರೊಂದಿಗೆ ಸೆಮಿಫೈನಲ್‌ಗೆ ಹೋಗುತ್ತದೆ.

ಸೆಮಿಫೈನಲ್​ನಲ್ಲಿ ಭಾರತ, ಪಾಕ್, ನ್ಯೂಜಿಲೆಂಡ್,ಇಂಗ್ಲೆಂಡ್

ಅಂಕ ಪಟ್ಟಿಯಲ್ಲಿ ಮೊದಲೆರಡು ಸ್ಥಾನಗಳಿಸಿರುವ ಭಾರತ ಮತ್ತು ಪಾಕಿಸ್ತಾನ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ತಂಡಗಳನ್ನು ಎದುರಿಸಲಿವೆ. ಮೊದಲ ಸೆಮಿಫೈನಲ್ ನವೆಂಬರ್ 9 ರಂದು ಗ್ರೂಪ್ 1 ರ ಅಗ್ರ ನ್ಯೂಜಿಲೆಂಡ್ ಮತ್ತು ಗ್ರೂಪ್ 2 ರ ಎರಡನೇ ತಂಡಗಳ ನಡುವೆ ನಡೆಯಲಿದೆ. ಆದರೆ ಎರಡನೇ ಸೆಮಿಫೈನಲ್ ನವೆಂಬರ್ 10 ರಂದು ಗ್ರೂಪ್ 1 ರ ಎರಡನೇ ತಂಡ ಮತ್ತು ಇಂಗ್ಲೆಂಡ್ ನಡುವೆ ನಡೆಯಲಿದೆ. ಆದರೆ ಗುಂಪು 2 ರ ಅಗ್ರ ತಂಡ ಯಾವುದು ಎಂಬುದು ಇನ್ನೂ ನಿರ್ಧಾರವಾಗಿಲ್ಲ.

ಈಗ ಸೆಮಿಫೈನಲ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ಎರಡೂ ತಂಡಗಳು ಗೆದ್ದರೆ, ಅಂದರೆ, ಒಂದು ತಂಡ ನ್ಯೂಜಿಲೆಂಡ್ ಮತ್ತು ಇನ್ನೊಂದು ತಂಡ ಇಂಗ್ಲೆಂಡ್ ತಂಡವನ್ನು ಸೋಲಿಸಿದರೆ, ನವೆಂಬರ್ 13 ರಂದು ಫೈನಲ್‌ನಲ್ಲಿ ಮುಖಾಮುಖಿಯಾಗುವ ಸಾಧ್ಯತೆಗಳಿವೆ. ಒಂದು ವೇಳೆ ಭಾರತ- ಪಾಕ್ ಫೈನಲ್​ನಲ್ಲಿ ಮುಖಾಮುಖಿಯಾದರೆ, ಈ ಎರಡು ತಂಡಗಳು ಯಾವ ಮೈದಾನದಲ್ಲಿ ತಮ್ಮ ವಿಶ್ವಕಪ್ ಪ್ರಯಾಣ ಆರಂಭಿಸಿದವೋ ಅದೇ ಮೈದಾನದಲ್ಲಿ ತಮ್ಮ ವಿಶ್ವಕಪ್ ಪ್ರಯಾಣವನ್ನು ಕೊನೆಗೊಳಿಸಲಿವೆ.

Published On - 2:10 pm, Sun, 6 November 22