IND vs ENG: ಅಡಿಲೇಡ್‌ನಲ್ಲಿ ಟಾಸ್ ಸೋತವನೇ ಬಾಸ್; 11 ಪಂದ್ಯಗಳಲ್ಲಿ ಟಾಸ್ ಗೆದ್ದವರು ಪಂದ್ಯ ಗೆದ್ದಿಲ್ಲ..!

| Updated By: ಪೃಥ್ವಿಶಂಕರ

Updated on: Nov 10, 2022 | 7:10 AM

T20 World Cup 2022: ಅಡಿಲೇಡ್‌ನಲ್ಲಿ 11 ಅಂತಾರಾಷ್ಟ್ರೀಯ ಪುರುಷರ ಟಿ20 ಪಂದ್ಯಗಳು ನಡೆದಿದ್ದು, ಟಾಸ್ ಸೋತ ತಂಡ ಎಲ್ಲ 11 ಪಂದ್ಯಗಳನ್ನು ಗೆದ್ದಿದೆ.

IND vs ENG: ಅಡಿಲೇಡ್‌ನಲ್ಲಿ ಟಾಸ್ ಸೋತವನೇ ಬಾಸ್; 11 ಪಂದ್ಯಗಳಲ್ಲಿ ಟಾಸ್ ಗೆದ್ದವರು ಪಂದ್ಯ ಗೆದ್ದಿಲ್ಲ..!
India Vs England
Follow us on

T20 ವಿಶ್ವಕಪ್ 2022 (T20 World Cup 2022) ತನ್ನ ಕೊನೆಯ ಸುತ್ತನ್ನು ತಲುಪಿದೆ. ವಿಶ್ವಕಪ್‌ನ ಎರಡನೇ ಸೆಮಿಫೈನಲ್ ಪಂದ್ಯ ನವೆಂಬರ್ 10 ರಂದು ಅಡಿಲೇಡ್‌ನಲ್ಲಿ ಭಾರತ ಮತ್ತು ಇಂಗ್ಲೆಂಡ್ (India and England) ನಡುವೆ ನಡೆಯಲಿದ್ದು, ಇದುವರೆಗೆ ಈ ಟೂರ್ನಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡದ ಪ್ರಯಾಣ ಅದ್ಭುತವಾಗಿದೆ. ಭಾರತ ತನ್ನ ಸ್ಟಾರ್ ಆಟಗಾರರಾದ ಜಸ್ಪ್ರೀತ್ ಬುಮ್ರಾ ಮತ್ತು ರವೀಂದ್ರ ಜಡೇಜಾ (Jasprit Bumrah and Ravindra Jadeja) ಇಲ್ಲದೆಯೇ ಆಡಿರುವ 5 ಪಂದ್ಯಗಳಲ್ಲಿ 4 ರಲ್ಲಿ ಜಯಗಳಿಸಿ ಗ್ರೂಪ್ 2 ರಲ್ಲಿ ಅಗ್ರಸ್ಥಾನದಲ್ಲಿದೆ. ಇದೀಗ ಜೋಸ್ ಬಟ್ಲರ್ (Jos Buttler) ನೇತೃತ್ವದ ಬಲಿಷ್ಠ ಇಂಗ್ಲೆಂಡ್ ತಂಡವನ್ನು ಸೆಮಿಫೈನಲ್​ನಲ್ಲಿ ಎದುರಿಸಲಿದ್ದಾರೆ. ಈ ಪಂದ್ಯದಲ್ಲಿ ಟೀಂ ಇಂಡಿಯಾದ ಪ್ರತಿಯೊಬ್ಬ ಆಟಗಾರನ ಪಾತ್ರವೂ ಪ್ರಮುಖವಾಗಲಿದ್ದು, ಟಾಸ್ ಕೂಡ ಪ್ರಮುಖ ಪಾತ್ರ ವಹಿಸಲಿದೆ.

ವಾಸ್ತವವಾಗಿ, ಟಾಸ್ ಸೋತರೆ ಮಾತ್ರ ಭಾರತಕ್ಕೆ ಫೈನಲ್‌ ಬಾಗಿಲು ತೆರೆಯಲಿದೆ. ಇದು ಇಲ್ಲಿಯವರೆಗೆ ನಡೆದ 11 ಟಾಸ್‌ಗಳ ದಾಖಲೆಯನ್ನು ಹೇಳುತ್ತಿದೆ. ಅಡಿಲೇಡ್​ನಲ್ಲಿ ಇದುವರೆಗೆ ನಡೆದ ಪಂದ್ಯದ ದಾಖಲೆ ನೋಡಿದರೆ ಟಾಸ್ ಗೆದ್ದು ಪಂದ್ಯ ಗೆಲ್ಲುವುದು ಕಷ್ಟ.

ಟಾಸ್ ಸೋತ ತಂಡಕ್ಕೆ ಎಲ್ಲಾ ಗೆಲುವು

ಅಡಿಲೇಡ್‌ನಲ್ಲಿ 11 ಅಂತಾರಾಷ್ಟ್ರೀಯ ಪುರುಷರ ಟಿ20 ಪಂದ್ಯಗಳು ನಡೆದಿದ್ದು, ಟಾಸ್ ಸೋತ ತಂಡ ಎಲ್ಲ 11 ಪಂದ್ಯಗಳನ್ನು ಗೆದ್ದಿದೆ. ಟಾಸ್ ಗೆದ್ದ ತಂಡಕ್ಕೆ ಇಲ್ಲಿ ಒಂದೂ ಪಂದ್ಯ ಗೆಲ್ಲಲು ಸಾಧ್ಯವಾಗಲಿಲ್ಲ. ಈ ದಾಖಲೆಯನ್ನು ನೋಡಿದರೆ ಟಾಸ್ ಸೋಲುವುದು ಭಾರತದ ಗೆಲುವಿನಲ್ಲಿ ಪ್ರಮುಖವಾಗುತ್ತದೆ. ಅಲ್ಲದೆ ಭಾರತ ಟಾಸ್ ಗೆದ್ದರೂ ಈ ದಾಖಲೆ ಬದಲಿಸುವ ಜವಾಬ್ದಾರಿ ತಂಡದ ಮೇಲಿದೆ.

ರೋಹಿತ್​ ಫಿಟ್

ಸೆಮಿಫೈನಲ್‌ಗೂ ಮುನ್ನ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಗಾಯದ ಸಮಸ್ಯೆಯೂ ಎಲ್ಲರನ್ನೂ ಕಾಡಿತ್ತು. ಆದರೆ ಈಗ ಅವರು ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಸೆಮಿಫೈನಲ್‌ಗೆ ಸಿದ್ಧರಾಗಿದ್ದಾರೆ. ವಾಸ್ತವವಾಗಿ, ಅವರು ನೆಟ್ ಸೆಷನ್‌ನಲ್ಲಿ ಬ್ಯಾಟಿಂಗ್ ಅಭ್ಯಾಸ ಮಾಡುವಾಗ ಗಾಯಗೊಂಡಿದ್ದರು. ಇದರಿಂದಾಗಿ ಅವರು ಸುಮಾರು 40 ನಿಮಿಷಗಳ ಕಾಲ ಮೈದಾನದಿಂದ ಹೊರಗಿದ್ದರು. ಆದರೆ ವಿಶ್ರಾಂತಿ ಬಳಿಕ ಮೈದಾನಕ್ಕೆ ಮರಳಿದ್ದ ರೋಹಿತ್ ಭರ್ಜರಿ ಅಭ್ಯಾಸ ನಡೆಸಿದ್ದರು.

ಇತಿಹಾಸ ಸೃಷ್ಟಿಸಲು 2 ಹೆಜ್ಜೆ ದೂರ

ಅಂದಹಾಗೆ, ಟೀಂ ಇಂಡಿಯಾ ಇತಿಹಾಸವನ್ನು ಸೃಷ್ಟಿಸಲು ಕೇವಲ 2 ಹೆಜ್ಜೆ ದೂರದಲ್ಲಿದೆ. 15 ವರ್ಷಗಳ ನಂತರ ಮತ್ತೊಮ್ಮೆ ಪ್ರಶಸ್ತಿ ಗೆಲ್ಲುವತ್ತ ಎಲ್ಲರ ಕಣ್ಣು ನೆಟ್ಟಿದೆ. ಆದರೆ ಅದಕ್ಕೂ ಮುನ್ನ ಭಾರತ, ಇಂಗ್ಲೆಂಡ್ ತಂಡವನ್ನು ಮಣಿಸಬೇಕಿದೆ. ಟೂರ್ನಿಯ ಪ್ರಶಸ್ತಿ ಪಂದ್ಯವು ನವೆಂಬರ್ 13 ರಂದು ಮೆಲ್ಬೋರ್ನ್‌ನಲ್ಲಿ ನಡೆಯಲಿದೆ.