ಆಸ್ಟ್ರೇಲಿಯಾವನ್ನು ಮಣಿಸಿ ಅಫ್ಘಾನ್ ಆಟಗಾರರು ಸಂಭ್ರಮಿಸಿದ್ದು ಹೇಗೆ ಗೊತ್ತಾ? ವಿಡಿಯೋ ನೋಡಿ

|

Updated on: Jun 23, 2024 | 7:02 PM

T20 World Cup 2024: ಐತಿಹಾಸಿಕ ವಿಜಯದ ನಂತರ ಮೈದಾನ ತೊರೆದಿದ್ದ ಅಫ್ಘಾನಿಸ್ತಾನದ ಆಟಗಾರರ ಈ ಸಂಭ್ರಮಾಚರಣೆ ತಂಡದ ಬಸ್​ ಒಳಗೂ ಕಂಡು ಬಂತು. ಬಸ್ ಒಳಗೆ ಮುಂದುವರೆದ ಈ ಸಂಭ್ರಮಾಚರಣೆ ಹೋಟೆಲ್​ವರೆಗೂ ಮುಂದುವರೆಯಿತು. ಈ ವೇಳೆ ತಂಡದ ಗೆಲುವಿನಲ್ಲಿ ಪ್ರಮುಖ ಕೊಡುಗೆ ನೀಡಿದ ಬೌಲಿಂಗ್ ಕೋಚ್ ವೆಸ್ಟ್ ಇಂಡೀಸ್ ಮಾಜಿ ಆಟಗಾರ ಡ್ವೇನ್ ಬ್ರಾವೋ ಕೂಡ ಆಟಗಾರರೊಂದಿಗೆ ಕುಣಿದು ಕುಪ್ಪಳಿಸಿದರು.

ಆಸ್ಟ್ರೇಲಿಯಾವನ್ನು ಮಣಿಸಿ ಅಫ್ಘಾನ್ ಆಟಗಾರರು ಸಂಭ್ರಮಿಸಿದ್ದು ಹೇಗೆ ಗೊತ್ತಾ? ವಿಡಿಯೋ ನೋಡಿ
ಅಫ್ಘಾನಿಸ್ತಾನ ತಂಡ
Follow us on

ಈ ಬಾರಿಯ ಟಿ20 ವಿಶ್ವಕಪ್​ನ (T20 World Cup 2024) ಸೂಪರ್ 8 ಸುತ್ತಿನಲ್ಲಿ ಅಚ್ಚರಿಯ ಫಲಿತಾಂಶ ಹೊರಬಿದ್ದಿದೆ. ಅಫ್ಘಾನಿಸ್ತಾನ ತಂಡ, ಬಲಿಷ್ಠ ಆಸ್ಟ್ರೇಲಿಯಾವನ್ನು (Afghanistan vs Australia) ಮಣಿಸುವಲ್ಲಿ ಯಶಸ್ವಿಯಾಗಿದೆ. ಅಫ್ಘಾನಿಸ್ತಾನದ ಈ ಗೆಲುವಿಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಪಂದ್ಯದಲ್ಲಿ ಇಡೀ ಅಫ್ಘಾನಿಸ್ತಾನ ತಂಡ ಅದ್ಭುತ ಪ್ರದರ್ಶನ ನೀಡಿತು. ಹೀಗಾಗಿ ಪಂದ್ಯ ಗೆದ್ದ ಬಳಿಕ ಅಫ್ಘಾನಿಸ್ತಾನ ತಂಡದ ಆಟಗಾರರ ಸಂಭ್ರಮ ಮುಗಿಲು ಮುಟ್ಟಿತ್ತು. ಐತಿಹಾಸಿಕ ವಿಜಯದ ನಂತರ ಮೈದಾನ ತೊರೆದಿದ್ದ ಅಫ್ಘಾನಿಸ್ತಾನದ ಆಟಗಾರರ ಈ ಸಂಭ್ರಮಾಚರಣೆ ತಂಡದ ಬಸ್​ ಒಳಗೂ ಕಂಡು ಬಂತು. ಬಸ್ ಒಳಗೆ ಮುಂದುವರೆದ ಈ ಸಂಭ್ರಮಾಚರಣೆ ಹೋಟೆಲ್​ವರೆಗೂ ಮುಂದುವರೆಯಿತು. ಈ ವೇಳೆ ತಂಡದ ಗೆಲುವಿನಲ್ಲಿ ಪ್ರಮುಖ ಕೊಡುಗೆ ನೀಡಿದ ಬೌಲಿಂಗ್ ಕೋಚ್ ವೆಸ್ಟ್ ಇಂಡೀಸ್ ಮಾಜಿ ಆಟಗಾರ ಡ್ವೇನ್ ಬ್ರಾವೋ (Dwayne Bravo) ಕೂಡ ಆಟಗಾರರೊಂದಿಗೆ ಕುಣಿದು ಕುಪ್ಪಳಿಸಿದರು.

ವಾಸ್ತವವಾಗಿ ಇತ್ತೀಚೆಗಷ್ಟೇ ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ ಡ್ವೇನ್ ಬ್ರಾವೋ ಅವರನ್ನು ಟಿ20 ವಿಶ್ವಕಪ್‌ಗೂ ಮುನ್ನ ತಂಡದ ಬೌಲಿಂಗ್ ಸಲಹೆಗಾರರನ್ನಾಗಿ ನೇಮಿಸಿತ್ತು. ಡ್ವೇನ್ ಬ್ರಾವೋ ತಮ್ಮ ನೇತೃತ್ವದಲ್ಲಿ ಅಫ್ಘಾನಿಸ್ತಾನದ ಬೌಲಿಂಗ್ ವಿಭಾಗವನ್ನು ಎಷ್ಟು ಬಲಿಷ್ಠಗೊಳಿಸಿದ್ದಾರೆ ಎಂದರೆ ಅದರ ಫಲಿತಾಂಶ ಅವರ ತವರು ನೆಲದಲ್ಲಿ ಆಸ್ಟ್ರೇಲಿಯಾದಂತಹ ಬಲಿಷ್ಠ ತಂಡವನ್ನು ಸೋಲಿಸುವಲ್ಲಿ ಯಶಸ್ವಿಯಾಯಿತು. ಅಫ್ಘಾನಿಸ್ತಾನದ ಬೌಲರ್‌ಗಳ ಮುಂದೆ ಕೇವಲ 3 ಆಸ್ಟ್ರೇಲಿಯನ್ ಬ್ಯಾಟ್ಸ್‌ಮನ್‌ಗಳು ಎರಡಂಕಿ ತಲುಪಲು ಸಾಧ್ಯವಾಯಿತು. ಅಲ್ಲದೆ, 20 ಓವರ್‌ಗೂ ಮುನ್ನವೇ ಇಡೀ ಆಸ್ಟ್ರೇಲಿಯಾ ತಂಡ ಪೆವಿಲಿಯನ್‌ ಸೇರಿಕೊಂಡಿತು.

ಆಟಗಾರರ ಸಂಭ್ರಮಾಚರಣೆ ಹೇಗಿತ್ತು

ಅಫ್ಘಾನಿಸ್ತಾನ ತಂಡ ಕೂಡ ಈ ಐತಿಹಾಸಿಕ ಗೆಲುವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿತು. ಪಂದ್ಯ ಗೆದ್ದ ನಂತರ ತಂಡದ ಆಟಗಾರರು ಈ ಪಂದ್ಯದ ಹೀರೋ ಗುಲ್ಬದಿನ್ ನೈಬ್ ಅವರನ್ನು ಹೆಗಲ ಮೇಲೆ ಎತ್ತಿಕೊಂಡು ಮೈದಾನದ ಸುತ್ತ ಕುಣಿದು ಕುಪ್ಪಳಿಸಿದರು. ಆಟಗಾರರು ಹೋಟೆಲ್‌ಗೆ ಹೋಗುವಾಗ ಬಸ್‌ನಲ್ಲಿಯೂ ಸಖತ್ ಡ್ಯಾನ್ಸ್ ಮಾಡಿದ್ದಾರೆ. ಈ ಸಂದರ್ಭದಲ್ಲಿ, ಅಫ್ಘಾನ್ ಆಟಗಾರರು ಬ್ರಾವೋ ಅವರ ಚಾಂಪಿಯನ್ ಹಾಡಿಗೆ ನೃತ್ಯ ಮಾಡುತ್ತಿರುವುದು ಕಂಡುಬಂದಿತು. ಅಫ್ಘಾನಿಸ್ತಾನದ ಅಭಿಮಾನಿಗಳು ಈ ವೀಡಿಯೊಗೆ ಆಸಕ್ತಿದಾಯಕ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.

ಅಫ್ಘಾನಿಸ್ತಾನ ಸೆಮಿಫೈನಲ್ ತಲುಪುವುದು ಹೇಗೆ?

ಈ ಐತಿಹಾಸಿಕ ಜಯ ದಾಖಲಿಸುವ ಮೂಲಕ ಅಫ್ಘಾನಿಸ್ತಾನ ಕೂಡ ಸೆಮಿಫೈನಲ್ ಸುತ್ತಿಗೆ ಸಮೀಪವಾಗಿದೆ. ಅಫ್ಘಾನಿಸ್ತಾನದ ಮುಂದಿನ ಪಂದ್ಯ ಬಾಂಗ್ಲಾದೇಶದ ವಿರುದ್ಧ ನಡೆಯಲ್ಲಿದೆ. ಬಾಂಗ್ಲಾದೇಶ ವಿರುದ್ಧದ ಈ ಪಂದ್ಯದಲ್ಲಿ ಅಫ್ಘಾನಿಸ್ತಾನ ಗೆಲ್ಲಲೇಬೇಕಿದೆ. ಈ ಪಂದ್ಯದಲ್ಲಿ ಗೆಲುವನ್ನು ದಾಖಲಿಸಿದ ನಂತರ ಅಫ್ಘಾನಿಸ್ತಾನ, ತನ್ನ ಕೊನೆಯ ಪಂದ್ಯದಲ್ಲಿ ಟೀಂ ಇಂಡಿಯಾ ಆಸ್ಟ್ರೇಲಿಯಾವನ್ನು ಸೋಲಿಸಲಿ ಎಂದು ಪ್ರಾರ್ಥಿಸಬೇಕಿದೆ. ಇದರೊಂದಿಗೆ ಭಾರತ ಮತ್ತು ಅಫ್ಘಾನಿಸ್ತಾನ ತಂಡಗಳು ಸೆಮಿಫೈನಲ್ ಪ್ರವೇಶಿಸಲಿದ್ದು, ಆಸ್ಟ್ರೇಲಿಯಾ ಸೂಪರ್-8ಸುತ್ತಿನಿಂದ ಹೊರಗುಳಿಯಲಿದೆ.