T20 World Cup 2024: ಅಚ್ಚರಿಯ ಸುದ್ದಿ; ಭಾರತ- ಪಾಕ್ ಪಂದ್ಯದ ಟಿಕೆಟ್ ಕೇಳುವವರೇ ಇಲ್ಲ..!

|

Updated on: Jun 01, 2024 | 8:47 PM

T20 World Cup 2024 IND vs PAK: ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಟಿಕೆಟ್‌ಗಳು ಮಾರಾಟಕ್ಕೆ ಬಂದ ತಕ್ಷಣವೇ ಮಾರಾಟವಾಗುತ್ತವೆ. ಹೀಗಾಗಿ ಉಭಯ ತಂಡಗಳ ನಡುವಿನ ಕಾಳಗ ನಡೆಯುವ ವೇಳೆ ಇಡೀ ಕ್ರೀಡಾಂಗಣ ಹೌಸ್‌ಫುಲ್ ಆಗಿರುತ್ತದೆ. ಆದರೆ ಈ ಬಾರಿ ಪರಿಸ್ಥಿತಿ ವಿಭಿನ್ನವಾಗುವ ಸಾಧ್ಯತೆಗಳಿವೆ. ಇಲ್ಲಿಯವರೆಗೆ ಈ ಪಂದ್ಯದ ಎಲ್ಲಾ ಟಿಕೆಟ್‌ಗಳು ಮಾರಾಟವಾಗಿಲ್ಲ ಎಂದು ವರದಿಯಾಗಿದೆ.

T20 World Cup 2024: ಅಚ್ಚರಿಯ ಸುದ್ದಿ; ಭಾರತ- ಪಾಕ್ ಪಂದ್ಯದ ಟಿಕೆಟ್ ಕೇಳುವವರೇ ಇಲ್ಲ..!
ಭಾರತ- ಪಾಕಿಸ್ತಾನ
Follow us on

9ನೇ ಆವೃತ್ತಿಯ ಟಿ20 ವಿಶ್ವಕಪ್ (T20 World Cup 2024) ಇನ್ನೇನು ಕೆಲವೇ ಗಂಟೆಗಳಲ್ಲಿ ಆರಂಭವಾಗಲಿದೆ. ಇದೇ ಮೊದಲ ಬಾರಿಗೆ ಈ ಲೀಗ್​ಗೆ ಅಮೆರಿಕಾ ಹಾಗೂ ವೆಸ್ಟ್ ಇಂಡೀಸ್ ಜಂಟಿಯಾಗಿ ಆತಿಥ್ಯವಹಿಸುತ್ತಿವೆ. ಅಮೆರಿಕಾದಲ್ಲಿ ಕ್ರಿಕೆಟ್​ನ ಜನಪ್ರಿಯತೆಯನ್ನು ಹೆಚ್ಚಿಸುವ ಸಲುವಾಗಿ ಐಸಿಸಿ (ICC), ಇದೇ ಮೊದಲ ಬಾರಿಗೆ ವಿಶ್ವದ ದೊಡ್ಡಣ್ಣ ನಾಡಲ್ಲಿ ಚುಟುಕು ವಿಶ್ವಸಮರವನ್ನು ಆಯೋಜಿಸುತ್ತಿದೆ. ಅಲ್ಲದೆ ಈ ಬಾರಿ ಬರೋಬ್ಬರಿ 20 ತಂಡಗಳು ಲೀಗ್​ನಲ್ಲಿ ಪಾಲ್ಗೋಳ್ಳುತ್ತಿವೆ. ಹೀಗೆ ಹಲವು ಕಾರಣಗಳಿಂದ ಈ ಬಾರಿಯ ಟಿ20 ವಿಶ್ವಕಪ್ ಸಾಕಷ್ಟು ಸುದ್ದಿಯಲ್ಲಿದೆ. ಅದರಲ್ಲೂ ಜೂನ್ 9 ರಂದು ನಡೆಯಲ್ಲಿರುವ ಭಾರತ ಹಾಗೂ ಪಾಕಿಸ್ತಾನ (India vs Pakistan) ನಡುವಿನ ಹೈವೋಲ್ಟೇಜ್ ಕದನಕ್ಕೆ ಇಡೀ ವಿಶ್ವವೇ ಕಾದು ಕುಳಿತಿದೆ. ಆದರೆ ಈ ಪಂದ್ಯವನ್ನು ಮೈದಾನದಲ್ಲಿ ಕುಳಿತು ವೀಕ್ಷಿಸಲು ಅಭಿಮಾನಿಗಳು ನಿರಾಸಕ್ತಿ ತೊರುತ್ತಿದ್ದಾರೆ ಎಂದು ವರದಿಯಾಗಿದೆ.

ವಾಸ್ತವವಾಗಿ ಈ ಲೀಗ್​ನ ಮೊದಲ ಪಂದ್ಯವು ಆತಿಥೇಯ ಅಮೆರಿಕ ಮತ್ತು ಕೆನಡಾ ನಡುವೆ ನಡೆಯಲಿದೆ. ಆದರೆ ಈ ಪಂದ್ಯಾವಳಿಯ ಅತ್ಯಂತ ಹೈ ಪ್ರೊಫೈಲ್ ಪಂದ್ಯ ಭಾರತ ಮತ್ತು ಪಾಕಿಸ್ತಾನ ನಡುವೆ ಜೂನ್ 9 ರಂದು ನಡೆಯಲಿದೆ. ಇದನ್ನು ಲಕ್ಷಾಂತರ ಕಣ್ಣುಗಳು ವೀಕ್ಷಿಸಲು ಕಾತುರವಾಗಿವೆ. ಉಭಯ ತಂಡಗಳ ನಡುವೆ ಪಂದ್ಯ ನಡೆಯುವಾಗಲೆಲ್ಲ ಕ್ರೀಡಾಂಗಣ ಕಿಕ್ಕಿರಿದು ತುಂಬಿರುತ್ತದೆ. ಆದರೆ ಈ ಬಾರಿ ಹಾಗಾಗದಿರಬಹುದು. ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯಕ್ಕೂ ಮುನ್ನ ದೊಡ್ಡ ಸುದ್ದಿ ಏನೆಂದರೆ ಈ ಪಂದ್ಯದ ಎಲ್ಲಾ ಟಿಕೆಟ್‌ಗಳು ಇನ್ನೂ ಮಾರಾಟವಾಗಿಲ್ಲ. ಈ ಪಂದ್ಯದ ಟಿಕೆಟ್‌ಗಳು ಇನ್ನೂ ಐಸಿಸಿ ವೆಬ್‌ಸೈಟ್‌ನಲ್ಲಿ ಲಭ್ಯವಿದ್ದು, ಇದು ನಿಜಕ್ಕೂ ಅಚ್ಚರಿ ಮೂಡಿಸಿದೆ.

T20 World Cup 2024: ಟಿ20 ವಿಶ್ವಕಪ್ ಫೈನಲ್ ಆಡುವ 2 ತಂಡಗಳನ್ನು ಹೆಸರಿಸಿದ ಪಾಕ್ ಮಾಜಿ ನಾಯಕ ಮಿಸ್ಬಾ-ಉಲ್-ಹಕ್

ಎಲ್ಲಾ ಟಿಕೆಟ್ ಮಾರಾಟವಾಗಿಲ್ಲ!

ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಟಿಕೆಟ್‌ಗಳು ಮಾರಾಟಕ್ಕೆ ಬಂದ ತಕ್ಷಣವೇ ಮಾರಾಟವಾಗುತ್ತವೆ. ಹೀಗಾಗಿ ಉಭಯ ತಂಡಗಳ ನಡುವಿನ ಕಾಳಗ ನಡೆಯುವ ವೇಳೆ ಇಡೀ ಕ್ರೀಡಾಂಗಣ ಹೌಸ್‌ಫುಲ್ ಆಗಿರುತ್ತದೆ. ಆದರೆ ಈ ಬಾರಿ ಪರಿಸ್ಥಿತಿ ವಿಭಿನ್ನವಾಗುವ ಸಾಧ್ಯತೆಗಳಿವೆ. ಇಲ್ಲಿಯವರೆಗೆ ಈ ಪಂದ್ಯದ ಎಲ್ಲಾ ಟಿಕೆಟ್‌ಗಳು ಮಾರಾಟವಾಗಿಲ್ಲ ಎಂದು ವರದಿಯಾಗಿದೆ. ಇದಕ್ಕೆ ಕಾರಣವೂ ಇದ್ದು ಈ ಪಂದ್ಯದ ಟಿಕೆಟ್​ ಬೆಲೆ ಸಾಕಷ್ಟು ದುಬಾರಿಯಾಗಿರುವುದು. ಹೌದು, ಈ ಪಂದ್ಯಕ್ಕಾಗಿ ಐಸಿಸಿ ಮೂರು ಪ್ಯಾಕೇಜ್‌ಗಳಲ್ಲಿ ಟಿಕೆಟ್‌ಗಳನ್ನು ಇರಿಸಿದೆ. ಇದರಲ್ಲಿ ಡೈಮಂಡ್ ಕ್ಲಬ್, ಪ್ರೀಮಿಯಂ ಕ್ಲಬ್ ಲೌಂಜ್ ಮತ್ತು ಕಾರ್ನರ್ ಕ್ಲಬ್ ಸೇರಿವೆ.

ದುಬಾರಿ ಬೆಲೆ ಇದಕ್ಕೆ ಕಾರಣ!

ಡೈಮಂಡ್ ಕ್ಲಬ್ ಟಿಕೆಟ್ ಖರೀದಿಸುವ ಅಭಿಮಾನಿಗಳಿಗೆ ಅತ್ಯುತ್ತಮ ಸೌಲಭ್ಯಗಳು ಸಿಗುತ್ತವೆ. ಆದರೆ ಅಭಿಮಾನಿಗಳು ಇದಕ್ಕಾಗಿ 8.34 ಲಕ್ಷ ರೂಪಾಯಿಗಳನ್ನು ಪಾವತಿಸಬೇಕಾಗಿರುವುದು ದೊಡ್ಡ ವಿಷಯ. ಪ್ರೀಮಿಯಂ ಕ್ಲಬ್ ಲೌಂಜ್ ಟಿಕೆಟ್ ಬೆಲೆ 2 ಲಕ್ಷ ರೂಪಾಯಿ ಮತ್ತು ಕಾರ್ನರ್ ಕ್ಲಬ್ ಟಿಕೆಟ್ ಬೆಲೆ 2.29 ಲಕ್ಷ ರೂಪಾಯಿ ಆಗಿದೆ. ಭಾರತ-ಪಾಕಿಸ್ತಾನ ಪಂದ್ಯದ ದೃಷ್ಟಿಯಿಂದ ಐಸಿಸಿ ಟಿಕೆಟ್ ಬೆಲೆಯನ್ನು ಇಷ್ಟು ದುಬಾರಿ ಇರಿಸಿದೆ. ಆದರೆ ಅದರ ಎಲ್ಲಾ ಟಿಕೆಟ್‌ಗಳು ಇನ್ನೂ ಮಾರಾಟವಾಗಿಲ್ಲ ಎಂಬುದು ದೊಡ್ಡ ಸುದ್ದಿಯಾಗಿದೆ.

ಭಾರತ-ಪಾಕಿಸ್ತಾನ ಪಂದ್ಯದಿಂದ ಹೆಚ್ಚು ಲಾಭ ಗಳಿಸಲು ಐಸಿಸಿ ಯೋಚಿಸುತ್ತಿತ್ತು. ಆದರೆ ಟಿಕೆಟ್ ಬೆಲೆಯನ್ನು ದುಬಾರಿಯಾಗಿರಿಸಿರುವುದು ಐಸಿಸಿಗೆ ಹಿನ್ನಡೆಯನ್ನುಂಟು ಮಾಡಿದೆ. ಪಂದ್ಯಕ್ಕೂ ಮುನ್ನ ಐಸಿಸಿ ಟಿಕೆಟ್ ದರವನ್ನು ಕಡಿಮೆ ಮಾಡುತ್ತದೆಯೇ ಅಥವಾ ಪಂದ್ಯದ ಸಮಯದಲ್ಲಿ ಖಾಲಿ ಸೀಟುಗಳು ಇರುತ್ತವೆಯೇ? ಎಂಬುದು ಪಂದ್ಯದ ದಿನ ಗೊತ್ತಾಗಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ