‘ಭಾರತಕ್ಕಿಂತ ಉತ್ತಮ ತಂಡ ಸಿಗಲು ಸಾಧ್ಯವಿಲ್ಲ’; ಅಫ್ಘಾನ್ ವಿರುದ್ಧ ಸೋತರೂ, ಆಸೀಸ್ ನಾಯಕನ ಸೊಕ್ಕು ಕರಗಿಲ್ಲ​

|

Updated on: Jun 23, 2024 | 4:52 PM

T20 World Cup 2024: ನಾವು ಇಂದಿನ ಪಂದ್ಯದಲ್ಲಿ ಸೋತಿರುವುದರಿಂದ ಮುಂದಿನ ಪಂದ್ಯವನ್ನು ಗೆಲ್ಲಲೇಬೇಕಾಗಿದೆ. ಹೀಗಾಗಿ ನಾವು ಗೆಲುವು ದಾಖಲಿಸಲು ಭಾರತಕ್ಕಿಂತ ಉತ್ತಮ ತಂಡ ನಮಗೆ ಸಿಗಲು ಸಾಧ್ಯವಿಲ್ಲ. ಟೀಂ ಇಂಡಿಯಾ ವಿರುದ್ಧ ನಾವು ಗೆಲುವು ದಾಖಲಿಸಲು ಬಯಸುತ್ತೇವೆ ಎಂದು ಆಸೀಸ್ ನಾಯಕ ಮಿಚೆಲ್ ಮಾರ್ಷ್​ ಹೇಳಿದರು.

‘ಭಾರತಕ್ಕಿಂತ ಉತ್ತಮ ತಂಡ ಸಿಗಲು ಸಾಧ್ಯವಿಲ್ಲ’; ಅಫ್ಘಾನ್ ವಿರುದ್ಧ ಸೋತರೂ, ಆಸೀಸ್ ನಾಯಕನ ಸೊಕ್ಕು ಕರಗಿಲ್ಲ​
ಟೀಂ ಇಂಡಿಯಾ, ಮಿಚೆಲ್ ಮಾರ್ಷ್​
Follow us on

ಜಟ್ಟಿ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬ ಗಾದೆ ಆಸ್ಟ್ರೇಲಿಯಾ ತಂಡಕ್ಕೆ ಹೇಳಿ ಮಾಡಿಸಿದಂತಿದೆ. ನೋಡಿದರೆ ತನಗಿಂತ ಎಲ್ಲಾ ವಿಭಾಗದಲ್ಲೂ ದುರ್ಬಲವಾಗಿರುವ ಅಫ್ಘಾನಿಸ್ತಾನ ತಂಡದ ವಿರುದ್ಧ ಹೀನಾಯವಾಗಿ ಸೋತು ಟೂರ್ನಿಯಿಂದಲೇ ಹೊರಬೀಳುವ ತವಕದಲ್ಲಿರುವ ಕಾಂಗರೂಗಳ (Afghanistan vs Australia) ಸೊಕ್ಕು ಮಾತ್ರ ಕಡಿಮೆಯಾಗುತ್ತಿಲ್ಲ. ಇಂದು ನಡೆದ ಟಿ20 ವಿಶ್ವಕಪ್ (T20 World Cup 2024) ಸೂಪರ್ 8 ಸುತ್ತಿನಲ್ಲಿ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ 21 ರನ್‌ಗಳ ಮುಜುಗರದ ಸೋಲಿನ ನಂತರ ಆಸ್ಟ್ರೇಲಿಯಾದ ನಾಯಕ ಮಿಚೆಲ್ ಮಾರ್ಷ್ (Mitchell Marsh) ಪೋಸ್ಟ್ ಮ್ಯಾಚ್ ಪ್ರೆಸೆಂಟೆಷನ್​ನಲ್ಲಿ ಆಡಿದ ಮಾತುಗಳು ಇದೀಗ ಟೀಂ ಇಂಡಿಯಾ ಅಭಿಮಾನಿಗಳು ಕೆರಳುವಂತೆ ಮಾಡಿದೆ.

ಅಫ್ಘಾನ್ ಬಗ್ಗೆ ಮಾರ್ಷ್​ ಮೆಚ್ಚುಗೆ

ಅಫ್ಘಾನಿಸ್ತಾನ ವಿರುದ್ಧದ ಸೋಲಿನ ನಂತರ ಪೋಸ್ಟ್ ಮ್ಯಾಚ್ ಪ್ರೆಸೆಂಟೆಷನ್​ನಲ್ಲಿ ಮಾತನಾಡಿದ ಆಸ್ಟ್ರೇಲಿಯಾದ ನಾಯಕ ಮಿಚೆಲ್ ಮಾರ್ಷ್, ‘ಅಫ್ಘಾನಿಸ್ತಾನ ತಂಡ ಇಂದು ನಮ್ಮ ವಿರುದ್ಧ ಅದ್ಭುತ ಪ್ರದರ್ಶನ ನೀಡಿ ನಮ್ಮನ್ನು ಪಂದ್ಯದಿಂದ ಸಂಪೂರ್ಣವಾಗಿ ಹೊರಹಾಕಿದೆ. ಪಿಚ್‌ನ ಸ್ವರೂಪವನ್ನು ಪರಿಗಣಿಸಿ ಹಲವು ತಂಡಗಳು ಟಾಸ್ ಗೆದ್ದ ನಂತರ ಮೊದಲು ಫೀಲ್ಡಿಂಗ್ ಮಾಡಲು ನಿರ್ಧರಿಸಿದ್ದವು. ಟಾಸ್ ಗೆದ್ದ ನಂತರ ನಾವು ಮೊದಲು ಏನು ಮಾಡಬೇಕೆಂದು ನಿರ್ಧರಿಸಲು ಇದು ಕಾರಣವಾಗಿತ್ತು. ಹೀಗಾಗಿ ನಾವು ಟಾಸ್ ಬಗ್ಗೆ ಹೆಚ್ಚು ಯೋಚಿಸಲಿಲ್ಲ. ಇಂದು ನಮ್ಮ ದಿನವೇ ಆಗಿರಲಿಲ್ಲ. ಎರಡೂ ತಂಡಗಳಿಗೆ ಪಿಚ್ ಉತ್ತಮ ರೀತಿಯಲ್ಲಿ ವರ್ತಿಸಲಿಲ್ಲ. ಇದಕ್ಕಾಗಿಯೇ ನಾನು ಈಗಾಗಲೇ ನಿಮಗೆ ಹೇಳಿದ ಹಾಗೆ ಈ ಪಂದ್ಯದಲ್ಲಿ ಸೋತಿದ್ದೇವೆ.

IND vs BAN: ಜಯದ ನಡುವೆಯೂ ತಂಡದ ನ್ಯೂನತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಹಾರ್ದಿಕ್ ಪಾಂಡ್ಯ

ಭಾರತಕ್ಕಿಂತ ಉತ್ತಮ ತಂಡವಿಲ್ಲ

ಇಲ್ಲಿಯವರೆಗೆ ಮಾರ್ಷ್​ ಆಡಿದ ಮಾತುಗಳು ಎಲ್ಲರೂ ಮೆಚ್ಚುವಂತಹುಗಳಾಗಿದ್ದವು. ಆದರೆ ಆ ಬಳಿಕ ಭಾರತದೊಂದಿಗಿನ ಪಂದ್ಯದ ಕುರಿತು ಮಾರ್ಷ್​ ಆಡಿದ ಮಾತುಗಳು ಭಾರತದ ಅಭಿಮಾನಿಗಳು ಕೆರಳುವಂತೆ ಮಾಡಿದೆ. ವಾಸ್ತವವಾಗಿ ಆಸ್ಟ್ರೇಲಿಯಾ ತಂಡ ತನ್ನ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಟೀಂ ಇಂಡಿಯಾವನ್ನು ಎದುರಿಸಬೇಕಾಗಿದೆ. ಇನ್ನು ಈ ಪಂದ್ಯದ ಬಗ್ಗೆ ಮಾತನಾಡಿದ ಮಾರ್ಷ್, ನಾವು ಇಂದಿನ ಪಂದ್ಯದಲ್ಲಿ ಸೋತಿರುವುದರಿಂದ ಮುಂದಿನ ಪಂದ್ಯವನ್ನು ಗೆಲ್ಲಲೇಬೇಕಾಗಿದೆ. ಹೀಗಾಗಿ ನಾವು ಗೆಲುವು ದಾಖಲಿಸಲು ಭಾರತಕ್ಕಿಂತ ಉತ್ತಮ ತಂಡ ನಮಗೆ ಸಿಗಲು ಸಾಧ್ಯವಿಲ್ಲ. ಟೀಂ ಇಂಡಿಯಾ ವಿರುದ್ಧ ನಾವು ಗೆಲುವು ದಾಖಲಿಸಲು ಬಯಸುತ್ತೇವೆ ಎಂದರು. ಮಾರ್ಷ್ ಅವರ ಈ ಹೇಳಿಕೆ ಟೀಂ ಇಂಡಿಯಾವನ್ನು ಸೋಲಿಸಿಯೇ ಸೋಲಿಸುತ್ತೇವೆ ಎಂಬ ದುರಹಂಕಾರದ ಮಾತಾಗಿತ್ತು ಎಂಬುದು ಎಲ್ಲರ ಅರಿವಿಗೆ ಬರುತ್ತದೆ.

ನಾಯಕನಾಗಿ ಮಾರ್ಚ್ ಪ್ರದರ್ಶನ ಹೇಗಿತ್ತು?

ಅಫ್ಘಾನಿಸ್ತಾನ ನೀಡಿದ ಅಲ್ಪ ಗುರಿ ಬೆನ್ನಟ್ಟಿದ ಆಸ್ಟ್ರೇಲಿಯಾ ತಂಡ ಮಿಚೆಲ್ ಮಾರ್ಷ್ ಅವರಿಂದ ಅತ್ಯುತ್ತಮ ಇನ್ನಿಂಗ್ಸ್ ನಿರೀಕ್ಷಿಸಿದ್ದರೂ ಎದುರಾಳಿ ತಂಡದ ವಿರುದ್ಧ ಗೆಲುವಿನ ಪ್ರದರ್ಶನ ನೀಡಲು ಮಾರ್ಷ್​ಗೆ ಸಾಧ್ಯವಾಗಲಿಲ್ಲ. ಎದುರಾಳಿ ತಂಡದ ವಿರುದ್ಧ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಅವರು ತಮ್ಮ ತಂಡಕ್ಕಾಗಿ ಒಟ್ಟು 9 ಎಸೆತಗಳನ್ನು ಎದುರಿಸಿ, 133.33 ಸ್ಟ್ರೈಕ್ ರೇಟ್‌ನಲ್ಲಿ ಕೇವಲ 12 ರನ್ ಗಳಿಸಲಷ್ಟೇ ಶಕ್ತರಾದರು. ಈ ವೇಳೆ ಅವರ ಬ್ಯಾಟ್‌ನಿಂದ 2 ಬೌಂಡರಿಗಳು ಸಿಡಿದವು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:48 pm, Sun, 23 June 24