ಫ್ಲೋರಿಡಾದಲ್ಲಿ ನಡೆಯಬೇಕಿದ್ದ ಭಾರತ ಮತ್ತು ಕೆನಡಾ (IND vs CAN) ನಡುವಿನ ಎ ಗುಂಪಿನ ಪಂದ್ಯವನ್ನು ಮಳೆಯಿಂದಾಗಿ ರದ್ದುಗೊಳಿಸಲಾಗಿದೆ. ಎರಡೂ ತಂಡಗಳು ತಮ್ಮ ಕೊನೆಯ ಗುಂಪು ಹಂತದ ಪಂದ್ಯಕ್ಕಾಗಿ ಕಾಯುತ್ತಿದ್ದವು. ಆದರೆ ಭಾರೀ ಮಳೆಯಿಂದಾಗಿ ಮೈದಾನವು ತುಂಬಾ ತೇವವಾಗಿತ್ತು, ಇದರಿಂದಾಗಿ ಟಾಸ್ ಕೂಡ ವಿಳಂಬವಾಯಿತು. ಉಭಯ ತಂಡಗಳ ನಡುವೆ ಪಂದ್ಯವನ್ನು ಏರ್ಪಡಿಸಲು ಗ್ರೌಂಡ್ಸ್ಮನ್ಗಳು ಸಾಕಷ್ಟು ಪ್ರಯತ್ನಿಸಿದರು. ಮೈದಾನವನ್ನು ಒಣಗಿಸಲು ಮೂರು ಡ್ರೈಯರ್ ಯಂತ್ರಗಳನ್ನು ನಿಯೋಜಿಸಲಾಗಿತ್ತು. ಆದರೆ ಇದರ ಹೊರತಾಗಿಯೂ ಪಂದ್ಯಕ್ಕೆ ಮೈದಾನ ಸಜ್ಜುಗೊಳ್ಳಲಿಲ್ಲ. ಅಂತಿಮವಾಗಿ ಪಂದ್ಯವನ್ನು ರದ್ದುಗೊಳಿಸಬೇಕಾಯಿತು. ಆದರೆ ಇದೀಗ ಪಾಕಿಸ್ತಾನದ ಅಭಿಮಾನಿಗಳು, ಐಸಿಸಿ (ICC) ನಮ್ಮ ತಂಡಕ್ಕೆ ಅನ್ಯಾಯವೆಸಗಿದೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರಹಾಕಿದ್ದಾರೆ.
ಫ್ಲೋರಿಡಾದಲ್ಲಿ ಭಾರಿ ಮಳೆ ಬಂದಿದ್ದರಿಂದ ಭಾರತ ಹಾಗೂ ಕೆನಡಾ ನಡುವಿನ ಪಂದ್ಯವನ್ನು ನಡೆಸುವ ಸುಲವಾಗಿ ಮೈದಾನವನ್ನು ಒಣಗಿಸಲು ಮೂರು ಡ್ರೈಯರ್‌ಗಳನ್ನು ಬಳಸಲಾಗುತ್ತಿತ್ತು. ಆದರೆ ನಿನ್ನೆ ನಡೆದ ಅಮೆರಿಕ ಮತ್ತು ಐರ್ಲೆಂಡ್ ನಡುವಿನ ಪಂದ್ಯಕ್ಕೂ ಮಳೆ ಅಡ್ಡಿಪಡಿಸಿತ್ತು. ಅಲ್ಲದೆ ಸುಮಾರು 3 ಗಂಟೆಗಳ ಕಾಲ ಮಳೆ ನಿಂತಿದ್ದು, ಮೈದಾನವನ್ನು ಒಣಗಿಸುವ ಪ್ರಯತ್ನ ಕೂಡ ನಡೆದಿತ್ತು. ಆದರೆ ನಿನ್ನೆಯ ಪಂದ್ಯದಲ್ಲಿ ಮೈದಾನವನ್ನು ಒಣಗಿಸಲು ಕೇವಲ 1 ಡ್ರೈಯರ್ ಯಂತ್ರವನ್ನು ಮಾತ್ರ ಬಳಸಲಾಗಿತ್ತು. ಹೀಗಾಗಿ ಈ ತಾರತಮ್ಯವನ್ನು ವಿರೋಧಿಸಿರುವ ಪಾಕಿಸ್ತಾನ ಅಭಿಮಾನಿಗಳು, ಅಮೆರಿಕ ಮತ್ತು ಐರ್ಲೆಂಡ್ ನಡುವಿನ ಪಂದ್ಯ ನಡೆಯುವುದು ಪಾಕಿಸ್ತಾನ ತಂಡಕ್ಕೆ ಅತ್ಯವಶ್ಯಕವಾಗಿತ್ತು. ಆದರೆ ಆ ಪಂದ್ಯಕ್ಕೆ ಕೇವಲ ಒಂದು ಡ್ರೈಯರ್ ಅನ್ನು ಬಳಸಲಾಗಿತ್ತು. ಹೀಗಾಗಿ ಐಸಿಸಿ ನಮ್ಮ ತಂಡದ ವಿರುದ್ಧ ಪಿತೂರಿ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ.
Three dryers are being used for India’s match in Florida today, there was only one used for Pakistan’s match yesterday 🇮🇳🔥🔥#tapmad #HojaoADFree #INDvCAN #T20WorldCup pic.twitter.com/GQzyoC7GQ2
— Farid Khan (@_FaridKhan) June 15, 2024
Icc=Bcci
— Javeria Sultan (@javeria_sultan2) June 15, 2024
ವಾಸ್ತವವಾಗಿ ಮೇಲೆ ಹೇಳಿದಂತೆ ಜೂನ್ 14 ರಂದು ಅಮೆರಿಕ ಮತ್ತು ಐರ್ಲೆಂಡ್ ನಡುವೆ ಮಹತ್ವದ ಪಂದ್ಯ ನಡೆಯಬೇಕಿತ್ತು. ಈ ಪಂದ್ಯದ ಮೇಲೆ ಪಾಕಿಸ್ತಾನದ ಭವಿಷ್ಯ ನಿಂತಿತ್ತು. ಈ ಪಂದ್ಯದಲ್ಲಿ ಐರ್ಲೆಂಡ್ ಅಮೆರಿಕವನ್ನು ಸೋಲಿಸಿದ್ದರೆ ಪಾಕಿಸ್ತಾನಕ್ಕೆ ಸೂಪರ್-8ರ ಬಾಗಿಲು ತೆರೆಯುತ್ತಿತ್ತು. ಆದರೆ, ಮಳೆಯಿಂದಾಗಿ ಮೈದಾನ ಒದ್ದೆಯಾಗಿದ್ದು, ಅದರ ಸಿದ್ಧತೆ ಮಧ್ಯೆ ಮತ್ತೆ ಮಳೆ ಸುರಿಯಲಾರಂಭಿಸಿದ್ದರಿಂದ ಪಂದ್ಯವನ್ನು ರದ್ದುಗೊಳಿಸಬೇಕಾಯಿತು. ಇದರೊಂದಿಗೆ ಅಮೆರಿಕ ಒಂದು ಅಂಕ ಪಡೆದು ಸೂಪರ್-8ಗೆ ಅರ್ಹತೆ ಪಡೆಯಿತು.
IND vs CAN: ಭಾರತ- ಕೆನಡಾ ಪಂದ್ಯ ಮಳೆಗಾಹುತಿ; ಸೂಪರ್ 8 ಸುತ್ತಿಗೆ ರೋಹಿತ್ ಪಡೆ
2024ರ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನದ ಪ್ರದರ್ಶನ ತೀರಾ ಕಳಪೆಯಾಗಿತ್ತು. ಆರಂಭಿಕ ಪಂದ್ಯದಲ್ಲಿಯೇ ಅಮೆರಿಕ, ಪಾಕ್ ತಂಡವನ್ನು ಸೂಪರ್ ಓವರ್‌ನಲ್ಲಿ ಸೋಲಿಸಿತು. ಇದಾದ ಬಳಿಕ ಭಾರತದ ವಿರುದ್ಧ ಸೋತ ಪಾಕ್ ತಂಡ ಗುಂಪು ಹಂತದಲ್ಲೇ ಹೊರಬೀಳಬೇಕಾಯಿತು. ಇದು ಪಾಕಿಸ್ತಾನಕ್ಕೆ ಸಾಕಷ್ಟು ಅವಮಾನ ತಂದಿದೆ. ಆದರೆ ಭಾರತ ತನ್ನ ಮೊದಲ ಮೂರು ಪಂದ್ಯಗಳನ್ನು ಗೆದ್ದು ಸೂಪರ್-8 ಗೆ ಮುನ್ನಡೆದಿದೆ. ಇದೀಗ ಕೆನಡಾ ವಿರುದ್ಧದ ಕೊನೆಯ ಪಂದ್ಯವನ್ನು ರದ್ದುಗೊಳಿಸಲಾಗಿದ್ದು, ಭಾರತವು ಒಂದು ಅಂಕವನ್ನು ಪಡೆದುಕೊಂಡು ಮೊದಲ ಸುತ್ತನ್ನು ಅಗ್ರಸ್ಥಾನದಲ್ಲಿ ಮುಗಿಸಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ