Jasprit Bumrah: ಟಿ20 ವಿಶ್ವಕಪ್​ನಲ್ಲಿ ಥೇಟ್ ಜಸ್​ಪ್ರೀತ್ ಬುಮ್ರಾ ರೀತಿ ಬೌಲಿಂಗ್ ಮಾಡುತ್ತಿರುವ ಅಫ್ಘಾನ್ ಬೌಲರ್

| Updated By: Vinay Bhat

Updated on: Nov 05, 2021 | 11:56 AM

ಅಫ್ಘಾನಿಸ್ತಾನ ತಂಡದ ಬೌಲರ್ ನವೀನ್ ಉಲ್ ಹಖ್ ಅವರ ಬೌಲಿಂಗ್ ಶೈಲಿ ಕೂಡ ಥೇಟ್ ಜಸ್​ಪ್ರೀತ್ ಬುಮ್ರಾ ರೀತಿಯಲ್ಲೇ ಇದೆ. ಐಸಿಸಿ ಈ ಬಗ್ಗೆ ತನ್ನ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಬುಮ್ರಾ ಮತ್ತು ನವೀನ್ ಅವರ ಬೌಲಿಂಗ್ ಆಕ್ಷನ್​ನ ವಿಡಿಯೋ ಹಂಚಿಕೊಂಡಿದೆ.

Jasprit Bumrah: ಟಿ20 ವಿಶ್ವಕಪ್​ನಲ್ಲಿ ಥೇಟ್ ಜಸ್​ಪ್ರೀತ್ ಬುಮ್ರಾ ರೀತಿ ಬೌಲಿಂಗ್ ಮಾಡುತ್ತಿರುವ ಅಫ್ಘಾನ್ ಬೌಲರ್
jasprit Bumrah and Naveen-ul-Haq
Follow us on

ಟೀಮ್ ಇಂಡಿಯಾ (Team India) ಸ್ಟಾರ್ ವೇಗಿ, ಯಾರ್ಕರ್ ಕಿಂಗ್ ಎಂದೇ ಪ್ರಸಿದ್ಧಿ ಪಡೆದಿರುವ ಜಸ್​ಪ್ರೀತ್ ಬುಮ್ರಾ (Jasprit Bumrah) ಎಷ್ಟು ಪ್ರಸಿದ್ಧಿಯೋ ಅವರ ಬೌಲಿಂಗ್ ಶೈಲಿ ಕೂಡ ಅಷ್ಟೇ ಫೇಮಸ್ ಆಗಿದೆ. ಈ ಹಿಂದೆ ಬುಮ್ರಾ ರೀತಿಯಲ್ಲಿ ಅನೇಕರು ಬೌಲಿಂಗ್ ಆಕ್ಷನ್ (Bumrah Bowling Action) ಮಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು. ಸದ್ಯ ಸಾಗುತ್ತಿರುವ ಟಿ20 ವಿಶ್ವಕಪ್​ನಲ್ಲಿ ಕೂಡ ಥೇಟ್ ಬುಮ್ರಾ ಮಾದರಿಯಲ್ಲೇ ಬೌಲಿಂಗ್ ಮಾಡುವ ಬೌಲರ್​ನ ವಿಡಿಯೋವನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ (ICC) ಹಂಚಿಕೊಂಡಿದೆ. ಇತ್ತೀಚೆಗಷ್ಟೆ ಮುಕ್ತಾಯಗೊಂಡ ಭಾರತ ಹಾಗೂ ಅಫ್ಘಾನಿಸ್ತಾನ (India vs Afghanistan) ನಡುವಣ ಪಂದ್ಯದಲ್ಲಿ ಈ ಘಟನೆ ನಡೆದಿದೆ.

ಅಫ್ಘಾನಿಸ್ತಾನ ತಂಡದ ಬೌಲರ್ ನವೀನ್ ಉಲ್ ಹಖ್ ಅವರ ಬೌಲಿಂಗ್ ಶೈಲಿ ಕೂಡ ಥೇಟ್ ಜಸ್​ಪ್ರೀತ್ ಬುಮ್ರಾ ರೀತಿಯಲ್ಲೇ ಇದೆ. ಐಸಿಸಿ ಈ ಬಗ್ಗೆ ತನ್ನ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಬುಮ್ರಾ ಮತ್ತು ನವೀನ್ ಅವರ ಬೌಲಿಂಗ್ ಆಕ್ಷನ್​ನ ವಿಡಿಯೋ ಹಂಚಿಕೊಂಡಿದೆ.

 

ಬುಮ್ರಾ ರೀತಿಯ ಬೌಲಿಂಗ್ ಆಕ್ಷನ್ ಇದ್ದರೂ ನವೀನ್ ಅವರು ಭಾರತ ವಿರುದ್ಧದ ಪಂದ್ಯದಲ್ಲಿ ದುಬಾರಿಯಾದರು. ನವೀನ್ 4 ಓವರ್​ಗೆ ಬರೋಬ್ಬರಿ 59 ರನ್ ನೀಡಿದರು. ಈ ಪಂದ್ಯದಲ್ಲಿ ಬುಮ್ರಾ 4 ಓವರ್​​ಗೆ 25 ರನ್ ನೀಡಿದ್ದರಷ್ಟೆ.

ಅಫ್ಘಾನಿಸ್ತಾನ ವಿರುದ್ಧ ಗೆಲ್ಲುವ ಮೂಲಕ ಸತತ ಎರಡು ಸೋಲುಗಳಿಂದ ಕಂಗೆಟ್ಟಿದ್ದ ಭಾರತ ತಂಡ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಕಡೆಗೂ ಗೆಲುವಿನ ಖಾತೆ ತೆರೆಯುವಲ್ಲಿ ಯಶಸ್ವಿಯಾಯಿತು. ಆರಂಭಿಕರಾದ ರೋಹಿತ್ ಶರ್ಮ (74 ರನ್, 47 ಎಸೆತ, 8 ಬೌಂಡರಿ, 3 ಸಿಕ್ಸರ್) ಹಾಗೂ ಕೆಎಲ್ ರಾಹುಲ್ (69 ರನ್, 48 ಎಸೆತ, 6 ಬೌಂಡರಿ, 2 ಸಿಕ್ಸರ್) ಜೋಡಿಯ ಅಬ್ಬರದ ಬ್ಯಾಟಿಂಗ್ ಮತ್ತು 4 ವರ್ಷಗಳ ಬಳಿಕ ನಿಗದಿತ ಓವರ್‌ಗಳ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ ಆರ್. ಅಶ್ವಿನ್ (14ಕ್ಕೆ 2) ಸ್ಪಿನ್ ದಾಳಿಯಿಂದ ಭಾರತ ತಂಡ ಅಫ್ಘಾನಿಸ್ತಾನ ತಂಡವನ್ನು 66 ರನ್‌ಗಳಿಂದ ಮಣಿಸಿತು.

ಈ ಜಯದೊಂದಿಗೆ ಟೀಮ್ ಇಂಡಿಯಾದ ಸೆಮೀಸ್ ಆಸೆ ಜೀವಂತವಾಗಿ ಉಳಿಯಿತು. ಟೀಮ್ ಇಂಡಿಯಾ ಇಂದು ಸ್ಕಾಟ್ಲೆಂಡ್ ವಿರುದ್ಧ ಮತ್ತೊಂದು ಮಾಡು ಇಲ್ಲವೇ ಮಡಿ ಪಂದ್ಯವನ್ನಾಡಲಿದೆ.

India Probable Playing XI: ಸ್ಕಾಟ್ಲೆಂಡ್ ವಿರುದ್ಧದ ಪಂದ್ಯಕ್ಕೆ ಓರ್ವ ಆಟಗಾರ ಔಟ್: ಭಾರತದ ಸಂಭಾವ್ಯ ಪ್ಲೇಯಿಂಗ್ XI ಇಲ್ಲಿದೆ

India vs Scotland: ಸ್ಕಾಟ್ಲೆಂಡ್ ವಿರುದ್ಧ ಮತ್ತೊಂದು ಅಗ್ನಿ ಪರೀಕ್ಷೆ: ಕೊಹ್ಲಿ ಬರ್ತ್​ ಡೇಗೆ ಗೆಲುವಿನ ಗಿಫ್ಟ್ ನೀಡುತ್ತಾ ಭಾರತ?

(T20 World Cup ICC shared a split-screen video of Jasprit Bumrah and Naveen-ul-Haq in tandem)