T20 World Cup 2021: ಪಾಕಿಸ್ತಾನದ ಮಾಜಿ ನಾಯಕ ಇಂಜಮಾಮ್-ಉಲ್-ಹಕ್ ಯುಎಇನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸುವ ತಂಡ ಯಾವುದೆಂದು ಭವಿಷ್ಯ ನುಡಿದಿದ್ದಾರೆ. ಸೂಪರ್ 12 ತಂಡಗಳ ಅಭ್ಯಾಸ ಪಂದ್ಯಗಳಲ್ಲಿ ಭಾರತ ತಂಡವು ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿದೆ. ಈ ಎರಡೂ ತಂಡಗಳ ವಿರುದ್ದ ಭಾರತ ನಿರಾಯಾಸವಾಗಿ ಗೆದ್ದಿರುವುದು ವಿಶೇಷ. ಹೀಗಾಗಿ ನನ್ನ ಪ್ರಕಾರ ಭಾರತ ತಂಡವು ಈ ಬಾರಿ ಟ್ರೋಫಿ ಗೆಲ್ಲುವ ಫೇವರೇಟ್ ತಂಡಗಳಲ್ಲಿ ಟೀಮ್ ಇಂಡಿಯಾ ಅಗ್ರಸ್ಥಾನದಲ್ಲಿದೆ ಎಂದು ಇಂಜಮಾಮ್ ಉಲ್ ಹಕ್ ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಇಂಜಮಾಮ್, ಭಾರತವು ಆಸ್ಟ್ರೇಲಿಯಾ ವಿರುದ್ಧ ಅಭ್ಯಾಸ ಪಂದ್ಯವನ್ನು ನಿರಾಯಾಸವಾಗಿ ಗೆದ್ದಿದೆ. ಉಪಖಂಡದ ಪಿಚ್‌ಗಳಲ್ಲಿ ಭಾರತವು ವಿಶ್ವದ ಅತ್ಯಂತ ಅಪಾಯಕಾರಿ ಟಿ20 ತಂಡವಾಗಿದೆ. ಟೀಮ್ ಇಂಡಿಯಾ 155 ರನ್ನು ಬೆನ್ನಟ್ಟುವುದನ್ನು ನೋಡಿದರೆ, ಅವರಿಗೆ ವಿರಾಟ್ ಕೊಹ್ಲಿಯ ಅಗತ್ಯವೂ ಇರಲಿಲ್ಲ. ಅಂದರೆ ಭಾರತ ತಂಡವು ಯಾವೊಬ್ಬರ ಆಟಗಾರನನ್ನು ಅವಲಂಭಿಸಿಲ್ಲ. ಹೀಗಾಗಿ ಯುಎಇನಲ್ಲಿ ಟೀಮ್ ಇಂಡಿಯಾ ಬಲಿಷ್ಠ ತಂಡವಾಗಿದೆ.
ನನ್ನ ಪ್ರಕಾರ, ಈ ಬಾರಿ ಟ್ರೋಫಿ ಗೆಲ್ಲಲು ಭಾರತಕ್ಕೆ ಉತ್ತಮ ಅವಕಾಶವಿದೆ. ಆದರೆ ಚುಟುಕು ಕ್ರಿಕೆಟ್ನಲ್ಲಿ ಇದೇ ತಂಡ ಗೆಲ್ಲಲಿದೆ ಎಂದೇ ಹೇಳಲಾಗುವುದಿಲ್ಲ. ಇದಾಗ್ಯೂ ಅನುಭವಿ ಟಿ 20 ಆಟಗಾರರನ್ನು ಹೊಂದಿರುವ ಭಾರತ ತಂಡ ವಿಶ್ವಕಪ್ ಗೆಲ್ಲುವ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ ಎಂದಿದ್ದಾರೆ. ಪಾಕ್-ಭಾರತ ಕದನಕ್ಕೂ ಮುನ್ನ ಇಂಜಮಾಮ್ ನೀಡಿರುವ ಈ ಅಚ್ಚರಿಯ ಹೇಳಿಕೆ ಇದೀಗ ಪಾಕಿಸ್ತಾನದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಇನ್ನು ಭಾರತ-ಪಾಕಿಸ್ತಾನ್ ಮುಖಾಮುಖಿ ಬಗ್ಗೆ ಮಾತನಾಡಿದ ಇಂಜಮಾಮ್ ಉಲ್ ಹಕ್, ಎರಡೂ ತಂಡಗಳ ನಡುವಣ ಕದನ ಫೈನಲ್ ಪಂದ್ಯಕ್ಕಿಂತ ಕಡಿಮೆಯಿಲ್ಲ. ಯಾವುದೇ ಪಂದ್ಯಕ್ಕೂ ಇಂತಹದೊಂದು ಹೈಪ್ ಕಂಡುಬಂದಿಲ್ಲ. ಹೀಗಾಗಿ ಭಾರತ-ಪಾಕ್ ನಡುವಣ ಕದನ ಮತ್ತಷ್ಟು ರೋಚಕತೆಯಿಂದ ಕೂಡಿರಲಿದೆ ಎಂದಿದ್ದಾರೆ.
ಟಿ20 ವಿಶ್ವಕಪ್‌ನಲ್ಲಿ, ಭಾರತ ಮತ್ತು ಪಾಕಿಸ್ತಾನದ ತಂಡಗಳ ನಡುವೆ ಒಟ್ಟು 5 ಪಂದ್ಯಗಳು ನಡೆದಿವೆ. ಪ್ರತಿ ಬಾರಿಯೂ ಭಾರತ ತಂಡ ಗೆದ್ದಿದೆ. 2007 ರ ಟಿ20 ವಿಶ್ವಕಪ್‌ನ ಫೈನಲ್‌ನಲ್ಲಿ ಎರಡೂ ತಂಡಗಳು ಮುಖಾಮುಖಿಯಾಗಿದ್ದವು. ಅದರಲ್ಲಿ ಟೀಮ್ ಇಂಡಿಯಾ ಗೆದ್ದು ಚಾಂಪಿಯನ್ ಪಟ್ಟಕ್ಕೇರಿದ್ದು ವಿಶೇಷ.
ಇದನ್ನೂ ಓದಿ: T20 World Cup 2021: ಟಿ20 ಕ್ರಿಕೆಟ್ನಲ್ಲಿ ನಂಬರ್ 1 ಬ್ಯಾಟರ್ ಯಾರು ಗೊತ್ತಾ?
ಇದನ್ನೂ ಓದಿ:T20 World Cup 2021: ಟಿ20 ವಿಶ್ವಕಪ್ ಗೆದ್ದವರಿಗೆ ಸಿಗೋ ಹಣವೆಷ್ಟು? ಸೋತರೆ ಸಿಗೋದೆಷ್ಟು?
ಇದನ್ನೂ ಓದಿ: T20 World Cup Winners: ಟಿ20 ವಿಶ್ವಕಪ್‌ನಲ್ಲಿ ಯಾರು ವಿನ್ನರ್, ಯಾರು ರನ್ನರ್: ಇಲ್ಲಿದೆ ಸಂಪೂರ್ಣ ಪಟ್ಟಿ
(t20 world cup india can win the title says inzamam ul haq)
Published On - 10:46 am, Thu, 21 October 21