IND vs NZ, World Cup Semi Final: ರಾತ್ರೋರಾತ್ರಿ ವಾಂಖೆಡೆ ಪಿಚ್ ಬದಲಾವಣೆ: ಭಾರತ-ನ್ಯೂಝಿಲೆಂಡ್ ಸೆಮಿಫೈನಲ್‌ಗೂ ಮುನ್ನ ದೊಡ್ಡ ಆರೋಪ

|

Updated on: Nov 15, 2023 | 12:17 PM

Mumbai’s Wankhede Stadium Pitch Controversy: ವಾಂಖೆಡೆ ಪಿಚ್‌ನಿಂದ ಹುಲ್ಲು ತೆಗೆಯುವಂತೆ ಮುಂಬೈ ಕ್ಯುರೇಟರ್‌ಗೆ ಭಾರತೀಯ ಮ್ಯಾನೇಜ್‌ಮೆಂಟ್ ಸೂಚನೆ ನೀಡಿದೆ. ಈ ಬಗ್ಗೆ ಮುಂಬೈ ಕ್ರಿಕೆಟ್ ಸಂಸ್ಥೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅವರ ಪ್ರಕಾರ ಮುಂಬೈ ತಲುಪುವ ಮೊದಲೇ ಭಾರತ ತಂಡದಿಂದ ನಿಧಾನಗತಿಯ ಪಿಚ್ ಸಿದ್ಧಪಡಿಸುವಂತೆ ಸಂದೇಶ ಬಂದಿತ್ತು.

IND vs NZ, World Cup Semi Final: ರಾತ್ರೋರಾತ್ರಿ ವಾಂಖೆಡೆ ಪಿಚ್ ಬದಲಾವಣೆ: ಭಾರತ-ನ್ಯೂಝಿಲೆಂಡ್ ಸೆಮಿಫೈನಲ್‌ಗೂ ಮುನ್ನ ದೊಡ್ಡ ಆರೋಪ
Wankhede Stadium Pitch Controversy
Follow us on

2023ರ ವಿಶ್ವಕಪ್‌ನ ಮೊದಲ ಸೆಮಿಫೈನಲ್‌ನಲ್ಲಿ ಇಂದು ಭಾರತ ಮತ್ತು ನ್ಯೂಝಿಲೆಂಡ್ (India vs New Zealand) ತಂಡಗಳು ಸ್ಪರ್ಧಿಸುತ್ತಿವೆ. ಮುಂಬೈನ ಪ್ರಸಿದ್ಧ ವಾಂಖೆಡೆ ಸ್ಟೇಡಿಯಂನಲ್ಲಿ ಈ ಹೈವೋಲ್ಟೇಜ್ ಪಂದ್ಯ ನಡೆಯುತ್ತಿದ್ದು, ಮ್ಯಾಚ್ ಆರಂಭಕ್ಕೂ ಮುನ್ನವೇ ಪಿಚ್‌ ಕುರಿತು ದೊಡ್ಡ ಪ್ರಶ್ನೆ ಎದ್ದಿದೆ. ವಾಂಖೆಡೆ ಪಿಚ್‌ನ ಸ್ವರೂಪವನ್ನು ರಾತ್ರೋರಾತ್ರಿ ಬದಲಾಯಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ವಾಂಖೆಡೆ ಸ್ಟೇಡಿಯಂ ಪಿಚ್ ಅನ್ನು ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಸೂಚನೆಯ ಮೇರೆಗೆ ಬದಲಾಯಿಸಲಾಗಿದೆ ಎಂದು ವರದಿಗಳಾಗಿದೆ.

ಬೆಂಗಳೂರಿನಲ್ಲಿ ನೆದರ್ಲೆಂಡ್ಸ್ ವಿರುದ್ಧ ಪಂದ್ಯವನ್ನು ಆಡಿದ ನಂತರ, ಟೀಮ್ ಇಂಡಿಯಾ ನಿಧಾನಗತಿಯ ಟ್ರ್ಯಾಕ್ ಅನ್ನು ಸಿದ್ಧಪಡಿಸುವಂತೆ ವಾಂಖೆಡೆಯ ಪಿಚ್ ಕ್ಯುರೇಟರ್ ಅನ್ನು ಕೇಳಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ವಾಂಖೆಡೆ ಪಿಚ್‌ನಿಂದ ಹುಲ್ಲು ತೆಗೆಯುವಂತೆ ಮುಂಬೈ ಕ್ಯುರೇಟರ್‌ಗೆ ಭಾರತೀಯ ಮ್ಯಾನೇಜ್‌ಮೆಂಟ್ ಸೂಚನೆ ನೀಡಿದೆ. ಈ ಬಗ್ಗೆ ಮುಂಬೈ ಕ್ರಿಕೆಟ್ ಸಂಸ್ಥೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅವರ ಪ್ರಕಾರ, ಮುಂಬೈ ತಲುಪುವ ಮೊದಲೇ ಭಾರತ ತಂಡದಿಂದ ನಿಧಾನಗತಿಯ ಪಿಚ್ ಸಿದ್ಧಪಡಿಸುವಂತೆ ಸಂದೇಶ ಬಂದಿತ್ತು ಎಂದು ಎಂಸಿಎ ಮೂಲಗಳು ತಿಳಿಸಿದೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

Inzamam ul Haq: ಹರ್ಭಜನ್ ಇಸ್ಲಾಂಗೆ ಮತಾಂತರವಾಗಲು ಹತ್ತಿರವಾಗಿದ್ದರು ಎಂದ ಇಂಝಮಾಮ್: ಟರ್ಬನೇಟರ್ ಕೊಟ್ಟ ಸ್ಪಷ್ಟನೆ ಏನು?

ಇದನ್ನೂ ಓದಿ
ಭಾರತ-ನ್ಯೂಝಿಲೆಂಡ್ ಸೆಮಿಫೈನಲ್ ಪಂದ್ಯ ವೀಕ್ಷಿಸಲು ಹೋಗುವ ಮುನ್ನ ಎಚ್ಚರ: ಈ ವ
ಗನ್, ಗ್ರೆನೇಡ್ ತೋರಿಸಿ ಟ್ವೀಟ್: IND vs NZ ಪಂದ್ಯಕ್ಕೆ ಉಗ್ರರ ಸಂಚು?
ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಿಂದಲೂ ಹೊರಬಿದ್ದ ಹಾರ್ದಿಕ್ ಪಾಂಡ್ಯ
ಐಶ್ವರ್ಯಾ ರೈ ಜೊತೆ ಮದುವೆ ಆಗಬೇಕು, ಮಗು ಬೇಕಂದ್ರೆ ಆಗುತ್ತಾ?: ಪಾಕ್ ಆಟಗಾರ

ರಾತ್ರೋರಾತ್ರಿ ಮುಂಬೈ ಪಿಚ್ ಬದಲಾಗಿದೆಯೇ?:

ತವರಿನ ತಂಡಗಳು ತಮಗೆ ಬೇಕಾದಂತೆ ಪಿಚ್ ಅನ್ನು ಸಿದ್ಧಪಡಿಸಲು ಹೇಳುವುದು ಮಾಮೂಲಿ. ಆದರೆ, ಅದು ದ್ವಿಪಕ್ಷೀಯ ಸರಣಿ ಆಗಿದ್ದಾಗ ಮಾತ್ರ. ಇಲ್ಲಿ ನಡೆಯುತ್ತಿರುವುದು ಐಸಿಸಿಯ ವಿಶ್ವಕಪ್ ಟೂರ್ನಿ. ಇದು ಐಸಿಸಿ ಟೂರ್ನಿಯೇ ಹೊರತು ಬಿಸಿಸಿಐ ಟೂರ್ನಿಯಲ್ಲ. ವಿಶ್ವಕಪ್ ಸಮಯದಲ್ಲಿ ಐಸಿಸಿ ತನ್ನದೇ ಆದ ಪಿಚ್ ಕ್ಯುರೇಟರ್ ಅನ್ನು ಹೊಂದಿದೆ. ಇದೀಗ ಇಂತಹ ಪರಿಸ್ಥಿತಿಯಲ್ಲಿ ಭಾರತ ತಂಡದ ಮ್ಯಾನೇಜ್‌ಮೆಂಟ್‌ನ ಒತ್ತಾಯದ ಮೇರೆಗೆ ಮುಂಬೈನ ವಾಂಖೆಡೆ ಪಿಚ್‌ ಅನ್ನು ಬದಲಾಯಿಸಲಾಗಿದೆ. ಪಿಚ್‌ನಿಂದ ಹುಲ್ಲು ತೆಗೆದು ಈರೀತಿ ಮಾಡುವುದು ಎಷ್ಟರ ಮಟ್ಟಿಗೆ ಸರಿ. ಇದರ ಬಗ್ಗೆ ಐಸಿಸಿಗೆ ಮಾಹಿತಿ ಇಲ್ಲವೇ? ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಿದ್ದಾರೆ.

ವಿಶ್ವಕಪ್ ಆರಂಭಕ್ಕೂ ಮುನ್ನವೇ ಟೀಮ್ ಇಂಡಿಯಾ ಮನವಿ ಮಾಡಿತ್ತು?:

ವಿಶ್ವಕಪ್‌ಗೂ ಮುನ್ನ ಭಾರತ ತಂಡ ತನ್ನ ಪಂದ್ಯಗಳನ್ನು ನಿಧಾನಗತಿಯ ಪಿಚ್‌ಗಳಲ್ಲಿ ನಡೆಸುವಂತೆ ಮನವಿ ಮಾಡಿತ್ತು ಎಂಬ ಸುದ್ದಿಯೂ ಇದೆ. ಏಕೆಂದರೆ ತವರಿನಲ್ಲಿ ನಿಧಾನಗತಿಯ ಪಿಚ್‌ಗಳಲ್ಲಿ ಟೀಮ್ ಇಂಡಿಯಾ ದಾಖಲೆಗಳು ಉತ್ತಮವಾಗಿವೆ. ಅಲ್ಲದೆ ಸೋಮವಾರ ಮುಂಬೈ ತಲುಪಿದ ನಂತರ ಟೀಮ್ ಇಂಡಿಯಾದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು ವಿಶ್ರಾಂತಿ ಕೂಡ ತೆಗೆದುಕೊಳ್ಳದೆ ನೇರವಾಗಿ ಪಿಚ್ ನೋಡಲು ತೆರೆಳಿದ್ದರು. ಅಭ್ಯಾಸ ಅವಧಿ ಮುಗಿದ ನಂತರ ಭಾರತದ ಪಿಚ್ ಕ್ಯುರೇಟರ್‌ಗೆ ಆ್ಯಂಟಿ ಡ್ಯೂ ಕೆಮಿಕಲ್ ಸಿಂಪಡಿಸುವಂತೆ ಹೇಳಿತ್ತು ಎಂಬ ಸುದ್ದಿಯೂ ಇದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 12:14 pm, Wed, 15 November 23