ಪಾಕಿಸ್ತಾನ ಹಾಗೂ ಶ್ರೀಲಂಕಾದಲ್ಲಿ ಆಗಸ್ಟ್ 30 ರಿಂದ ಆರಂಭವಾಗಲಿರುವ ಏಷ್ಯಾಕಪ್ 2023 (Asia Cup 2023) ಟೂರ್ನಿಗೆ ಭಾರತ ಕ್ರಿಕೆಟ್ ತಂಡದ ತಯಾರಿ ಭರ್ಜರಿ ಆಗಿ ಸಾಗುತ್ತಿದೆ. ಬೆಂಗಳೂರಿನ ಹೊರವಲಯದಲ್ಲಿರುವ ಆಲೂರಿನಲ್ಲಿ ಬೀಡುಬಿಟ್ಟಿರುವ ಭಾರತ ತಂಡದ ಆಟಗಾರರು ಕಠಿಣ ಅಭ್ಯಾಸ ನಡೆಸುತ್ತಿದ್ದಾರೆ. ಒಟ್ಟು 6-ದಿನಗಳ ಕಾಲ ಟೀಮ್ ಇಂಡಿಯಾಕ್ಕೆ ಏಷ್ಯಾಕಪ್ ಶಿಬಿರ ಏರ್ಪಡಿಸಲಾಗಿದ್ದು, 3ನೇ ದಿನದಂದು ನಾಯಕ ರೋಹಿತ್ ಶರ್ಮಾ ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ನೇತೃತ್ವದಲ್ಲಿ ಬ್ಯಾಟಿಂಗ್ ಪ್ರಯೋಗವನ್ನು ನಡೆಸಲಾಯಿತು.
ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್ 2 ನೇ ದಿನದಂದು ಒಟ್ಟಿಗೆ ಬ್ಯಾಟಿಂಗ್ ಮಾಡಿದರೆ, ಮೂರನೇ ದಿನ ರೋಹಿತ್ ಮತ್ತು ಕೆಎಲ್ ರಾಹುಲ್ ಜೊತೆಯಾಗಿ ಪ್ರ್ಯಾಕ್ಟೀಸ್ ನಡೆಸುತ್ತಿರುವುದು ಕಂಡುಬಂತು. ಇದರ ನಡುವೆ, ವಿರಾಟ್ ಕೊಹ್ಲಿ ಸ್ಪಿನ್ನರ್ಗಳ ವಿರುದ್ಧ ಹೆಚ್ಚು ಅಭ್ಯಾಸ ನಡೆಸಿದರು. ನೆಟ್ಸ್‌ನಲ್ಲಿ ಸ್ಪಿನ್ ಬೌಲರ್‌ಗಳನ್ನು ಎದುರಿಸಿ ಕೆಲವು ಸ್ವೀಪ್ ಶಾಟ್‌ಗಳನ್ನು ಆಡಿದರು. 34 ವರ್ಷದ ವರುಣ್ ಚಕ್ರವರ್ತಿ, ಹೃತಿಕ್ ಶೋಕೀನ್ ಮತ್ತು ರಾಹುಲ್ ಚಹಾರ್ ವಿರುದ್ಧ ಕೊಹ್ಲಿ ನೆಟ್ಸ್‌ನಲ್ಲಿ ಬ್ಯಾಟ್ ಮಾಡುತ್ತಿರುವುದು ಕಂಡುಬಂತು.
KL Rahul: ಎಲ್ಲಾ ಗೊಂದಲಗಳಿಗೆ ತೆರೆ ಎಳೆದ ಕೆಎಲ್ ರಾಹುಲ್
ಸ್ಪಿನ್ನರ್ಗಳ ವಿರುದ್ಧ ಆಡಿದ ಬಳಿಕ ಕೊಹ್ಲಿ ಅವರು ಕೆಲಹೊತ್ತು ವಿಶ್ರಾಂತಿ ತೆಗೆದುಕೊಂಡು ಎಡಗೈ ವೇಗಿ ಅನಿಕೇತ್ ಚೌಧರಿ ವಿರುದ್ಧ ವೇಗದ ಬೌಲಿಂಗ್ ಮೂಲಕ ಅಭ್ಯಾಸ ನಡೆಸಿದರು. ರೋಹಿತ್ ಶರ್ಮಾ ಕೂಡ ಶಾಹಿನ್ ಅಫ್ರಿದಿ ವಿರುದ್ಧ ತಮ್ಮನ್ನು ತಾವು ಸಿದ್ಧಪಡಿಸಿಕೊಳ್ಳಲು ಎತ್ತರದ ವೇಗಿ ಅನಿಕೇತ್ ವಿರುದ್ಧ ನೆಟ್ಸ್‌ನಲ್ಲಿ ಸುದೀರ್ಘ ಪ್ರ್ಯಾಕ್ಟೀಸ್ ನಡೆಸಿದರು.
3 ನೇ ದಿನದ ಶಿಬಿರವು ಭಾರತೀಯ ಕ್ರಿಕೆಟ್ ತಂಡದ ಅಭಿಮಾನಿಗಳಿಗೆ ಕೆಲ ಶುಭ ಸುದ್ದಿಗಳನ್ನು ನೀಡಿದೆ. ಏಷ್ಯಾಕಪ್ ಶಿಬಿರದ 2ನೇ ದಿನದಂದು ನೆಟ್ಸ್‌ನಲ್ಲಿ ಬ್ಯಾಟ್ ಮಾಡಿದ ಕೆಎಲ್ ರಾಹುಲ್, ಶನಿವಾರ ವಿಕೆಟ್ ಕೀಪಿಂಗ್ ಗ್ಲೌಸ್ ತೊಟ್ಟು ಕ್ಯಾಚಿಂಗ್ ಪ್ರ್ಯಾಕ್ಟೀಸ್ ನಡೆಸುತ್ತಿರುವುದು ಕಂಡುಬಂತು. ಹೀಗಿದ್ದರೂ ರಾಹುಲ್ ಪಾಕಿಸ್ತಾನದ ವಿರುದ್ಧ ಭಾರತದ ಏಷ್ಯಾಕಪ್ ಆರಂಭಿಕ ಪಂದ್ಯದಲ್ಲಿ ಆಡುವುದು ಅನುಮಾನವಾಗಿದೆ.
ವಿರಾಟ್, ರೋಹಿತ್, ಮತ್ತು ಕೆಎಲ್ ರಾಹುಲ್ ಹೊರತುಪಡಿಸಿ, ಶ್ರೇಯಸ್ ಅಯ್ಯರ್ ಮತ್ತು ಆಲ್ರೌಂಡರ್ ಶಾರ್ದೂಲ್ ಠಾಕೂರ್ ಕೂಡ ನೆಟ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿದ್ದರು. ಶಾರ್ದೂಲ್ ಕೆಲ ಬಿಗ್ ಶಾಟ್ ಮೂಲಕ ಗಮನ ಸೆಳೆದರು. ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಮತ್ತು ಕುಲ್ದೀಪ್ ಯಾದವ್ ಆಲೂರಿನಲ್ಲಿನ ನೆಟ್ಸ್‌ನಲ್ಲಿ ಬೌಲಿಂಗ್ ಅಭ್ಯಾಸ ನಡೆಸಿದರು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ