Maharaja Trophy T20 2023: ಸೆಮೀಸ್ಗೆ ಎಂಟ್ರಿ ಕೊಟ್ಟ ಮೈಸೂರು ವಾರಿಯರ್ಸ್
Maharaja Trophy T20 2023: 154 ರನ್ಗಳ ಸುಲಭ ಗುರಿ ಪಡೆದ ಮೈಸೂರು ವಾರಿಯರ್ಸ್ ತಂಡದ ಆರಂಭಿಕರು ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದರು. ಕಾರ್ತಿಕ್ 14 ಎಸೆತಗಳಲ್ಲಿ 20 ರನ್ಗಳಿಸಿ ಔಟಾದರೆ, ಮತ್ತೊಂದೆಡೆ ರವಿಕುಮಾರ್ ಸಮರ್ಥ್ 50 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 5 ಫೋರ್ಗಳೊಂದಿಗೆ ಅಜೇಯ 62 ರನ್ ಬಾರಿಸಿದರು.
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಮಹಾರಾಜ ಟ್ರೋಫಿ ಟಿ20 ಟೂರ್ನಿಯ 28ನೇ ಪಂದ್ಯದಲ್ಲಿ ಮೈಸೂರು ವಾರಿಯರ್ಸ್ ತಂಡವು ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಕರುಣ್ ನಾಯರ್ ಪಡೆ ಸೆಮಿಫೈನಲ್ ಆಡುವುದನ್ನು ಖಚಿತಪಡಿಸಿಕೊಂಡಿದೆ. ಇದಕ್ಕೂ ಮುನ್ನ ಈ ಪಂದ್ಯದಲ್ಲಿ ಟಾಸ್ ಜಯಿಸಿದ ಮೈಸೂರು ವಾರಿಯರ್ಸ್ ತಂಡವು ಮೊದಲು ಫೀಲ್ಡಿಂಗ್ ಮಾಡುವ ನಿರ್ಧಾರ ತೆಗೆದುಕೊಂಡಿತು.
ಇತ್ತ ಮೊದಲ ಇನಿಂಗ್ಸ್ ಆರಂಭಿಸಿದ ಗುಲ್ಬರ್ಗಾ ಮಿಸ್ಟಿಕ್ಸ್ ತಂಡಕ್ಕೆ ಎಲ್ಆರ್ ಚೇತನ್ (34) ಉತ್ತಮ ಆರಂಭ ಒದಗಿಸಿದ್ದರು. ಹಾಗೆಯೇ ಮ್ಯಾಕ್ನೀಲ್ ನೊರೊನ್ಹಾ 25 ರನ್ಗಳ ಕೊಡುಗೆ ನೀಡಿದ್ದರು. ಇದಾಗ್ಯೂ ಮಧ್ಯಮ ಕ್ರಮಾಂಕದ ಬ್ಯಾಟರ್ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ.
ಅಂತಿಮ ಹಂತದಲ್ಲಿ ಶ್ರೀನಿವಾಸ್ ಶರತ್ ಬಾರಿಸಿದ 26 ರನ್ಗಳ ನೆರವಿನೊಂದಿಗೆ ಗುಲ್ಬರ್ಗ ಮಿಸ್ಟಿಕ್ಸ್ ತಂಡವು 7 ವಿಕೆಟ್ ನಷ್ಟಕ್ಕೆ 153 ರನ್ ಕಲೆಹಾಕಿತು.
154 ರನ್ಗಳ ಸುಲಭ ಗುರಿ ಪಡೆದ ಮೈಸೂರು ವಾರಿಯರ್ಸ್ ತಂಡದ ಆರಂಭಿಕರು ಎಚ್ಚರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದರು. ಕಾರ್ತಿಕ್ 14 ಎಸೆತಗಳಲ್ಲಿ 20 ರನ್ಗಳಿಸಿ ಔಟಾದರೆ, ಮತ್ತೊಂದೆಡೆ ರವಿಕುಮಾರ್ ಸಮರ್ಥ್ 50 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 5 ಫೋರ್ಗಳೊಂದಿಗೆ ಅಜೇಯ 62 ರನ್ ಬಾರಿಸಿದರು.
ಇನ್ನು ಕರುಣ್ ನಾಯರ್ 23 ರನ್ಗಳ ಕೊಡುಗೆ ನೀಡಿದರೆ, ಲಂಕೇಶ್ ಕೆಎಸ್ ಅಜೇಯ 39 ರನ್ ಬಾರಿಸಿದರು. ಈ ಮೂಲಕ ಮೈಸೂರು ವಾರಿಯರ್ಸ್ ತಂಡವು 18 ಓವರ್ಗಳಲ್ಲಿ 2 ವಿಕೆಟ್ ಕಳೆದುಕೊಂಡು 154 ರನ್ ಕಲೆಹಾಕಿ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.
ಈ ಗೆಲುವಿನೊಂದಿಗೆ ಮೈಸೂರು ವಾರಿಯರ್ಸ್ ತಂಡವು ಸೆಮಿಫೈನಲ್ ಪ್ರವೇಶಿಸಿದ 2ನೇ ತಂಡ ಎನಿಸಿಕೊಂಡಿದೆ. ಇದಕ್ಕೂ ಮುನ್ನ ಹುಬ್ಬಳ್ಳಿ ಟೈಗರ್ಸ್ ತಂಡವು ನಾಕೌಟ್ ಹಂತಕ್ಕೇರಿತ್ತು.
ಗುಲ್ಬರ್ಗ ಮಿಸ್ಟಿಕ್ಸ್ ಪ್ಲೇಯಿಂಗ್ 11: ಎಲ್ ಆರ್ ಚೇತನ್ , ಆದರ್ಶ್ ಪ್ರಜ್ವಲ್ , ಶ್ರೀನಿವಾಸ್ ಶರತ್ ( ವಿಕೆಟ್ ಕೀಪರ್ ) , ಸ್ಮರಣ್ ಆರ್ , ಅಮಿತ್ ವರ್ಮಾ , ಮ್ಯಾಕ್ನೀಲ್ ಹ್ಯಾಡ್ಲಿ ನೊರೊನ್ಹಾ , ಅನೀಶ್ ಕೆ ವಿ , ವಿಜಯ್ ಕುಮಾರ್ ವೈಶಾಕ್ (ನಾಯಕ) , ಅವಿನಾಶ್ ಡಿ , ಹಾರ್ದಿಕ್ ರಾಜ್ , ಶರಣ್ ಗೌಡ.
ಇದನ್ನೂ ಓದಿ: ಗುರ್ಬಾಝ್ ಅಬ್ಬರಕ್ಕೆ ಧೋನಿ ದಾಖಲೆ ಉಡೀಸ್
ಮೈಸೂರು ವಾರಿಯರ್ಸ್ ಪ್ಲೇಯಿಂಗ್ 11: ಎಸ್ಯು ಕಾರ್ತಿಕ್ , ಕರುಣ್ ನಾಯರ್ (ನಾಯಕ) , ಲಂಕೇಶ್ ಕೆಎಸ್ , ಶೋಯೆಬ್ ಮ್ಯಾನೇಜರ್ , ಶಿವಕುಮಾರ್ ರಕ್ಷಿತ್ ( ವಿಕೆಟ್ ಕೀಪರ್ ) , ಮನೋಜ್ ಭಾಂಡಗೆ , ಜಗದೀಶ ಸುಚಿತ್ , ಆದಿತ್ಯ ಮಣಿ , ಮೋನಿಶ್ ರೆಡ್ಡಿ , ಶಶಿ ಕುಮಾರ್ ಕೆ , ಕುಶಾಲ್ ವಾಧ್ವಾನಿ.