ಏಷ್ಯಾಕಪ್ ಪಾಕ್ ತಂಡದಲ್ಲಿ ಮಹತ್ವದ ಬದಲಾವಣೆ: ಎಡಗೈ ದಾಂಡಿಗ ಎಂಟ್ರಿ
Asia Cup 2023: ಸೆಪ್ಟೆಂಬರ್ 2 ರಂದು ಪಾಕಿಸ್ತಾನ್ ವಿರುದ್ಧ ಕಣಕ್ಕಿಳಿಯುವ ಮೂಲಕ ಟೀಮ್ ಇಂಡಿಯಾ ಏಷ್ಯಾಕಪ್ ಅಭಿಯಾನ ಆರಂಭಿಸಲಿದೆ. ಈ ಪಂದ್ಯವು ಶ್ರೀಲಂಕಾದಲ್ಲಿ ಕ್ಯಾಂಡಿಯಲ್ಲಿ ನಡೆಯಲಿದೆ. ಅಂದರೆ ಮೊದಲ ಪಂದ್ಯದ ಬಳಿಕ ಪಾಕ್ ತಂಡವು ತನ್ನ 2ನೇ ಪಂದ್ಯಕ್ಕಾಗಿ ಶ್ರೀಲಂಕಾಗೆ ಆಗಮಿಸಲಿದೆ.
ಏಷ್ಯಾಕಪ್ಗೆ ಆಯ್ಕೆ ಮಾಡಲಾಗಿದ್ದ ಪಾಕಿಸ್ತಾನ್ ತಂಡದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಈ ಹಿಂದೆ 17 ಸದಸ್ಯರ ಬಳಗಕ್ಕೆ ಆಯ್ಕೆಯಾಗಿದ್ದ ತಯ್ಯಬ್ ತಾಹಿರ್ ಅವರನ್ನು ಮೀಸಲು ಆಟಗಾರನ ಪಟ್ಟಿಗೆ ಸೇರಿಸಲಾಗಿದ್ದು, ಅವರ ಸ್ಥಾನದಲ್ಲಿ ಯುವ ಎಡಗೈ ದಾಂಡಿಗ ಸೌದ್ ಶಕೀಲ್ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ.
ಸದ್ಯ ಶ್ರೀಲಂಕಾದಲ್ಲಿ ಅಫ್ಘಾನಿಸ್ತಾನ್ ವಿರುದ್ಧ ಏಕದಿನ ಸರಣಿ ಆಡುತ್ತಿರುವ ಪಾಕಿಸ್ತಾನ್ ತಂಡವು ಭಾನುವಾರ ಮುಲ್ತಾನ್‌ಗೆ ಹಿಂತಿರುಗಲಿದ್ದಾರೆ. ಅಲ್ಲದೆ ಮಂಗಳವಾರದಿಂದ ಅಭ್ಯಾಸಗಳನ್ನು ಆರಂಭಿಸಲಿದೆ ಎಂದು ತಿಳಿಸಲಾಗಿದೆ. ಆದರೆ ಇಲ್ಲಿ ತಯ್ಯಬ್ ತಾಹಿರ್ ಅವರನ್ನು ಮೀಸಲು ಸ್ಥಾನದಲ್ಲಿರಿಸಿ, ಸೌದ್ ಶಕೀಲ್ ಅವರನ್ನು ಯಾಕೆ ಆಯ್ಕೆ ಮಾಡಲಾಗಿದೆ ಎಂಬುದರ ಬಗ್ಗೆ ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್ ಸ್ಪಷ್ಟನೆ ನೀಡಿಲ್ಲ. ಇದಾಗ್ಯೂ ತಂಡದಲ್ಲಿ ಎಡಗೈ ದಾಂಡಿಗರ ಕೊರತೆಯನ್ನು ನೀಗಿಸಲು ಈ ಕ್ರಮ ಕೈಗೊಂಡಿರುವ ಸಾಧ್ಯತೆಯಿದೆ.
ಪಾಕ್ನಲ್ಲಿ ಮೊದಲ ಪಂದ್ಯ:
ಈ ಬಾರಿಯ ಏಷ್ಯಾಕಪ್ ಹೈಬ್ರಿಡ್ ಮಾದರಿಯಲ್ಲಿ ನಡೆಯಲಿದೆ. ಇಲ್ಲಿ 4 ಪಂದ್ಯಗಳು ಪಾಕಿಸ್ತಾನದಲ್ಲಿ ನಡೆದರೆ ಉಳಿದ ಪಂದ್ಯಗಳಿಗೆ ಶ್ರೀಲಂಕಾ ಆತಿಥ್ಯವಹಿಸಲಿದೆ. ಅದರಂತೆ ಆಗಸ್ಟ್ 30 ರಂದು ನಡೆಯಲಿರುವ ಮೊದಲ ಪಂದ್ಯದಲ್ಲಿ ಪಾಕಿಸ್ತಾನ್ ಹಾಗೂ ನೇಪಾಳ ತಂಡಗಳು ಮುಖಾಮುಖಿಯಾಗಲಿದೆ.
ಶ್ರೀಲಂಕಾದಲ್ಲಿ ಇಂಡೋ-ಪಾಕ್ ಕದನ:
ಸೆಪ್ಟೆಂಬರ್ 2 ರಂದು ಪಾಕಿಸ್ತಾನ್ ವಿರುದ್ಧ ಕಣಕ್ಕಿಳಿಯುವ ಮೂಲಕ ಟೀಮ್ ಇಂಡಿಯಾ ಏಷ್ಯಾಕಪ್ ಅಭಿಯಾನ ಆರಂಭಿಸಲಿದೆ. ಈ ಪಂದ್ಯವು ಶ್ರೀಲಂಕಾದಲ್ಲಿ ಕ್ಯಾಂಡಿಯಲ್ಲಿ ನಡೆಯಲಿದೆ. ಅಂದರೆ ಮೊದಲ ಪಂದ್ಯದ ಬಳಿಕ ಪಾಕ್ ತಂಡವು ತನ್ನ 2ನೇ ಪಂದ್ಯಕ್ಕಾಗಿ ಶ್ರೀಲಂಕಾಗೆ ಆಗಮಿಸಲಿದೆ.
ಇದನ್ನೂ ಓದಿ: Asia Cup 2022 Schedule: ಏಷ್ಯಾಕಪ್ ಸಂಪೂರ್ಣ ವೇಳಾಪಟ್ಟಿ ಹೀಗಿದೆ
ಏಷ್ಯಾಕಪ್ಗೆ ಪಾಕಿಸ್ತಾನ್ ತಂಡ:
ಬಾಬರ್ ಆಝಂ (ನಾಯಕ), ಶಾದಾಬ್ ಖಾನ್ (ಉಪನಾಯಕ), ಅಬ್ದುಲ್ಲಾ ಶಫೀಕ್, ಫಹೀಮ್ ಅಶ್ರಫ್, ಫಖರ್ ಝಮಾನ್, ಹ್ಯಾರಿಸ್ ರೌಫ್, ಇಫ್ತಿಕರ್ ಅಹ್ಮದ್, ಇಮಾಮ್-ಉಲ್-ಹಕ್, ಮೊಹಮ್ಮದ್ ಹ್ಯಾರಿಸ್ (ವಿಕೆಟ್ ಕೀಪರ್), ಮೊಹಮ್ಮದ್ ನವಾಝ್, ಮೊಹಮ್ಮದ್ ರಿಝ್ವಾನ್ (ವಿಕೆಟ್ ಕೀಪರ್), ಮೊಹಮ್ಮದ್ ವಾಸಿಮ್ ಜೂನಿಯರ್, ನಸೀಮ್ ಶಾ, ಸಲ್ಮಾನ್ ಅಲಿ ಅಘಾ, ಸೌದ್ ಶಕೀಲ್, ಶಾಹೀನ್ ಅಫ್ರಿದಿ ಮತ್ತು ಉಸಾಮಾ ಮಿರ್, ತಯ್ಯಬ್ ತಾಹಿರ್ (ಮೀಸಲು ಆಟಗಾರ).
ಏಷ್ಯಾಕಪ್ಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ (ಉಪನಾಯಕ), ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಪ್ರಸಿದ್ಧ್ ಕೃಷ್ಣ, ಸಂಜು ಸ್ಯಾಮ್ಸನ್ (ಮೀಸಲು ಆಟಗಾರ).