Asia Cup 2022 Schedule: ಏಷ್ಯಾಕಪ್ ಸಂಪೂರ್ಣ ವೇಳಾಪಟ್ಟಿ ಹೀಗಿದೆ

ASIA CUP 2022 Schedule: ಗ್ರೂಪ್​ ಸುತ್ತಿನಿಂದ ನಾಲ್ಕು ತಂಡಗಳು ಸೂಪರ್-4 ಗೆ ಅರ್ಹತೆ ಪಡೆಯಲಿದೆ. ಇದಾದ ಬಳಿಕ ಸೆಪ್ಟಂಬರ್ 3 ರಿಂದ ಸೂಪರ್-4 ಪಂದ್ಯಗಳು ಶುರುವಾಗಲಿದೆ.

Asia Cup 2022 Schedule: ಏಷ್ಯಾಕಪ್ ಸಂಪೂರ್ಣ ವೇಳಾಪಟ್ಟಿ ಹೀಗಿದೆ
ASIA CUP 2022 Schedule
Follow us
TV9 Web
| Updated By: ಝಾಹಿರ್ ಯೂಸುಫ್

Updated on:Aug 25, 2022 | 5:48 PM

ASIA CUP 2022 Schedule: ಏಷ್ಯನ್ ರಾಷ್ಟ್ರಗಳ ಕ್ರಿಕೆಟ್ ಕದನಕ್ಕಾಗಿ ಕೌಂಟ್​ ಡೌನ್ ಶುರುವಾಗಿದೆ. ಆಗಸ್ಟ್ 27 ರಿಂದ ಟಿ20 ಟೂರ್ನಿ ಶುರುವಾಗಲಿರುವ ಈ ಟೂರ್ನಿಯ ಮೊದಲ ಪಂದ್ಯದಲ್ಲಿ ಶ್ರೀಲಂಕಾ ಹಾಗೂ ಅಫ್ಘಾನಿಸ್ತಾನ್ ತಂಡಗಳು ಮುಖಾಮುಖಿಯಾಗಲಿದೆ. ಈ ಬಾರಿ ಏಷ್ಯಾಕಪ್ ಶ್ರೀಲಂಕಾದಲ್ಲಿ ನಡೆಯಬೇಕಿತ್ತು. ಆದರೆ ಲಂಕಾದಲ್ಲಿ ತಲೆದೂರಿರುವ ರಾಜಕೀಯ ಬಿಕ್ಕಟ್ಟಿನ ಕಾರಣ ಟೂರ್ನಿಯನ್ನು ಯುಎಇಗೆ ಶಿಫ್ಟ್ ಮಾಡಲಾಗಿದೆ. ಇದೇ ಕಾರಣದಿಂದ ಆತಿಥೇಯ ರಾಷ್ಟ್ರವಾಗಿ ಶ್ರೀಲಂಕಾ ಉದ್ಘಾಟನಾ ಪಂದ್ಯವಾಡುತ್ತಿದೆ.

ಇನ್ನು ಭಾರತ ತಂಡವು ಆಗಸ್ಟ್ 28 ರಂದು ಪಾಕಿಸ್ತಾನ್ ವಿರುದ್ದದ ಪಂದ್ಯದ ಮೂಲಕ ಏಷ್ಯಾಕಪ್ ಅಭಿಯಾನ ಆರಂಭಿಸಲಿದೆ. ಈ ಬಾರಿ ಟೂರ್ನಿಯಲ್ಲಿ ಒಟ್ಟು 6 ತಂಡಗಳಿದ್ದು, ಈ ಟೀಮ್​​ಗಳನ್ನು ಎರಡು ಗ್ರೂಪ್​ಗಳಾಗಿ ವಿಂಗಡಿಸಲಾಗಿದೆ. ಅದರಂತೆ ಮೊದಲ ಸುತ್ತಿನಲ್ಲಿ ಗ್ರೂಪ್​ ಪಂದ್ಯಗಳು ನಡೆಯಲಿದೆ. ಇದಾದ ಬಳಿಕ ಸೂಪರ್-4 ಪಂದ್ಯಗಳು ನಡೆಯಲಿದೆ. ಗ್ರೂಪ್ ಹಂತದಲ್ಲಿ 6 ಪಂದ್ಯಗಳು ನಡೆದರೆ, ಸೂಪರ್-4 ಹಂತದಲ್ಲಿ ಫೈನಲ್ ಸೇರಿ 7 ಪಂದ್ಯಗಳನ್ನು ನಡೆಯಲಿದೆ. ಅಂದರೆ ಈ ಬಾರಿಯ ಏಷ್ಯಾಕಪ್​ನಲ್ಲಿ ಒಟ್ಟು 13 ಪಂದ್ಯಗಳನ್ನು ಆಡಲಾಗುತ್ತದೆ.

ಏಷ್ಯಾ ಕಪ್ ತಂಡಗಳ ಗ್ರೂಪ್​:

ಇದನ್ನೂ ಓದಿ
Image
RCB ತಂಡದ ಮೊದಲ ಪ್ಲೇಯಿಂಗ್ ಇಲೆವೆನ್​ನಲ್ಲಿ ಯಾರೆಲ್ಲಾ ಇದ್ದರು ಗೊತ್ತಾ?
Image
Team India: ಟೀಮ್ ಇಂಡಿಯಾದ ಸರ್ವಶ್ರೇಷ್ಠ ಆರಂಭಿಕ ಆಟಗಾರ ಯಾರು ಗೊತ್ತಾ?
Image
Sanju Samson: ಧೋನಿ, ದ್ರಾವಿಡ್​ಗೂ ಸಾಧ್ಯವಾಗದ ದಾಖಲೆ ನಿರ್ಮಿಸಿದ ಸಂಜು ಸ್ಯಾಮ್ಸನ್
Image
T20 World Cup 2022: ಟಿ20 ವಿಶ್ವಕಪ್​ನಲ್ಲಿ ಕಣಕ್ಕಿಳಿಯುವ 16 ತಂಡಗಳು ಫೈನಲ್
  • ಗ್ರೂಪ್ ಎ ತಂಡಗಳು- ಭಾರತ, ಪಾಕಿಸ್ತಾನ, ಹಾಂಗ್​ ಕಾಂಗ್
  • ಗ್ರೂಪ್ ಬಿ ತಂಡಗಳು- ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ

ಸಂಪೂರ್ಣ ವೇಳಾಪಟ್ಟಿ ಹೀಗಿದೆ:

  1. ಆಗಸ್ಟ್ 27 – ಶ್ರೀಲಂಕಾ vs ಅಫ್ಘಾನಿಸ್ತಾನ- ದುಬೈ
  2. ಆಗಸ್ಟ್ 28 – ಭಾರತ vs ಪಾಕಿಸ್ತಾನ- ದುಬೈ
  3. ಆಗಸ್ಟ್ 30  – ಬಾಂಗ್ಲಾದೇಶ vs ಅಫ್ಘಾನಿಸ್ತಾನ- ಶಾರ್ಜಾ
  4. ಆಗಸ್ಟ್ 31  – ಭಾರತ vs ಹಾಂಗ್​ ಕಾಂಗ್- ದುಬೈ
  5. ಸೆಪ್ಟೆಂಬರ್ 1 – ಶ್ರೀಲಂಕಾ vs ಬಾಂಗ್ಲಾದೇಶ- ದುಬೈ
  6. ಸೆಪ್ಟೆಂಬರ್ 2 – ಪಾಕಿಸ್ತಾನ vs ಹಾಂಗ್​ ಕಾಂಗ್- ಶಾರ್ಜಾ

ಗ್ರೂಪ್​ ಸುತ್ತಿನಿಂದ ನಾಲ್ಕು ತಂಡಗಳು ಸೂಪರ್-4 ಗೆ ಅರ್ಹತೆ ಪಡೆಯಲಿದೆ. ಇದಾದ ಬಳಿಕ ಸೆಪ್ಟಂಬರ್ 3 ರಿಂದ ಸೂಪರ್-4 ಪಂದ್ಯಗಳು ಶುರುವಾಗಲಿದೆ.

ಸೂಪರ್- 4 ವೇಳಾಪಟ್ಟಿ:

  1. ಸೆಪ್ಟೆಂಬರ್ 3 – B1 vs B2- ಶಾರ್ಜಾ
  2. ಸೆಪ್ಟೆಂಬರ್ 4 – A1 vs A2- ದುಬೈ
  3. ಸೆಪ್ಟೆಂಬರ್ 6 – A1 vs B1- ದುಬೈ
  4. ಸೆಪ್ಟೆಂಬರ್ 7 – A2 vs B2- ದುಬೈ
  5. ಸೆಪ್ಟೆಂಬರ್ 8 – A1 vs B2- ದುಬೈ
  6. ಸೆಪ್ಟೆಂಬರ್ 9 – B1 vs- A2- ದುಬೈ
  7. ಸೆಪ್ಟೆಂಬರ್ 11 – ಫೈನಲ್ ಪಂದ್ಯ- ದುಬೈ

ಏಷ್ಯಾಕಪ್​ನಲ್ಲಿ ಭಾಗವಹಿಸುವ 6 ತಂಡಗಳ ಆಟಗಾರರ ಪಟ್ಟಿ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ.

Published On - 5:31 pm, Thu, 25 August 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ