2023ರ ಏಕದಿನ ವಿಶ್ವಕಪ್‌ನಲ್ಲಿ (ODI World Cup 2023) ಭಾರತ ತಂಡದ ನಾಯಕ ರೋಹಿತ್ ಶರ್ಮಾ (Rohit Sharma) ನಾಯಕತ್ವದಲ್ಲಿ ಟೀಂ ಇಂಡಿಯಾ (Team India) ಅದ್ಭುತ ಪ್ರದರ್ಶನ ನೀಡಿತ್ತು. ಆ ಟೂರ್ನಿಯಲ್ಲಿ ಸತತ 10 ಪಂದ್ಯಗಳನ್ನು ಗೆದ್ದಿದ್ದ ಟೀಂ ಇಂಡಿಯಾ ಅಂತಿಮ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು ಸೋಲನುಭವಿಸಬೇಕಾಯಿತು. ಇದಾದ ನಂತರ ರೋಹಿತ್ ಶರ್ಮಾ ಸುಮಾರು ಎರಡು ತಿಂಗಳ ಕಾಲ ಕ್ರಿಕೆಟ್‌ನಿಂದ ದೂರ ಉಳಿದಿದ್ದರು. ಎಲ್ಲರೂ ರೋಹಿತ್ ಶರ್ಮಾ ನಿವೃತ್ತಿಯ ಬಗ್ಗೆ ವದಂತಿಗಳನ್ನು ಹಬ್ಬಿಸಲು ಪ್ರಾರಂಭಿಸಿದ್ದರು. ಆದರೆ ಇದೆಲ್ಲವನ್ನು ಸುಳ್ಳು ಮಾಡಿದ್ದ ರೋಹಿತ್ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ತಂಡವನ್ನು ಮುನ್ನಡೆಸುವ ಮೂಲಕ ಮತ್ತೆ ಅಖಾಡಕ್ಕಿಳಿದಿದ್ದರು. ಅದರ ನಂತರ ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಯಲ್ಲಿ ಆಡುವ ಮೂಲಕ ನಿಯಮಿತ ಮಾದರಿಯಲ್ಲೂ ತನ್ನ ವಾಪಸಾತ್ತಿಯನ್ನು ರೋಹಿತ್ ಖಚಿತಪಡಿಸಿದ್ದರು.
ಇದೀಗ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಎಲ್ಲಾ ಪಂದ್ಯಗಳನ್ನು ಆಡಿದ ರೋಹಿತ್ ತಂಡ, 4-1 ಅಂತರದಲ್ಲಿ ಸರಣಿ ಗೆಲ್ಲುವಂತೆ ಮಾಡಿದರು. ಆದರೆ ಧರ್ಮಶಾಲಾದಲ್ಲಿ ಸರಣಿ ಗೆದ್ದು ಐದನೇ ಟೆಸ್ಟ್‌ನಲ್ಲಿ ಗೆಲುವು ದಾಖಲಿಸಿದ ನಂತರ ರೋಹಿತ್ ಶರ್ಮಾ ತಮ್ಮ ನಿವೃತ್ತಿಯ ಪ್ರಶ್ನೆಗೆ ಮೌನ ಮುರಿದಿದ್ದಾರೆ. ಪಂದ್ಯದ ನಂತರ ಜಿಯೋ ಸಿನಿಮಾದಲ್ಲಿ ರೋಹಿತ್ ಶರ್ಮಾ ನಿವೃತ್ತಿ ಕುರಿತು ಹೇಳಿಕೆ ನೀಡಿದ್ದು ತಾನು ಯಾವಾಗ ನಿವೃತ್ತಿಯಾಗುತ್ತೇನೆ ಎಂಬುದನ್ನೂ ತಿಳಿಸಿದ್ದಾರೆ.
IND vs ENG: ಭರ್ಜರಿ ಶತಕ ಸಿಡಿಸಿ ಬಾಬರ್, ಗೇಲ್ ದಾಖಲೆ ಮುರಿದ ರೋಹಿತ್ ಶರ್ಮಾ..!
ರೋಹಿತ್ ಶರ್ಮಾ ಅವರು ತಮ್ಮ ನಿವೃತ್ತಿಯ ಯೋಜನೆಯಲ್ಲಿ, ‘ ನನಗೆ ಇನ್ನು ಮುಂದೆ ಆಡಲು ಸಾಧ್ಯವಿಲ್ಲ ಎಂಬುದು ನನ್ನ ಅರಿವಿಗೆ ಬರುತ್ತದೋ, ಆ ದಿನ ನಾನು ಕ್ರಿಕೆಟ್‌ನಿಂದ ನಿವೃತ್ತಿ ಪಡೆಯುತ್ತೇನೆ. ಆದರೆ ಕಳೆದ ಎರಡು-ಮೂರು ವರ್ಷಗಳಲ್ಲಿ ನಾನು ನನ್ನ ಆಟವನ್ನು ಸುಧಾರಿಸಿದ್ದೇನೆ ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ. ಈ ಮೂಲಕ ಸದ್ಯಕ್ಕೆ ನಾನು ಕ್ರಿಕೆಟ್‌ನಿಂದ ದೂರ ಸರಿಯುವುದಿಲ್ಲ ಎಂಬುದನ್ನು ರೋಹಿತ್ ಖಚಿತಪಡಿಸಿದ್ದಾರೆ.
Rohit Sharma said, “if one day I wake up and feel I’m not good enough, I’ll step away from cricket. I feel I’ve bettered my game in the last 2-3 years”. (JioCinema). pic.twitter.com/uffoKocu2v
— Mufaddal Vohra (@mufaddal_vohra) March 9, 2024
ರೋಹಿತ್ ಶರ್ಮಾ ಅವರ ವೃತ್ತಿಜೀವನದ ಬಗ್ಗೆ ಮಾತನಾಡುವುದಾದರೆ, ಅವರು ಇಲ್ಲಿಯವರೆಗೆ 59 ಟೆಸ್ಟ್, 262 ಏಕದಿನ ಮತ್ತು 151 ಟಿ20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಅವರು ಟೆಸ್ಟ್‌ನಲ್ಲಿ 12 ಶತಕ ಮತ್ತು 17 ಅರ್ಧ ಶತಕಗಳನ್ನು ಒಳಗೊಂಡಂತೆ 4138 ರನ್‌ಗಳನ್ನು ಕಲೆ ಹಾಕಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ 31 ಶತಕ ಮತ್ತು 55 ಅರ್ಧ ಶತಕಗಳೊಂದಿಗೆ 10709 ರನ್ ಗಳಿಸಿದ್ದಾರೆ. ಅಂತಾರಾಷ್ಟ್ರೀಯ ಟಿ20ಯಲ್ಲಿ ರೋಹಿತ್ 5 ಶತಕ ಹಾಗೂ 29 ಅರ್ಧ ಶತಕಗಳೊಂದಿಗೆ 3974 ರನ್ ಗಳಿಸಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ