IND vs NZ: 92 ವರ್ಷಗಳ ಇತಿಹಾಸವನ್ನು ಬದಲಿಸುತ್ತಾ ಮುಂಬೈ ಟೆಸ್ಟ್ಟ್? ಫ್ಯಾನ್ಸ್​ಗೆ ಹೆಚ್ಚಿದ ಆತಂಕ

|

Updated on: Oct 28, 2024 | 7:15 PM

IND vs NZ: ಭಾರತ ತಂಡವು ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು ಸೋತಿದೆ. ಮೊದಲ ಎರಡು ಪಂದ್ಯಗಳಲ್ಲಿ ಸೋಲು ಕಂಡ ನಂತರ, ಮೂರನೇ ಪಂದ್ಯದಲ್ಲಿ ಸೋತರೆ ಭಾರತ ತಂಡವು ಮೂರು ಪಂದ್ಯಗಳ ಸರಣಿಯಲ್ಲಿ ವೈಟ್ ವಾಶ್ ಅನುಭವಿಸಲಿದೆ. ಇದು ಭಾರತದ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅಪರೂಪದ ಘಟನೆಯಾಗಲಿದೆ. ಹೀಗಾಗಿ ಮುಂಬೈನಲ್ಲಿ ನಡೆಯಲಿರುವ ಕೊನೆಯ ಪಂದ್ಯ ನಿರ್ಣಾಯಕವಾಗಿದೆ.

IND vs NZ: 92 ವರ್ಷಗಳ ಇತಿಹಾಸವನ್ನು ಬದಲಿಸುತ್ತಾ ಮುಂಬೈ ಟೆಸ್ಟ್ಟ್? ಫ್ಯಾನ್ಸ್​ಗೆ ಹೆಚ್ಚಿದ ಆತಂಕ
ಟೀಂ ಇಂಡಿಯಾ
Follow us on

ಕಳೆದ ಎರಡು ವಾರಗಳಲ್ಲಿ ಟೀಂ ಇಂಡಿಯಾ ಎರಡು ಆಘಾತಕ್ಕಾರಿ ಸೋಲನ್ನು ಎದುರಿಸದೆ. ವಿಶ್ವದ ಬಲಿಷ್ಠ ಟೆಸ್ಟ್ ತಂಡ ಎಂದೇ ಬಿಂಬಿತವಾಗಿದ್ದ ಟೀಂ ಇಂಡಿಯಾ ಏಕಾಏಕಿ ತವರಿನಲ್ಲಿ ಟೆಸ್ಟ್ ಸರಣಿ ಸೋತಿದೆ. ಅದೂ ಕೂಡ ಇದುವರೆಗೆ ಭಾರತದಲ್ಲಿ ಕೇವಲ 2 ಟೆಸ್ಟ್ ಪಂದ್ಯಗಳನ್ನು ಗೆದ್ದಿದ್ದ ನ್ಯೂಜಿಲೆಂಡ್ ವಿರುದ್ಧ 2 ಪಂದ್ಯಗಳನ್ನು ಸೋತಿರುವುದಲ್ಲದೆ ಟೆಸ್ಟ್ ಸರಣಿಯನ್ನು ಕೈಚೆಲ್ಲಿದೆ. ಇದೀಗ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯನ್ನು ಕಳೆದುಕೊಂಡಿರುವ ಟೀಂ ಇಂಡಿಯಾ ಇದೀಗ ವೈಟ್ ವಾಶ್ ಮುಖಭಂಗಕ್ಕೆ ಒಳಗಾಗುವ ಆತಂಕದಲ್ಲಿದೆ. ಒಂದು ವೇಳೆ ಕಿವೀಸ್ ತಂಡ ಮೂರನೇ ಟೆಸ್ಟ್ ಪಂದ್ಯದಲ್ಲಿ ಭಾರತವನ್ನು ಸೋಲಿಸಿದರೆ, ಹೊಸ ಇತಿಹಾಸ ಬರೆಯಲಿದೆ. ಇತ್ತ ಟೀಂ ಇಂಡಿಯಾ ಕೊನೆಯ ಟೆಸ್ಟ್ ಪಂದ್ಯವನ್ನು ಸೋತರೆ, 92 ವರ್ಷಗಳ ಕ್ರಿಕೆಟ್ ಇತಿಹಾಸದಲ್ಲೇ ಎಂದೂ ಕಾಣದ ಮುಜುಗರಕ್ಕೆ ಒಳಗಾಗಲಿದೆ.

ವಾಸ್ತವವಾಗಿ ಟೀಂ ಇಂಡಿಯಾ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಹಲವು ಬಾರಿ ಟೆಸ್ಟ್ ಸರಣಿಯಲ್ಲಿ ಕ್ಲೀನ್ ಸ್ವೀಪ್ ಎದುರಿಸಿದೆ. ಆದರೆ ಇಲ್ಲಿಯವರೆಗೆ ತವರಿನಲ್ಲಿ ಮೂರು ಅಥವಾ ಹೆಚ್ಚಿನ ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಭಾರತ ತಂಡ ಈ ಮುಜುಗರಕ್ಕೆ ಒಳಗಾಗಿಲ್ಲ. ಅಂದರೆ ಇಲ್ಲಿಯವರೆಗೆ, ಭಾರತ ತಂಡವು ತವರು ನೆಲದಲ್ಲಿ ಸೋತ ಎಲ್ಲಾ ಟೆಸ್ಟ್ ಸರಣಿಗಳಲ್ಲಿ ಅದು ಎಂದಿಗೂ ಕ್ಲೀನ್ ಸ್ವೀಪ್ ಆಗಿಲ್ಲ. ಒಂದೋ ಟೆಸ್ಟ್ ಪಂದ್ಯವನ್ನು ಡ್ರಾ ಮಾಡಿಕೊಂಡಿದೆ ಅಥವಾ ಟೀಂ ಇಂಡಿಯಾ ಒಂದೋ ಎರಡೋ ಪಂದ್ಯವನ್ನು ಗೆದ್ದಿದೆ. ಆದರೆ 2000 ರಲ್ಲಿ ತವರಿನಲ್ಲಿ ನಡೆದಿದ್ದ ಟೆಸ್​ ಸರಣಿಯಲ್ಲಿ ದಕ್ಷಿಣ ಆಫ್ರಿಕಾ ತಂಡ, ಟೀಂ ಇಂಡಿಯಾವನ್ನು ಕ್ಲೀನ್ ಸ್ವೀಪ್ ಮಾಡಿತ್ತು. ಆದರೆ ಆ ಸರಣಿ ಕೇವಲ 2 ಪಂದ್ಯಗಳಾಗಿತ್ತು.

ಮುಂಬೈನಲ್ಲಿ ಇತಿಹಾಸ ಬದಲಾಗುತ್ತಾ?

ಇದೀಗ ಮೊದಲ ಬಾರಿಗೆ ವೈಟ್‌ವಾಶ್‌ ಮುಖಭಂಗಕ್ಕೆ ಒಳಗಾಗುವ ಆತಂಕಕ್ಕೆ ಟೀಂ ಇಂಡಿಯಾ ಒಳಗಾಗಿದೆ. ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಕೊನೆಯ ಟೆಸ್ಟ್ ಪಂದ್ಯ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಭಾರತ ಸೋತರೆ, ಕಳೆದ 92 ವರ್ಷಗಳ ಟೆಸ್ಟ್ ಇತಿಹಾಸದಲ್ಲಿ ಮೂರು ಅಥವಾ ಅದಕ್ಕಿಂತ ಹೆಚ್ಚು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 3-0 ಅಂತರದ ಸೋಲು ಅಂದರೆ ವೈಟ್ ವಾಶ ಮುಖಭಂಗಕ್ಕೆ ಒಳಗಾದ ಬೇಡದ ದಾಖಲೆಗೆ ಮೊದಲ ಬಾರಿಗೆ ಕೊರಳೊಡ್ಡಲಿದೆ.

ಸರಣಿಯ ಇಲ್ಲಿಯವರೆಗಿನ ವಿವರ

ಉಭಯ ತಂಡಗಳ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯ ಬೆಂಗಳೂರಿನಲ್ಲಿ ನಡೆದಿದ್ದು, ಈ ಪಂದ್ಯವನ್ನು ನ್ಯೂಜಿಲೆಂಡ್ 8 ವಿಕೆಟ್‌ಗಳಿಂದ ಗೆದ್ದುಕೊಂಡಿತ್ತು ಈ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ, ಟೀಂ ಇಂಡಿಯಾ ಕೇವಲ 46 ರನ್‌ಗಳಿಗೆ ಆಲೌಟ್ ಆಗಿತ್ತು. ಇದು ತವರಿನಲ್ಲಿ ತಂಡದ ಕಡಿಮೆ ಸ್ಕೋರ್ ಆಗಿತ್ತು. ನಂತರ ಮೂರು ದಿನಗಳ ಕಾಲ ನಡೆದ ಪುಣೆ ಟೆಸ್ಟ್‌ ಅನ್ನು ನ್ಯೂಜಿಲೆಂಡ್ 113 ರನ್‌ಗಳಿಂದ ಗೆದ್ದು, ಸರಣಿಯನ್ನು ತನ್ನದಾಗಿಸಿಕೊಂಡಿತು. ಈ ಮೂಲಕ 2012ರಿಂದ ಸತತ 18 ಸರಣಿಗಳನ್ನು ಗೆದ್ದುಕೊಂಡಿದ್ದ ಟೀಂ ಇಂಡಿಯಾ ಇದೇ ಮೊದಲ ಬಾರಿಗೆ ತವರಿನಲ್ಲಿ ಸರಣಿ ಸೋತ ಅವಮಾನಕ್ಕೆ ಒಳಗಾಯಿತು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ