ರಾಂಚಿಯ ಜೆಎಸ್ಸಿಎ ಅಂತರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ (India vs England) ನಡುವಣ ನಾಲ್ಕನೇ ಟೆಸ್ಟ್ ಪಂದ್ಯ ಅಂತಿಮ ಘಟ್ಟಕ್ಕೆ ಬಂದು ನಿಂತಿದೆ. ಮೂರನೇ ದಿನದಾಟದಲ್ಲಿ ಎಲ್ಲವೂ ಬದಲಾಗಿದ್ದು, ಆಂಗ್ಲರು ಕೇವಲ 145 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಟೀಮ್ ಇಂಡಿಯಾಕ್ಕೆ ಗೆಲ್ಲಲು 192 ರನ್ಗಳ ಟಾರ್ಗೆಟ್ ನೀಡಿತು. ಗುರಿ ಬೆನ್ನಟ್ಟಲು ಶುರುಮಾಡಿದ ಭಾರತ ಮೂರನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 40 ರನ್ ಗಳಿಸಿದೆ. ರೋಹಿತ್ ಶರ್ಮಾ 24 ಹಾಗೂ ಯಶಸ್ವಿ ಜೈಸ್ವಾಲ್ 16 ರನ್ ಇಂದು ನಾಲ್ಕನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಆದರೆ, ನಾಲ್ಕನೇ ದಿನದಾಟ ನಡೆಯುತ್ತಾ?.
ಟೀಮ್ ಇಂಡಿಯಾ 3-1 ಅಂತರದಿಂದ ಮುನ್ನಡೆ ಸಾಧಿಸಿ ಸರಣಿಯನ್ನು ವಶಪಡಿಸಿಕೊಳ್ಳುವ ಹಾದಿಯಲ್ಲಿದೆ. ಆದರೆ, ರಾಂಚಿ ಟೆಸ್ಟ್‌ನ ನಾಲ್ಕನೇ ದಿನ ಮಳೆ ಬರುವ ಸಾಧ್ಯತೆ ಇದೆ. ಅಕ್ಯುವೆದರ್ ಮುನ್ಸೂಚನೆಗಳು ರಾಂಚಿಯ ದಿನ 4 (ಫೆಬ್ರವರಿ 26) ತಾಪಮಾನವು 16 ರಿಂದ 27 ಡಿಗ್ರಿ ಸೆಲ್ಸಿಯಸ್ ವರೆಗೆ ಇರುತ್ತದೆ. 42 ರಷ್ಟು ಮಳೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಇದು ತುಂತುರು ಮಳೆಯಾಗುವ ನಿರೀಕ್ಷೆಯಿದೆ.
ಭಾರತದ ಗೆಲುವಿಗೆ ಬೇಕು 152 ರನ್ಸ್: ಆದರೆ ಇದು ಸುಲಭವಲ್ಲ, ಯಾಕೆ ಗೊತ್ತೇ?
ಬೆಳಿಗ್ಗೆ ಸ್ಪಷ್ಟವಾದ ಆಕಾಶವನ್ನು ನಿರೀಕ್ಷಿಸಲಾಗಿದೆ, ಆದರೆ ಮಧ್ಯಾಹ್ನದ ವೇಳೆಗೆ ಸರಿಸುಮಾರು 60 ಪ್ರತಿಶತದಷ್ಟು ಮೋಡ ಕವಿದ ವಾತಾವರಣ ಇರುತ್ತದೆ. ಈ ಸಮಯದಲ್ಲಿ ಆರ್ದ್ರತೆಯು ಸುಮಾರು 60% ಆಗಿರುತ್ತದೆ. ಇದಲ್ಲದೇ 5ನೇ ದಿನವೂ ಆಕಾಶದಲ್ಲಿ ಮೋಡ ಕವಿದ ವಾತಾವರಣವಿದ್ದು, ಮಧ್ಯಾಹ್ನದ ನಂತರ ಒಂದು ಅಥವಾ ಎರಡು ಬಾರಿ ಮಳೆಯಾಗುವ ಸಾಧ್ಯತೆ ಇದೆ. ಮಳೆಯು ಇಡೀ ದಿನದ ಆಟದ ಮೇಲೆ ಪರಿಣಾಮ ಬೀರುವುದಿಲ್ಲ. ಆದರೆ ಆಟವು ಸ್ವಲ್ಪ ಸಮಯ ಸ್ಥಗಿತಗೊಂಡು ನಂತರ ಮುಂದುವರೆಸಬೇಕಾಗಿ ಬರಬಹುದು.
ನಿನ್ನೆ ಮೂರನೇ ದಿನ ಭಾರತವನ್ನು 307 ರನ್ಗೆ ಆಲೌಟ್ ಮಾಡಿ 46 ರನ್ಗಳ ಮುನ್ನಡೆಯೊಂದಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ಮತ್ತೊಮ್ಮೆ ಉತ್ತಮ ಆರಂಭ ಪಡೆಯಲಿಲ್ಲ. ಬೆನ್ ಡಕೆಟ್ ಕೇವಲ 15 ರನ್‌ಗಳಿಗೆ ಪೆವಿಲಿಯನ್ ಸೇರಿಕೊಂಡರೆ, ನಂತರ ಬಂದ ಒಲಿ ಪೋಪ್ ಮತ್ತೊಮ್ಮೆ ನಿರಾಸೆ ಮೂಡಿಸಿದರು. ಮೊದಲ ಇನ್ನಿಂಗ್ಸ್ನಲ್ಲಿ ಅಜೇಯ ಶತಕ ಸಿಡಿಸಿದ್ದ ರೂಟ್ ಆಟ ಎರಡನೇ ಇನ್ನಿಂಗ್ಸ್ನಲ್ಲಿ ಕೇವಲ 11 ರನ್ಗೆ ಅಂತ್ಯವಾಯಿತು. ಒಂದರ ಹಿಂದೆ ಒಂದರಂತೆ ವಿಕೆಟ್ ಪತನದ ನಡುವೆಯೂ ಸ್ಫೋಟಕ ಬ್ಯಾಟಿಂಗ್ ಮಾಡಿದ ಆರಂಭಿಕ ಝಾಕ್ ಕ್ರೌಲಿ 91 ಎಸೆತಗಳಲ್ಲಿ 60 ರನ್ಗಳ ಇನ್ನಿಂಗ್ಸ್ ಆಡಿದರು.
ಲೀಗ್ನಲ್ಲಿ ಸತತ 2ನೇ ಗೆಲುವು ದಾಖಲಿಸಿದ ಮುಂಬೈ; ಗುಜರಾತ್ಗೆ ಸೋಲಿನ ಆರಂಭ
ನಾಯಕ ಬೆನ್ ಸ್ಟೋಕ್ಸ್ ಮತ್ತೊಂದು ಕಳಪೆ ಇನ್ನಿಂಗ್ಸ್ ಆಡುವ ಮೂಲಕ ಸಿಂಗಲ್ ಡಿಜಿಟ್ಗೆ ವಿಕೆಟ್ ಒಪ್ಪಿಸಿದರೆ ಜಾನಿ ಬೈರ್ಸ್ಟೋವ್ 30 ರನ್ಗಳ ಕಾಣಿಕೆ ನೀಡಿದರು. ಅಂತಿಮವಾಗಿ ಇಂಗ್ಲೆಂಡ್ ಕೇವಲ 145 ರನ್‌ಗಳಿಗೆ ಸರ್ವಪತನ ಕಂಡಿತು. ಭಾರತದ ಪರ ಮಾರಕ ದಾಳಿ ನಡೆಸಿದ ರವಿಚಂದ್ರನ್ ಅಶ್ವಿನ್ ಮತ್ತೊಮ್ಮೆ 5 ವಿಕೆಟ್ ಕಿತ್ತ ಸಾಧನೆ ಮಾಡಿದರೆ, ಕುಲ್ದೀಪ್ ಯಾದವ್ 4 ಪ್ರಮುಖ ವಿಕೆಟ್ ಪಡೆದು ಆಂಗ್ಲರ ಪತನಕ್ಕೆ ಕಾರಣರಾದರು. ರವೀಂದ್ರ ಜಡೇಜಾ 1 ವಿಕೆಟ್ ಪಡೆದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ