AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀನು ಇಲ್ಲಿ ಹೀರೋ ಆಗಬೇಕಂತಿಲ್ಲ: ಸರ್ಫರಾಜ್ ಖಾನ್ ಅವರ ಮೈಚಳಿ ಬಿಡಿಸಿದ ರೋಹಿತ್ ಶರ್ಮಾ

Rohit Sharma and Sarfaraz Khan Video: ಭಾರತ ಹಾಗೂ ಇಂಗ್ಲೆಂಡ್ ನಡುವಣ ನಾಲ್ಕನೇ ಟೆಸ್ಟ್ ಅಂತಿಮ ಘಟ್ಟಕ್ಕೆ ತಲುಪಿದೆ. ಯಾರೂ ಊಹಿಸದ ರೀತಿಯಲ್ಲಿ ಮೂರನೇ ದಿನ ಟೀಮ್ ಇಂಡಿಯಾ ಬೌನ್ಸ್ ಬ್ಯಾಕ್ ಮಾಡಿತು. ಇದರ ನಡುವೆ ರೋಹಿತ್ ಶರ್ಮಾ ಹಾಗೂ ಸರ್ಫರಾಜ್ ಖಾನ್ ನಡುವಣ ವಿಡಿಯೋ ಒಂದು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗುತ್ತಿದೆ.

ನೀನು ಇಲ್ಲಿ ಹೀರೋ ಆಗಬೇಕಂತಿಲ್ಲ: ಸರ್ಫರಾಜ್ ಖಾನ್ ಅವರ ಮೈಚಳಿ ಬಿಡಿಸಿದ ರೋಹಿತ್ ಶರ್ಮಾ
rohit sharma and sarfaraz khan
Vinay Bhat
|

Updated on: Feb 26, 2024 | 8:33 AM

Share

ಭಾರತ ಮತ್ತು ಇಂಗ್ಲೆಂಡ್ (India vs England) ನಡುವಿನ ನಾಲ್ಕನೇ ಟೆಸ್ಟ್ ಪಂದ್ಯ ರಾಂಚಿಯಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಗೆಲುವು ಬಹುತೇಕ ಖಚಿತವಾಗಿದೆ. ಮೂರನೇ ದಿನದಾಟದ ಅಂತ್ಯಕ್ಕೆ ಭಾರತ ವಿಕೆಟ್ ನಷ್ಟವಿಲ್ಲದೆ 40 ರನ್ ಗಳಿಸಿದ್ದು, ಗೆಲುವಿಗೆ 152 ರನ್​ಗಳ ಅಗತ್ಯವಿದೆ. ಇದಕ್ಕೂ ಮುನ್ನ ರೋಹಿತ್ ಪಡೆಯ ಸ್ಪಿನ್ನರ್​ಗಳ ಮುಂದೆ ಇಂಗ್ಲೆಂಡ್ ಆಟಗಾರರು ಸಂಪೂರ್ಣವಾಗಿ ಮಂಡಿಯೂರಿದರು. ಇಂಗ್ಲೆಂಡ್‌ನ ಎರಡನೇ ಇನ್ನಿಂಗ್ಸ್ ಕೇವಲ 145 ರನ್‌ಗಳಿಗೆ ಅಂತ್ಯಗೊಂಡಿತು. ಇದರ ನಡುವೆ ಇಂಗ್ಲೆಂಡ್ ಬ್ಯಾಟಿಂಗ್ ಮಾಡುವಾಗ ನಡೆದ ಘಟನೆಯ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ರೋಹಿತ್ ಶರ್ಮಾ ಹಾಗೂ ಸರ್ಫರಾಜ್ ಖಾನ್ ನಡುವೆ ಸಣ್ಣ ಮಟ್ಟಿನ ಮಾತಿನ ಚಕಮಕಿ ನಡೆದಿದೆ.

ಇಂಗ್ಲೆಂಡ್‌ ಬ್ಯಾಟಿಂಗ್ ಇನ್ನಿಂಗ್ಸ್‌ನ ನಡುವಿನಲ್ಲಿ, ನಾಯಕ ರೋಹಿತ್ ಶರ್ಮಾ ಅವರು ಸರ್ಫರಾಜ್‌ ಖಾನ್ ಅವರನ್ನು ಬ್ಯಾಟ್ಸ್‌ಮನ್ ಪಕ್ಕದಲ್ಲಿ ಫೀಲ್ಡಿಂಗ್​ಗೆ ನಿಲ್ಲಿಸಿದರು. ಆದರೆ, ಸರ್ಫರಾಜ್ ಫೀಲ್ಡರ್ ಹೆಲ್ಮೆಟ್ ಅಥವಾ ಯಾವುದೇ ಇತರ ರಕ್ಷಣಾತ್ಮಕ ಕವಚ ಇಲ್ಲದೆ ಸಿಲ್ಲಿ ಪಾಯಿಂಟ್‌ಗೆ ಬಂದು ನಿಂತರು. ಇದರಿಂದ ಕೋಪಗೊಂಡ ರೋಹಿತ್ ಅವರು ಸರ್ಫರಾಜ್ ಅವರ ಮೇಲೆ ರೇಗಾಡಿದ್ದಾರೆ. ”ನೀನು ಇಲ್ಲಿ ಹೀರೋ ಆಗಬೇಕಂತಿಲ್ಲ” ಎಂದು ಹೇಳಿ ರಕ್ಷಣಾತ್ಮಕ ಕವಚ ಧರಿಸುವಂತೆ ಹೇಳಿದ್ದಾರೆ. ಇದರ ವಿಡಿಯೋ ವೈರಲ್ ಆಗುತ್ತಿದೆ.

ಭಾರತ-ಇಂಗ್ಲೆಂಡ್ 4ನೇ ಟೆಸ್ಟ್​ನ ಇಂದಿನ 4ನೇ ದಿನದಾಟ ನಡೆಯುವುದು ಅನುಮಾನ?

ರೋಹಿತ್ ಶರ್ಮಾ -ಸರ್ಫರಾಜ್ ಖಾನ್ ನಡುವಣ ಮಾತಿನ ವಿಡಿಯೋ ಇಲ್ಲಿದೆ:

ಕ್ರಿಕೆಟ್‌ನಲ್ಲಿ ಬಾಲ್‌ ತಾಗಿ ಸಾವನ್ನಪ್ಪಿದ ಪ್ರಕರಣಗಳನ್ನು ನಾವು ಸಾಕಷ್ಟು ನೋಡಿದ್ದೇವೆ. ಈರೀತಿ ಯಾವುದೇ ದುರ್ಘಟನೆ ನಡೆಯುವುದು ಬೇಡ ಎಂದು ಬ್ಯಾಟ್ಸ್‌ಮನ್‌ನ ಬಳಿ ನಿಂತಿರುವ ಫೀಲ್ಡರ್ ಹೆಲ್ಮೆಟ್ ಮತ್ತು ಶಿನ್ ಪ್ಯಾಡ್‌ಗಳನ್ನು ಧರಿಸುತ್ತಾರೆ. ಇದೇ ಕಾಳಜಿಯಲ್ಲಿ ರೋಹಿತ್ ಅವರು ಸರ್ಫರಾಜ್​ಗೆ ಹೇಳಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ರೋಹಿತ್ ನಡೆಗೆ ಅವರಿಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸ್ಟಂಪ್ ಮೈಕ್‌ನಲ್ಲಿ ರೋಹಿತ್ ಆಡಿದ ಮಾತು ಸೆರೆಯಾಗಿದೆ. ಬಳಿಕ ಕೆ.ಎಸ್.ಭರತ್ ಹೆಲ್ಮೆಟ್ ನೊಂದಿಗೆ ಮೈದಾನಕ್ಕೆ ಬಂದು ಸರ್ಫರಾಜ್ ಖಾನ್​ಗೆ ನೀಡಿದರು.

ಭಾರತದ ಗೆಲುವಿಗೆ ಬೇಕು 152 ರನ್ಸ್: ಆದರೆ ಇದು ಸುಲಭವಲ್ಲ, ಯಾಕೆ ಗೊತ್ತೇ?

ಸದ್ಯ ಐದು ಪಂದ್ಯಗಳ ಸರಣಿಯಲ್ಲಿ ಆತಿಥೇಯ ತಂಡ 2-1 ಮುನ್ನಡೆ ಸಾಧಿಸಿದ್ದು, ನಾಲ್ಕನೇ ಪಂದ್ಯದಲ್ಲಿ ಗೆದ್ದರೆ ಭಾರತ ಸರಣಿ ಕೈವಶ ಮಾಡಿಕೊಳ್ಳಲಿದೆ. 4ನೇ ದಿನದಲ್ಲಿ ಭಾರತ ಗೆಲ್ಲುವ ಫೇವರಿಟ್ ಆಗಿದ್ದರೆ, ಅತ್ತ ಇಂಗ್ಲೆಂಡ್ ಸರಣಿಯಲ್ಲಿ ಜೀವಂತವಾಗಿರಲು ಏಕೈಕ ಮಾರ್ಗ ಗೆಲುವು ಮಾತ್ರ ಆಗಿದೆ. ಭಾರತವು 2012 ರಿಂದ ಈವರೆಗೆ ತವರಿನ ಟೆಸ್ಟ್ ಸರಣಿಯನ್ನು ಕಳೆದುಕೊಂಡಿಲ್ಲ. ಕುತೂಹಲಕಾರಿ ವಿಚಾರ ಎಂದರೆ, ತವರಿನಲ್ಲಿ ಭಾರತವನ್ನು ಸೋಲಿಸಿದ ಕೊನೆಯ ತಂಡ ಇಂಗ್ಲೆಂಡ್ ಆಗಿದೆ. ಇದೀಗ ಭಾರತಕ್ಕೆ ಸೇಡು ತೀರಿಸಿಕೊಳ್ಳುವ ಅವಕಾಶ ಕೂಡ ಇದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು
ನಾನು ಲೋಫರ್, ದುನಿಯಾ ವಿಜಿ ನಮ್ಮ ಅಪ್ಪ ಇದ್ದಂಗೆ: ಯೋಗರಾಜ್ ಭಟ್ ನೇರ ಮಾತು
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಯಾರಡಾ ಬೀಚ್​​ನಲ್ಲಿ ದಡಕ್ಕೆ ಹೋದವರಿಗೆ ಕಾದಿತ್ತು ಶಾಕ್!
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ದೆಹಲಿಗೆ ಹೊರಟ ಪ್ರಧಾನಿ ಮೋದಿಗೆ ಓಮನ್​​​ನಲ್ಲಿ ಆತ್ಮೀಯ ವಿದಾಯ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಓಮನ್​​ನಲ್ಲೂ ನಮೋ ಕ್ರೇಜ್; ಕಿಕ್ಕಿರಿದ ಭಾರತೀಯರಿಂದ ಮೋದಿ ಮೋದಿ ಘೋಷಣೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ