‘ವಿಶ್ವಕಪ್ ಗೆಲ್ಲಬೇಕಾದರೆ ಐಪಿಎಲ್ ಆಡಬೇಡಿ’; ಭಾರತ ತಂಡಕ್ಕೆ ಕೋಚ್ ಎಚ್ಚರಿಕೆ

| Updated By: ಪೃಥ್ವಿಶಂಕರ

Updated on: Nov 26, 2022 | 10:52 AM

Team India: ಕಳೆದ 7-8 ತಿಂಗಳಿಂದ ಭಾರತ ತಂಡದಲ್ಲಿ ಸ್ಥಿರತೆ ಕಂಡುಬಂದಿಲ್ಲ. ವಿಶ್ವಕಪ್‌ಗೆ ತಯಾರಿ ನಡೆಸುವಾಗ ತಂಡದಲ್ಲಿ ಸ್ಥಿರತೆ ಇರಬೇಕು. ಕಳೆದ ಏಳು ತಿಂಗಳಿಂದ ತಂಡವನ್ನು ಗಮನಿಸಿದರೆ, ನಿಜವಾಗಿ ಯಾರು ಓಪನಿಂಗ್ ಮಾಡುತ್ತಿದ್ದಾರೆ ಮತ್ತು ಬೌಲಿಂಗ್ ಘಟಕ ಹೇಗಿದೆ ಎಂಬುದರ ಬಗ್ಗೆ ಸರಿಯಾದ ಖಚಿತತೆ ಇಲ್ಲ ಎಂದು ರೋಹಿತ್ ಶರ್ಮಾ ಕೋಚ್ ಹೇಳಿದ್ದಾರೆ.

‘ವಿಶ್ವಕಪ್ ಗೆಲ್ಲಬೇಕಾದರೆ ಐಪಿಎಲ್ ಆಡಬೇಡಿ’; ಭಾರತ ತಂಡಕ್ಕೆ ಕೋಚ್ ಎಚ್ಚರಿಕೆ
team india
Follow us on

ಟಿ20 ವಿಶ್ವಕಪ್​ನಿಂದ (T20 World Cup) ಟೀಂ ಇಂಡಿಯಾ ಬರಿಗೈಯಲ್ಲಿ ವಾಪಸ್ಸಾದ ಬಳಿಕ ತಂಡದ ಆಟಗಾರರು ಹಾಗೂ ಬಿಸಿಸಿಐ (BCCI) ವಿರುದ್ಧ ಪ್ರಶ್ನೆಗಳ ಸುರಿಮಳೆಗೈಯಲಾಗುತ್ತಿದೆ. ತಂಡದ ಈ ಕಳಪೆ ಪ್ರದರ್ಶನಕ್ಕೆ ಕೆಲವರು ನಾಯಕನನ್ನೂ ದೂರುತ್ತಿದ್ದರೆ, ಇನ್ನು ಕೆಲವರು ತಂಡದ ಆಯ್ಕೆಯ ಬಗ್ಗೆ ಬಿಸಿಸಿಐ ನಿಲುವನ್ನು ಪ್ರಶ್ನಿಸುತ್ತಿದ್ದಾರೆ. ಬಿಸಿಸಿಐ ಕೇವಲ ಹೆಸರಿಗಷ್ಟೇ ಪ್ರಾಮುಖ್ಯತೆ ನೀಡಿ ತಂಡವನ್ನು ಆಯ್ಕೆ ಮಾಡಿದೆ. ಇಲ್ಲಿ ಪ್ರತಿಭೆಗಳಿಗೆ ಬೆಲೆ ಇಲ್ಲ ಎಂಬುದು ಕ್ರಿಕೆಟ್ ಪಂಡಿತರ ವಾದವಾಗಿದೆ. ಇದೆಲ್ಲವುಗಳ ನಡುವೆ ಇದೀಗ ಟೀಂ ಇಂಡಿಯಾ (Team India) ಖಾಯಂ ನಾಯಕ ರೋಹಿತ್ ಶರ್ಮಾ (Rohit Sharma) ಅವರ ಬಾಲ್ಯದ ಕೋಚ್ ತಂಡ ಐಸಿಸಿ ಈವೆಂಟ್ ಗೆಲ್ಲಬೇಕಾದರೆ ಏನು ಮಾಡಬೇಕು ಎಂಬುದರ ಬಗ್ಗೆ ಮಾತನಾಡಿದ್ದಾರೆ

ಭಾರತ ತಂಡ ವಿಶ್ವಕಪ್ ಗೆಲ್ಲಬೇಕಾದರೆ ಈ ತಂಡದ ಆಟಗಾರರು ಐಪಿಎಲ್​ನಲ್ಲಿ ಆಡಬಾರದು. ಆಟಗಾರರು ತಮ್ಮ ಕೆಲಸದ ಹೊರೆಯನ್ನು ನಿರ್ವಹಿಸಲು ಮತ್ತು ಸಂಪೂರ್ಣ ಫಿಟ್ ಆಗಿರಲು ಐಪಿಎಲ್‌ನಿಂದ ದೂರವಿರಬೇಕು ಎಂದು ರೋಹಿತ್ ಶರ್ಮಾ ಅವರ ಬಾಲ್ಯದ ಕೋಚ್ ಟೀಂ ಇಂಡಿಯಾಕ್ಕೆ ಪ್ರಮುಖ ಸಲಹೆಯನ್ನು ನೀಡಿದ್ದಾರೆ.

ಆಯಾಸವೇ ಪ್ರಮುಖ ಕಾರಣ

ಕಳೆದ ಕೆಲವು ವರ್ಷಗಳಿಂದ ಭಾರತ ತಂಡ ವಿಶ್ವಕಪ್ ಗೆಲ್ಲಲು ಸಾಧ್ಯವಾಗಿಲ್ಲ. 2013ರಿಂದ ಐಸಿಸಿ ಟ್ರೋಫಿಗಾಗಿ ಕಾಯುತ್ತಿರುವ ಟೀಂ ಇಂಡಿಯಾ 2011ರಿಂದ ವಿಶ್ವಕಪ್ ಗೆದ್ದಿಲ್ಲ. ಕಳೆದ ಟಿ20 ವಿಶ್ವಕಪ್​ನಲ್ಲಿ ಮೊದಲ ಸುತ್ತಿನಲ್ಲೇ ಹೊರಬಿದ್ದಿದ್ದ ಟೀಂ ಇಂಡಿಯಾ ಈ ಬಾರಿ ಸೆಮಿಫೈನಲ್​ನಲ್ಲಿ ಸೋಲನುಭವಿಸಬೇಕಾಯಿತು.

ಹೀಗಾಗಿ ಟೀಂ ಇಂಡಿಯಾ ಸೋಲಿಗೆ ಆಟಗಾರರ ಆಯಾಸವೇ ಪ್ರಮುಖ ಕಾರಣ ಎಂಬುದು ಗೊತ್ತಾಗುತ್ತಿದೆ. ಈ ಕಾರಣಕ್ಕಾಗಿ, ರೋಹಿತ್ ಶರ್ಮಾ ಅವರ ಬಾಲ್ಯದ ಕೋಚ್ ಆಟಗಾರರು ತಮ್ಮನ್ನು ತಾವು ರಿಫ್ರೆಶ್ ಮಾಡಲು ಐಪಿಎಲ್ ಆಡಬಾರದು ಎಂಬ ಸಲಹೆ ನೀಡಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಈ ಸಮಸ್ಯೆ

ಸಂದರ್ಶನವೊಂದರಲ್ಲಿ ಮಾತನಾಡಿದ ರೋಹಿತ್ ಶರ್ಮಾ ಅವರ ಬಾಲ್ಯದ ಕೋಚ್, ‘ಕಳೆದ 7-8 ತಿಂಗಳಿಂದ ಭಾರತ ತಂಡದಲ್ಲಿ ಸ್ಥಿರತೆ ಕಂಡುಬಂದಿಲ್ಲ. ವಿಶ್ವಕಪ್‌ಗೆ ತಯಾರಿ ನಡೆಸುವಾಗ ತಂಡದಲ್ಲಿ ಸ್ಥಿರತೆ ಇರಬೇಕು. ಕಳೆದ ಏಳು ತಿಂಗಳಿಂದ ತಂಡವನ್ನು ಗಮನಿಸಿದರೆ, ನಿಜವಾಗಿ ಯಾರು ಓಪನಿಂಗ್ ಮಾಡುತ್ತಿದ್ದಾರೆ ಮತ್ತು ಬೌಲಿಂಗ್ ಘಟಕ ಹೇಗಿದೆ ಎಂಬುದರ ಬಗ್ಗೆ ಸರಿಯಾದ ಖಚಿತತೆ ಇಲ್ಲ. ಅಲ್ಲದೆ ತಂಡದಲ್ಲಿ ಸ್ಥಿರತೆಯ ಕೊರತೆ ಎದ್ದು ಕಾಣುತ್ತಿದೆ ಎಂದರು.

ಕೆಲಸದ ಹೊರೆ ನಿರ್ವಹಣೆ

ಕೆಲಸದ ಹೊರೆ ನಿರ್ವಹಣೆಯ ಬಗ್ಗೆ ಹೇಳುವುದಾದರೆ.. ಇದೂ ಒಂದು ಅಂಶ ಎಂದು ನಾನು ಭಾವಿಸುವುದಿಲ್ಲ. ಜಗತ್ತಿನಲ್ಲಿ ಎಲ್ಲರೂ ಆಡುತ್ತಿದ್ದಾರೆ. ಏಕೆಂದರೆ ಅವರೆಲ್ಲರೂ ವೃತ್ತಿಪರ ಆಟಗಾರರು. ಹೀಗಾಗಿ ಕೆಲಸದ ಹೊರೆ ಎನ್ನುವ ಈ ಆಟಗಾರರು ಐಪಿಎಲ್‌ನಲ್ಲಿ ಏಕೆ ಆಡುತ್ತಿದ್ದಾರೆ?. ವಿಶ್ವಕಪ್ ಗೆಲ್ಲಬೇಕೆಂದರೆ ಟೀಂ ಇಂಡಿಯಾ ಆಟಗಾರರು ಐಪಿಎಲ್‌ನಲ್ಲಿ ಆಡಬೇಡಿ. ಏಕೆಂದರೆ ನಮಗೆ ಐಪಿಎಲ್‌ಗಿಂತ ರಾಷ್ಟ್ರೀಯ ತಂಡ ಮುಖ್ಯ ಎಂದಿದ್ದಾರೆ.

Published On - 10:50 am, Sat, 26 November 22