IND vs NZ 2nd ODI: ಸೋಲಿನ ಆಘಾತದ ನಡುವೆ ಹ್ಯಾಮಿಲ್ಟನ್​ಗೆ ಬಂದ ಭಾರತ: ಎರಡನೇ ಏಕದಿನಕ್ಕೆ ತಯಾರಿ

India vs New Zealand: ಟೀಮ್ ಇಂಡಿಯಾ ಆಟಗಾರರು ಹ್ಯಾಮಿಲ್ಟನ್​ಗೆ ಬಂದಿಳಿದಿದ್ದಾರೆ. ಇಲ್ಲಿನ ಸೀಡನ್ ಪಾರ್ಕ್ ಮೈದಾನದಲ್ಲಿ ನವೆಂಬರ್ 27 ಭಾನುವಾರದಂದು ಎರಡನೇ ಏಕದಿನ ಪಂದ್ಯ ಆಯೋಜಿಸಲಾಗಿದೆ. ಆಕ್ಲೆಂಡ್​ನಿಂದ ಸುಮಾರು 123KM ಪ್ರಯಾಣ ಬೆಳೆಸಿ ಧವನ್ ಪಡೆ ಬಸ್ ಮೂಲಕ ಹ್ಯಾಮಿಲ್ಟನ್​ ತಲುಪಿದರು.

IND vs NZ 2nd ODI: ಸೋಲಿನ ಆಘಾತದ ನಡುವೆ ಹ್ಯಾಮಿಲ್ಟನ್​ಗೆ ಬಂದ ಭಾರತ: ಎರಡನೇ ಏಕದಿನಕ್ಕೆ ತಯಾರಿ
Team India in Hamilton
Follow us
TV9 Web
| Updated By: Vinay Bhat

Updated on: Nov 26, 2022 | 8:51 AM

ಆಕ್ಲೆಂಡ್​ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಸೋಲು ಅನುಭವಿಸಿದ ಭಾರತ (India vs New Zealand) ಇದೀಗ ದ್ವಿತೀಯ ಪಂದ್ಯಕ್ಕೆ ಸಜ್ಜಾಗುತ್ತಿದೆ. ಇದಕ್ಕಾಗಿ ಇಂದು ಶನಿವಾರ ಬೆಳಗ್ಗೆ ಟೀಮ್ ಇಂಡಿಯಾ ಆಟಗಾರರು ಹ್ಯಾಮಿಲ್ಟನ್​ಗೆ ಬಂದಿಳಿದಿದ್ದಾರೆ. ಇಲ್ಲಿನ ಸೀಡನ್ ಪಾರ್ಕ್ ಮೈದಾನದಲ್ಲಿ ನವೆಂಬರ್ 27 ಭಾನುವಾರದಂದು ಎರಡನೇ ಏಕದಿನ ಪಂದ್ಯ ಆಯೋಜಿಸಲಾಗಿದೆ. ಆಕ್ಲೆಂಡ್​ನಿಂದ ಸುಮಾರು 123KM ಪ್ರಯಾಣ ಬೆಳೆಸಿ ಧವನ್ ಪಡೆ ಬಸ್ ಮೂಲಕ ಹ್ಯಾಮಿಲ್ಟನ್​ಗೆ (Hamilton) ತಲುಪಿದರು. ಇದರ ವಿಡಿಯೋವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಮೊದಲ ಪಂದ್ಯದಲ್ಲಿ ಸೋತ ಪರಿಣಾಮ ಭಾರತ ಸರಣಿ ವಶಪಡಿಸಿಕೊಳ್ಳ ಬೇಕಾದಲ್ಲಿ ಉಳಿದ ಎರಡೂ ಪಂದ್ಯವನ್ನು ಗೆಲ್ಲ ಬೇಕಾದ ಒತ್ತಡಕ್ಕೆ ಸಿಲುಕಿದೆ.

ಹ್ಯಾಮಿಲ್ಟನ್​ ಸೀಡನ್ ಪಾರ್ಕ್​ನಲ್ಲಿ ಭಾರತದ ದಾಖಲೆ ಹೇಳಿಕೊಳ್ಳುವ ಮಟ್ಟಕ್ಕೆ ಚೆನ್ನಾಗಿಲ್ಲ. ಇಲ್ಲಿ ಟೀಮ್ ಇಂಡಿಯಾ ಈವರೆಗೆ ಒಟ್ಟು ಏಳು ಏಕದಿನ ಪಂದ್ಯಗಳನ್ನು ಆಡಿದೆ. ಇದರಲ್ಲಿ ಗೆಲುವು ಸಾಧಿಸಿದ್ದು ಕೇವಲ ಒಂದು ಪಂದ್ಯದಲ್ಲಿ ಮಾತ್ರ. ಉಳಿದ ಆರು ಮ್ಯಾಚ್​ಲ್ಲಿ ಸೋಲುಂಡಿದೆ. 1981 ರಲ್ಲಿ ಮೊದಲ ಪಂದ್ಯ ಹಾಗೂ 2020 ರಲ್ಲಿ ಕೊನೆಯ ಬಾರಿಗೆ ಭಾರತ ಇಲ್ಲಿ ಕಣಕ್ಕಿಳಿದಿತ್ತು. 2009 ರಲ್ಲಿ ಎಂಎಸ್ ಧೋನಿ ನಾಯಕತ್ವದಲ್ಲಿ ಭಾರತ ಇಲ್ಲಿ ಜಯ ಸಾಧಿಸಿತ್ತು. ಹೀಗಾಗಿ ಭಾರತಕ್ಕೆ ಎರಡನೇ ಏಕದಿನ ಕಠಿಣವವಾಗುವುದು ಖಚಿತ.

ಇದನ್ನೂ ಓದಿ
Image
India vs New Zealand: ಸರಣಿ ಸಮಬಲಕ್ಕೆ ಭಾರತ ಮಾಸ್ಟರ್ ಪ್ಲಾನ್: ದ್ವಿತೀಯ ಏಕದಿನ ಪಂದ್ಯ ಯಾವಾಗ?
Image
Shikhar Dhawan: ತಂಡದ ಸೋಲಿಗೆ ಏನೂ ಕಾರಣ ನೀಡಿಲ್ಲ ಧವನ್: ಪಂದ್ಯದ ಬಳಿಕ ಏನಂದ್ರು ನೋಡಿ
Image
IND vs NZ: ಲೇಥಮ್- ವಿಲಿಯಮ್ಸನ್ ದ್ವಿಶತಕದ ಜೊತೆಯಾಟ; ಮೊದಲ ಏಕದಿನ ಪಂದ್ಯದಲ್ಲಿ ಮುಗ್ಗರಿಸಿದ ಭಾರತ
Image
ಬರೋಬ್ಬರಿ 12 ಬಾರಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ಹೈರಾಣವಾದರೂ ಇಂದು ಚಿನ್ನದ ಬಾಲಕನಾಗಿದ್ದಾನೆ, ಜೈ ಎನ್ನಿ ಈ ಅನಿಕೇತನಗೆ!

ನ್ಯೂಜಿಲೆಂಡ್ ವಿರುದ್ಧದ ಟಿ20 ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ತೋರಿ ಸರಣಿ ವಶಪಡಿಸಿಕೊಂಡಿದ್ದ ಭಾರತ ಏಕದಿನ ಸರಣಿಯ ಮೊದಲ ಪಂದ್ಯದಲ್ಲಿ ಸೋಲು ಕಂಡಿತು. ಶ್ರೇಯಸ್ ಅಯ್ಯರ್, ಶಿಖರ್ ಧವನ್, ಶುಭ್​ಮನ್ ಗಿಲ್ ಹಾಗೂ ವಾಷಿಂಗ್ಟನ್ ಸುಂದರ್ ಅವರ ಬ್ಯಾಟಿಂಗ್ ನೆರವಿನಿಂದ ಟೀಮ್ ಇಂಡಿಯಾ ಬ್ಯಾಟಿಂಗ್​ನಲ್ಲಿ ಉತ್ತಮ ಪ್ರದರ್ಶನ ತೋರಿ ಸವಾಲಿನ ಮೊತ್ತ ಕಲೆಹಾಕಿತು. ಆದರೆ, ಬೌಲರ್​ಗಳು ನಿರೀಕ್ಷೆಗೆ ತಕ್ಕ ಪ್ರದರ್ಶನ ತೋರಲಿಲ್ಲ. ಧವನ್ ಪಡೆಯ ಫೀಲ್ಡಿಂಗ್ ಕೂಡ ಹೇಳಿಕೊಳ್ಳವ ಮಟ್ಟಕ್ಕೆ ಕಠಿಣವಾಗಿ ಇರಲಿಲ್ಲ. ಟಾಮ್​ ಲಾಥಮ್ ಹಾಗೂ ನಾಯಕ ಕೇನ್ ವಿಲಿಯಮ್ಸನ್ ಅವರ ದ್ವಿಶತಕದ ಅಮೋಘ ಜೊತೆಯಾಟದ ನೆರವಿನಿಂದ ನ್ಯೂಜಿಲೆಂಡ್ 7 ವಿಕೆಟ್​ಗಳ ಭರ್ಜರಿ ಜಯ ಕಂಡಿತು. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಕಿವೀಸ್ 1-0 ಮುನ್ನಡೆ ಪಡೆದುಕೊಂಡಿದೆ.

ಬೌಲರ್​​ಗಳ ಕೆಟ್ಟ ಪ್ರದರ್ಶನ ಭಾರತೀಯ ಮ್ಯಾನೇಜ್ಮೆಂಟ್​​ಗೆ ದೊಡ್ಡ ತಲೆನೋವಾಗಿದೆ. ಮುಖ್ಯ ವೇಗಿ ಜಸ್​ಪ್ರೀತ್ ಬುಮ್ರಾ ಅಲಭ್ಯತೆ ಪದೇ ಪದೇ ಎದ್ದು ಕಾಣುತ್ತಿದೆ. ಮೊದಲ ಏಕದಿನದ ಪದಾರ್ಪಣೆ ಪಂದ್ಯದಲ್ಲೇ ಅರ್ಶ್​ದೀಪ್ ಸಿಂಗ್ 8.1 ಓವರ್​​ಗೆನೇ 68 ರನ್ ನೀಡಿದರು. ಉಮ್ರಾನ್ ಮಲಿಕ್ ಕೂಡ ತಮ್ಮ ಚೊಚ್ಚಲ ODI ನಲ್ಲಿ 10 ಓವರ್​ಗೆ 2 ವಿಕೆಟ್ ಕಿತ್ತು 66 ರನ್ ಕೊಟ್ಟರು. ಶಾರ್ದೂಲ್ ಠಾಕೂರ್ 9 ಓವರ್​ಗೆ 63 ರನ್ ನೀಡಿ ದುಬಾರಿಯಾದರು. ಹೀಗಾಗಿ ಭಾರತದ ಬೌಲಿಂಗ್​ ವಿಭಾಗದಲ್ಲಿ ಬದಲಾವಣೆ ಅನಿವಾರ್ಯವಾಗಿದೆ.

ಅತ್ತ ಬ್ಯಾಟಿಂಗ್ ವಿಭಾಗದಲ್ಲಿ ರಿಷಭ್ ಪಂತ್ ವೈಫಲ್ಯ ಕೂಡ ದೊಡ್ಡ ಸಮಸ್ಯೆಯಾಗಿದೆ. ವಿಕೆಟ್ ಕೀಪಿಂಗ್​ನಲ್ಲೂ ಅಪಾಯಕಾರಿಯಾಗಿ ಗೋಚರಿಸುತ್ತಿಲ್ಲ. ತಂಡದ ಕೆಲವು ವಿಭಾಗಗಳಲ್ಲಿ ಪ್ರಮುಖ ತೊಂದರೆಗಳಿದ್ದು ಇದನ್ನು ಸರಿ ಪಡಿಸಿ ಕಾರ್ಯತಂತ್ರ ರೂಪಿಸಿ ಟೀಮ್ ಇಂಡಿಯಾ ಎರಡನೇ ಏಕದಿನದಲ್ಲಿ ಕಣಕ್ಕಿಳಿಯಬೇಕಿದೆ. ಹ್ಯಾಮಿಲ್ಟನ್​ನ ಸೀಡನ್ ಪಾರ್ಕ್ ಪಿಚ್ ಬ್ಯಾಟರ್​ಗಳಿಗೆ ಹೇಳಿ ಮಾಡಿಸಿದ್ದಾಗಿದೆ. ಇಲ್ಲಿ ಇತ್ತೀಚೆಗೆ ನಡೆದ ಪಂದ್ಯಗಳೆಲ್ಲ ಹೈ-ಸ್ಕೋರ್ ಗೇಮ್ ಆಗಿದೆ. ನ್ಯೂಜಿಲೆಂಡ್ ತಂಡ ಈ ಮೈದಾನದಲ್ಲಿ 333 ರನ್ ಚಚ್ಚಿತ್ತು. ಬೌಲರ್​​ಗಳು ಈ ಪಿಚ್​ನಲ್ಲಿ ಕಷ್ಟಪಡುವುದು ಖಚಿತ. ಹೀಗಾಗಿ ಇದೊಂದು ಭಾರತಕ್ಕೆ ಮತ್ತೊಂದು ಅಗ್ನಿಪರೀಕ್ಷೆ.

ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ