‘ಕ್ರಿಕೆಟ್‌ನಲ್ಲೂ ಮೀಸಲಾತಿ ಬೇಕು’; ಬಿಸಿಸಿಐ ಆಯ್ಕೆ ವಿರುದ್ಧ ಟೀಂ ಇಂಡಿಯಾ ಅಭಿಮಾನಿಗಳ ಆಕ್ರೋಶ

IND vs BAN: ಏಕದಿನ ಸರಣಿಗೆ ಈಗಾಗಲೇ ಟೀಂ ಇಂಡಿಯಾವನ್ನು ಪ್ರಕಟಿಸಲಾಗಿದ್ದು, ಪ್ರಕಟಗೊಂಡ ತಂಡದಲ್ಲಿ ಇಬ್ಬರು ಆಟಗಾರರ ಹೆಸರು ನಾಪತ್ತೆಯಾಗಿರುವುದಕ್ಕೆ ಟೀಂ ಇಂಡಿಯಾ ಅಭಿಮಾನಿಗಳು ಬಿಸಿಸಿಐ ವಿರುದ್ಧ ಕಿಡಿಕಾರಿದ್ದಾರೆ.

‘ಕ್ರಿಕೆಟ್‌ನಲ್ಲೂ ಮೀಸಲಾತಿ ಬೇಕು’; ಬಿಸಿಸಿಐ ಆಯ್ಕೆ ವಿರುದ್ಧ ಟೀಂ ಇಂಡಿಯಾ ಅಭಿಮಾನಿಗಳ ಆಕ್ರೋಶ
suryakumar yadav, sanju samson
TV9kannada Web Team

| Edited By: pruthvi Shankar

Nov 25, 2022 | 12:19 PM

ಪ್ರಸ್ತುತ ಟೀಂ ಇಂಡಿಯಾ ನ್ಯೂಜಿಲೆಂಡ್​ನಲ್ಲಿ (India vs New zealand) ಏಕದಿನ ಸರಣಿ ಆಡುತ್ತಿದೆ. ಆ ಬಳಿಕ ಬಾಂಗ್ಲಾದೇಶ ಪ್ರವಾಸ ಮಾಡಲಿದೆ. ಅಲ್ಲಿ 3 ಏಕದಿನ ಹಾಗೂ 3 ಟೆಸ್ಟ್ ಪಂದ್ಯಗಳನ್ನೂ ಸಹ ಆಡಲಾಗುತ್ತದೆ. ಏಕದಿನ ಸರಣಿಗೆ ಈಗಾಗಲೇ ಟೀಂ ಇಂಡಿಯಾವನ್ನು ಪ್ರಕಟಿಸಲಾಗಿದ್ದು, ಪ್ರಕಟಗೊಂಡ ತಂಡದಲ್ಲಿ ಇಬ್ಬರು ಆಟಗಾರರ ಹೆಸರು ನಾಪತ್ತೆಯಾಗಿರುವುದಕ್ಕೆ ಟೀಂ ಇಂಡಿಯಾ ಅಭಿಮಾನಿಗಳು ಬಿಸಿಸಿಐ (BCCI) ವಿರುದ್ಧ ಕಿಡಿಕಾರಿದ್ದಾರೆ. ಅಲ್ಲದೆ ಕೆಲವು ಆಟಗಾರರಿಗೆ ಕ್ರಿಕೆಟ್‌ನಲ್ಲೂ ಮೀಸಲಾತಿ ಬೇಕು ಎಂದು ಬಿಸಿಸಿಐ ಧೋರಣೆಯನ್ನು ದೂಷಿಸಿದ್ದಾರೆ. ಅಷ್ಟಕ್ಕೂ ಬಿಸಿಸಿಐ ಆಯ್ಕೆ ಮಾಡಿರುವ ತಂಡದಲ್ಲಿ ಸೂರ್ಯಕುಮಾರ್ ಯಾದವ್ (Surya Kumar Yadav) ಹಾಗೂ ಸಂಜು ಸ್ಯಾಮ್ಸನ್​ಗೆ (Sanju Samson) ಅವಕಾಶ ನೀಡಿಲ್ಲ. ಬಿಸಿಸಿಐನ ಈ ನಿಲುವು ಈಗ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಐಸಿಸಿ ಟಿ20 ರ್ಯಾಂಕಿಂಗ್​ನಲ್ಲೂ ಅಗ್ರಸ್ಥಾನ

ಭಾರತದ ಸ್ಫೋಟಕ ಬ್ಯಾಟ್ಸ್‌ಮನ್ ಸೂರ್ಯ ಕುಮಾರ್ ಯಾದವ್ ಇತ್ತೀಚೆಗೆ ನಡೆದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ತಮ್ಮ ಬ್ಯಾಟಿಂಗ್ ವೈಭವವನ್ನು ತೋರಿಸಿದ್ದರು. ಅವರ ಹೊಡೆತಗಳಿಗೆ ಅಭಿಮಾನಿಗಳು ಮಾತ್ರವಲ್ಲದೆ ಮಾಜಿ ಅಂತಾರಾಷ್ಟ್ರೀಯ ಕ್ರಿಕೆಟಿಗರೂ ಬೆರಗಾಗಿದ್ದರು. ಸದ್ಯ ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಈ ಯುವ ಆಟಗಾರ ಐಸಿಸಿ ಟಿ20 ರ್ಯಾಂಕಿಂಗ್​ನಲ್ಲೂ ಅಗ್ರಸ್ಥಾನದಲ್ಲಿ ಮುಂದುವರಿದಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪ್ರಸ್ತುತ ಅತ್ಯುತ್ತಮ ಟಿ20 ಬ್ಯಾಟ್ಸ್‌ಮನ್ ಕೂಡ ಆಗಿದ್ದಾರೆ. ಅಲ್ಲದೇ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಸೂರ್ಯ ತಮ್ಮದೇ ಆದ ರೀತಿಯಲ್ಲಿ ಮಿಂಚುತ್ತಿದ್ದಾರೆ. ಆದರೆ ಇಂತಹ ಅದ್ಭುತ ಫಾರ್ಮ್​ನಲ್ಲಿರುವ ಸೂರ್ಯರನ್ನು ಬಾಂಗ್ಲಾದೇಶ ಸರಣಿಯಿಂದ ಕೈಬಿಡಲಾಗಿದೆ.

ಬಿಸಿಸಿಐ ಒಂದು ಜಾತಿಗೆ ಒಲವು ತೋರುತ್ತಿದೆ.

ನಿಗದಿಯಂತೆ ಭಾರತ ತಂಡ ಡಿಸೆಂಬರ್ 4 ರಿಂದ ಬಾಂಗ್ಲಾದೇಶ ಪ್ರವಾಸಕ್ಕೆ ತೆರಳಲಿದೆ. ಈ ಪ್ರವಾಸದ ಭಾಗವಾಗಿ ಭಾರತ ಮೂರು ಏಕದಿನ ಸರಣಿ ಮತ್ತು ಎರಡು ಟೆಸ್ಟ್ ಸರಣಿಗಳನ್ನು ಆಡಲಿದೆ. ಏಕದಿನ ಮಾದರಿಯಲ್ಲಿ ಈಗಾಗಲೇ 14 ಪಂದ್ಯಗಳನ್ನು ಆಡಿರುವ ಸೂರ್ಯಕುಮಾರ್ ಯಾದವ್​ಗೆ ಮಾತ್ರ ಈ ಪ್ರವಾಸದಲ್ಲಿ ಅವಕಾಶ ನೀಡಲಾಗಿಲ್ಲ. ಇದರಿಂದ ಬಿಸಿಸಿಐ ವಿರುದ್ಧ ಎಲ್ಲಾ ಕ್ರಿಕೆಟ್ ಅಭಿಮಾನಿಗಳು ಕೋಪಗೊಂಡಿದ್ದಾರೆ. ಸಂಜು ಸ್ಯಾಮ್ಸನ್ ವಿಚಾರದಲ್ಲೂ ಬಿಸಿಸಿಐ ಈ ರೀತಿ ವರ್ತಿಸುತ್ತಿರುವುದಕ್ಕೆ ಸಿಟ್ಟಿಗೆದ್ದಿದ್ದಾರೆ. ಬಿಸಿಸಿಐ ಒಂದು ಜಾತಿ ಪರ ಒಲವು ತೋರುತ್ತಿದ್ದು, ಉಳಿದವರಿಗೆ ಅನ್ಯಾಯ ಮಾಡುತ್ತಿದೆ ಎಂದು ಅನೇಕ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಆರೋಪಿಸುತ್ತಿದ್ದಾರೆ. ಅಲ್ಲದೆ ಟ್ವಿಟ್ಟರ್​ನಲ್ಲಿ #Castiest_BCCI ಎಂಬ ಹ್ಯಾಶ್ ಟ್ಯಾಗ್​ನೊಂದಿಗೆ ಟ್ವೀಟ್ ಕೂಡ ಮಾಡುತ್ತಿದ್ದು, ಕೆಲವು ಆಟಗಾರರಿಗೆ ಕ್ರಿಕೆಟ್​ನಲ್ಲೂ ಮೀಸಲಾತಿ ಬೇಕು ಎಂದು ಬಿಸಿಸಿಐ ವಿರುದ್ಧ ಗುಡುಗಿದ್ದಾರೆ.

ಟಿ20ಯಲ್ಲಿ ಅದ್ಭುತವಾಗಿ ಆಡುತ್ತಿರುವ ಸೂರ್ಯಕುಮಾರ್ ಯಾದವ್ ಏಕದಿನ ಪಂದ್ಯಗಳನ್ನು ಆಡಲು ಅಸಮರ್ಥರೇ? ಏಕದಿನ ಪಂದ್ಯಗಳನ್ನು ಆಡಲು ಏಕೆ ಅವಕಾಶ ನೀಡಲಿಲ್ಲ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಫಾರ್ಮ್‌ನಿಂದ ಹೊರಗುಳಿದ ಆಟಗಾರರನ್ನು ತಂಡಕ್ಕೆ ತೆಗೆದುಕೊಳ್ಳುವ ಮೂಲಕ ಬಿಸಿಸಿಐ ಸೂರ್ಯ ಮತ್ತು ಸಂಜು ಸ್ಯಾಮ್ಸನ್‌ನಂತಹ ಆಟಗಾರರಿಗೆ ಅನ್ಯಾಯ ಮಾಡುತ್ತಿದೆ ಎಂದು ಟೀಕಿಸುತ್ತಿದ್ದಾರೆ.

ಟೆಸ್ಟ್ ಮತ್ತು ಏಕದಿನ ಸರಣಿಯನ್ನು ಆಡಲಿದೆ

ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿ ಶುಕ್ರವಾರದಿಂದ ಆರಂಭವಾಗಿದೆ. ಶಿಖರ್ ಧವನ್ ನಾಯಕತ್ವದಲ್ಲಿ ಈ ಸರಣಿಗೆ ತಂಡವನ್ನು ಪ್ರಕಟಿಸಲಾಗಿದ್ದು, ಈ ಪ್ರವಾಸದಲ್ಲಿ ಸೂರ್ಯ ಮತ್ತು ಸಂಜು ಸ್ಯಾಮ್ಸನ್ ಕೂಡ ಇದ್ದಾರೆ. ಆದರೆ ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಗೆ ಅವರ್ಯಾರಿಗೂ ಅವಕಾಶ ನೀಡಲಿಲ್ಲ. ಟೀಂ ಇಂಡಿಯಾ ನಿಯಮಿತ ನಾಯಕ ರೋಹಿತ್ ನಾಯಕತ್ವದಲ್ಲಿ ಬಾಂಗ್ಲಾದೇಶ ವಿರುದ್ಧ ಟೆಸ್ಟ್ ಮತ್ತು ಏಕದಿನ ಸರಣಿಯನ್ನು ಆಡಲಿದೆ. ಈಗಾಗಲೇ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಜಡೇಜಾ ಸಂಪೂರ್ಣ ಫಿಟ್ನೆಸ್ ಪಡೆದಿಲ್ಲ. ಇದರೊಂದಿಗೆ ಅವರ ಜಾಗಕ್ಕೆ ಮತ್ತೊಬ್ಬ ಆಟಗಾರನನ್ನು ತಂಡದಲ್ಲಿ ಆಯ್ಕೆ ಮಾಡುವ ಸಾಧ್ಯತೆ ಇದೆ. ಸದ್ಯದಲ್ಲೇ ಸೂರ್ಯ ಟೆಸ್ಟ್‌ಗೂ ಆಯ್ಕೆಯಾಗಲಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಆದರೆ ಸೂರ್ಯ ನಿಧಾನವಾಗಿ ಸೈಡ್ ಲೈನ್ ಆಗುತ್ತಾರಾ ಎಂಬ ಅನುಮಾನ ಅಭಿಮಾನಿಗಳಲ್ಲಿ ಕಾಡುತ್ತಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada