India vs Bangladesh: ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡ ಪ್ರಕಟ: ಜಡೇಜಾ ಔಟ್
India Squad For Bangladesh Series: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಬಾಂಗ್ಲಾ ವಿರುದ್ಧದ ಏಕದಿನ ಸರಣಿಗೆ ಟೀಮ್ ಇಂಡಿಯಾವನ್ನು ಪ್ರಕಟ ಮಾಡಿದೆ. ಕೆಲ ಮಹತ್ವದ ತೀರ್ಮಾನ ಕೈಗೊಂಡಿರುವ ಬಿಸಿಸಿಐ ರವೀಂದ್ರ ಜಡೇಜಾ ಹಾಗೂ ಯಶ್ ದಯಾಳ್ ಅವರನ್ನು ಆಯ್ಕೆ ಮಾಡಿಲ್ಲ.
ಭಾರತ ಕ್ರಿಕೆಟ್ ತಂಡ ಸದ್ಯ ನ್ಯೂಜಿಲೆಂಡ್ ಪ್ರವಾಸದಲ್ಲಿದೆ. ಕಿವೀಸ್ ನಾಡಲ್ಲಿ ಈಗಾಗಲೇ ಟಿ20 ಸರಣಿಯನ್ನು ವಶಪಡಿಸಿಕೊಂಡಿರುವ ಟೀಮ್ ಇಂಡಿಯಾ (Team India) ಇದೀಗ ಏಕದಿನ ಸರಣಿಗೆ ಸಜ್ಜಾಗುತ್ತಿದೆ. ಶುಕ್ರವಾರ ಆಕ್ಲೆಂಡ್ನ ಈಡನ್ ಪಾರ್ಕ್ನಲ್ಲಿ ಮೊದಲ ಏಕದಿನ ಪಂದ್ಯ ನಡೆಯಲಿದೆ. ಈ ಸರಣಿ ಬಳಿಕ ಭಾರತ ಬಾಂಗ್ಲಾದೇಶ (India vs Bangladesh) ಪ್ರವಾಸ ಕೈಗೊಳ್ಳಲಿದೆ. ಇದೀಗ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಬಾಂಗ್ಲಾ ವಿರುದ್ಧದ ಏಕದಿನ ಸರಣಿಗೆ ಟೀಮ್ ಇಂಡಿಯಾವನ್ನು ಪ್ರಕಟ ಮಾಡಿದೆ. ಕೆಲ ಮಹತ್ವದ ತೀರ್ಮಾನ ಕೈಗೊಂಡಿರುವ ಬಿಸಿಸಿಐ ರವೀಂದ್ರ ಜಡೇಜಾ (Ravindra Jadeja) ಹಾಗೂ ಯಶ್ ದಯಾಳ್ ಅವರನ್ನು ಆಯ್ಕೆ ಮಾಡಿಲ್ಲ.
ಆಲ್‌ರೌಂಡರ್ ಜಡೇಜ ಅವರಿಗೆ ಕೆಲವು ತಿಂಗಳುಗಳ ಹಿಂದೆ ಮೊಣಕಾಲಿನ ಗಾಯಕ್ಕೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಅವರಿನ್ನೂ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ ಎಂದು ಬಿಸಿಸಿಐ ಹೇಳಿದ್ದು ಈ ಕಾರಣಕ್ಕಾಗಿ ಜಡೇಜಾರನ್ನು ಆಯ್ಕೆಗೆ ಪರಿಗಣಿಸಿಲ್ಲವಂತೆ. ಇತ್ತ ಬೆನ್ನುನೋವಿನಿಂದ ಬಳಲಿರುವ ಯಶ್ ದಯಾಳ್ ಕೂಡ ಹೊರಬಿದ್ದಿದ್ದಾರೆ. ಇನ್ನು ಬಾಂಗ್ಲಾ ವಿರುದ್ಧದ ಸರಣಿಗೆ ಹಿರಿಯ ಆಟಗಾರರು ತಂಡ ಸೇರಿಕೊಂಡಿದ್ದಾರೆ. ನ್ಯೂಜಿಲೆಂಡ್‌ನಲ್ಲಿ ಶಿಖರ್ ಧವನ್ ತಂಡವನ್ನು ಮುನ್ನಡೆಸುತ್ತಿದ್ದಾರೆ. ಬಾಂಗ್ಲಾ ಸರಣಿಗೆ ರೋಹಿತ್ ತಂಡಕ್ಕೆ ಮರಳಿದ್ದು ಕೆಎಲ್. ರಾಹುಲ್, ವಿರಾಟ್ ಕೊಹ್ಲಿ ಕೂಡ ಸ್ಥಾನ ಪಡೆದುಕೊಂಡಿದ್ದಾರೆ.
ಜಡೇಜಾ ಜಾಗಕ್ಕೆ ಶಹ್ಬಾಜ್ ಅಹ್ಮದ್?:
ಜಡೇಜಾ ಹೊರಬಿದ್ದ ಕಾರಣ ಇವರ ಜಾಗಕ್ಕೆ ಬೆಂಗಾಲ್ ಆಲ್ರೌಂಡರ್ ಶಹ್ಬಾಜ್ ಅಹ್ಹದ್ ಆಯ್ಕೆ ಆಗಲಿದ್ದಾರೆ ಎಂದು ಹೇಳಲಾಗಿದೆ. ಇವರು ಸದ್ಯ ನ್ಯೂಜಿಲೆಂಡ್ ವಿರುದ್ಧದದ ಏಕದಿನ ಸರಣಿಯಲ್ಲೂ ಸ್ಥಾನ ಪಡೆದುಕೊಂಡಿದ್ದಾರೆ. ಕಳೆದ ಸಪ್ಟೆಂಬರ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಶಹ್ಬಾಜ್ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದರು. ವಿಜಯ್ ಹಜಾರೆ ಟ್ರೋಫಿಯಲ್ಲಿ ಶಹ್ಬಾಜ್ ಭರ್ಜರಿ ಪ್ರದರ್ಶನ ತೋರಿದ್ದರು. ಆಡಿದ 6 ಪಂದ್ಯಗಳಲ್ಲಿ 51.2 ಓವರ್ ಬೌಲಿಂಗ್ ಮಾಡಿ 4.87 ಎಕಾನಮಿ ಮೂಲಕ 11 ವಿಕೆಟ್ ಪಡೆದಿದ್ದರು. ಅಲ್ಲದೆ ಬ್ಯಾಟಿಂಗ್ನಲ್ಲೂ ಎರಡು ಅರ್ಧಶತಕ ಸಿಡಿಸಿದ್ದರು.
#TeamIndia for Bangladesh ODIs: Rohit Sharma(C), KL Rahul (VC), Shikhar Dhawan, Virat Kohli, Rajat Patidar, Shreyas Iyer, Rahul Tripathi, R Pant (WK), Ishan Kishan (WK), Shahbaz Ahmed, Axar Patel, W Sundar, Shardul Thakur, Mohd. Shami, Mohd. Siraj, Deepak Chahar, Kuldeep Sen.
— BCCI (@BCCI) November 23, 2022
ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಕೆ.ಎಲ್. ರಾಹುಲ್ (ಉಪ ನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ, ರಜತ್ ಪಾಟೀದಾರ್, ಶ್ರೇಯಸ್ ಅಯ್ಯರ್, ರಾಹುಲ್ ತ್ರಿಪಾಠಿ, ರಿಷಭ್ ಪಂತ್ (ವಿಕೆಟ್ ಕೀಪರ್), ಇಶಾನ್ ಕಿಶನ್, ಶಾಬಾಜ್ ಅಹಮದ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ದೀಪಕ್ ಚಾಹರ್, ಕುಲದೀಪ್ ಸೇನ್.
Published On - 8:05 am, Thu, 24 November 22