India vs New Zealand: ಭಾರತ-ನ್ಯೂಜಿಲೆಂಡ್ ನಡುವಣ ಏಕದಿನ ಸರಣಿ ವೇಳಾಪಟ್ಟಿ ಹಾಗೂ ತಂಡ ಹೀಗಿದೆ

India vs New Zealand Odi Schedule: ಈ ಸರಣಿಯಿಂದ ಟೀಮ್ ಇಂಡಿಯಾದ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಕೆಎಲ್ ರಾಹುಲ್ ಸೇರಿದಂತೆ ಪ್ರಮುಖರು ಹೊರಗುಳಿದಿದ್ದಾರೆ.

India vs New Zealand: ಭಾರತ-ನ್ಯೂಜಿಲೆಂಡ್ ನಡುವಣ ಏಕದಿನ ಸರಣಿ ವೇಳಾಪಟ್ಟಿ ಹಾಗೂ ತಂಡ ಹೀಗಿದೆ
Team India
Follow us
TV9 Web
| Updated By: ಝಾಹಿರ್ ಯೂಸುಫ್

Updated on: Nov 23, 2022 | 10:59 PM

India vs New Zealand ODI: ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯನ್ನು 1-0 ಅಂತರದಿಂದ ಗೆದ್ದು ಬೀಗಿರುವ ಟೀಮ್ ಇಂಡಿಯಾ (Team India) ಇದೀಗ ಏಕದಿನ ಸರಣಿಗೆ ಸಜ್ಜಾಗಿದೆ. ಈ ಸರಣಿಯಲ್ಲಿ ಭಾರತ ತಂಡವು ಒಟ್ಟು ಮೂರು ಪಂದ್ಯಗಳನ್ನು ಆಡಲಿದೆ. ವಿಶೇಷ ಎಂದರೆ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾವನ್ನು ಮುನ್ನಡೆಸಿದ್ದ ಹಾರ್ದಿಕ್ ಪಾಂಡ್ಯ ಈ ಸರಣಿಯಿಂದ ಹೊರಗುಳಿದಿದ್ದಾರೆ. ಹಾಗೆಯೇ ತಂಡದ ನಾಯಕನಾಗಿ ಶಿಖರ್ ಧವನ್ ಕಾಣಿಸಿಕೊಳ್ಳಲಿದ್ದಾರೆ. ಈ ಸರಣಿಯು ಶುಕ್ರವಾರದಿಂದ ಶುರುವಾಗಲಿದ್ದು, ನವೆಂಬರ್ 30 ರಂದು ಮುಗಿಯಲಿದೆ. ಈ ಸರಣಿಯ ಸಂಪೂರ್ಣ ವೇಳಾಪಟ್ಟಿ ಈ ಕೆಳಗಿನಂತಿದೆ.

  • ನವೆಂಬರ್-25: ಮೊದಲ ಏಕದಿನ ಪಂದ್ಯ- ಆಕ್ಲೆಂಡ್
  • ನವೆಂಬರ್-27: ಎರಡನೇ ಏಕದಿನ ಪಂದ್ಯ- ಹ್ಯಾಮಿಲ್ಟನ್
  • ನವೆಂಬರ್ 30: ಮೂರನೇ ಏಕದಿನ ದಿನ ಪಂದ್ಯ- ಕ್ರೈಸ್ಟ್‌ಚರ್ಚ್

ಈ ಎಲ್ಲಾ ಪಂದ್ಯಗಳು ಭಾರತೀಯ ಕಾಲಮಾನ ಬೆಳಿಗ್ಗೆ 7 ಗಂಟೆಯಿಂದ ಶುರುವಾಗಲಿದೆ.

ಇನ್ನು ಈ ಸರಣಿಯಿಂದ ಟೀಮ್ ಇಂಡಿಯಾದ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಕೆಎಲ್ ರಾಹುಲ್ ಸೇರಿದಂತೆ ಪ್ರಮುಖರು ಹೊರಗುಳಿದಿದ್ದಾರೆ. ಹೀಗಾಗಿ ತಂಡದಲ್ಲಿ ಯುವ ಆಟಗಾರರು ಸ್ಥಾನ ಪಡೆದಿದ್ದಾರೆ. ಈ ಸರಣಿಗಾಗಿ ಟೀಮ್ ಇಂಡಿಯಾ ಈ ಕೆಳಗಿನಂತಿದೆ.

ಇದನ್ನೂ ಓದಿ
Image
Suryakumar Yadav: ಟಿ20 ಕ್ರಿಕೆಟ್​ನಲ್ಲಿ ಹೊಸ ಇತಿಹಾಸ ಬರೆದ ಸೂರ್ಯಕುಮಾರ್ ಯಾದವ್
Image
BPL 2023: ಬಾಂಗ್ಲಾದೇಶ್ ಪ್ರೀಮಿಯರ್ ಲೀಗ್​ಗೆ ಭಾರತೀಯ ಆಟಗಾರ ಎಂಟ್ರಿ..!
Image
IPL 2023: 4 ವರ್ಷಗಳ ಬಳಿಕ ಐಪಿಎಲ್​ನತ್ತ ಜೋ ರೂಟ್..!
Image
ICC T20 Rankings: ನೂತನ ಟಿ20 ರ‍್ಯಾಂಕಿಂಗ್ ಪ್ರಕಟ: ಟೀಮ್ ಇಂಡಿಯಾದ ಏಕೈಕ ಆಟಗಾರನಿಗೆ ಸ್ಥಾನ

ಟೀಮ್ ಇಂಡಿಯಾ ಏಕದಿನ ತಂಡ:

ಶಿಖರ್ ಧವನ್ (ನಾಯಕ), ರಿಷಭ್ ಪಂತ್ (ಉಪನಾಯಕ), ಶುಭಮನ್ ಗಿಲ್, ದೀಪಕ್ ಹೂಡಾ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್, ಯುಜ್ವೇಂದ್ರ ಚಾಹಲ್, ಕುಲದೀಪ್ ಯಾದವ್, ಶಹಬಾಜ್ ಅಹ್ಮದ್, ವಾಷಿಂಗ್ಟನ್ ಸುಂದರ್, ಉಮ್ರಾನ್ ಮಲಿಕ್ , ಅರ್ಷದೀಪ್ ಸಿಂಗ್, ಶಾರ್ದೂಲ್ ಠಾಕೂರ್, ದೀಪಕ್ ಚಹಾರ್.

ನ್ಯೂಜಿಲೆಂಡ್ ಏಕದಿನ ತಂಡ ಹೀಗಿದೆ:

ಕೇನ್ ವಿಲಿಯಮ್ಸನ್ (ನಾಯಕ), ಫಿನ್ ಅಲೆನ್, ಮೈಕೆಲ್ ಬ್ರೇಸ್‌ವೆಲ್, ಡೆವೊನ್ ಕಾನ್ವೇ (ವಿಕೆಟ್ ಕೀಪರ್), ಲಾಕಿ ಫರ್ಗುಸನ್, ಮ್ಯಾಟ್ ಹೆನ್ರಿ, ಟಾಮ್ ಲ್ಯಾಥಮ್, ಆಡಮ್ ಮಿಲ್ನ್, ಡ್ಯಾರಿಲ್ ಮಿಚೆಲ್, ಜೇಮ್ಸ್ ನೀಶಮ್, ಗ್ಲೆನ್ ಫಿಲಿಪ್ಸ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ.

ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕೋರ್ ಕಮಿಟಿ ಸಭೆ ಸೇರಿದಂತೆ ನಾಳೆ ರಾಜ್ಯ ಬಿಜೆಪಿಯ ಮೂರು ಮೀಟಿಂಗ್​ಗಳು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ