AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೆಸ್ಟ್ ಕ್ರಿಕೆಟ್​ನಲ್ಲಿ ಅತಿ ಕಡಿಮೆ ಮೊತ್ತಕ್ಕೆ ಆಲೌಟ್; ಪಟ್ಟಿಯಲ್ಲಿ ಟೀಂ ಇಂಡಿಯಾ

Test Cricket's Lowest Scores: ಬಾಂಗ್ಲಾದೇಶ ಇತ್ತೀಚೆಗೆ ಟೆಸ್ಟ್‌ನಲ್ಲಿ 64 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಅತ್ಯಂತ ಕಡಿಮೆ ಮೊತ್ತ ಗಳಿಸಿದ ತಂಡಗಳ ಪಟ್ಟಿಗೆ ಸೇರ್ಪಡೆಯಾಗಿದೆ. ನ್ಯೂಜಿಲೆಂಡ್‌ನ 26 ರನ್‌ಗಳ ಅತಿ ಕಡಿಮೆ ಸ್ಕೋರ್ ದಾಖಲೆ ಮತ್ತು ಭಾರತದ 36 ರನ್‌ಗಳಂತಹ ಕಹಿ ಅನುಭವಗಳನ್ನು ನೆನಪಿಸುವ ಈ ಪಟ್ಟಿಯಲ್ಲಿ ವಿಂಡೀಸ್, ದಕ್ಷಿಣ ಆಫ್ರಿಕಾ ಸೇರಿವೆ. ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ತಂಡಗಳು ಗಳಿಸಿದ ಹೀನಾಯ ಸ್ಕೋರ್‌ಗಳ ಕುರಿತು ಇಲ್ಲಿ ಮಾಹಿತಿ ನೀಡಲಾಗಿದೆ.

ಟೆಸ್ಟ್ ಕ್ರಿಕೆಟ್​ನಲ್ಲಿ ಅತಿ ಕಡಿಮೆ ಮೊತ್ತಕ್ಕೆ ಆಲೌಟ್; ಪಟ್ಟಿಯಲ್ಲಿ ಟೀಂ ಇಂಡಿಯಾ
Aus Vs Ban
ಪೃಥ್ವಿಶಂಕರ
|

Updated on:Aug 22, 2026 | 3:20 PM

Share

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಹಾಗೂ ಬಾಂಗ್ಲಾದೇಶ (Australia vs Bangladesh) ನಡುವಿನ ಎರಡನೇ ಟೆಸ್ಟ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಬಾಂಗ್ಲಾದೇಶ ತಂಡ ಕೇವಲ 64 ರನ್​ಗಳಿಗೆ ಆಲೌಟ್ ಆಗಿದೆ. ಮೊದಲ ಟೆಸ್ಟ್​ನಲ್ಲಿ ಆಸ್ಟ್ರೇಲಿಯಾವನ್ನು ಮಣಿಸಿದ್ದ ಬಾಂಗ್ಲಾದೇಶಕ್ಕೆ ಎರಡನೇ ಟೆಸ್ಟ್​ನಲ್ಲಿ 100 ರನ್​ಗಳ ಗಡಿ ದಾಟಲು ಸಾಧ್ಯವಾಗಲಿಲ್ಲ. ಕೊನೆಯ ವಿಕೆಟ್​ಗೆ 25 ರನ್​ಗಳ ಜೊತೆಯಾಟ ಮೂಡಿಬರಲಿಲ್ಲ ಎಂದಿದ್ದರೆ ಬಾಂಗ್ಲಾದೇಶ 40 ರನ್​ಗಳ ಗಡಿ ದಾಟಲು ಸಾಧ್ಯವಾಗುತ್ತಿರಲಿಲ್ಲ. ಈ ಮೂಲಕ ಬಾಂಗ್ಲಾದೇಶ ಟೆಸ್ಟ್ ಕ್ರಿಕೆಟ್​ನ ಇನ್ನಿಂಗ್ಸ್ ಒಂದರಲ್ಲಿ ಅತ್ಯಲ್ಪ ಮೊತ್ತ ದಾಖಲಿಸಿದ ತಂಡಗಳ ಪಟ್ಟಿಗೆ ಸೇರ್ಪಡೆಗೊಂಡಿತು. ಆದಾಗ್ಯೂ ಟೆಸ್ಟ್ ಕ್ರಿಕೆಟ್​ನಲ್ಲಿ ಅತಿ ಕಡಿಮೆ ಮೊತ್ತ ಕಲೆಹಾಕಿದ ತಂಡ ಬಾಂಗ್ಲಾದೇಶವಲ್ಲ. ಬಾಂಗ್ಲಾಕ್ಕೂ ಮೊದಲು ಹಲವು ತಂಡಗಳು 50 ರನ್​ಗಳ ಗಡಿ ದಾಟುವುದಕ್ಕೂ ವಿಫಲವಾಗಿವೆ. ಇದರಲ್ಲಿ ಟೀಂ ಇಂಡಿಯಾವೂ ಸೇರಿದೆ.

26 ರನ್​​ಗಳಿಗೆ ಕಿವೀಸ್ ಆಲೌಟ್

ಟೆಸ್ಟ್ ಕ್ರಿಕೆಟ್‌ನಲ್ಲಿ ಒಂದೇ ಇನ್ನಿಂಗ್ಸ್‌ನಲ್ಲಿ ಅತಿ ಕಡಿಮೆ ಸ್ಕೋರ್ ಗಳಿಸಿದ ಬೇಡದ ದಾಖಲೆ ನ್ಯೂಜಿಲೆಂಡ್ ಹೆಸರಿನಲ್ಲಿದೆ. ಮಾರ್ಚ್ 25, 1955 ರಂದು, ಆಕ್ಲೆಂಡ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ ನ್ಯೂಜಿಲೆಂಡ್ ಕೇವಲ 26 ರನ್‌ಗಳಿಗೆ ಆಲೌಟ್ ಆಗಿತ್ತು. ಇದು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ದಾಖಲಾದ ಅತ್ಯಂತ ಕಡಿಮೆ ತಂಡದ ಸ್ಕೋರ್ ಆಗಿದೆ.

2ನೇ ಸ್ಥಾನದಲ್ಲಿ ವೆಸ್ಟ್ ಇಂಡೀಸ್

ಈ ಪಟ್ಟಿಯಲ್ಲಿ ವೆಸ್ಟ್ ಇಂಡೀಸ್ ತಂಡ ಎರಡನೇ ಸ್ಥಾನದಲ್ಲಿದ್ದು, ಜುಲೈ 2025 ರಲ್ಲಿ ಕಿಂಗ್ಸ್ಟನ್​ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್​ನಲ್ಲಿ ವೆಸ್ಟ್ ಇಂಡೀಸ್ ಕೇವಲ 27 ರನ್​ಗಳಿಗೆ ಆಲೌಟ್ ಆಗಿತ್ತು. ಆಸ್ಟ್ರೇಲಿಯಾದ ವೇಗಿಗಳ ದಾಳಿಗೆ ತತ್ತರಿಸಿದ ವಿಂಡೀಸ್​ ತಂಡದ ಯಾವುದೇ ಬ್ಯಾಟ್ಸ್​ಮನ್ ಎರಡಂಕಿ ದಾಟಲು ಸಾಧ್ಯವಾಗಿರಲಿಲ್ಲ.

ದಕ್ಷಿಣ ಆಫ್ರಿಕಾ ತಂಡ ಕೂಡ ಈ ಪಟ್ಟಿಯಲ್ಲಿ ಹಲವಾರು ಬಾರಿ ಕಾಣಿಸಿಕೊಂಡಿದ್ದು, 1896 ರಲ್ಲಿ ಗೆಬೆಹಾದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ 30 ರನ್‌ ಮತ್ತು 1924 ರಲ್ಲಿ ಬರ್ಮಿಂಗ್ಹ್ಯಾಮ್‌ನಲ್ಲಿ ಇಂಗ್ಲೆಂಡ್ ವಿರುದ್ಧ 30 ರನ್‌ಗಳಿಗೆ ಆಲೌಟ್ ಆಗಿತ್ತು. ಇದಲ್ಲದೆ 1899 ರಲ್ಲಿ ಇಂಗ್ಲೆಂಡ್‌ ವಿರುದ್ಧ ಕೇಪ್​ಟೌನ್‌ನಲ್ಲಿ 35 ರನ್‌ ಮತ್ತು 1932 ರಲ್ಲಿ ಮೆಲ್ಬೋರ್ನ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 36 ರನ್‌ಗಳಿಗೆ ಆಲೌಟ್ ಆಗಿತ್ತು.

36 ರನ್‌ಗಳಿಗೆ ಭಾರತ ಆಲೌಟ್

ಇನ್ನು ಟೀಂ ಇಂಡಿಯಾದ ಬಗ್ಗೆ ಹೇಳುವುದಾದರೆ.. 2020 ರಲ್ಲಿ ಅಡಿಲೇಡ್‌ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಹಗಲು-ರಾತ್ರಿ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ ಕೇವಲ 36 ರನ್‌ಗಳಿಗೆ ಆಲೌಟ್ ಆಗಿತ್ತು. ಇದು ಭಾರತೀಯ ಟೆಸ್ಟ್ ಇತಿಹಾಸದಲ್ಲಿ ಅತ್ಯಂತ ಕಡಿಮೆ ಸ್ಕೋರ್ ಆಗಿದೆ. ಇದಕ್ಕೂ ಮೊದಲು, 1974 ರಲ್ಲಿ ಲಾರ್ಡ್ಸ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತ 42 ರನ್‌ಗಳಿಗೆ ಆಲೌಟ್ ಆಗಿತ್ತು.

IND vs SL: 2ನೇ ಟೆಸ್ಟ್​​ಗೂ ಮುನ್ನ ಶ್ರೀಲಂಕಾ ತಂಡದಲ್ಲಿ 2 ಬದಲಾವಣೆ

ಟೆಸ್ಟ್‌ಗಳಲ್ಲಿ ಅತಿ ಕಡಿಮೆ ಸ್ಕೋರ್‌ಗಳ ಪಟ್ಟಿ

  • ನ್ಯೂಜಿಲೆಂಡ್: 26 ರನ್‌ vs ಇಂಗ್ಲೆಂಡ್, 1955
  • ವೆಸ್ಟ್ ಇಂಡೀಸ್: 27 ರನ್‌ಗಳು vs ಆಸ್ಟ್ರೇಲಿಯಾ, 2025
  • ದಕ್ಷಿಣ ಆಫ್ರಿಕಾ: 30 ರನ್‌ಗಳು vs ಇಂಗ್ಲೆಂಡ್, 1896
  • ದಕ್ಷಿಣ ಆಫ್ರಿಕಾ: 30 ರನ್‌ಗಳು vs ಇಂಗ್ಲೆಂಡ್, 1924
  • ದಕ್ಷಿಣ ಆಫ್ರಿಕಾ: 35 ರನ್‌ಗಳು vs ಇಂಗ್ಲೆಂಡ್, 1899
  • ದಕ್ಷಿಣ ಆಫ್ರಿಕಾ: 36 ರನ್‌ಗಳು vs ಆಸ್ಟ್ರೇಲಿಯಾ, 1932
  • ಭಾರತ: 36 ರನ್‌ಗಳು vs ಆಸ್ಟ್ರೇಲಿಯಾ, 2020.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:17 pm, Sat, 22 August 26

Follow Us
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಜಗ್ಗು ಮಮ್ಮಿಯ ವ್ಯಂಗ್ಯ ಮಾಡಿದ ತಾಂಡವ್​​ಗೆ ಸುದೀಪ್ ತರಾಟೆ: ವಿಡಿಯೋ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಭಾರತ ಮಂಟಪದಲ್ಲಿ ಬ್ರಿಕ್ಸ್ ನಾಯಕರೊಂದಿಗೆ ಸಸಿ ನೆಟ್ಟ ಪ್ರಧಾನಿ ಮೋದಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಥಣಿಸಂದ್ರದ ರಿಸರ್ಚ್ ಸೆಂಟರ್‌ಗೆ ಸಚಿವ ರಾಮಲಿಂಗಾರೆಡ್ಡಿ ದಿಢೀರ್ ಭೇಟಿ
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಚಾಮರಾಜನಗರವನ್ನು 'ಕಾಡುಗಳ್ಳ ಮುಕ್ತ' ಮಾಡಲು ಸರ್ಕಾರದ ಬಿಗ್ ಪ್ಲಾನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಬ್ರಿಕ್ಸ್​ ವೇದಿಕೆಯಲ್ಲಿ ಗಮನಸೆಳೆದ ರಾಮೇಶ್ವರಂ ದೇವಾಲಯದ ಸ್ಕ್ರೀನ್
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಅಬುಧಾಬಿ ಕ್ರೌನ್ ಪ್ರಿನ್ಸ್​ ಜೊತೆ ಪ್ರಧಾನಿ ಮೋದಿ ದ್ವಿಪಕ್ಷೀಯ ಮಾತುಕತೆ
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್