ಚೊಚ್ಚಲ ಆವೃತ್ತಿಯ ಯುಎಸ್ ಮಾಸ್ಟರ್ಸ್ ಟಿ10 ಲೀಗ್​ ಗೆದ್ದ ಟೆಕ್ಸಾಸ್ ಚಾರ್ಜರ್ಸ್..!

|

Updated on: Aug 28, 2023 | 2:03 PM

US Masters T10 2023: ಆಗಸ್ಟ್ 27 ರಂದು ನಡೆದ ಯುಎಸ್ ಮಾಸ್ಟರ್ಸ್ ಟಿ10 ಲೀಗ್​ನ ಫೈನಲ್ ಪಂದ್ಯದಲ್ಲಿ ನ್ಯೂಯಾರ್ಕ್ ವಾರಿಯರ್ಸ್ ತಂಡವನ್ನು ಮಣಿಸಿದ ಬೆನ್ ಡಂಕ್ ನೇತೃತ್ವದ ಟೆಕ್ಸಾಸ್ ಚಾರ್ಜರ್ಸ್ ತಂಡ ಚೊಚ್ಚಲ ಆವೃತ್ತಿಯ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಚೊಚ್ಚಲ ಆವೃತ್ತಿಯ ಯುಎಸ್ ಮಾಸ್ಟರ್ಸ್ ಟಿ10 ಲೀಗ್​ ಗೆದ್ದ ಟೆಕ್ಸಾಸ್ ಚಾರ್ಜರ್ಸ್..!
ಟೆಕ್ಸಾಸ್ ಚಾರ್ಜರ್ಸ್
Follow us on

ಆಗಸ್ಟ್ 27 ರಂದು ನಡೆದ ಯುಎಸ್ ಮಾಸ್ಟರ್ಸ್ ಟಿ10 ಲೀಗ್​ನ (US Masters T10 2023) ಫೈನಲ್ ಪಂದ್ಯದಲ್ಲಿ ನ್ಯೂಯಾರ್ಕ್ ವಾರಿಯರ್ಸ್ ತಂಡವನ್ನು ಮಣಿಸಿದ ಬೆನ್ ಡಂಕ್ ನೇತೃತ್ವದ ಟೆಕ್ಸಾಸ್ ಚಾರ್ಜರ್ಸ್ (New York Warriors vs Texas Chargers) ತಂಡ ಚೊಚ್ಚಲ ಆವೃತ್ತಿಯ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಯಾರ್ಕ್ ವಾರಿಯರ್ಸ್ ತಂಡ 92 ರನ್​ಗಳ ಗುರಿ ನೀಡಿತು. ಈ ಗುರಿ ಬೆನ್ನಟ್ಟಿದ ಟೆಕ್ಸಾಸ್ ಚಾರ್ಜರ್ಸ್ ತಂಡ ನಿಗದಿತ 10 ಓವರ್​ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 92 ರನ್ ಕಲೆಹಾಕಿತು. ಹೀಗಾಗಿ ಪಂದ್ಯ ಟೈ ಆಯಿತು. ಆ ಬಳಿಕ ನಡೆದ ಒಂದು-ಓವರ್ ಎಲಿಮಿನೇಟರ್‌ನಲ್ಲಿ ಮೊದಲು ಬ್ಯಾಟ್ ಮಾಡಿದ ಟೆಕ್ಸಾಸ್ ಚಾರ್ಜರ್ಸ್ ತಂಡ 6 ಎಸೆತಗಳಲ್ಲಿ 1 ವಿಕೆಟ್ ಕಳೆದುಕೊಂಡು 15 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ನ್ಯೂಯಾರ್ಕ್ ವಾರಿಯರ್ಸ್ ಕೇವಲ 13 ರನ್ ಗಳಿಸಲಷ್ಟೇ ಶಕ್ತವಾಗಿ 2 ರನ್​ಗಳಿಂದ ಸೋಲೊಪ್ಪಿಕೊಂಡಿದಲ್ಲದೆ ಚಾಂಪಿಯನ್ ಆಗುವುದರಿಂದ ವಂಚಿತವಾಯಿತು.

ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ನ್ಯೂಯಾರ್ಕ್ ವಾರಿಯರ್ಸ್ ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಡುವಲ್ಲಿ ಆರಂಭಿಕರು ಎಡವಿದರು. ಆರಂಭಿಕರಾಗಿ ಕಣಕ್ಕಿಳಿದಿದ್ದ ಕಮ್ರಾನ್ ಅಕ್ಮಲ್ ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸಿ ಶೂನ್ಯಕ್ಕೆ ಪೆವಿಲಿಯನ್ ಸೇರಿಕೊಂಡರು. ಮತ್ತೊಬ್ಬ ಆರಂಭಿಕರಾಗಿ ಕಣಕ್ಕಿಳಿದಿದ್ದ ತಿಲಕರತ್ನೆ ದಿಲ್ಶನ್ 18ರನ್​ಗಳ ಕೊಡುಗೆ ನೀಡಿದರೆ, ಮೂರನೇ ಕ್ರಮಾಂಕದಲ್ಲಿ ಬಂದ ರಿಚರ್ಡ್​ ಲೆವಿ ಕೂಡ 17 ರನ್​ಗಳಿಗೆ ಇನ್ನಿಂಗ್ಸ್ ಮುಗಿಸಿದರು.

ಅಬುದಾಬಿ ಟಿ10 ಲೀಗ್​ ಗೆದ್ದ ರೈನಾ ತಂಡ; ಟಿ20 ವಿಶ್ವಕಪ್ ಫ್ಲಾಪ್ ಸ್ಟಾರ್​ಗಳೇ ಇಲ್ಲಿ ಸೂಪರ್ ಸ್ಟಾರ್ಸ್​..!

92 ರನ್ ಟಾರ್ಗೆಟ್

ಆದರೆ ಕೆಳಕ್ರಮಾಂಕದಲ್ಲಿ ಸ್ಫೋಟಕ ಬ್ಯಾಟಿಂಗ್ ಮಾಡಿದ ಜೊನಾಥನ್ ಕಾರ್ಟರ್ 17 ಎಸೆತಗಳಲ್ಲಿ 3 ಸಿಕ್ಸರ್ ಹಾಗೂ 3 ಬೌಂಡರಿ ಸಹಿತ ಅಜೇಯ 39 ರನ್ ಚಚ್ಚಿದರು. ಫಲವಾಗಿ ನಿಗದಿತ 10 ಓವರ್​ಗಳಲ್ಲಿ ನ್ಯೂಯಾರ್ಕ್ ವಾರಿಯರ್ಸ್ ತಂಡ 6 ವಿಕೆಟ್ ಕಳೆದುಕೊಂಡು 92 ರನ್ ಕಲೆಹಾಕಿತು. ಟೆಕ್ಸಾಸ್ ಚಾರ್ಜರ್ಸ್ ಪರ ಎಹ್ಸಾನ್ ಆದಿಲ್ 3 ವಿಕೆಟ್ ಪಡೆದರೆ, ಫಿಡೆಲ್ ಎಡ್ವರ್ಡ್ಸ್ ಹಾಗೂ ಇಮ್ರಾನ್ ಖಾನ್ ತಲಾ 1 ವಿಕೆಟ್ ಪಡೆದರು.

ಟೈನಲ್ಲಿ ಪಂದ್ಯ ಅಂತ್ಯ

ಇನ್ನು ಈ ಗುರಿ ಬೆನ್ನಟ್ಟಿದ ಟೆಕ್ಸಾಸ್ ಚಾರ್ಜರ್ಸ್ ತಂಡಕ್ಕೂ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ಮುಖ್ತಾರ್ ಅಹ್ಮದ್ 6 ರನ್​ಗಳಿಗೆ ಬ್ಯಾಟ್ ಎತ್ತಿಟ್ಟರು. ಆದರೆ ಆ ಬಳಿಕ ಜೊತೆಯಾದ ಮೊಹಮದ್ ಹಫೀಜ್ (46 ರನ್) ಹಾಗೂ ಬೆನ್ ಡಂಕ್ (20 ರನ್) ಸ್ಫೋಟಕ ಜತೆಯಾಟ ನಡೆಸಿದರು. ಆದರೆ ಈ ಎರಡು ವಿಕೆಟ್​ಗಳ ಬಳಿಕ ಟೆಕ್ಸಾಸ್ ತಂಡದ ಪೆವಿಲಿಯನ್ ಪರೇಡ್ ಆರಂಭವಾಯಿತು. ಹೀಗಾಗಿ ಒಂದು ಹಂತದಲ್ಲಿ ಗೆಲುವಿನ ಸನಿಹದಲ್ಲಿದ್ದ ಟೆಕ್ಸಾಸ್, ಪಂದ್ಯವನ್ನು ಟೈ ಮಾಡಿಕೊಂಡಿತು. ನ್ಯೂಯಾರ್ಕ್ ಪರ ವಿಕೆಟ್​ಗಳ ಬೇಟೆಯಾಡಿದ ಸೊಹೈಲ್ ಖಾನ್ 5 ವಿಕೆಟ್ ಪಡೆದು ಮಿಂಚಿದರೆ, ಉಮೇದ್ ಆಸಿಫ್ ಹಾಗೂ ಶಾಹೀದ್ ಆಫ್ರಿದಿ ತಲಾ 2 ವಿಕೆಟ್ ಪಡೆದರು.

ಸೂಪರ್ ಓವರ್ ಡ್ರಾಮಾ

ಪಂದ್ಯ ಟೈ ಆಗಿದ್ದರಿಂದ ಒಂದು-ಓವರ್ ಎಲಿಮಿನೇಟರ್‌ ಆಡಿಸಬೇಕಾಯ್ತು. ಇಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಚಾರ್ಜರ್ಸ್ ಒಟ್ಟು 15 ರನ್ ಕಲೆಹಾಕಿತು. ಹೀಗಾಗಿ ಪ್ರಶಸ್ತಿಯನ್ನು ಗೆಲ್ಲಲು ನ್ಯೂಯಾರ್ಕ್ ತಂಡಕ್ಕೆ 16 ರನ್‌ ಗುರಿ ಹತ್ತಬೇಕಾಗಿತ್ತು. ಈ ವೇಳೆ ತಂಡದ ಪರ ಬ್ಯಾಟಿಂಗ್​ಗೆ ಇಳಿದ ಆಫ್ರಿದಿ ಹಾಗೂ ಜೊನಾಥನ್ ಕಾರ್ಟರ್​ಗೆ ವೇಗಿ ಸೊಹೈಲ್ ತನ್ವಿರ್‌ ಸರಾಗವಾಗಿ ರನ್ ಗಳಿಸಲು ಅವಕಾಶ ಕೊಡಲಿಲ್ಲ. ಹೀಗಾಗಿ ಈ ಜೋಡಿ ಅಂತಿಮವಾಗಿ 13 ರನ್​ಗಳಿಸಲಷ್ಟೇ ಶಕ್ತವಾಗಿ 2 ರನ್​ಗಳಿಂದ ಸೋಲೊಪ್ಪಿಕೊಂಡಿತು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 1:59 pm, Mon, 28 August 23