ENG vs AUS, 1st Test: ಆ್ಯಶಸ್ ಆರಂಭವಾದ ಮೊದಲ ದಿನವೇ ಡಿಕ್ಲೇರ್ ಘೋಷಿಸಿದ ಇಂಗ್ಲೆಂಡ್: ಆಸೀಸ್​ಗೆ 379 ರನ್​ಗಳ ಹಿನ್ನಡೆ

|

Updated on: Jun 17, 2023 | 7:14 AM

The Ashes 2023: ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ (Ben Stokes) ತೆಗೆದುಕೊಂಡ ಈ ನಿರ್ಧಾರ ಎಲ್ಲರಲ್ಲೂ ಅಚ್ಚರಿ ಮೂಡಿಸಿತು. ಜೋ ರೂಟ್ (Joe Root) ಶತಕ ಸಿಡಿಸಿ ಕ್ರೀಸ್​ನಲ್ಲಿ ಇರುವಾಗಲೇ 393 ರನ್​ಗಳಿಗೆ ಇನ್ನಿಂಗ್ಸ್ ಅಂತ್ಯಗೊಳಿಸಿತು.

ENG vs AUS, 1st Test: ಆ್ಯಶಸ್ ಆರಂಭವಾದ ಮೊದಲ ದಿನವೇ ಡಿಕ್ಲೇರ್ ಘೋಷಿಸಿದ ಇಂಗ್ಲೆಂಡ್: ಆಸೀಸ್​ಗೆ 379 ರನ್​ಗಳ ಹಿನ್ನಡೆ
Ben Stokes and Joe Root
Follow us on

ಇಂಗ್ಲೆಂಡ್‌ ಹಾಗೂ ಆಸ್ಟ್ರೇಲಿಯಾ (England vs Australia) ನಡುವಣ ಪ್ರತಿಷ್ಠಿತ ಆ್ಯಶಸ್ ಟೆಸ್ಟ್‌ ಸರಣಿಗೆ ಚಾಲನೆ ಸಿಕ್ಕಿದೆ. ಶುಕ್ರವಾರ ಬರ್ಮಿಂಗ್‌ಹ್ಯಾಮ್​ನ ಎಜ್‌ಬಾಸ್ಟನ್‌ನಲ್ಲಿ ಮೊದಲ ಟೆಸ್ಟ್ ಆರಂಭವಾಗಿದ್ದು, ಅಚ್ಚರಿ ಎಂಬಂತೆ ಪ್ರಥಮ ದಿನವೇ ಇಂಗ್ಲೆಂಡ್ ಡಿಕ್ಲೇರ್ ಘೋಷಿಸಿ ಕಾಂಗರೂ ಪಡೆಗೆ ಬ್ಯಾಟಿಂಗ್​ಗೆ ಆಹ್ವಾನಿಸಿದೆ. ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ (Ben Stokes) ತೆಗೆದುಕೊಂಡ ಈ ನಿರ್ಧಾರ ಎಲ್ಲರಲ್ಲೂ ಅಚ್ಚರಿ ಮೂಡಿಸಿತು. ಜೋ ರೂಟ್ (Joe Root) ಶತಕ ಸಿಡಿಸಿ ಕ್ರೀಸ್​ನಲ್ಲಿ ಇರುವಾಗಲೇ 393 ರನ್​ಗಳಿಗೆ ಇನ್ನಿಂಗ್ಸ್ ಅಂತ್ಯಗೊಳಿಸಿತು.

ಈ ಪಂದ್ಯದಲ್ಲಿ ಟಾಸ್ ಗೆದ್ದ ಆಂಗ್ಲರು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆದರೆ, ಆರಂಭದಲ್ಲೇ ಬೆನ್ ಡಕೆಟ್ (12) ವಿಕೆಟ್ ಕಳೆದುಕೊಂಡಿತು. ಎರಡನೇ ವಿಕೆಟ್​ಗೆ ಜಾಕ್ ಕ್ರಾವ್ಲಿ ಹಾಗೂ ಒಲಿ ಪೋಪ್ (31) 70 ರನ್​ಗಳ ಜೊತೆಯಾಟ ಆಡಿದರು. ಮತ್ತೊಂದು ತುದಿಯಲ್ಲಿ ಕ್ರಾವ್ಲಿ ಸಕಾರಾತ್ಮಕವಾಗಿ ಬ್ಯಾಟಿಂಗ್ ಮುಂದುವರಿಸಿ ಅರ್ಧಶತಕವನ್ನು ಪೂರೈಸಿದರು. 73 ಎಸೆತಗಳಲ್ಲಿ 7 ಫೋರ್​ನೊಂದಿಗೆ 61 ರನ್ ಕಲೆಹಾಕಿದರು. ಜೋ ರೂಟ್ ಜೊತೆಗೂಡಿ ಹ್ಯಾರಿ ಬ್ರೂಕ್ (37 ಎಸೆತಗಳಲ್ಲಿ 32 ರನ್) ಭೋಜನ ವಿರಾಮದ ನಂತರ ಭರ್ಜರಿಯಾಗಿ ಬ್ಯಾಟ್​ ಬೀಸಿದರು.

ಬ್ರೂಕ್ 32 ರನ್​ಗೆ ಔಟಾದರೆ, ನಾಯಕ ಬೆನ್ ಸ್ಟೋಕ್ಸ್ ಕೇವಲ 1 ರನ್​ಗೆ ವಿಕೆಟ್ ಒಪ್ಪಿಸಿದರು. ಮಧ್ಯಮ ಕ್ರಮಾಂಕದಲ್ಲಿ ಜಾನಿ ಬೇರ್​ಸ್ಟೋವ್​ (78 ಎಸೆತಗಳಲ್ಲಿ 78 ರನ್) ಮತ್ತು ಜೋ ರೂಟ್ 121 ರನ್​ಗಳ ಜತೆಯಾಟ ನೀಡಿದರು. ಆಲ್ರೌಂಡರ್ ಮೊಯಿನ್ ಅಲಿ 17 ಎಸೆತಗಳಲ್ಲಿ 18 ರನ್ ರನ್ ಗಳಿಸಿದರು. ಒಂದು ಕಡೆ ವಿಕೆಟ್ ಉರುಳಿದರೆ ಅತ್ತ ಜೋ ರೂಟ್ ನಿರಂತರವಾಗಿ ಬ್ಯಾಟ್ ಬೀಸಿ ಶತಕ ಕೂಡ ಪೂರೈಸಿದರು.

ಇದನ್ನೂ ಓದಿ
Ashes 2023: ದಾಖಲೆಯ ಶತಕ ಸಿಡಿಸಿದ ರೂಟ್; ಮೊದಲ ದಿನವೇ ಇನ್ನಿಂಗ್ಸ್ ಡಿಕ್ಲೇರ್ ಮಾಡಿದ ಇಂಗ್ಲೆಂಡ್!
R. Ashwin: ‘ಪತ್ನಿಗೆ ಮೊದಲೇ ಹೇಳಿದ್ದೆ’; ನಿವೃತ್ತಿಯ ಬಗ್ಗೆ ಕೊನೆಗೂ ಮೌನ ಮುರಿದ ಅಶ್ವಿನ್..!
Harry Brook Wicket: ಅತ್ಯಂತ ದುರದೃಷ್ಟಕರ ರೀತಿಯಲ್ಲಿ ವಿಕೆಟ್ ಕಳೆದುಕೊಂಡ ಹ್ಯಾರಿ ಬ್ರೂಕ್; ವಿಡಿಯೋ ನೋಡಿ
ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಬೌಲಿಂಗ್​ ಮಾಡಿ ವಿಕೆಟ್ ಪಡೆದ ಟಾಪ್ 10 ವಿಕೆಟ್ ಕೀಪರ್​ಗಳಿವರು

IND vs WI: ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಟೀಂ ಇಂಡಿಯಾದ ಈ ನಾಲ್ವರು ಆಟಗಾರರು ಅಲಭ್ಯ..!

ರೂಟ್ 152 ಎಸೆತಗಳಲ್ಲಿ 7 ಫೋರ್, 4 ಸಿಕ್ಸರ್​ನೊಂದಿಗೆ ಅಜೇಯ 118 ರನ್ ಚಚ್ಚಿದರು. ರಾಬಿನ್​ಸನ್ ಅಜೇಯ 17 ರನ್ ಕಲೆಹಾಕಿದರು. ಇಂಗ್ಲೆಂಡ್ 78 ಓವರ್​ಗಳಲ್ಲಿ 8 ವಿಕೆಟ್ ನಷ್ಟಕ್ಕೆ 393 ರನ್ ಗಳಿಸಿದಾಗ ಡಿಕ್ಲೇರ್ ಘೋಷಿಸಿತು. ಆಸೀಸ್ ಪರ ನೇಥನ್ ಲಿಯನ್ 4 ವಿಕೆಟ್ ಕಿತ್ತರೆ, ಜೋಶ್ ಹ್ಯಾಜ್ಲೆವುಡ್ 2 ವಿಕೆಟ್ ಪಡೆದರು. ದಿನದಾಟದ ಅಂತ್ಯದ ವೇಳೆಗೆ ಮೊದಲ ಇನ್ನಿಂಗ್ಸ್ ಶುರು ಮಾಡಿದ ಆಸ್ಟ್ರೇಲಿಯಾ ವಿಕೆಟ್ ನಷ್ಟವಿಲ್ಲದೆ 14 ರನ್ ಗಳಿಸಿದೆ. ಡೇವಿಡ್ ವಾರ್ನರ್ (8) ಹಾಗೂ ಉಸ್ಮಾನ್ ಖ್ವಾಜಾ (4) ಕ್ರೀಸ್​ನಲ್ಲಿದ್ದಾರೆ.

ಜೋ ರೂಟ್ ದಾಖಲೆಯ ಶತಕ:

ಜೋ ರೂಟ್ ಟೆಸ್ಟ್‌ ಕ್ರಿಕೆಟ್​ನಲ್ಲಿ 30ನೇ ಶತಕ ಸಿಡಿಸಿ ದಾಖಲೆಯನ್ನು ಬರೆದಿದ್ದಾರೆ. ಟೆಸ್ಟ್‌ಗಳಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ವಿಚಾರದಲ್ಲಿ ರೂಟ್ ಆಸ್ಟ್ರೇಲಿಯದ ಮಾಜಿ ನಾಯಕ ಮತ್ತು ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದ ಸರ್ ಡಾನ್ ಬ್ರಾಡ್‌ಮನ್‌ರನ್ನು ಹಿಂದಿಕ್ಕಿದ್ದಾರೆ. ಬ್ರಾಡ್ಮನ್ ತಮ್ಮ 52 ಟೆಸ್ಟ್ ಪಂದ್ಯದಲ್ಲಿ ಒಟ್ಟು 29 ಶತಕಗಳನ್ನು ಸಿಡಿಸಿ ದಾಖಲೆ ಬರೆದಿದ್ದರು. ಇದೀಗ ರೂಟ್ ತಮ್ಮ 131 ನೇ ಟೆಸ್ಟ್ ಪಂದ್ಯದಲ್ಲಿ 30ನೇ ಶತಕ ಸಿಡಿಸಿ ಬ್ರಾಡ್ಮನ್​ರನ್ನು ಹಿಂದಿಕ್ಕಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ