AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Harry Brook Wicket: ಅತ್ಯಂತ ದುರದೃಷ್ಟಕರ ರೀತಿಯಲ್ಲಿ ವಿಕೆಟ್ ಕಳೆದುಕೊಂಡ ಹ್ಯಾರಿ ಬ್ರೂಕ್; ವಿಡಿಯೋ ನೋಡಿ

Ashes 2023, Eng vs AUS: ಆಸೀಸ್ ಸ್ಪಿನ್ನರ್ ನಾಥನ್ ಲಿಯಾನ್ ಬೌಲಿಂಗ್​ನಲ್ಲಿ 32 ರನ್ ಸಿಡಿಸಿದ್ದ ಹ್ಯಾರಿ ಬ್ರೂಕ್ ಬೌಲ್ಡ್ ಆದರು. ಆದರೆ ಬ್ರೂಕ್ ಬೌಲ್ಡ್ ಆದ ರೀತಿ ನಿಜಕ್ಕೂ ವಿಚಿತ್ರವಾಗಿತ್ತು.

Harry Brook Wicket: ಅತ್ಯಂತ ದುರದೃಷ್ಟಕರ ರೀತಿಯಲ್ಲಿ ವಿಕೆಟ್ ಕಳೆದುಕೊಂಡ ಹ್ಯಾರಿ ಬ್ರೂಕ್; ವಿಡಿಯೋ ನೋಡಿ
ಹ್ಯಾರಿ ಬ್ರೂಕ್Image Credit source: sportbible
ಪೃಥ್ವಿಶಂಕರ
|

Updated on:Jun 16, 2023 | 8:19 PM

Share

ಪ್ರತಿಷ್ಠಿತ ಆಶಸ್ ಸರಣಿಯ ಮೊದಲ ಪಂದ್ಯ (Ashes Test) ಇಂದಿನಿಂದ ಆರಂಭವಾಗಿದೆ. ಎಡ್ಜ್‌ಬಾಸ್ಟನ್‌ನಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ (Eng vs AUS) ನಡುವೆ ಪಂದ್ಯ ನಡೆಯುತ್ತಿದ್ದು, ಪಂದ್ಯದ ಮೊದಲ ದಿನವೇ ಉಭಯ ತಂಡಗಳಿಂದ ಸಮಬಲದ ಹೋರಾಟ ಕಂಡು ಬರುತ್ತಿದೆ. ಅದರಲ್ಲೂ ಭಾಝ್ ಬಾಲ್ ಕ್ರಿಕೆಟ್​ಗೆ ಹೆಸರುವಾಸಿಯಾಗಿರುವ ಆಂಗ್ಲರು ಮೊದಲ ಎಸೆತದಿಂದಲೇ ತಮ್ಮ ಆಕ್ರಮಣಕಾರಿ ಆಟವನ್ನು ಆರಂಭಿಸಿದ್ದಾರೆ. ಒಂದೆಡೆ ವಿಕೆಟ್ ಉರುಳುತ್ತಿದ್ದರೂ, ತಮ್ಮ ಎಂದಿನ ಶೈಲಿಯ ಬ್ಯಾಟಂಗ್ ಅನ್ನು ಆಂಗ್ಲರು ಮುಂದುವರೆಸಿದ್ದರೆ, ಇನ್ನೊಂದೆಡೆ ಆಸೀಸ್ ಕೂಡ ಪ್ರಮುಖ 5 ವಿಕೆಟ್ ಉರುಳಿಸುವಲ್ಲಿ ಯಶಸ್ವಿಯಾಗಿದೆ. ಇಂಗ್ಲೆಂಡ್ ತಂಡ ಈಗಾಗಲೇ ಪ್ರಮುಖ 5 ವಿಕೆಟ್ ಕಳೆದುಕೊಂಡಿದೆ. ಆದರೆ ಈ ಐದು ವಿಕೆಟ್​ಗಳಲ್ಲಿ ಅದೊಂದು ವಿಕೆಟ್ ಬಿದ್ದಿದ್ದು, ಮೈದಾನದಲ್ಲಿ ನೆರೆದಿದ್ದವರ ಜೊತೆಗೆ ಆಸೀಸ್ ಆಟಗಾರರನ್ನು ಕೊಂಚ ಕಾಲ ದಿಗ್ಭ್ರಮೆಗೊಳಿಸಿತು. ಅತ್ಯಂತ ದುರದೃಷ್ಟಕರ ರೀತಿಯಲ್ಲಿ ವಿಕೆಟ್ ಕಳೆದುಕೊಂಡ ಹ್ಯಾರಿ ಬ್ರೂಕ್ (Harry Brook) ನಿರಾಸೆಯಲ್ಲಿ ಪೆವಿಲಿಯನ್​ತ್ತ ಹೆಜ್ಜೆ ಹಾಕಿದರೆ, ವಿಕೆಟ್ ಬಹುಮಾನವಾಗಿ ಸಿಕ್ಕಿದ್ದನ್ನು ಕಂಡು ಆಸೀಸ್ ಆಟಗಾರರು ಹರ್ಷವ್ಯಕ್ತಪಡಿಸಿದರು.

ವಿಚಿತ್ರ ರೀತಿಯಲ್ಲಿ ಬೋಲ್ಡ್ ಆದ ಬ್ರೂಕ್

ಆಸೀಸ್ ಸ್ಪಿನ್ನರ್ ನಾಥನ್ ಲಿಯಾನ್ ಬೌಲಿಂಗ್​ನಲ್ಲಿ 32 ರನ್ ಸಿಡಿಸಿದ್ದ ಹ್ಯಾರಿ ಬ್ರೂಕ್ ಬೌಲ್ಡ್ ಆದರು. ಆದರೆ ಬ್ರೂಕ್ ಬೌಲ್ಡ್ ಆದ ರೀತಿ ನಿಜಕ್ಕೂ ವಿಚಿತ್ರವಾಗಿತ್ತು. ಏಕೆಂದರೆ ನಾಥನ್ ಲಿಯಾನ್ ಬೌಲ್ ಮಾಡಿದ ಚೆಂಡು ಬ್ರೂಕ್ ಬ್ಯಾಟ್‌ಗೆ ಬಡಿದು ಗಾಳಿಯಲ್ಲಿ ಮೇಲಕ್ಕೆ ಹೋಯಿತು. ವಿಕೆಟ್ ಕೀಪರ್ ಅದನ್ನು ಹಿಡಿಯಲು ಯತ್ನಿಸಿದರು, ಆದರೆ ಸಫಲವಾಗಲಿಲ್ಲ. ಆದರೆ ದುರಾದೃಷ್ಟವೆಂಬಂತೆ ಗಾಳಿಯಲ್ಲಿ ಮೇಲಕ್ಕೆ ಹಾರಿದ ಚೆಂಡು ಬ್ಯಾಟರ್ ಬ್ರೂಕ್ ಅವರ ಬೆನ್ನಿಗೆ ಬಡಿದು, ಬಳಿಕ ಸ್ಟಂಪ್​ಗೆ ಬಡಿಯಿತು. ಹೀಗಾಗಿ ರೂಟ್ ಜೊತೆ ಉತ್ತಮ ಜೊತೆಯಾಟ ಆಡುತ್ತಿದ್ದ ಬ್ರೂಕ್ ಸಪ್ಪೆ ಮೊರೆ ಹಾಕಿಕೊಂಡು ಪೆವಿಲಿಯನ್​ ಕಡೆ ಹೋಗಬೇಕಾಯಿತು.

Ashes 2023: ಮಿಚೆಲ್ ಸ್ಟಾರ್ಕ್ ಔಟ್! ಮೊದಲ ಆಶಸ್ ಪಂದ್ಯಕ್ಕೆ ಆಸ್ಟ್ರೇಲಿಯಾ ತಂಡ ಪ್ರಕಟ

ಟಾಸ್ ಗೆದ್ದ ಇಂಗ್ಲೆಂಡ್ ಬ್ಯಾಟಿಂಗ್ ಆಯ್ಕೆ

ಇದಕ್ಕೂ ಮುನ್ನ ಟಾಸ್ ಗೆದ್ದ ಇಂಗ್ಲೆಂಡ್ ತಂಡ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಆಂಗ್ಲರ ತಂಡದ ಆರಂಭ ಕಳಪೆಯಾಗಿತ್ತು. ಬೆನ್ ಡಕೆಟ್ ಕೇವಲ 12 ರನ್​ಗಳಿಸುವ ಮೂಲಕ ಹ್ಯಾಜಲ್‌ವುಡ್‌ಗೆ ಬಲಿಯಾದರು. ಆದಾಗ್ಯೂ, ಇದರ ನಂತರ, ಜ್ಯಾಕ್ ಕ್ರೌಲಿ, ಓಲಿ ಪೋಪ್ ಅವರೊಂದಿಗೆ ತ್ವರಿತ ಅರ್ಧಶತಕದ ಜೊತೆಯಾಟವನ್ನು ಆಡಿದರು. 61 ರನ್ ಬಾರಿಸಿ ಬಿಗ್ ಇನ್ನಿಂಗ್ಸ್ ಆಡುವ ಸೂಚನೆ ನೀಡಿದ್ದ ಕ್ರೌಲಿ ​ಬೋಲ್ಯಾಂಡ್​ಗೆ ಬಲಿಯಾದರೆ, 31 ರನ್ ಬಾರಿಸಿದ್ದ ಪೋಪ್ ಅವರನ್ನು ಲಿಯಾನ್ ಔಟ್ ಮಾಡಿದರು. ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಕೇವಲ 1 ರನ್​ಗೆ ವಿಕೆಟ್ ಒಪ್ಪಿಸಿ ಪೆವಲಿಯನ್ ಸೇರಿಕೊಂಡಿದ್ದಾರೆ. ಸುದ್ದಿ ಬರೆಯುವ ವೇಳೆಗೆ ಇಂಗ್ಲೆಂಡ್ 5 ವಿಕೆಟ್ ಕಳೆದುಕೊಂಡು 239 ರನ್ ಬಾರಿಸಿದೆ. ಮಾಜಿ ನಾಯಕ ಜೋ ರೂಟ್ ಅರ್ಧಶತಕ ಸಿಡಿಸಿ ಆಡುತ್ತಿದ್ದರೆ, ಬೈರ್​ಸ್ಟೋವ್, ರೂಟ್​ಗೆ ಉತ್ತಮ ಸಾಥ್ ನೀಡುತ್ತಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:17 pm, Fri, 16 June 23

ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಬಿಗ್ ಬಾಸ್ ಮುಗಿದ ಬಳಿಕ ಬರಲಿರೋ ಧಾರಾವಾಹಿ ಯಾವುದು? ಪ್ರೋಮೋ ರಿಲೀಸ್
ಬಿಗ್ ಬಾಸ್ ಮುಗಿದ ಬಳಿಕ ಬರಲಿರೋ ಧಾರಾವಾಹಿ ಯಾವುದು? ಪ್ರೋಮೋ ರಿಲೀಸ್