Ashes 2023: ದಾಖಲೆಯ ಶತಕ ಸಿಡಿಸಿದ ರೂಟ್; ಮೊದಲ ದಿನವೇ ಇನ್ನಿಂಗ್ಸ್ ಡಿಕ್ಲೇರ್ ಮಾಡಿದ ಇಂಗ್ಲೆಂಡ್!

Ashes 2023, ENG vs AUS: ಹೆಚ್ಚು ರಿವರ್ಸ್ ಸ್ವೀಪ್ ಶಾಟ್​ಗಳನ್ನು ಆಡುವ ಮೂಲಕ ರೂಟ್, ಆಸ್ಟ್ರೇಲಿಯನ್ ಬೌಲರ್‌ಗಳನ್ನು ತೀವ್ರವಾಗಿ ಕಾಡಿದರು. 76ನೇ ಓವರ್​ನ ಐದನೇ ಎಸೆತದಲ್ಲಿ ಒಂದು ರನ್ ಗಳಿಸುವ ಮೂಲಕ ರೂಟ್ 145 ಎಸೆತಗಳಲ್ಲಿ ತಮ್ಮ 30ನೇ ಶತಕ ಪೂರೈಸಿದರು.

ಪೃಥ್ವಿಶಂಕರ
|

Updated on: Jun 16, 2023 | 10:52 PM

ಎಡ್ಜ್‌ಬಾಸ್ಟನ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಮೊದಲ ಆಶಸ್ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ರೂಟ್ ಶತಕ ಸಿಡಿಸಿದ್ದಾರೆ. ಇದರೊಂದಿಗೆ ರೂಟ್ ಟೆಸ್ಟ್‌ನಲ್ಲಿ 30ನೇ ಶತಕ ಸಿಡಿಸಿದ ದಾಖಲೆಯನ್ನು ಬರೆದಿದ್ದಾರೆ. ಈ ಮೂಲಕ ಟೆಸ್ಟ್‌ಗಳಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ವಿಚಾರದಲ್ಲಿ ರೂಟ್ ಆಸ್ಟ್ರೇಲಿಯದ ಮಾಜಿ ನಾಯಕ ಮತ್ತು ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದ ಸರ್ ಡಾನ್ ಬ್ರಾಡ್‌ಮನ್‌ರನ್ನು ಹಿಂದಿಕ್ಕಿದ್ದಾರೆ.

1 / 7
ಬ್ರಾಡ್ಮನ್ ತಮ್ಮ 52 ಟೆಸ್ಟ್ ಪಂದ್ಯದಲ್ಲಿ ಒಟ್ಟು 29 ಶತಕಗಳನ್ನು ಸಿಡಿಸಿ ಈ ದಾಖಲೆ ಬರೆದಿದ್ದರು. ಇದೀಗ ರೂಟ್ ತಮ್ಮ 131 ನೇ ಟೆಸ್ಟ್ ಪಂದ್ಯದಲ್ಲಿ 30ನೇ ಶತಕ ಸಿಡಿಸಿ ಬ್ರಾಡ್ಮನ್​ರನ್ನು ಹಿಂದಿಕ್ಕಿದ್ದಾರೆ. ರೂಟ್ ಅವರ ಶತಕದ ನೆರವಿನಿಂದ ಇಂಗ್ಲೆಂಡ್ ಭದ್ರ ಸ್ಥಿತಿಗೆ ತಲುಪಿದೆ.

2 / 7
ಹೆಚ್ಚು ರಿವರ್ಸ್ ಸ್ವೀಪ್ ಶಾಟ್​ಗಳನ್ನು ಆಡುವ ಮೂಲಕ ರೂಟ್, ಆಸ್ಟ್ರೇಲಿಯನ್ ಬೌಲರ್‌ಗಳನ್ನು ತೀವ್ರವಾಗಿ ಕಾಡಿದರು. 76ನೇ ಓವರ್​ನ ಐದನೇ ಎಸೆತದಲ್ಲಿ ಒಂದು ರನ್ ಗಳಿಸುವ ಮೂಲಕ ರೂಟ್ 145 ಎಸೆತಗಳಲ್ಲಿ ತಮ್ಮ 30ನೇ ಶತಕ ಪೂರೈಸಿದರು.

3 / 7
ಇದೇ ವೇಳೆ ರೂಟ್ ಎರಡು ಉತ್ತಮ ಜೊತೆಯಾಟಗಳನ್ನು ಮಾಡಿದರು.  ಮೊದಲು ಹ್ಯಾರಿ ಬ್ರೂಕ್ ಅವರೊಂದಿಗೆ ನಾಲ್ಕನೇ ವಿಕೆಟ್‌ಗೆ 51 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡರೆ, ಇದಾದ ಬಳಿಕ ರೂಟ್ ಆರನೇ ವಿಕೆಟ್‌ಗೆ ಜಾನಿ ಬೈರ್‌ಸ್ಟೋ ಜೊತೆ ಶತಕದ ಜೊತೆಯಾಟ ನಡೆಸಿದರು.

4 / 7
ರೂಟ್ 140 ಎಸೆತಗಳಲ್ಲಿ ಬೈರ್‌ಸ್ಟೋವ್ ಜೊತೆ 121 ರನ್ ಸೇರಿಸಿದರು. ಬೈರ್‌ಸ್ಟೋ ಕೂಡ ಶತಕದತ್ತ ಸಾಗುತ್ತಿದ್ದರು. ಆದರೆ ಲಿಯಾನ್ ಎಸೆತದಲ್ಲಿ ಸ್ಟಂಪ್ ಔಟ್ ಆದರು. ಅವರು 78 ಎಸೆತಗಳಲ್ಲಿ 12 ಬೌಂಡರಿಗಳ ಸಹಿತ 78 ರನ್ ಬಾರಿಸಿದರು.

5 / 7
ಸದ್ಯಕ್ಕೆ ರೂಟ್ ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ರೂಟ್ ಸತತ ಐದನೇ ಇನ್ನಿಂಗ್ಸ್‌ನಲ್ಲಿ 50ರ ಗಡಿ ದಾಟಿದ್ದಾರೆ. ಈ ವರ್ಷದ ಫೆಬ್ರವರಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಆಡಿದ ಮೊದಲ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ ಅವರು 57 ರನ್ ಬಾರಿಸಿದ್ದರು. ಬಳಿಕ ಎರಡನೇ ಟೆಸ್ಟ್ ಪಂದ್ಯದ ಎರಡು ಇನ್ನಿಂಗ್ಸ್‌ನಲ್ಲಿ 153 ಮತ್ತು 96 ರನ್ ಬಾರಿಸಿದರು. ಐರ್ಲೆಂಡ್ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ 56 ರನ್ ಕಲೆಹಾಕಿದ್ದರು. ಇದಾದ ಬಳಿಕ ಆಶಸ್​ನ ಮೊದಲ ಟೆಸ್ಟ್​ನ ಮೊದಲ ಇನ್ನಿಂಗ್ಸ್​ನಲ್ಲಿ ರೂಟ್ ಶತಕ ಸಿಡಿಸಿದ್ದಾರೆ.

6 / 7
ಅಚ್ಚರಿಯೆಂಬಂತೆ ಆಶಸ್ ಸರಣಿಯ ಮೊದಲ ಪಂದ್ಯದ ಮೊದಲ ದಿನವೇ ಇಂಗ್ಲೆಂಡ್ 393 ರನ್​ಗಳಿಗೆ ತನ್ನ ಮೊದಲ ಇನ್ನಿಂಗ್ಸ್ ಡಿಕ್ಲೇರ್ ಮಾಡಿದೆ. 3ನೇ ಸೆಷನ್​ನ ಅಂತಿಮ ಹಂತದಲ್ಲಿ ರೂಟ್ ಶತಕ ಸಿಡಿಸಿದ ಬಳಿಕ ಇಂಗ್ಲೆಂಡ್ ನಾಯಕ ಸ್ಟೋಕ್ಸ್ ಡಿಕ್ಲೇರ್ ಘೋಷಿಸಿದರು. ಈ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದರು.

7 / 7
Follow us
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?

ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್

ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್

ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ

ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್

ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್

ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ