ಇಂಗ್ಲೆಂಡ್ನಲ್ಲಿ ನಡೆಯುತ್ತಿರುವ ದಿ 100 (The Hundred ) ಟೂರ್ನಿ ಅಂತಿಮ ಹಂತಕ್ಕೆ ತಲುಪಿದೆ. ಬರ್ಮಿಂಗ್ ಹ್ಯಾಮ್ ಫೀನಿಕ್ಸ್ (Birmingham Phoenix) ತಂಡ 8 ಪಂದ್ಯಗಳಲ್ಲಿ ಆರರಲ್ಲಿ ಜಯ ಸಾಧಿಸಿ 12 ಅಂಕದೊಂದಿಗೆ ಅಗ್ರಸ್ಥಾನದಲ್ಲಿದ್ದು ಫೈನಲ್‌ಗೆ ಪ್ರವೇಶ ಪಡೆದಿದೆ. ಬರ್ಮಿಂಗ್ ಹ್ಯಾಮ್ ಇಷ್ಟರ ಮಟ್ಟಿಗೆ ಅದ್ಭುತ ಪ್ರದರ್ಶನ ನೀಡಲು ಪ್ರಮುಖ ಕಾರಣ ತಂಡದ ನಾಯಕ ಲಿಯಾಮ್ ಲಿವಿಂಗ್ಸ್ಟೋನ್ (Liam Livingstone). ಪ್ರತಿ ಪಂದ್ಯದಲ್ಲಿ ಭರ್ಜರಿ ಆಟವಾಡುತ್ತಿರುವ ಇವರು ಬೌಂಡರಿ, ಸಿಕ್ಸರ್ಗಳ ಮಳೆ ಸುರಿಸುತ್ತಾರೆ. ಇದು ನಾರ್ಥರ್ನ್ ಸೂಪರ್ ಚಾರ್ಜೆಸನ್ ತಂಡದ ವಿರುದ್ಧವೂ ಮುಂದುವರೆಯಿತು. ಆದರೆ, ಈ ಪಂದ್ಯದಲ್ಲಿ ವಿಶೇಷ ಘಟನೆಯೊಂದು ನಡೆಯಿತು.
ಸೂಪರ್ ಚಾರ್ಜೆಸ್ ನೀಡಿದ್ದ ಟಾರ್ಗೆಟ್ ಬೆನ್ನಟ್ಟಿದ ಬರ್ಮಿಂಗ್ಹ್ಯಾಮ್ ತಂಡದ ಪರ ನಾಯಕ ಲಿವಿಂಗ್ಸ್ಟೋನ್ ಸ್ಫೋಟಕ ಬ್ಯಾಟಿಂಗ್ ನಡೆಸಿದರು. ಕೇವಲ 40 ಎಸೆತಗಳಲ್ಲಿ ಬರೋಬ್ಬರಿ 10 ಸಿಕ್ಸರ್ ಸಿಡಿಸಿ ಅಜೇಯ 92 ರನ್ ಚಚ್ಚಿದರು. ಈ ಪೈಕಿ ಲಿವಿಂಗ್ಸ್ಟೋನ್ ಸಿಡಿಸಿದ ಒಂದು ಸಿಕ್ಸ್ನ ವಿಡಿಯೋ ಭರ್ಜರಿ ವೈರಲ್ ಆಗುತ್ತಿದೆ. ಇದರಲ್ಲಿ ಇವರು ಬಾರಿಸಿದ ಸಿಕ್ಸ್ ಪ್ರೇಕ್ಷಕ ಗ್ಯಾಲರಿಗೆ ತಲುಪಿದೆ. ಇಲ್ಲಿ ಓರ್ವ ಅಭಿಮಾನಿ ಅಚ್ಚರಿ ಎಂಬಂತೆ ಕುರ್ಚಿಯಿಂದ ಹಾರಿ ಡೈವ್ ಹೊಡೆದು ಅದ್ಭುತ ಕ್ಯಾಚ್ ಹಿಡಿದಿದ್ದಾರೆ. ಇಲ್ಲಿದೆ ನೋಡಿ ಆ ವಿಡಿಯೋ…
Great night of entertainment again in #TheHundred
Only thing better than all of Liam Livingstone’s sixes have been the crowd catches at Headingley. Catch of the night here ?? pic.twitter.com/6oTte47nxp
— Tom Hyland (@TomHyland4) August 17, 2021
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸೂಪರ್ ಚಾರ್ಜೆಸ್ ತಂಡ ನಿಗದಿತ 100 ಬಾಲ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 143 ರನ್ ಬಾರಿಸಿತು. ಟಾಮ್ ಕೋಲೆರ್ 44 ಎಸೆತಗಳಲ್ಲಿ 71 ರನ್ ಬಾರಿಸಿದರು. ಟಾರ್ಗೆಟ್ ಬೆನ್ನಟ್ಟಿದ ಬರ್ಮಿಂಗ್ಹ್ಯಾಮ್ ತಂಡ ಆರಂಭದಲ್ಲಿ ವಿಲ್ ಸಮೀದ್(0) ವಿಕೆಟ್ ಕಳೆದುಕೊಂಡಿತು. ಆದರೆ, ನಾಯಕ ಲಿವಿಂಗ್ಸ್ಟೋನ್ (ಅಜೇಯ 92) ಮತ್ತು ಫಿನ್ ಅಲೆನ್ (42) ಅವರ ಬೊಂಬಾಟ್ ಆಟದ ನೆರವಿನಿಂದ 74 ಎಸೆತಗಳಲ್ಲಿ 147 ರನ್ ಗಳಿಸಿ 8 ವಿಕೆಟ್ಗಳ ಜಯ ಸಾಧಿಸಿತು.
ಲೀಗ್ ಹಂತದ ಕೊನೆಯ ಪಂದ್ಯವಾಗಿದ್ದರಿಂದ ಗ್ರೂಪ್ನಲ್ಲಿ ಅಗ್ರಸ್ಥಾನದಲ್ಲಿರಲು ಬರ್ಮಿಂಗ್ಹ್ಯಾಮ್ಗೆ ಈ ಪಂದ್ಯವನ್ನು ಗೆಲ್ಲಬೇಕು ಅಥವಾ ಟೈ ಮಾಡಬೇಕಿತ್ತು. ಹೀಗೆ ಮಾಡುವುದರಿಂದ ತಂಡವು ನೇರವಾಗಿ ಫೈನಲ್‌ಗೆ ಅರ್ಹತೆಗಿಟ್ಟಿಸುವ ಅವಕಾಶವಿತ್ತು.
ಅದರಂತೆ ಲಿವಿಂಗ್ಸ್ಟೋನ್ ಕೇವಲ 40 ಎಸೆತಗಳಲ್ಲಿ ಅಜೇಯ 92 ರನ್ ಬಾರಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು. ಈ ಸ್ಪೋಟಕ ಇನಿಂಗ್ಸ್ನಲ್ಲಿ ಲಿವಿಂಗ್ಸ್ಟೋನ್ ಬ್ಯಾಟ್ನಿಂದ ಸಿಡಿದದ್ದು ಬರೋಬ್ಬರಿ 10 ಸಿಕ್ಸರ್ ಮತ್ತು 3 ಬೌಂಡರಿಗಳು. ಇದರೊಂದಿಗೆ ಈ ಟೂರ್ನಿಯಲ್ಲಿ ಇನ್ನಿಂಗ್ಸ್ವೊಂದರಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿದ ದಾಖಲೆ ಕೂಡ ಲಿವಿಂಗ್ಸ್ಟೋನ್ ಪಾಲಾಯಿತು. ಈ ಭರ್ಜರಿ ಗೆಲುವಿನೊಂದಿಗೆ ಇದೀಗ ದಿ ಹಂಡ್ರೆಡ್ ಲೀಗ್ನಲ್ಲಿ ಬರ್ಮಿಂಗ್ ಹ್ಯಾಮ್ ಫೀನಿಕ್ಸ್ ತಂಡವು ಫೈನಲ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದೆ.
IPL 2021: ದುಬೈ ಫ್ಲೈಟ್ ಏರಲು ಸಜ್ಜಾದ ಆರ್ಸಿಬಿ: ಯಾವ ತಂಡ ಯಾವಾಗ ಪ್ರಯಾಣ?: ಇಲ್ಲಿದೆ ಮಾಹಿತಿ
ಮೊಹಮ್ಮದ್ ಸಿರಾಜ್ ಆಟಕ್ಕೆ ಫಿದಾ ಆದ ಪಾಕಿಸ್ತಾನ ಪತ್ರಕರ್ತೆ: ಹೇಳಿದ್ದೇನು ನೋಡಿ
(The Hundred Liam Livingstone sixes was caught by a fan in the crowd viral video)