ತಮಿಳುನಾಡು ಪ್ರೀಮಿಯರ್ ಲೀಗ್ನ (TNPL 2024) ಫೈನಲ್ ಪಂದ್ಯದಲ್ಲಿ ಲೈಕಾ ಕೋವೈ ಕಿಂಗ್ಸ್ vs ದಿಂಡಿಗಲ್ ಡ್ರಾಗನ್ಸ್ ತಂಡಗಳು ಮುಖಾಮುಖಿಯಾಗಲಿದೆ. ಈ ಪಂದ್ಯವು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಇಂದು (ಆಗಸ್ಟ್ 4) ನಡೆಯಲಿದ್ದು, ಈ ಮೂಲಕ ಬಲಿಷ್ಠ ಎರಡು ತಂಡಗಳು ಟ್ರೋಫಿಗಾಗಿ ಸೆಣಸಲಿದೆ.
ಇದಕ್ಕೂ ಮುನ್ನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಐಡಿರೀಮ್ ತಿರುಪ್ಪೂರ್ ತಮಿಳನ್ಸ್ ತಂಡವನ್ನು 7 ವಿಕೆಟ್ಗಳಿಂದ ಮಣಿಸಿ ಲೈಕಾ ಕೋವೈ ಕಿಂಗ್ಸ್ ಫೈನಲ್ಗೆ ಪ್ರವೇಶಿಸಿತ್ತು.
ಹಾಗೆಯೇ ಚೆಪಾಕ್ ಸೂಪರ್ ಗಿಲ್ಲೀಸ್ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ 4 ವಿಕೆಟ್ಗಳ ಜಯ ಸಾಧಿಸಿದ ದಿಂಡಿಗಲ್ ಡ್ರಾಗನ್ಸ್ ತಂಡವು ಎರಡನೇ ಕ್ವಾಲಿಫೈಯರ್ಗೆ ಅರ್ಹತೆ ಪಡೆದುಕೊಂಡಿತು. ಅದರಂತೆ ಕ್ವಾಲಿಫೈಯರ್-2 ಪಂದ್ಯದಲ್ಲಿ ತಿರುಪ್ಪೂರ್ ತಮಿಳನ್ಸ್ ತಂಡವನ್ನು 9 ಮಣಿಸಿ ರವಿಚಂದ್ರನ್ ಅಶ್ವಿನ್ ನಾಯಕತ್ವದ ದಿಂಡಿಗಲ್ ಡ್ರಾಗನ್ಸ್ ತಂಡವು ಫೈನಲ್ಗೆ ಎಂಟ್ರಿ ಕೊಟ್ಟಿದೆ.
ತಮಿಳುನಾಡು ಪ್ರೀಮಿಯರ್ ಲೀಗ್ನ ಫೈನಲ್ ಪಂದ್ಯವನ್ನು ಜಿಯೋ ಸಿನಿಮಾ ಆ್ಯಪ್ನಲ್ಲಿ ವೀಕ್ಷಿಸಬಹುದು. ಹಾಗೆಯೇ ಫ್ಯಾನ್ ಕೋಡ್ ಅಪ್ಲಿಕೇಶನ್ನಲ್ಲೂ ಲೈವ್ ಸ್ಟ್ರೀಮಿಂಗ್ ಇರಲಿದೆ.
ದಿಂಡಿಗಲ್ ಡ್ರಾಗನ್ಸ್ ತಂಡ: ವಿಮಲ್ ಖುಮಾರ್, ರವಿಚಂದ್ರನ್ ಅಶ್ವಿನ್(ನಾಯಕ), ಶಿವಂ ಸಿಂಗ್, ಬಾಬಾ ಇಂದ್ರಜಿತ್(ವಿಕೆಟ್ ಕೀಪರ್), ಭೂಪತಿ ಕುಮಾರ್, ಎಸ್ ದಿನೇಶ್ ರಾಜ್, ವರುಣ್ ಚಕ್ರವರ್ತಿ, ಸುಬೋತ್ ಭಾಟಿ, ವಿಪಿ ದಿರನ್, ಪಿ ವಿಘ್ನೇಶ್, ಸಂದೀಪ್ ವಾರಿಯರ್, ಆದಿತ್ಯ ಗಣೇಶ್, ರೋಹನ್ ರಾಜು, ಅಫ್ಫಾನ್ ಖಾದರ್, ಜಿ ಕಿಶೂರ್, ರಾಕಿ ಭಾಸ್ಕರ್, ಸಿ ಶರತ್ ಕುಮಾರ್, ಕೆ ಓಂ ನಿತಿನ್, ಕೆ ಆಶಿಕ್.
ಇದನ್ನೂ ಓದಿ: IPL 2025: RCB ತಂಡದಿಂದ ಗ್ಲೆನ್ ಮ್ಯಾಕ್ಸ್ವೆಲ್ ಔಟ್?
ಲೈಕಾ ಕೋವೈ ಕಿಂಗ್ಸ್ ತಂಡ: ಎಸ್ ಸುಜಯ್, ಜಯರಾಮನ್ ಸುರೇಶ್ ಕುಮಾರ್ (ವಿಕೆಟ್ ಕೀಪರ್), ಸಾಯಿ ಸುದರ್ಶನ್, ಶಾರುಖ್ ಖಾನ್ (ನಾಯಕ), ಯು ಮುಕಿಲೇಶ್, ಜಿವಿ ವಿಘ್ನೇಶ್, ಎಂ ಮೊಹಮ್ಮದ್, ಜಾತವೇಧ್ ಸುಬ್ರಮಣ್ಯನ್, ಮಣಿಮಾರನ್ ಸಿದ್ಧಾರ್ಥ್, ವಲ್ಲಿಯಪ್ಪನ್ ಯುಧೀಶ್ವರನ್, ಗೌತಮ್ ತಾಮರೈ ಕಣ್ಣನ್, ಆರ್ ದಿವಾಕರ್, ಅಥೀ ಉರ್ ರೆಹಮಾನ್, ಪಿ ಹೇಮಚರಣ್, ಕೆಎಂ ಓಂ ಪ್ರಕಾಶ್, ರಾಮ್ ಅರವಿಂದ್, ಪಿ ವಿದ್ಯುತ್, ಬಾಲಸುಬ್ರಮಣ್ಯಂ ಸಚಿನ್, ಎಂ ರಾಹಿಲ್ ರೆಹಮಾನ್, ಮನೀಶ್ ಜಿಆರ್.