
ದುಬೈನಲ್ಲಿ ನಡೆಯುತ್ತಿರುವ ಅಂಡರ್-19 ಏಷ್ಯಾಕಪ್‌ನ (U19 Asia Cup) ಲೀಗ್ ಸುತ್ತು ಅಂತ್ಯಗೊಂಡಿದೆ. ಇದರೊಂದಿಗೆ ಸೆಮಿಫೈನಲ್‌ಗೆ ಎಂಟ್ರಿಕೊಟ್ಟ ನಾಲ್ಕು ತಂಡಗಳು ಯಾವುವು ಎಂಬುದು ಕೂಡ ಖಚಿತವಾಗಿದೆ. ಆ ಪ್ರಕಾರ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಶ್ರೀಲಂಕಾ ಸೆಮಿಫೈನಲ್‌ಗೆ ಅರ್ಹತೆ ಪಡೆದಿವೆ. ಡಿಸೆಂಬರ್ 17 ರ ಬುಧವಾರ ಬಾಂಗ್ಲಾದೇಶ ಮತ್ತು ಶ್ರೀಲಂಕಾ ನಡುವಿನ ಅಂತಿಮ ಲೀಗ್ ಹಂತದ ಪಂದ್ಯದ ನಂತರ, ಸೆಮಿಫೈನಲ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ಯಾವ ತಂಡಗಳನ್ನು ಎದುರಿಸಲಿವೆ ಎಂಬುದು ಸ್ಪಷ್ಟವಾಗಿದೆ.
ಗ್ರೂಪ್ ಎ ಯಿಂದ ಭಾರತವು ತನ್ನ ಮೂರು ಗುಂಪು ಹಂತದ ಪಂದ್ಯಗಳನ್ನು ಗೆದ್ದು ಅಜೇಯ ತಂಡವಾಗಿ ಸೆಮಿಫೈನಲ್‌ಗೆ ಎಂಟ್ರಿಕೊಟ್ಟಿದೆ. ಇತ್ತ ಇದೇ ಗುಂಪಿನಲ್ಲಿದ್ದ ಪಾಕಿಸ್ತಾನ ಕೂಡ ಎರಡನೇ ತಂಡವಾಗಿ ಸೆಮಿಫೈನಲ್ ಪ್ರವೇಶಿಸಿದೆ. ಇತ್ತ ಗ್ರೂಪ್ ಬಿ ಯಿಂದ ಬಾಂಗ್ಲಾದೇಶವು ತನ್ನ ಅಂತಿಮ ಪಂದ್ಯದಲ್ಲಿ ಶ್ರೀಲಂಕಾವನ್ನು ಸೋಲಿಸುವ ಮೂಲಕ ಹ್ಯಾಟ್ರಿಕ್ ಜಯಗಳಿಸಿ ಸೆಮಿಫೈನಲ್‌ಗೆ ಅರ್ಹತೆ ಪಡೆದರೆ, ಇದೇ ಗುಂಪಿನಲ್ಲಿದ್ದ ಶ್ರೀಲಂಕಾ ಕೂಡ ಎರಡನೇ ತಂಡವಾಗಿ ಸೆಮಿಫೈನಲ್ ಆಡಲಿದೆ.
ಇದೀಗ ಗ್ರೂಪ್ ಎ ನಲ್ಲಿ ಅಗ್ರಸ್ಥಾನದಲ್ಲಿರುವ ಭಾರತ ಯುವ ಪಡೆ, ಗ್ರೂಪ್ ಬಿನಲ್ಲಿ ಎರಡನೇ ಸ್ಥಾನದಲ್ಲಿರುವ ತಂಡವನ್ನು ಸೆಮಿಫೈನಲ್‌ನಲ್ಲಿ ಎದುರಿಸಬೇಕಾಗಿದೆ. ಅಂದರೆ ಭಾರತ ಹಾಗೂ ಶ್ರೀಲಂಕಾ ನಡುವೆ ಮೊದಲ ಸೆಮಿಫೈನ್ ಪಂದ್ಯ ನಡೆಯಲಿದೆ. ಆ ಬಳಿಕ ಗ್ರೂಪ್ ಬಿನಲ್ಲಿ ಅಗ್ರಸ್ಥಾನದಲ್ಲಿರುವ ಬಾಂಗ್ಲಾದೇಶ ತಂಡ, ಗ್ರೂಪ್ ಎ ನಲ್ಲಿ ಎರಡನೇ ಸ್ಥಾನ ಪಡೆದಿರುವ ಪಾಕಿಸ್ತಾನವನ್ನು ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಎದುರಿಸಲಿದೆ. ಈ ಎರಡು ಪಂದ್ಯಗಳಲ್ಲಿ ಗೆದ್ದ ತಂಡಗಳು ಫೈನಲ್ನಲ್ಲಿ ಪ್ರಶಸ್ತಿಗಾಗಿ ಸೆಣಸಾಡಲಿವೆ.
U19 ಏಷ್ಯಾಕಪ್ 2026 ಸೆಮಿಫೈನಲ್ ಪಂದ್ಯಗಳನ್ನು ವಿವಿಧ ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ಗಳಲ್ಲಿ ನೇರ ಪ್ರಸಾರ ಮಾಡಲಾಗುವುದು. ಹಾಗೆಯೇ JioHotstar ನಲ್ಲಿಯೂ ನೇರ ಪ್ರಸಾರವನ್ನು ಆನಂದಿಸಬಹುದು.
125 ಎಸೆತಗಳಲ್ಲಿ 209 ರನ್..! ಏಷ್ಯಾಕಪ್‌ನಲ್ಲಿ ಅಜೇಯ ಶತಕ ಸಿಡಿಸಿದ ಅಭಿಗ್ಯಾನ್ ಕುಂಡು
ಭಾರತ ತಂಡ: ವೈಭವ್ ಸೂರ್ಯವಂಶಿ, ಆಯುಷ್ ಮ್ಹಾತ್ರೆ(ನಾಯಕ), ವಿಹಾನ್ ಮಲ್ಹೋತ್ರಾ, ಕನಿಷ್ಕ್ ಚೌಹಾಣ್, ಅಭಿಗ್ಯಾನ್ ಕುಂದು(ವಿಕೆಟ್ ಕೀಪರ್), ಹರ್ವಂಶ್ ಪಂಗಾಲಿಯಾ, ಖಿಲಾನ್ ಪಟೇಲ್, ಹೆನಿಲ್ ಪಟೇಲ್, ದೀಪೇಶ್ ದೇವೇಂದ್ರನ್, ಉಧವ್ ಮೋಹನ್, ನಮನ್ ಪುಷ್ಪಕ್, ವೇದಾಂತ್ ತ್ರಿವೇದಿ, ಕಿಶನ್ ಕುಮಾರ್ ಸಿಂಗ್, ಆರನ್ ಜಾರ್ಜ್, ಯುವರಾಜ್ ಗೋಹಿಲ್.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:56 pm, Wed, 17 December 25