
ಅಂಡರ್ 19 ಭಾರತ ಮತ್ತು ಸೌತ್ ಆಫ್ರಿಕಾ (India vs South Africa) ತಂಡಗಳ ನಡುವೆ ಇಂದು ನಡೆದ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಎರಡು ವಿಕೆಟ್ಗಳ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿದೆ. ಭಾರತ ತಂಡದ ಪರ ಸಚಿನ್ ದಾಸ್ ಮತ್ತು ಉದಯ್ ಸಹರಾನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನವು ಭಾರತವನ್ನು ಗೆಲುವಿನತ್ತ ಕೊಂಡೊಯ್ಯುವಂತೆ ಮಾಡಿತು.
ಟಾಸ್ ಸೋತು ಬ್ಯಾಟಿಂಗ್ ಮಾಡಿದ ಸೌತ್ ಆಫ್ರಿಕಾ ತಂಡ ನಿಗದಿತ 50 ಓವರ್ಗಳಲ್ಲಿ 7 ವಿಕೆಟ್ಗಳನ್ನು ಕಳೆದುಕೊಂಡು 244 ರನ್ ಬಾರಿಸಿದರು. ತಂಡದ ಪರ ಲುಹಾನ್ ಡ್ರೆ ಪ್ರಿಟೋರಿಯಸ್ ಅವರು 3 ಸಿಕ್ಸರ್, 6 ಬೌಂಡಿಗಳೊಂದಿಗೆ 76 ರನ್ಗಳನ್ನು ಬಾರಿಸಿದರು. ರಿಚರ್ಡ್ ಸೆಲೆಟ್ಸ್ವೇನ್ ಅವರು ಎರಡು ಸಿಕ್ಸ್, 4 ಬೌಂಡರಿಗಳೊಂದಿಗೆ 64 ಬಾರಿಸಿದು. ಆ ಮೂಲಕ ಈ ಇಬ್ಬರು ಆಟಗಾರರು ತಂಡದ ಬೃಹತ್ ಮೊತ್ತಕ್ಕೆ ಕಾರಣರಾದರು.
245 ರನ್ಗಳ ಗುರಿ ಬೆನ್ನತ್ತಿದ ಭಾರತ ತಂಡವು 8 ವಿಕೆಟ್ಗಳನ್ನು ಕಳೆದುಕೊಂಡು 48.5 ಓವರ್ಗೆ 248 ಬಾರಿಸಿ ಗೆಲುವಿನ ನಗೆ ಬೀರಿತು. ತಂಡದ ಪರ ಸಚಿನ್ ದಾಸ್ ಅವರು 1 ಸಿಕ್ಸ್ ಹಾಗೂ 11 ಬೌಂಡಿರಿಗಳನ್ನು ಸಿಡಿಸಿ 96 ರನ್ಗಳನ್ನು ಚಚ್ಚಿದರು. ಅಲ್ಲದೆ, ಉದಯ್ ಸಹರಾನ ಅವರು 6 ಬೌಂಡರಿಗಳನ್ನು ಬಾರಿಸಿ 81 ರನ್ಗಳನ್ನು ಕಲೆಹಾಕಿದರು. ಆ ಮೂಲಕ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.
ಇದನ್ನೂ ಓದಿ: Australia: 1000 ಪಂದ್ಯಗಳು: ಹೊಸ ಇತಿಹಾಸ ಬರೆದ ಆಸ್ಟ್ರೇಲಿಯಾ
ಭಾರತದ ಪರ ರಾಜ್ ಲಿಂಬಾನಿ 3 ವಿಕೆಟ್ ಕಬಳಿಸಿದರೆ, ಮುಶೀರ್ ಖಾನ್ 2 ವಿಕೆಟ್, ಸೌಮಿ ಕುಮಾರ್ ಪಾಂಡೆ, ನಮನ್ ತಿವಾರಿ ತಲಾ ಒಂದೊಂದು ವಿಕೆಟ್ ಪಡೆದರು. ಸೌತ್ ಆಫ್ರಿಕಾ ಪರ, ಟ್ರಿಸ್ಟಾನ್ ಲೂಸ್ ಮತ್ತು ಕ್ವೆನಾ ಮಫಕಾ ಅವರು ತಲಾ 3 ವಿಕೆಟ್ ಪಡೆದರು.
ಉದಯ್ ಸಹಾರನ್ (ನಾಯಕ) (81), ಆದರ್ಶ್ ಸಿಂಗ್ (0), ಅರ್ಶಿನ್ ಕುಲಕರ್ಣಿ (12), ಮುಶೀರ್ ಖಾನ್ (4), ಸಚಿನ್ ಧಾಸ್ (96), ಪ್ರಿಯಾಂಶು ಮೊಲಿಯಾ (5), ಅರವೇಲಿ ಅವನೀಶ್ (ವಿಕೆಟ್ ಕೀಪರ್) (10), ಮುರುಗನ್ ಅಭಿಷೇಕ್ (0), ರಾಜ್ ಲಿಂಬಾನಿ (13*), ನಮನ್ ತಿವಾರಿ (0*).
ಜುವಾನ್ ಜೇಮ್ಸ್ (ನಾಯಕ) (24), ಲುವಾನ್-ಡ್ರೆ ಪ್ರಿಟೋರಿಯಸ್ (ವಿಕೆಟ್‌ಕೀಪರ್) (76), ಸ್ಟೀವ್ ಸ್ಟೋಕ್ (14), ಡೇವಿಡ್ ಟೀಗರ್ (0), ರಿಚರ್ಡ್ ಸೆಲೆಟ್ಸ್‌ವೈನ್ (64), ದಿವಾನ್ ಮರೈಸ್ (3), ರಿಲೆ ನಾರ್ಟನ್ (7*), ಟ್ರಿಸ್ಟಾನ್ ಲೂಸ್ (23*), ಒಲಿವರ್ ವೈಟ್‌ಹೆಡ್ ಎಂಟಾಂಡೋ ಜುಮಾ (22).
ಮತ್ತಷ್ಟು ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:59 pm, Tue, 6 February 24