AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mayank Agarwal: ಕರ್ನಾಟಕ ತಂಡ ಪ್ರಕಟ: ಮರಳಿದ ಮಾಯಾಂಕ್ ಅಗರ್ವಾಲ್

Ranji Trophy 2024: ರಣಜಿ ಟ್ರೋಫಿಯ ಮುಂದಿನ ಪಂದ್ಯಕ್ಕಾಗಿ 16 ಸದಸ್ಯರ ಕರ್ನಾಟಕ ತಂಡವನ್ನು ಘೋಷಿಸಲಾಗಿದೆ. ಈ ತಂಡವನ್ನು ಮಯಾಂಕ್ ಅಗರ್ವಾಲ್ ಮುನ್ನಡೆಸಲಿದ್ದಾರೆ. ರೈಲ್ವೇಸ್ ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದ ಮಯಾಂಕ್ ಇದೀಗ ತಂಡಕ್ಕೆ ಮರಳಿದ್ದು, ಇವರೊಂದಿಗೆ ಮತ್ತಿಬ್ಬರು ಆಟಗಾರರು ಕೂಡ ರಾಜ್ಯದ ಪರ ಕಣಕ್ಕಿಳಿಯಲು ಸಜ್ಜಾಗಿದ್ದಾರೆ.

Mayank Agarwal: ಕರ್ನಾಟಕ ತಂಡ ಪ್ರಕಟ: ಮರಳಿದ ಮಾಯಾಂಕ್ ಅಗರ್ವಾಲ್
ಸಾಂದರ್ಭಿಕ ಚಿತ್ರ
TV9 Web
| Edited By: |

Updated on: Feb 06, 2024 | 2:31 PM

Share

ರಣಜಿ ಟ್ರೋಫಿ 2024ರ (Ranji Trophy) ತಮಿಳುನಾಡು ವಿರುದ್ಧದ ಪಂದ್ಯಕ್ಕಾಗಿ ಕರ್ನಾಟಕ ತಂಡವನ್ನು ಪ್ರಕಟಿಸಲಾಗಿದೆ. 16 ಸದಸ್ಯರ ಈ ಬಳಗದಲ್ಲಿ ಮಯಾಂಕ್ ಅಗರ್ವಾಲ್ (Mayank Agarwal) ಕಾಣಿಸಿಕೊಂಡಿದ್ದಾರೆ. ಅಂದರೆ ರೈಲ್ವೇಸ್ ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದ ಮಯಾಂಕ್ ಇದೀಗ ಮತ್ತೆ ರಾಜ್ಯ ತಂಡಕ್ಕೆ ಮರಳಿದ್ದಾರೆ.

ತ್ರಿಪುರಾ ವಿರುದ್ಧದ ಪಂದ್ಯದ ಬಳಿಕ ಸೂರತ್​ಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಮಯಾಂಕ್​ ಅಗರ್ವಾಲ್ ಅನಾರೋಗ್ಯಕ್ಕೆ ಒಳಗಾಗಿದ್ದರು. ವಿಮಾನದಲ್ಲಿ ಇರಿಸಲಾಗಿದ್ದ ವಿಷಕಾರಿ ದ್ರವವನ್ನು ಕುಡಿದಿದ್ದರಿಂದ ಅವರು ಅಸ್ವಸ್ಥಗೊಂಡಿದ್ದರು. ಅಲ್ಲದೆ ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು.

ಇದಾದ ಬಳಿಕ ಮಯಾಂಕ್ ತ್ರಿಪುರಾದಿಂದ ನೇರವಾಗಿ ಬೆಂಗಳೂರಿಗೆ ಮರಳಿದ್ದರು. ಅಲ್ಲದೆ ರೈಲ್ವೇಸ್ ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದರು. ಇದೀಗ ಸಂಪೂರ್ಣವಾಗಿ ಚೇತರಿಸಿಕೊಂಡಿರುವ ಮಯಾಂಕ್ ತಮಿಳುನಾಡು ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ.

ಪಡಿಕ್ಕಲ್-ಕಾವೇರಪ್ಪ ರಿಎಂಟ್ರಿ:

ಭಾರತ ಎ ತಂಡದಲ್ಲಿದ್ದ ಕಾರಣ ಕೆಲ ಪಂದ್ಯಗಳನ್ನು ತಪ್ಪಿಸಿಕೊಂಡಿದ್ದ ಎಡಗೈ ದಾಂಡಿಗ ದೇವದತ್ ಪಡಿಕ್ಕಲ್ ಹಾಗೂ ವೇಗಿ ವಿಧ್ವತ್ ಕಾವೇರಪ್ಪ ಕೂಡ ಇದೀಗ ಕರ್ನಾಟಕ ತಂಡವನ್ನು ಕೂಡಿಕೊಂಡಿದ್ದಾರೆ. ಈ ಮೂವರು ಆಟಗಾರರ ರಿಎಂಟ್ರಿಯೊಂದಿಗೆ ಕರ್ನಾಟಕ ತಂಡವು ಇದೀಗ ಮತ್ತಷ್ಟು ಬಲಿಷ್ಠವಾಗಿದೆ.

ಕರ್ನಾಟಕ-ತಮಿಳುನಾಡು ಪಂದ್ಯ ಯಾವಾಗ ಶುರು?

ಫೆಬ್ರವರಿ 9 ರಿಂದ ಕರ್ನಾಟಕ ಮತ್ತು ತಮಿಳುನಾಡು ನಡುವಣ ಪಂದ್ಯ ಶುರುವಾಗಲಿದೆ. ದಕ್ಷಿಣ ಭಾರತದ ಬಲಿಷ್ಠ ತಂಡಗಳ ನಡುವಿನ ಈ ಕದನಕ್ಕೆ ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂ ಆತಿಥ್ಯವಹಿಸಲಿದೆ. ಈ ಪಂದ್ಯಕ್ಕಾಗಿ ಉಭಯ ತಂಡಗಳು ಈ ಕೆಳಗಿನಂತಿದೆ…

ಕರ್ನಾಟಕ ತಂಡ: ಮಯಾಂಕ್ ಅಗರ್ವಾಲ್ (ನಾಯಕ), ದೇವದತ್ ಪಡಿಕ್ಕಲ್, ರವಿಕುಮಾರ್ ಸಮರ್ಥ್, ನಿಕಿನ್ ಜೋಸ್, ಮನೀಶ್ ಪಾಂಡೆ, ಶರತ್ ಶ್ರೀನಿವಾಸ್ (ವಿಕೆಟ್ ಕೀಪರ್), ಅನೀಶ್ ಕೆವಿ, ವೈಶಾಕ್ ವಿಜಯಕುಮಾರ್, ವಾಸುಕಿ ಕೌಶಿಕ್, ಕೆ ಶಶಿಕುಮಾರ್, ಸುಜಯ್ ಸಾತೇರಿ (ವಿಕೆಟ್ ಕೀಪರ್), ಎಂ ವೆಂಕಟೇಶ್, ವಿಧ್ವತ್ ಕಾವೇರಪ್ಪ , ಕಿಶನ್ ಬೇಡರೆ, ರೋಹಿತ್ ಕುಮಾರ್, ಹಾರ್ದಿಕ್ ರಾಜ್.

ಇದನ್ನೂ ಓದಿ: Sachin Dhas: ಸಚಿನ್… ಕಿರಿಯರ ವಿಶ್ವಕಪ್​ನಲ್ಲಿ ಕಬಡ್ಡಿ ಆಟಗಾರನ ಪುತ್ರ ಮಿಂಚಿಂಗ್

ತಮಿಳುನಾಡು ತಂಡ: ಸಾಯಿ ಕಿಶೋರ್ (ನಾಯಕ), ಪ್ರದೋಶ್ ರಂಜನ್ ಪೌಲ್ (ಉಪನಾಯಕ), ಸಾಯಿ ಸುದರ್ಶನ್, ಎನ್. ಜಗದೀಸನ್, ಬಾಬಾ ಇಂದ್ರಜಿತ್, ವಿಜಯ್ ಶಂಕರ್, ಎಸ್. ಲೋಕೇಶ್ವರ್, ಎಸ್. ಅಜಿತ್ ರಾಮ್, ಬಿ. ಸಚಿನ್, ಎಂ. ಮುಹಮ್ಮದ್, ಸಂದೀಪ್ ವಾರಿಯರ್ , ಟಿ. ನಟರಾಜನ್, ವಿಮಲ್ ಖುಮಾರ್, ತ್ರಿಲೋಕ್ ನಾಗ್.