AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

U19 Cricket WC Semi-Final: ಸಚಿನ್, ಉದಯ್ ಭರ್ಜರಿ ಬ್ಯಾಟಿಂಗ್​; ಸೌತ್ ಆಫ್ರಿಕಾ ವಿರುದ್ಧ ಭಾರತಕ್ಕೆ ಜಯ, ಫೈನಲ್​ಗೆ ಎಂಟ್ರಿ

India vs South Africa Semi-Final: ಅಂಡರ್ 19 ಭಾರತ ಮತ್ತು ಸೌತ್ ಆಫ್ರಿಕಾ ತಂಡಗಳ ನಡುವೆ ಇಂದು ನಡೆದ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಎರಡು ವಿಕೆಟ್​ಗಳ ಗೆಲುವು ಸಾಧಿಸಿ ಫೈನಲ್​ ಪ್ರವೇಶಿಸಿದೆ. ಭಾರತ ತಂಡದ ಪರ ಸಚಿನ್ ದಾಸ್ ಮತ್ತು ಉದಯ್ ಸಹರಾನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ತೋರಿ ಭಾರತವನ್ನು ಗೆಲುವಿನತ್ತ ಕೊಂಡೊಯ್ದರು.

U19 Cricket WC Semi-Final: ಸಚಿನ್, ಉದಯ್ ಭರ್ಜರಿ ಬ್ಯಾಟಿಂಗ್​; ಸೌತ್ ಆಫ್ರಿಕಾ ವಿರುದ್ಧ ಭಾರತಕ್ಕೆ ಜಯ, ಫೈನಲ್​ಗೆ ಎಂಟ್ರಿ
ಸಚಿನ್, ಉದಯ್ ಭರ್ಜರಿ ಬ್ಯಾಟಿಂಗ್​; ಸೌತ್ ಆಫ್ರಿಕಾ ವಿರುದ್ಧ ಭಾರತಕ್ಕೆ ಜಯ, ಫೈನಲ್​ಗೆ ಎಂಟ್ರಿ
Rakesh Nayak Manchi
|

Updated on:Feb 06, 2024 | 10:35 PM

Share

ಅಂಡರ್ 19 ಭಾರತ ಮತ್ತು ಸೌತ್ ಆಫ್ರಿಕಾ (India vs South Africa) ತಂಡಗಳ ನಡುವೆ ಇಂದು ನಡೆದ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಎರಡು ವಿಕೆಟ್​ಗಳ ಗೆಲುವು ಸಾಧಿಸಿ ಫೈನಲ್​ ಪ್ರವೇಶಿಸಿದೆ. ಭಾರತ ತಂಡದ ಪರ ಸಚಿನ್ ದಾಸ್ ಮತ್ತು ಉದಯ್ ಸಹರಾನ್ ಭರ್ಜರಿ ಬ್ಯಾಟಿಂಗ್ ಪ್ರದರ್ಶನವು ಭಾರತವನ್ನು ಗೆಲುವಿನತ್ತ ಕೊಂಡೊಯ್ಯುವಂತೆ ಮಾಡಿತು.

ಟಾಸ್ ಸೋತು ಬ್ಯಾಟಿಂಗ್ ಮಾಡಿದ ಸೌತ್ ಆಫ್ರಿಕಾ ತಂಡ ನಿಗದಿತ 50 ಓವರ್​ಗಳಲ್ಲಿ 7 ವಿಕೆಟ್​ಗಳನ್ನು ಕಳೆದುಕೊಂಡು 244 ರನ್ ಬಾರಿಸಿದರು. ತಂಡದ ಪರ ಲುಹಾನ್ ಡ್ರೆ ಪ್ರಿಟೋರಿಯಸ್ ಅವರು 3 ಸಿಕ್ಸರ್, 6 ಬೌಂಡಿಗಳೊಂದಿಗೆ 76 ರನ್​ಗಳನ್ನು ಬಾರಿಸಿದರು. ರಿಚರ್ಡ್ ಸೆಲೆಟ್ಸ್ವೇನ್ ಅವರು ಎರಡು ಸಿಕ್ಸ್, 4 ಬೌಂಡರಿಗಳೊಂದಿಗೆ 64 ಬಾರಿಸಿದು. ಆ ಮೂಲಕ ಈ ಇಬ್ಬರು ಆಟಗಾರರು ತಂಡದ ಬೃಹತ್ ಮೊತ್ತಕ್ಕೆ ಕಾರಣರಾದರು.

245 ರನ್​ಗಳ ಗುರಿ ಬೆನ್ನತ್ತಿದ ಭಾರತ ತಂಡವು 8 ವಿಕೆಟ್​ಗಳನ್ನು ಕಳೆದುಕೊಂಡು 48.5 ಓವರ್​ಗೆ 248 ಬಾರಿಸಿ ಗೆಲುವಿನ ನಗೆ ಬೀರಿತು. ತಂಡದ ಪರ ಸಚಿನ್ ದಾಸ್ ಅವರು 1 ಸಿಕ್ಸ್ ಹಾಗೂ 11 ಬೌಂಡಿರಿಗಳನ್ನು ಸಿಡಿಸಿ 96 ರನ್​ಗಳನ್ನು ಚಚ್ಚಿದರು. ಅಲ್ಲದೆ, ಉದಯ್ ಸಹರಾನ ಅವರು 6 ಬೌಂಡರಿಗಳನ್ನು ಬಾರಿಸಿ 81 ರನ್​ಗಳನ್ನು ಕಲೆಹಾಕಿದರು. ಆ ಮೂಲಕ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು.

ಇದನ್ನೂ ಓದಿ: Australia: 1000 ಪಂದ್ಯಗಳು: ಹೊಸ ಇತಿಹಾಸ ಬರೆದ ಆಸ್ಟ್ರೇಲಿಯಾ 

ಭಾರತದ ಪರ ರಾಜ್ ಲಿಂಬಾನಿ 3 ವಿಕೆಟ್ ಕಬಳಿಸಿದರೆ, ಮುಶೀರ್ ಖಾನ್ 2 ವಿಕೆಟ್, ಸೌಮಿ ಕುಮಾರ್ ಪಾಂಡೆ, ನಮನ್ ತಿವಾರಿ ತಲಾ ಒಂದೊಂದು ವಿಕೆಟ್ ಪಡೆದರು. ಸೌತ್ ಆಫ್ರಿಕಾ ಪರ, ಟ್ರಿಸ್ಟಾನ್ ಲೂಸ್ ಮತ್ತು ಕ್ವೆನಾ ಮಫಕಾ ಅವರು ತಲಾ 3 ವಿಕೆಟ್ ಪಡೆದರು.

ಭಾರತ ತಂಡದ ಆಟಗಾರರ ರನ್​

ಉದಯ್ ಸಹಾರನ್ (ನಾಯಕ) (81), ಆದರ್ಶ್ ಸಿಂಗ್ (0), ಅರ್ಶಿನ್ ಕುಲಕರ್ಣಿ (12), ಮುಶೀರ್ ಖಾನ್ (4), ಸಚಿನ್ ಧಾಸ್ (96), ಪ್ರಿಯಾಂಶು ಮೊಲಿಯಾ (5), ಅರವೇಲಿ ಅವನೀಶ್ (ವಿಕೆಟ್ ಕೀಪರ್) (10), ಮುರುಗನ್ ಅಭಿಷೇಕ್ (0), ರಾಜ್ ಲಿಂಬಾನಿ (13*), ನಮನ್ ತಿವಾರಿ (0*).

ಸೌತ್ ಆಫ್ರಿಕಾ ತಂಡದ ಆಟಗಾರರ ರನ್​

ಜುವಾನ್ ಜೇಮ್ಸ್ (ನಾಯಕ) (24), ಲುವಾನ್-ಡ್ರೆ ಪ್ರಿಟೋರಿಯಸ್ (ವಿಕೆಟ್‌ಕೀಪರ್) (76), ಸ್ಟೀವ್ ಸ್ಟೋಕ್ (14), ಡೇವಿಡ್ ಟೀಗರ್ (0), ರಿಚರ್ಡ್ ಸೆಲೆಟ್ಸ್‌ವೈನ್ (64), ದಿವಾನ್ ಮರೈಸ್ (3), ರಿಲೆ ನಾರ್ಟನ್ (7*), ಟ್ರಿಸ್ಟಾನ್ ಲೂಸ್ (23*), ಒಲಿವರ್ ವೈಟ್‌ಹೆಡ್ ಎಂಟಾಂಡೋ ಜುಮಾ (22).

ಮತ್ತಷ್ಟು ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:59 pm, Tue, 6 February 24