AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೇವಲ ಐದೇ 5 ಎಸೆತಗಳಲ್ಲಿ ವಿಶ್ವ ದಾಖಲೆಯ ಚೇಸಿಂಗ್!

ಕ್ರಿಕೆಟ್ ಇತಿಹಾಸದಲ್ಲೇ ಇಂತಹದ್ದೊಂದು ವಿಚಿತ್ರ ಪಂದ್ಯವನ್ನು ಯಾರೂ ನೋಡಿರಲು ಸಾಧ್ಯವಿಲ್ಲ! ಸಾಮಾನ್ಯವಾಗಿ ಟಿ20 ಪಂದ್ಯ ಎಂದರೆ ಕನಿಷ್ಠ 3 ಗಂಟೆಗಳ ಕಾಲ ರೋಮಾಂಚನ ನಿರೀಕ್ಷಿಸಲಾಗುತ್ತದೆ. ಆದರೆ, ಐಸಿಸಿ ಪುರುಷರ ಟಿ20 ವಿಶ್ವಕಪ್ ಆಫ್ರಿಕಾ ಸಬ್ ರೀಜನಲ್ ಕ್ವಾಲಿಫೈಯರ್ ಟೂರ್ನಿಯಲ್ಲಿ ನಡೆ 10ನೇ ಪಂದ್ಯವು ಕೇವಲ 5 ಎಸೆತಗಳಲ್ಲಿ ಮುಗಿದಿದೆ.

ಕೇವಲ ಐದೇ 5 ಎಸೆತಗಳಲ್ಲಿ ವಿಶ್ವ ದಾಖಲೆಯ ಚೇಸಿಂಗ್!
UgandaImage Credit source: Uganda Cricket
ಝಾಹಿರ್ ಯೂಸುಫ್
|

Updated on: Oct 26, 2026 | 9:47 AM

Share

ಅಂತಾರಾಷ್ಟ್ರೀಯ ಕ್ರಿಕೆಟ್ ಇತಿಹಾಸದಲ್ಲೇ ಎಂದೂ ಕಾಣದ ರೋಚಕ ಹಾಗೂ ಅತ್ಯಂತ ಅಪರೂಪದ ದಾಖಲೆಯೊಂದಕ್ಕೆ ನೈಜೀರಿಯಾದ ಅಬುಜಾ ಕ್ರೀಡಾಂಗಣ ಸಾಕ್ಷಿಯಾಗಿದೆ. ಐಸಿಸಿ ಪುರುಷರ ಟಿ20 ವಿಶ್ವಕಪ್ ಆಫ್ರಿಕಾ ಸಬ್ ರೀಜನಲ್ ಕ್ವಾಲಿಫೈಯರ್ ಟೂರ್ನಿಯಲ್ಲಿ ಉಗಾಂಡ ತಂಡ ಕೇವಲ 5 ಎಸೆತಗಳಲ್ಲಿ ಪಂದ್ಯವನ್ನು ಮುಗಿಸಿ ಹೊಸ ಇತಿಹಾಸ ನಿರ್ಮಿಸಿದೆ.

ಅಬುಜಾ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಉಗಾಂಡ ಹಾಗೂ ಮೊಝಾಂಬಿಕ್ ತಂಡಗಳು ಮುಖಾಮುಖಿಯಾಗಿದ್ದವು. ಈ ಮ್ಯಾಚ್​​ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಮೊಝಾಂಬಿಕ್ ತಂಡಕ್ಕೆ ಉಗಾಂಡದ ಬೌಲರ್‌ಗಳು ನರಕದರ್ಶನ ಮಾಡಿಸಿದರು.

ಕೇವಲ 19 ರನ್‌ಗಳಿಗೆ ಆಲೌಟ್!

ಬ್ಯಾಟಿಂಗ್ ಆರಂಭಿಸಿದ ಮೊಝಾಂಬಿಕ್ ತಂಡ ಉಗಾಂಡದ ಘಾತಕ ಬೌಲಿಂಗ್ ದಾಳಿಗೆ ಸಂಪೂರ್ಣವಾಗಿ ತತ್ತರಿಸಿತು. ತಂಡದ ಯಾವುದೇ ಬ್ಯಾಟರ್ ಕೂಡ ಎರಡಂಕಿ ಮೊತ್ತ ದಾಟಲು ಸಾಧ್ಯವಾಗಲಿಲ್ಲ. ಪರಿಣಾಮ ಮೊಝಾಂಬಿಕ್ ತಂಡವು ಕೇವಲ 7.2 ಓವರ್‌ಗಳಲ್ಲಿ 19 ರನ್‌ಗಳಿಗೆ ಆಲೌಟ್ ಆಯಿತು. ಉಗಾಂಡದ ಪರ ಮಾರಕ ಬೌಲಿಂಗ್ ಪ್ರದರ್ಶಿಸಿದ ಜುಮಾ ಮಿಯಾಜಿ 4 ಓವರ್‌ಗಳಲ್ಲಿ ಕೇವಲ 7 ರನ್ ನೀಡಿ 5 ವಿಕೆಟ್ ಕಬಳಿಸಿದರೆ, ಎನೋಕ್ ಕಸೈಜಾ 4 ರನ್‌ಗಳಿಗೆ 4 ವಿಕೆಟ್ ಪಡೆದು ಸಾಥ್ ನೀಡಿದರು.

5 ಎಸೆತಗಳಲ್ಲಿ ಮುಗಿದ ಪಂದ್ಯ:

ಗೆಲ್ಲಲು ಕೇವಲ 20 ರನ್‌ಗಳ ಸುಲಭ ಗುರಿ ಪಡೆದ ಉಗಾಂಡ ತಂಡಕ್ಕೆ ಪಂದ್ಯ ಮುಗಿಸಲು ಕೇವಲ 5 ಎಸೆತಗಳು ಬೇಕಾಯಿತು. ಮೊಝಾಂಬಿಕ್​​ನ ಬೌಲರ್ ಕ್ಯಾಮಿಲೊ ಕೊಸ್ಸಾ ಎಸೆದ ಮೊದಲ ಓವರ್‌ನಲ್ಲೇ ಉಗಾಂಡದ ಆರಂಭಿಕ ಆಟಗಾರರು ಅಬ್ಬರಿಸಿದರು.

  •  1ನೇ ಎಸೆತ: ರಾಬಿನ್ಸನ್ ಒಬುಯಾ ಭರ್ಜರಿ ಸಿಕ್ಸರ್ ಬಾರಿಸಿದರು.
  •  2ನೇ ಎಸೆತ: 1 ರನ್ ಪಡೆದು ಸ್ಟ್ರೈಕ್ ಬದಲಾಯಿಸಿದರು.
  •  3ನೇ ಎಸೆತ: ಕ್ರೀಸ್‌ಗೆ ಬಂದ ರಾಘವ್ ಧವನ್ ಆಕರ್ಷಕ ಫೋರ್ ಬಾರಿಸಿದರು.
  •  4ನೇ ಎಸೆತ: ರಾಘವ್ ಧವನ್ ಬ್ಯಾಟ್‌ನಿಂದ ಮತ್ತೊಂದು ಸಿಕ್ಸರ್.
  •  5ನೇ ಎಸೆತ: ಕೊನೆಯ ಎಸೆತದಲ್ಲೂ ರಾಘವ್ ಸಿಕ್ಸರ್ ಸಿಡಿಸುವ ಮೂಲಕ ಕೇವಲ 5 ಎಸೆತಗಳಲ್ಲಿ 23 ರನ್ ಗಳಿಸಿ ತಂಡಕ್ಕೆ 10 ವಿಕೆಟ್‌ಗಳ ಐತಿಹಾಸಿಕ ಗೆಲುವು ತಂದುಕೊಟ್ಟರು.

ಇದನ್ನೂ ಓದಿ: ಇತಿಹಾಸ ಬರೆದ ಪೋರ್ಚುಗಲ್: ಟಿ20 ವಿಶ್ವಕಪ್ ಕ್ವಾಲಿಫೈಯರ್‌ಗೆ ಲಗ್ಗೆ!

2ನೇ ವಿಶ್ವ ದಾಖಲೆ:

ಕೇವಲ 5 ಎಸೆತಗಳಲ್ಲಿ ಪಂದ್ಯ ಮುಗಿಸಿದರೂ ಇದು ಟಿ20 ಕ್ರಿಕೆಟ್​​ನ ಅತ್ಯಂತ ವೇಗದ ಚೇಸಿಂಗ್ ಅಲ್ಲ. ಬದಲಾಗಿ ಇದು ಎರಡನೇ ಅತ್ಯಂತ ವೇಗದ ರನ್ ಚೇಸ್ ದಾಖಲೆಯಾಗಿದೆ. ಟಿ20 ಕ್ರಿಕೆಟ್​ನಲ್ಲಿ ಸ್ಪೇನ್ ತಂಡವು ಐಲ್ ಆಫ್ ಮ್ಯಾನ್ ವಿರುದ್ಧ ಕೇವಲ 2 ಎಸೆತಗಳಲ್ಲಿ (0.2 ಓವರ್) ಪಂದ್ಯವನ್ನು ಗೆದ್ದು ವಿಶ್ವ ದಾಖಲೆ ಬರೆದಿದೆ. ಆ ಪಂದ್ಯದಲ್ಲಿ ಸ್ಪೇನ್ 9 ರನ್‌ಗಳ ಗುರಿಯನ್ನು ಬೆನ್ನಟ್ಟಿತ್ತು. ಇದೀಗ 5 ಎಸೆತಗಳಲ್ಲಿ ಭರ್ಜರಿ ಚೇಸ್ ಮಾಡುವ ಮೂಲಕ ಉಗಾಂಡ ತಂಡವು ಈ ಪಟ್ಟಿಯಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದೆ.

Follow Us
ಝಾಹಿರ್ ಯೂಸುಫ್
ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಚೀಫ್ ಸಬ್ ಎಡಿಟರ್. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
ಪಿಎಸ್ಐ ವಿದ್ಯಾಶ್ರೀ, ಕಾನ್ಸ್‌ಟೇಬಲ್ ಪ್ರವೀಣ್ ಅಮಾನತು
ಪಿಎಸ್ಐ ವಿದ್ಯಾಶ್ರೀ, ಕಾನ್ಸ್‌ಟೇಬಲ್ ಪ್ರವೀಣ್ ಅಮಾನತು
ಪ್ರಾಸ ಬಳಸಿ ಸ್ಪರ್ಧಿಗಳ ವ್ಯಕ್ತಿತ್ವ ವಿವರಿಸಿದ ಮಾಡರ್ನ್ ಕವಿ ಮಂಜ: ವಿಡಿಯೋ
ಪ್ರಾಸ ಬಳಸಿ ಸ್ಪರ್ಧಿಗಳ ವ್ಯಕ್ತಿತ್ವ ವಿವರಿಸಿದ ಮಾಡರ್ನ್ ಕವಿ ಮಂಜ: ವಿಡಿಯೋ
ಅಧ್ಯಕ್ಷ ಸ್ಥಾನದಲ್ಲಿದ್ದರೂ ಮೈಕ್ ಆಫ್ ಮಾಡಿದ್ದಕ್ಕೆ ಶಾಸಕ ಕೆಂಡಾಮಂಡಲ
ಅಧ್ಯಕ್ಷ ಸ್ಥಾನದಲ್ಲಿದ್ದರೂ ಮೈಕ್ ಆಫ್ ಮಾಡಿದ್ದಕ್ಕೆ ಶಾಸಕ ಕೆಂಡಾಮಂಡಲ
ಹನುಮನ ದೇಗುಲದಲ್ಲಿ ದನದ ಮಾಂಸ ಬಿಸಾಡಿದ ಕಿಡಿಗೇಡಿಗಳು, ಭುಗಿಲೆದ್ದ ಆಕ್ರೋಶ
ಹನುಮನ ದೇಗುಲದಲ್ಲಿ ದನದ ಮಾಂಸ ಬಿಸಾಡಿದ ಕಿಡಿಗೇಡಿಗಳು, ಭುಗಿಲೆದ್ದ ಆಕ್ರೋಶ
ಮುತ್ತುರಾಯನಸ್ವಾಮಿ ಬೆಟ್ಟದಲ್ಲಿ ದಾರಿ ತಪ್ಪಿದ್ದ ಯುವಕನ ರಕ್ಷಣೆ
ಮುತ್ತುರಾಯನಸ್ವಾಮಿ ಬೆಟ್ಟದಲ್ಲಿ ದಾರಿ ತಪ್ಪಿದ್ದ ಯುವಕನ ರಕ್ಷಣೆ
‘ಯಶಸ್ ನಯವಂಚಕ, ಚಿಲ್ಲರೆ ಬುದ್ಧಿ’: ಸುದೀಪ್ ಎದುರಲ್ಲೇ ಆರೋಪಗಳ ಸುರಿಮಳೆ
‘ಯಶಸ್ ನಯವಂಚಕ, ಚಿಲ್ಲರೆ ಬುದ್ಧಿ’: ಸುದೀಪ್ ಎದುರಲ್ಲೇ ಆರೋಪಗಳ ಸುರಿಮಳೆ
ಬಿರ್ಸಾ ಮುಂಡಾ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ ಪ್ರಧಾನಿ ಮೋದಿ
ಬಿರ್ಸಾ ಮುಂಡಾ ಪ್ರತಿಮೆಗೆ ಪುಷ್ಪನಮನ ಸಲ್ಲಿಸಿದ ಪ್ರಧಾನಿ ಮೋದಿ
ಕಾಮುಕನ ವಿಕೃತಿಗೆ ಬೇಸತ್ತ ಹಾಸ್ಟೆಲ್ ವಿದ್ಯಾರ್ಥಿನಿಯರು
ಕಾಮುಕನ ವಿಕೃತಿಗೆ ಬೇಸತ್ತ ಹಾಸ್ಟೆಲ್ ವಿದ್ಯಾರ್ಥಿನಿಯರು
ಮೋದಿ ಬಂದ ರೋಡಿಗೆ ಮಾತ್ರ ಥಳಥಳ ಡಾಂಬರ್, ಉಳಿದ ರಸ್ತೆ ತುಂಬಾ ನೂರಾರು ಗುಂಡಿ
ಮೋದಿ ಬಂದ ರೋಡಿಗೆ ಮಾತ್ರ ಥಳಥಳ ಡಾಂಬರ್, ಉಳಿದ ರಸ್ತೆ ತುಂಬಾ ನೂರಾರು ಗುಂಡಿ
ಹೊಸ ಶರ್ಟ್ ಕತ್ತರಿಸಲು ಹಿಂದೇಟು:ಬನಿಯನ್‌ನಲ್ಲೇ KASಪರೀಕ್ಷೆ ಬರೆದ ಅಭ್ಯರ್ಥಿ
ಹೊಸ ಶರ್ಟ್ ಕತ್ತರಿಸಲು ಹಿಂದೇಟು:ಬನಿಯನ್‌ನಲ್ಲೇ KASಪರೀಕ್ಷೆ ಬರೆದ ಅಭ್ಯರ್ಥಿ