Umran Malik: ಅತ್ಯಂತ ವೇಗವಾಗಿ ಬೌಲ್‌ ಮಾಡಿ ಐಪಿಎಲ್ 2022 ರಲ್ಲಿ ದಾಖಲೆ ಬರೆದ ಉಮ್ರಾನ್‌ ಮಲಿಕ್

| Updated By: Vinay Bhat

Updated on: Apr 05, 2022 | 11:42 AM

IPL 2022: ಸನ್‌ರೈಸರ್ಸ್ ಹೈದರಾಬಾದ್‌ (SRH vs LSG) ತಂಡದ ಯುವ ವೇಗಿ ಉಮ್ರಾನ್‌ ಮಲಿಕ್ (Umran Malik) ಅತ್ಯಂತ ವೇಗದಲ್ಲಿ ಬೌಲ್‌ ಮಾಡುವ ಮೂಲಕ ಪ್ರಸಕ್ತ ಆವೃತ್ತಿಯಲ್ಲಿ ವಿಶೇಷ ದಾಖಲೆಯನ್ನು ಮಾಡಿದ್ದಾರೆ.

Umran Malik: ಅತ್ಯಂತ ವೇಗವಾಗಿ ಬೌಲ್‌ ಮಾಡಿ ಐಪಿಎಲ್ 2022 ರಲ್ಲಿ ದಾಖಲೆ ಬರೆದ ಉಮ್ರಾನ್‌ ಮಲಿಕ್
Umran Malik
Follow us on

ಲಖನೌ ಸೂಪರ್ ಜೇಂಟ್ಸ್ ವಿರುದ್ಧ ಹದಿನೈದನೇ ಆವೃತ್ತಿಯ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್‌ (SRH vs LSG) ತಂಡದ ಯುವ ವೇಗಿ ಉಮ್ರಾನ್‌ ಮಲಿಕ್ (Umran Malik) ಅತ್ಯಂತ ವೇಗದಲ್ಲಿ ಬೌಲ್‌ ಮಾಡುವ ಮೂಲಕ ಪ್ರಸಕ್ತ ಆವೃತ್ತಿಯಲ್ಲಿ ವಿಶೇಷ ದಾಖಲೆಯನ್ನು ಮಾಡಿದ್ದಾರೆ. ಮಂಗಳವಾರ ಮುಂಬೈನ ಟಾ. ಡಿವೈ ಪಾಟಿಲ್ ಸ್ಪೋರ್ಟ್ಸ್​ ಕಾಡೆಮಿಯಲ್ಲಿ ನಡೆದ ಪಂದ್ಯದಲ್ಲಿ ಲಖನೌ ಬ್ಯಾಟಿಂಗ್ ಇನಿಂಗ್ಸ್‌ನ 7ನೇ ಓವರ್‌ ಹಾಗೂ ತನ್ನ ಮೊದಲ ಓವರ್​​​ನಲ್ಲಿ ಅತ್ಯಂತ ವೇಗದಲ್ಲಿ ಬೌಲ್‌ ಮಾಡಿದ್ದರು. ಐಪಿಎಲ್ 2022ರ (IPL 2022) ಟೂರ್ನಿಯಲ್ಲಿ ದಾಖಲಾದ ಅತ್ಯಂತ ವೇಗದ ಎಸೆತ ಇದಾಯಿತು. ಈ ಮೂಲಕ ಲೂಕಿ ಫರ್ಗುಸನ್ ದಾಖಲೆಯನ್ನ ಜಮ್ಮು-ಕಾಶ್ಮೀರ ವೇಗಿ ಮುರಿದಿದ್ದಾರೆ. ಅಂದಹಾಗೆ ಈ ಪಂದ್ಯದಲ್ಲಿ ಮಲಿಕ್ ತಮ್ಮ ಮೊಟ್ಟ ಮೊದಲ ಎಸೆತದಲ್ಲಿಯೇ 148 ಕಿ.ಮೀ ವೇಗದಲ್ಲಿ ಬೌಲ್‌ ಮಾಡಿದ್ದರು. ತನ್ನ ಮೊದಲ ಓವರ್​​ನ ಎಲ್ಲ ಎಸೆತವೂ 140 ಕಿ.ಮೀ ವೇಗಕ್ಕಿಂತ ಅಧಿಕವಾಗಿತ್ತು.

ಈ ಬಾರಿ ಮೆಗಾ ಹರಾಜಿಗೂ ಮುನ್ನ ಉಮ್ರಾನ್ ಅವರನ್ನು ಸನ್​ರೈಸರ್ಸ್​ ಹೈದರಾಬಾದ್ ತಂಡವು 4 ಕೋಟಿ ನೀಡಿ ರಿಟೈನ್ ಮಾಡಿಕೊಂಡು ಅಚ್ಚರಿ ಮೂಡಿಸಿತು. ತನ್ನ ಮೊದಲ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧವೂ 150ರ ವೇಗದಲ್ಲಿ ಚೆಂಡೆಸೆದ ಮಲಿಕ್ ಬ್ಯಾಟ್ಸ್​ಮನ್​ಗಳನ್ನು ಇಕ್ಕಟಿಗೆ ಸಿಲುಕಿಸಿದ್ದರು. ಅದರಲ್ಲೂ ದೇವದತ್ ಪಡಿಕ್ಕಲ್​ ಅವರನ್ನು ಕಣ್ಣು ಬಿಡುವಷ್ಟರಲ್ಲಿ ಕ್ಲೀನ್ ಬೌಲ್ಡ್ ಮಾಡುವ ಎಲ್ಲರನ್ನು ನಿಬ್ಬೆರಗಾಗಿಸಿದ್ದರು. ಸದ್ಯ ಲಖನೌ ವಿರುದ್ಧವೂ ಉಮ್ರಾನ್ ಮಲಿಕ್ ಬೆಂಕಿಯ ವೇಗ ಕಂಡು ಟ್ವಿಟರ್​​ನಲ್ಲಿ ಸಾಕಷ್ಟು ಟ್ರೆಂಡ್ ಆಗಿದ್ದಾರೆ.  ಮಲಿಕ್ ಎಸೆದ ಮೊದಲ ಓವರ್​ನ ವೇಗ ಎಷ್ಟಿತ್ತು ಎಂದು ನೋಡಿ.

ಮೊದಲ ಎಸೆತ – 148 kmph

ಎರಡನೇ ಎಸೆತ – 148 kmph

ಮೂರನೇ ಎಸೆತ – 142 kmph

ನಾಲ್ಕನೇ ಎಸೆತ – 146 kmph

ಐದನೇ ಎಸೆತ – 146 kmph

ಆರನೇ ಎಸೆತ – 140 kmph

 

ಈ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಲಖನೌ ಸೂಪರ್‌ ಜೇಂಟ್ಸ್‌ ತಂಡ ಆರಂಭಿಕ ಆಘಾತ ಕಂಡಿತು. ತಂಡದ ಪರ ಓಪನರ್ ಆಗಿ ಕಣಕ್ಕಿಳಿದ ಕ್ವಿಂಟನ್‌ ಡಿಕಾಕ್‌(1) ಬಹುಬೇಗನೆ ನಿರ್ಗಮಿಸಿದರು. ಪ್ರಮುಖ ಮೂರು ವಿಕೆಟ್‌ಗಳನ್ನು ಲಖನೌ 27 ರನ್‌ಗಳಿಸುವಷ್ಟರಲ್ಲಿ ಕಳೆದುಕೊಂಡಿತ್ತು. ಹೀಗಾಗಿ ಅಲ್ಪ ಮೊತ್ತಕ್ಕೆ ಕುಸಿಯುವ ಬೀತಿಯನ್ನು ಎದುರಿಸಿತ್ತು. ಆದರೆ ನಾಯಕ ರಾಹುಲ್ ಹಾಗೂ ದೀಪಕ್ ಹೂಡಾ ಅದ್ಭುತವಾಗಿ ಇನ್ನಿಂಗ್ಸ್ ಕಟ್ಟಿದರು. ಈ ಇಬ್ಬರು ಆಟಗಾರರು ಕೂಡ ತಲಾ ಅರ್ಧಶತಕ ಸಿಡಿಸುವಲ್ಲಿ ಯಶಸ್ವಿಯಾದರು. ಕೆಎಲ್ ರಾಹುಲ್ 68 ರನ್‌ಗಳಿಸಿದರೆ, ದೀಪಕ್ ಹೂಡಾ 51 ರನ್‌ಗಳಿಸಿ ವಿಕೆಟ್ ಕಳೆದುಕೊಂಡರು. ಲಖನೌ ಸೂಪರ್ ಜೈಂಟ್ಸ್ ತಂಡದ ಪರವಾಗಿ ಈ ಇಬ್ಬರು ಆಟಗಾರರನ್ನು ಹೊರತುಪಡಿಸಿ ಉಳಿದ ಯಾವುದೇ ಆಟಗಾರನಿಂದಲೂ ಉತ್ತಮ ಪ್ರದರ್ಶನ ಬರಲಿಲ್ಲ. ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 169 ರನ್‌ಗಳಿಸಿತು.

ಲಖನೌ ನೀಡಿದ 170 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ಹೈದರಾಬಾದ್ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ಅಭಿಷೇಕ್ ಶರ್ಮಾ (13), ನಾಯಕ ಕೇನ್ ವಿಲಿಯಮ್ಸನ್‌ (16) ತಂಡದ ಮೊತ್ತ 38 ರನ್ ಆಗುವಷ್ಟರಲ್ಲಿ ಪೆವಿಲಿಯನ್ ಸೇರಿಕೊಂಡರು. ಮೂರನೇ ವಿಕೆಟ್‌ಗೆ ಜೊತೆಯಾದ ರಾಹುಲ್ ತ್ರಿಪಾಠಿ (44) ಮತ್ತು ಏಡನ್ ಮರ್ಕರಂ (12) ಜೋಡಿ 44 ರನ್‌ ಸೇರಿಸಿ ಭರವಸೆ ಮೂಡಿಸಿತು. ಆದರೆ, 13 ರನ್ ಅಂತರದಲ್ಲಿ ಈ ಇಬ್ಬರೂ ಔಟಾದರು. ಈ ಹಂತದಲ್ಲಿ ರೈಸರ್ಸ್ ಪಡೆ 95 ರನ್‌ ಗಳಿಗೆ 4 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಕೊನೇ ಓವರ್‌ನಲ್ಲಿ 16 ರನ್‌ ಬೇಕಿದ್ದಾಗ ಸುಂದರ್‌ (18) ಕೂಡ ಔಟಾದಾಗ ಹೈದರಾಬಾದ್ ಗೆಲುವಿನ ಆಸೆ ನುಚ್ಚುನೂರಾಯಿತು. ಅಂತಿಮವಾಗಿ ಕೇನ್‌ ಪಡೆ 9 ವಿಕೆಟ್‌ಗಳನ್ನು ಕಳೆದುಕೊಂಡು 157 ರನ್‌ ಗಳಿಸಲಷ್ಟೇ ಶಕ್ತವಾಯಿತು.

Glenn Maxwell: ಇಂದಿನ ಪಂದ್ಯದಲ್ಲಿ ಗ್ಲೆನ್ ಮ್ಯಾಕ್ಸ್​ವೆಲ್ ಆಡ್ತಾರಾ?, ಇಲ್ವಾ?: ಇಲ್ಲಿದೆ ನೋಡಿ ಮಾಹಿತಿ

RR vs RCB, IPL 2022: ರಾಜಸ್ಥಾನ್ ಗೆಲುವಿನ ಓಟಕ್ಕೆ ಬ್ರೇಕ್ ಹಾಕಲು ಮಾಸ್ಟರ್ ಪ್ಲಾನ್ ಮಾಡಿದ ಆರ್​ಸಿಬಿ: ಏನದು?