ಟೀಮ್ ಇಂಡಿಯಾದ ಮಾಜಿ ಆಟಗಾರ ಉನ್ಮುಕ್ತ್ ಚಂದ್ (Unmukt Chand) ಬಿಗ್ ಬ್ಯಾಷ್ ಲೀಗ್‌ನಲ್ಲಿ (BBL 2022) ಕಾಣಿಸಿಕೊಳ್ಳಲಿದ್ದಾರೆ. ಇದರೊಂದಿಗೆ ಬಿಬಿಎಲ್ ಆಡಲಿರುವ ಮೊದಲ ಭಾರತೀಯ ಆಟಗಾರರ ಎಂಬ ಹೆಗ್ಗಳಿಕೆ ಉನ್ಮುಕ್ತ್ ಚಂದ್ ಪಾಲಾಗಲಿದೆ. ಈ ಹಿಂದೆ ಟೀಮ್ ಇಂಡಿಯಾ (Team India) ಅಂಡರ್-19 ತಂಡವನ್ನು ಉನ್ಮುಕ್ತ್ ಚಂದ್ ಮುನ್ನಡೆಸಿದ್ದರು ಎಂಬುದು ವಿಶೇಷ. ಅಷ್ಟೇ ಅಲ್ಲದೆ 2012 ರಲ್ಲಿ ಅಂಡರ್-19 ವಿಶ್ವಕಪ್ ಗೆದ್ದ ತಂಡದ ನಾಯಕರಾಗಿದ್ದರು.
ಇದಾದ ಬಳಿಕ ಭಾರತ ಎ ತಂಡವನ್ನು ಪ್ರತಿನಿಧಿಸಿದ್ದ ಉನ್ಮುಕ್ತ್ ಭವಿಷ್ಯದ ಟೀಮ್ ಇಂಡಿಯಾ ಆಟಗಾರ ಎಂದು ಗುರುತಿಸಿಕೊಂಡಿದ್ದರು. ಇದರ ಬೆನ್ನಲ್ಲೇ ಐಪಿಎಲ್ನಲ್ಲಿ ಡೆಲ್ಲಿ ಡೇರ್ ಡೇವಿಲ್ಸ್ ಪರ ಕೂಡ ಕಣಕ್ಕಿಳಿದಿದ್ದರು. ಆದರೆ ಆ ಬಳಿಕ ಫಾರ್ಮ್ ಕಳೆದುಕೊಂಡ ಯುವ ಆಟಗಾರ ತಂಡದಿಂದ ಹೊರಬಿದ್ದಿದ್ದರು.
ಇದಾಗ್ಯೂ ಒಂದಷ್ಟು ವರ್ಷಗಳ ಕಾಲ ದೆಹಲಿ ಪರ ರಣಜಿ ಆಡಿದ್ದ ಉನ್ಮುಕ್ತ್ ಇತ್ತೀಚೆಗಷ್ಟೇ ಭಾರತೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದರು. ಅಷ್ಟೇ ಅಲ್ಲದೆ ಅಮೆರಿಕ ಲೀಗ್‌ನಲ್ಲಿ ಆಡುವ ಮೂಲಕ ಭವಿಷ್ಯದಲ್ಲಿ ಅಮೆರಿಕ ತಂಡದ ಪರ ಆಡುವ ವಿಶ್ವಾಸ ವ್ಯಕ್ತಪಡಿಸಿದ್ದರು.
ಇದೀಗ ಆಸ್ಟ್ರೇಲಿಯಾದ ಬಿಗ್ ಬ್ಯಾಷ್ ಲೀಗ್‌ನಲ್ಲಿ ಉನ್ಮುಕ್ತ್ ಚಂದ್ ಅವಕಾಶ ಪಡೆದಿದ್ದಾರೆ. ಮುಂದಿನ ಸೀಸನ್ ಬಿಬಿಎಲ್ಗಾಗಿ ಮೆಲ್ಬೋರ್ನ್ ರೆನೆಗೇಡ್ಸ್ ತಂಡವು 28 ವರ್ಷದ ಉನ್ಮುಕ್ತ್ ಚಂದ್ ಅವರನ್ನು ಆಯ್ಕೆ ಮಾಡಿಕೊಂಡಿದೆ. ಅದರಂತೆ ಈ ಬಾರಿಯ ಬಿಬಿಎಲ್ನಲ್ಲಿ ಉನ್ಮುಕ್ತ್ ಕಣಕ್ಕಿಳಿದರೆ ಬಿಗ್ ಬ್ಯಾಷ್ ಲೀಗ್‌ನಲ್ಲಿ ಕಣಕ್ಕಿಳಿದ ಮೊದಲ ಭಾರತೀಯ ಕ್ರಿಕೆಟಿಗ ಎಂದೆನಿಸಿಕೊಳ್ಳಲಿದ್ದಾರೆ.
ಉನ್ಮುಕ್ತ್ ತಮ್ಮ ವೃತ್ತಿ ಜೀವನದಲ್ಲಿ ದೆಹಲಿ ಹಾಗೂ ಉತ್ತರಾಖಂಡ್ ಪರವಾಗಿ 67 ಪ್ರಥಮ ದರ್ಜೆ ಪಂದ್ಯಗಳು, 120 ಲಿಸ್ಟ್ ಎ ಪಂದ್ಯಗಳು ಮತ್ತು 77 ಟಿ20 ಪಂದ್ಯಗಳನ್ನು ಆಡಿದ್ದಾರೆ. ಅಷ್ಟೇ ಅಲ್ಲದೆ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಡೆಲ್ಲಿ ಡೇರ್‌ಡೆವಿಲ್ಸ್, ರಾಜಸ್ಥಾನ್ ರಾಯಲ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡದಲ್ಲಿ ಕಾಣಿಸಿಕೊಂಡಿದ್ದರು.
ಇದನ್ನೂ ಓದಿ: ICC T20 Rankings: ನೂತನ ಟಿ20 ರ‍್ಯಾಂಕಿಂಗ್ ಪ್ರಕಟ: ಎಲ್ಲರನ್ನು ಹಿಂದಿಕ್ಕಿದ ಬಾಬರ್
ಇದನ್ನೂ ಓದಿ: IPL 2022: RCB ಈ ನಾಲ್ವರು ಆಟಗಾರರನ್ನು ಉಳಿಸಿಕೊಳ್ಳಬಹುದು..!
ಇದನ್ನೂ ಓದಿ: T20 World Cup 2021: ಸೆಹ್ವಾಗ್-ಗಂಭೀರ್ ದಾಖಲೆ ಮುರಿದ ಕೆಎಲ್ ರಾಹುಲ್-ರೋಹಿತ್ ಶರ್ಮಾ
(Unmukt Chand signs up with Melbourne Renegades, becomes first Indian BBL player)
Published On - 9:01 pm, Thu, 4 November 21