
ಯುಪಿ ಟಿ20 ಲೀಗ್‌ನ (UP T20 League) 20 ನೇ ಪಂದ್ಯದಲ್ಲಿ, ಮೀರತ್ ಮಾವೆರಿಕ್ಸ್ ಹಾಗೂ ಲಕ್ನೋ ಫಾಲ್ಕನ್ಸ್ (Meerut Mavericks vs Lucknow Falcons) ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಮೀರತ್ ಮಾವೆರಿಕ್ಸ್ ತಂಡದ ನಾಲ್ವರು ಬ್ಯಾಟ್ಸ್‌ಮನ್‌ಗಳು ತಲಾ ಅರ್ಧಶತಕದ ಇನ್ನಿಂಗ್ಸ್ ಆಡಿದರು. ಅದರಲ್ಲೂ ಐದನೇ ವಿಕೆಟ್ಗೆ ಜೊತೆಯಾದ ರಿತುರಾಜ್ ಶರ್ಮಾ ಮತ್ತು ಹೃತಿಕ್ ವ್ಯಾಟ್ಸ್ ಕೊನೆಯ 2 ಓವರ್‌ಗಳಲ್ಲಿ ಬೌಂಡರಿ ಸಿಕ್ಸರ್ಗಳ ಮಳೆ ಸುರಿಸಿದರು. ಇವರಿಬ್ಬರ ಅಬ್ಬರ ಹೇಗಿತ್ತು ಎಂದರೆ, ಕೊನೆಯ 2 ಓವರ್‌ಗಳಲ್ಲಿ ಅಂದರೆ 19 ಮತ್ತು 20ನೇ ಓವರ್‌ನಲ್ಲಿ ಇವರಿಬ್ಬರು ಒಟ್ಟಾಗಿ 12 ಸತತ ಎಸೆತಗಳಲ್ಲಿ 12 ಬೌಂಡರಿ ಮತ್ತು ಸಿಕ್ಸರ್‌ಗಳನ್ನು ಬಾರಿಸಿದರು. ಈ ಮೂಲಕ ಇವರಿಬ್ಬರೂ ಕೊನೆಯ 2 ಓವರ್‌ಗಳಲ್ಲಿ 58 ರನ್ ಕಲೆಹಾಕಿದರು.
ಅಚ್ಚರಿಯ ಸಂಗತಿಯೆಂದರೆ, ಮೀರತ್ ಇನ್ನಿಂಗ್ಸ್ನ 19ನೇ ಓವರ್ ಬೌಲ್ ಮಾಡಿದ್ದು ಎದುರಾಳಿ ತಂಡದ ನಾಯಕ ಹಾಗೂ ಅನುಭವಿ ಭುವನೇಶ್ವರ್ ಕುಮಾರ್. ಈ ಓವರ್‌ನಲ್ಲಿ ರಿತುರಾಜ್ ಸತತ 6 ಎಸೆತಗಳಲ್ಲಿ ಬೌಂಡರಿ ಮತ್ತು ಸಿಕ್ಸರ್‌ಗಳನ್ನು ಕಲೆಹಾಕಿದರೆ, 20 ನೇ ಓವರ್‌ನಲ್ಲಿ, ಹೃತಿಕ್ ವ್ಯಾಟ್ಸ್ ಕೂಡ 6 ಎಸೆತಗಳಲ್ಲಿ ಬೌಂಡರಿ ಮತ್ತು ಸಿಕ್ಸರ್‌ಗಳನ್ನು ಬಾರಿಸಿದರು. ಇಲ್ಲಿ ಗಮನಿಸಬೇಕಾದ ಸಂಗತಿಯೆಂದರೆ, ಕೊನೆಯ 2 ಓವರ್‌ಗಳಲ್ಲಿ ಇಷ್ಟು ರನ್ಗಳನ್ನು ಬಿಟ್ಟುಕೊಟ್ಟ ಬೌಲರ್ಗಳಿಬ್ಬರು ಐಪಿಎಲ್‌ನಲ್ಲಿ ಬಲಿಷ್ಠ ತಂಡಗಳ ಪರ ಆಡುತ್ತಿದ್ದಾರೆ.
ವಾಸ್ತವವಾಗಿ ಐಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸುವ ಭುವನೇಶ್ವರ ಕುಮಾರ್, ಅದ್ಭುತ ಲೈನ್-ಲೆಂತ್‌ಗೆ ಹೆಸರುವಾಸಿ. ಹೊಸ ಚೆಂಡಿನ ಹೊರತಾಗಿ, ಹಳೆಯ ಚೆಂಡಿನಲ್ಲಿಯೂ ಪರಿಣಾಮಕಾರಿಯಾಗಿ ಬೌಲಿಂಗ್ ಮಾಡುವ ಕೌಶಲ್ಯವನ್ನೂ ಅವರು ಹೊಂದಿದ್ದಾರೆ. ಆದರೆ ಮೀರತ್ ಮಾವೆರಿಕ್ಸ್ ವಿರುದ್ಧದ ಪಂದ್ಯದಲ್ಲಿ ಭುವಿಗೆ ಆ ಮ್ಯಾಜಿಕ್ ಮಾಡಲು ಸಾಧ್ಯವಾಗಲಿಲ್ಲ. 19 ನೇ ಓವರ್ ಬೌಲ್ ಮಾಡಲು ಬಂದ ಭುವನೇಶ್ವರ ಕುಮಾರ್ ಅವರ ಮೊದಲ ಎಸೆತದಲ್ಲೇ ರಿತುರಾಜ್ ಶರ್ಮಾ ಸಿಕ್ಸರ್ ಬಾರಿಸಿದರು. ಇದಾದ ನಂತರ, ಭುವನೇಶ್ವರ್ ಕುಮಾರ್ ವೈಡ್ ಬಾಲ್ ಎಸೆದರು. ನಂತರ ರಿತುರಾಜ್ ಶರ್ಮಾ ಒಂದರ ನಂತರ ಒಂದರಂತೆ ಸತತ 4 ಬೌಂಡರಿಗಳನ್ನು ಬಾರಿಸಿ ಕೊನೆಯ ಎಸೆತದಲ್ಲಿ 6 ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಭುವನೇಶ್ವರ್ ಅವರ ಓವರ್ ಅನ್ನು ತುಂಬಾ ದುಬಾರಿಯನ್ನಾಗಿ ಮಾಡಿದರು.
𝙏𝙃𝙀 𝙎𝙃𝙊𝙒𝘿𝙊𝙒𝙉: Rituraj Sharma vs Bhuvneshwar Kumar. A smashing over for Rituraj.
Watch live on SonyLIV and Sony Sports Network. #UPT20League #ANAXUPT20League #KhiladiYahanBantaHai #LFvsMM pic.twitter.com/zFsfE1vhez
— UP T20 League (@t20uttarpradesh) August 27, 2025
ಭುವನೇಶ್ವರ್ ಕುಮಾರ್ ಬಳಿಕ ಬಂದ ವಿಪ್ರಾಜ್ ನಿಗಮ್ ಕೂಡ 20 ನೇ ಓವರ್‌ನಲ್ಲಿ ಬರೋಬ್ಬರಿ 29 ರನ್ ಬಿಟ್ಟುಕೊಟ್ಟರು. ವಾಸ್ತವವಾಗಿ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಆಡಿದ್ದ ವಿಪ್ರಾಜ್ ನಿಗಮ್ ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡಲ್ಲೂ ಗಮನಾರ್ಹ ಪ್ರದರ್ಶನ ನೀಡಿದ್ದರು. ಆದರೆ ಇಂದಿನ ಪಂದ್ಯದಲ್ಲಿ ದುಬಾರಿಯಾದ ವಿಪ್ರಾಜ್ ಅವರ ಓವರ್‌ನಲ್ಲಿ ಹೃತಿಕ್ 29 ರನ್ ಕಲೆಹಾಕಿದರು. ಈ ಓವರ್ನ ಮೊದಲ ಎರಡು ಎಸೆತಗಳಲ್ಲಿ 2 ಬೌಂಡರಿ ಬಂದರೆ, ಮುಂದಿನ 2 ಎಸೆತಗಳು ಸಿಕ್ಸರ್ ದಾಟಿದವು. ಮುಂದಿನ ಎಸೆತದಲ್ಲಿ 2 ರನ್ ಬಂದರೆ, ಕೊನೆಯ ಎಸೆತದಲ್ಲಿ ಸಿಕ್ಸರ್ ಬಂತು.
ಈ ಮೂಲಕ ಮೀರತ್ ಮಾವರಿಕ್ಸ್ 2 ಓವರ್‌ಗಳಲ್ಲಿ 58 ರನ್ ಗಳಿಸಿದ್ದಲ್ಲದೆ, ಕೊನೆಯ 4 ಓವರ್‌ಗಳಲ್ಲಿ 91 ರನ್ ಗಳಿಸಿತು. ಇದರೊಂದಿಗೆ ಮೀರತ್ ತಂಡವು 20 ಓವರ್‌ಗಳಲ್ಲಿ 233 ರನ್ ಗಳಿಸಿತು. ತಂಡದ ಪರ ರಿತುರಾಜ್ ಶರ್ಮಾ 37 ಎಸೆತಗಳಲ್ಲಿ ಅಜೇಯ 74 ರನ್ ಗಳಿಸಿದರೆ, ಆರಂಭಿಕ ಸ್ವಸ್ತಿಕ್ ಚಿಕಾರ 55 ರನ್‌ಗಳ ಇನ್ನಿಂಗ್ಸ್ ಆಡಿದರು. ನಾಯಕ ರಿಂಕು ಸಿಂಗ್ 57 ರನ್ ಗಳಿಸಿದರೆ, ಹೃತಿಕ್ ವ್ಯಾಟ್ಸ್ 400 ಕ್ಕೂ ಹೆಚ್ಚು ಸ್ಟ್ರೈಕ್ ರೇಟ್‌ನಲ್ಲಿ 8 ಎಸೆತಗಳಲ್ಲಿ 35 ರನ್ ಗಳಿಸಿದರು. ಅಂತಿಮವಾಗಿ ಮೀರತ್ ತಂಡ ಈ ಪಂದ್ಯವನ್ನು 93 ರನ್‌ಗಳಿಂದ ಗೆದ್ದುಕೊಂಡಿತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ